ಅ ಕಪ್ ಓಫ್ ಕಾಫಿ ... ಸಿಪ್ - ೧೮

ಅ ಕಪ್ ಓಫ್ ಕಾಫಿ ... ಸಿಪ್ - ೧೮

 

ಸಿಪ್ - ೧೮

 

ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....

ಹಿಂದಿನ ಸಿಪ್ 

 

ಪ್ರಾಜೆಕ್ಟ್ ಆಲೋಕೆಟ್ ಆದಾಗಿಂದ ಕಿವಿಗೆ mp3 ಪ್ಳಯೇರ್ ನ ಇಯರ್ ಫೋನ್ ಸಿಕ್ಕಿಸಿ ಕೆಲಸಮಾಡುವ ಚಾಳಿ ಶುರು ಹಚ್ಚಿಕ್ಕೊಂಡಿದ್ದೆ; ಕೆಲಸ ವೇಗದಲ್ಲಿರಲು ಹಳೆಯ ಹಿಂದಿ ಗೀತೆಗಳು ಇಲ್ಲವೇ ಗೋಡ್ಕಿಂಡಿ ಇಲ್ಲ ಚೌರಾಸಿಯರ ಕೊಳಲಿನ ನಾದದ ಹಿನ್ನಲೆ ಏನೋ ಆನಂದ ಒದಗಿಸುತ್ತಿತ್ತು. ಕಿವಿ, ಮೆದುಳು, ಕಣ್ಣು ಮತ್ತು ಕೈ ಏಕಕಾಲಕ್ಕೆ ಲಯಬದ್ದವಾಗಿ ತಮ್ಮ ತಮ್ಮ ಕಾರ್ಯ ಮಾಡುತ್ತಿರುತ್ತದೆ. ಒಂದರಿಂದ ಎರಡು ಗಂಟೆ ನಿಶಬ್ದ ವಾಗಿರುವ ಇನ್ನೊದು ಇಂದ್ರಿಯ ನಾಲಗೆ ಇದಕ್ಕಿದಂತೆ ಎಚ್ಚರ ಗೊಳ್ಳುತ್ತದೆ; ನಿರಂತರ ಶ್ರಮದಲ್ಲಿರುವ ಉಳಿದ ಸೋದರರನ್ನು ಅತ್ತ ಕರೆಯುತ್ತದೆ; ಅಲ್ಲಿಂದ ಸಂದೇಶ ಹೋದ ಮರುಗಳಿಗೆಯೇ ಉಳಿದವ್ವುಗಳು ತಮ್ಮ ಬೇಡಿಕೆ ಈಡೇರಿಸಲು ಹರತಾಳ ನಡೆಸಲಾರಂಬಿಸುತ್ತದೆ. ಜಾಗ್ರತವಾದ ಆ ನಾಲ್ಕನೇ ಇಂದ್ರಿಯವನ್ನು ಬಾಯಿಮುಚ್ಚಿಸುವ ಅನಿವಾರ್ಯತೆ ಕೆಲಸದ ವೇಗಕ್ಕೆ ಬ್ರೇಕ್ ಹಾಕ ಬೇಕಾಗುತ್ತೆ. ಈ ನಾಲ್ಕನೆ ಇಂದ್ರಿಯಕ್ಕೆ ಮೌನದಲ್ಲೇ ಗ್ರಹಿಸುವ ಮೂಗೂ ಮತ್ತೆ ಚುರುಕಾಗಲು ಹಾತೊರೆಯುತ್ತಿರುತ್ತದೆ. ಇದಕ್ಕೆ ಪರಿಹಾರ ಅಂದರೆ ಅ ಕಪ್ ಆಫ್ ಕಾಫಿ ಇಲ್ಲ ಒಂದು ಧಮ್ಮು. ಐ.ಟಿ ಯಲ್ಲಿ ಈ ಎರಡೂ ಚಟದ ದಾಸ ರಾಗಿರುವರು ಹಲವರಿದ್ದಾರೆ, ಕನಿಷ್ಠ ಪಕ್ಷ ಒಂದರ ಪೆರ್ಮನೆಂಟ್ ದಾಸರಾಗಿರುತ್ತಾರೆ.

