ಆಗು ನೀ ಸಂಬಂಧ ಬೆಸೆಯುವಾ ದರ್ಜಿ.....

ಆಗು ನೀ ಸಂಬಂಧ ಬೆಸೆಯುವಾ ದರ್ಜಿ.....

ಕವನ

 

ನಾನೊಬ್ಬ ದರ್ಜಿ,

ಹೊಲಿಯುವೆನು ಅಂಗಿ.
ಹರಿದ ಬಟ್ಟೆಯ ನಾನು,
ಜೋಡಿಸುವೆ ತಂಗಿ.
ಕೊಂಚ ಹರಿದಾಗಲೇ
ತಾ ಇಲ್ಲಿ ಅರಿವೆ,
ಅಲ್ಲೆ ಕಿರು ಹೊಲಿಗೆಯನು
ಹಾಕಿ ನಾ ಕೊಡುವೆ.
ಚಿಕ್ಕದಾ ತೂತೆಂದು
ಕಡೆಗಣಿಸಬೇಡ,
ತೂತದುವೆ ಬಟ್ಟೆಯನು
ಹರಿಯುವುದು ನೋಡ.
ಸಂಬಂಧಗಳಲು ಸಹ
ಈ ಮಾತು ದಿಟವು,
ಬಲು ಸೂಕ್ಷ್ಮವಾಗಿಹುದು
ಮನಸಿನಾ  ಪುಟವು.
ಮನಸ್ತಾಪಗಳದುವೆ
ಮನುಜನಲಿ ಸಹಜ,
ಶುರುವಿನಲೆ ಕೊಂದು ಬಿಡು
ದ್ವೇಷದಾ ಬೀಜ,
ಬೀಜ ಹೆಮ್ಮರವಾಗಿ
ಬೆಳೆದು ಬಿಡೆ ಅದುವು
ಎಂದಿಗೂ ಚಿಗುರಿಪುದು,
ಬೆಂಕಿಯಾ ಹೂವು.
ಬಾಳಿದೋ ಎರಡು ದಿನ
ಪರಶಿವನ  ಮರ್ಜಿ ,
ಆಗು ನೀ ಸಂಬಂಧ
ಬೆಸೆಯುವಾ ದರ್ಜಿ.....


 

Comments