 

 

 

ಐ.ಟಿ ಜನರ ಅನುಭವ ವನ್ನು ಗ್ರಾಫ್ ನಲ್ಲಿ ಚಿತ್ರಿಸಿದರೆ,ಸಂಬಳಕ್ಕೂ ಅನುಭವಕ್ಕೂ ಡೈರೆಕ್ಟ್ ಪ್ರೋಪೋರ್ಶನ್ ಗ್ರಾಫ್ ಸಿಕ್ಕರೆ, ಕ್ಯಾಫ್ಫೈನ್ ಅಥವಾ ನಿಕೋಟಿನ್ ಸಮಯದೊಂದಿಗೆ ಎಕ್ಷ್ಪೊನೆನ್ಶಲಿ ವೆರಿಂಗ್ ಗ್ರಾಫ್ ಸಿಗುತ್ತದೆ. ಕ್ಯಾಫ್ಫೈನ್, ನಿಕೋಟಿನ್ ಮೇಲ್ಮುಖವಾಗಿ ಏರುತಿದ್ದರೆ, ಆರೋಗ್ಯ ಕೆಳಮುಖವಾಗಿ ಅದೇ ವೇಗದಲ್ಲಿ ಇಳಿಯುತ್ತಿರುತ್ತದೆ.!!

 

 

 

ಕಳೆದ ಮೂರು ಗಂಟೆಯಿಂದ ಬಿಡದೆ ರಫಿಯ ಕೊರಳಲ್ಲಿ ಸೇರಿ ಹೊದಿದ್ದ ಕಿವಿಗಳಿಗೆ ಹೊರಗಿನ ಯಾವುದೇ ಅಹ್ವಾಲುಗಳ ಸುಳಿವಿರಲಿಲ್ಲ. ಜೀವನ್  ಬೇರೆ ಕೆಲಸ ಕಮ್ಮಿ ಹೇಳಿ ಒಂದು ವಾರದ ರಜೆ ತೆಗೆದು ಮುಂಬೈ ಸೇರಿದ್ದ; ಅವ ಹೋದ ಬಳಿಕ ಬಂದ ಕೆಲಸಕ್ಕೆ ನಾನೇ ಜವಾಬ್ದಾರ ನಾಗಿದ್ದೆ, ಡಿಸೆಂಬರ್ ೨೩ ರ ಮೊದಲು ಮುಗಿಸ ಬೇಕಿದ್ದ ಮೆನ್ಯುಲೈಫ್ ಪ್ರಾಜೆಕ್ಟ್ ನ್ನೊಂದಿಗೆ ಈಗ ಬಂದಿರುವ ಇತರ ಮೈನ್ಟೈನೆನ್ಸ್ ಕೆಲಸದ ಜವಾಬ್ದಾರಿಯೂ ತಲೆಯ ಮೇಲಿತ್ತು; ಆಕೃತಿಯೂ ತನ್ನ ಯಾವುದೇ ಟ್ರೇನಿಂಗ ನಲ್ಲಿ ಕೂತಿದ್ದುದರಿಂದ ಇವತ್ತು ಒಣಗಿರುವ ನಾಲಿಗೆಗೆ ಕಾಫಿ ಯ ತೊಟ್ಟಿಕ್ಕುವವರು ಯಾರೂ ಇರಲಿಲ್ಲ. ಒಂಬತ್ತು ಗಂಟೆಯ ಅವದಿಯಲ್ಲಿ ೪ ಕಾಫಿ ಇಳಿಸುವುದು ಅಭ್ಯಾಸವಾಗಿತ್ತು; ಇವತ್ತು ಹನ್ನೆರಡು ದಾಟಿದರೂ ಒಂದು ತೊಟ್ಟು ಇಳಿದಿರಲಿಲ್ಲ .

 

 

 

ಇಂದ್ರಿಯಗಳ ಪ್ರತಿಭಟನೆ ಜೋರಾಗ ತೊಡಗಿತು; ಒಂದಕ್ಕೆ ಇನ್ನೊಂದು ಸಂಭಂದ ಇಲ್ಲದಂತೆ ವರ್ತಿಸಲು ಶುರುಮಾಡಿಕ್ಕೊಂಡವು; ಇನ್ನು ಆ ಆತ್ಮಗಳಿಗೆ ನೀರಿತ್ತಾರೆ ಮಾತ್ರ ಈ ಆತ್ಮ ಉಳಿಯುತ್ತೆ ಎಂಬ ಅರಿವು ಮೂಡಲಾರಮ್ಬಿಸಿತು .ಒಬ್ಬನೇ ಎದ್ದು ಕಾಫಿ ಮಷಿನ್ ಕಡೆಗೆ ಹೋಗಿ ಹೊರ ಬರಲು ಈ ಬದಿಮನಿ ಎದುರಾದ.

 

"ವಾಟ್ ಆರ್ ದಿ ಪ್ಲಾನ್ಸ್ ಫಾರ್ D -Factor ?" ಅಂದ.


 

ಡಿಸೆಂಬರ್ ಮೂರನೇ ವಾರ ಅಲ್ಲಿ ಆನ್ ಸೈಟ್ ಕ್ಲೈಂಟ್ ಗೆಲ್ಲ ರಜೆ ೧೦ ದಿನಗಳ ಮಟ್ಟಿಗೆ, ಇಲ್ಲಿ ನಮಗೆ ಸಂಭ್ರಮ, ಅಲ್ಲಿ ೧೦ ದಿನದ ಕೆಲಸಕ್ಕೆ ರಜೆ ಇದ್ದರೂ ಇಲ್ಲಿ ಪುನಃ ಕೆಲಸ ಶುರುವಾಗ ಬೇಕಾದರೆ ಜನವರಿ ಎರಡನೇ ವಾರ ಬರ ಬೇಕು.

 

ಎಲ್ಲಾ ಐ.ಟಿ ದಾಸರ ಸುವರ್ಣ ಗಟ್ಟ ಎಂದರೆ ಇದೇ ೧೫ ದಿನಗಳು. ಎಲ್ಲಾ ಪ್ರೊಡಕ್ಷನ್ ಗಳು ಸಲ್ಪ ಸಮಯ ನಿದ್ದೆ ಮಾಡುವ ಸಮಯ, ಕಾಸಿದ್ದ ಕೆಲವು ಕಂಪೆನಿಗಳು ಈ ಸಮಯದಲ್ಲಿ ತಮ್ಮ ಉದ್ಯೋಗಿಗಳಿಗೆ ಕಾರ್ಯಕ್ರಮ ಸಂಯೋಜಿಸುವ ಪರ್ವ ಕಾಲ. ಎಲ್ಲಾ ಕಂಪ್ಯೂಟರ್ ಗಳನ್ನೂ ಸಲ್ಪ ಸಮಯ ದೂರ ಇಟ್ಟು ತಮ್ಮ ತಮ್ಮ ಫ್ಯಾಮಿಲಿ ಗೆ ಸಮಯ ವ್ಯಯ ಮಾಡುವ ದಿನಗಳು.

 

 

 

ಡ್ರೀಮ್ -ಟೆಕ್ ಇದಕ್ಕೆ ಹೊರತಾಗಿರಲಿಲ್ಲ, ಚೆನ್ನೈ ನ ಸಿಇಓ ತನ್ನ ಎಲ್ಲಾ ಸೆಂಟರ್ ಗಳಿಗೆ ಸುತ್ತೋಲೆ ಹೊರಡಿಸಿದ್ದರು ಕಳೆದ ವರ್ಷದ ವರೆಗೆ ಬೆರಳೆಣಿಕೆ ಇದ್ದ ಈ ಸೆಂಟರ್ ಡಿಸೆಂಬರ್ ಹೊತ್ತಿಗೆ ೧೦೦ ಕ್ಕೆ ಸಮೀಪಿಸಿತ್ತು. ಚೆನ್ನೈ ಇಂದ ಬಂದ ೧೧  ಮಂದಿ ಈ ವರ್ಷದ ಮೊದಲಿಗರಾದರೆ ನಂತರ ಇಲ್ಲಿ ಡೈರೆಕ್ಟ್ ಆಗಿ ಜೋಯಿನ್ ಆದ ೩೬ ಫ್ರೆಶರ್ಗಳು ಇಗಲೇ ಇಲ್ಲಿ ತಮ್ಮ ತಮ್ಮ ಟೇಲೆಂಟ್ ತೋರಿಸಲು ಸನ್ನದ್ದ ರಾಗಿದ್ದರು. ಇವೆಂಟ್ ಗೆ D -Factor2005 ಎಂದು ಹೆಸರು ಇಟ್ಟಾಗಿತ್ತು.

 

 

 

ಉಳಿದ ಸೆಂಟರ್ ಗಳಲ್ಲಿ ಆರ್ಟ್ ಸರ್ಕಲ್, ಸ್ಪೋರ್ಟ್ ಸರ್ಕಲ್, ವಿಮೆನ್ ಸರ್ಕಲ್, ಫೌಂಡೆಶನ್ ಸರ್ಕಲ್ ಹೀಗೆ ಬಗೆ ಬಗೆಯ ಗುಂಪುಗಳು ಈ ಇವೆಂಟ್ ನ ಜವಾಬ್ದಾರಿ ವಹಿಸಿ ಕೊಂಡಿದ್ದರು, ಅಲ್ಲಿ ಎಲ್ಲರೂ ಅನುಭವಿಗಳೇ, ಇಲ್ಲಿ ೮೦ % ಜನ  ಫ್ರೆಶರ್ಸ್ ಗಳೇ, ಕ್ರೆಡಿಟ್ ತೆಗೆಸಿಕೊಳ್ಳುವ ಬದಿಮನೆಗೆ ಈ ಸೆಂಟರ್ ನ ಹೆಸರೊಂದಿಗೆ ತನ್ನ ಹೆಸರನ್ನು ಮೇಲೇರಿಸುವ ಹುಮಸ್ಸು. ಮೊಡ್ಯುಲ್ ನಲ್ಲಿ ಮಾಡಲು ಕೆಲಸ ಇಲ್ಲ, ಕೆಲಸಕ್ಕೆ ಜೋಯಿನ್ ಆದಾಗಿಂದ ರಜೆ ತೆಗೆದಿರಲಿಲ್ಲ ಎಂಬ ಅರಿವಾಗಿ ಡಿಸೆಂಬರ್ ಕೊನೆಯವಾರದ ಆ ಸಂಭ್ರಮ ವನ್ನು ತಪ್ಪಿಸಿ ಕಸಿನ್ ಗಳೊಂದಿಗೆ ಹಾಯಾಗಿ ಒಂದು ವಾರ ಕಳೆಯುವ ಪ್ಲಾನ್ಸ್ ಹಾಕಿ ರಜೆ ಗೆ ಅಪ್ಲೈ ಮಾಡಿದ್ದೆ ಎರಡು ವಾರದ ಮುಂಚಿತವಾಗಿ. ಲಕ್ಷ್ಮಿ ಸರ್ ಆ ರಜೆಗೆ ಅಪ್ಪ್ರೋವಲ್ ಕೊಟ್ಟು ಆಗಿತ್ತು, ಇನ್ನೇನು ಎಂದು ಹದಿನೈದು ದಿನ ಮುಂಚಿತವಾಗಿ ಓಪನ್ ಆಗುವ ಕೆ.ಎಸ್.ಆರ್.ಟಿ.ಸಿ ಟಿಕೆಟ್ ಬೂಕ್ಕಿಂಗ್ ಗಾಗಿ ಅದರ ಓಪನ್ ಆಗುವ ದಿನದ ನಿರೀಕ್ಷೆಯಲ್ಲಿದ್ದೆ.

 

ಬದಿಮನಿಯ ಕೆಲಸ ಇದ್ದಾಗ ಮಾತಾಡುವ ಜನ, ಇಲ್ಲನ್ತಾದ್ರೆ ಎದುರಾದಾಗ ಒಂದು ಸಣ್ಣ ನಗೆ ಇತ್ತು ಸತ್ಕರಿಸಲೂ ತಿಳಿದಿಲ್ಲದ ವ್ಯಕ್ತಿ. ಈಗ ಪ್ರಶ್ನೆ ಇಟ್ಟಿದ್ದಾನೆ ಎಂದರೆ ನನ್ನ ಐದು ತಿಂಗಳ ಪ್ಲಾನ್ ಕೊಚ್ಚಿ ಹೋದಂತೆಯೇ ಅಂದುಕೊಂಡು ನಾನು "ನೋ ಪ್ಲಾನ್ಸ್, ಅಕ್ಚ್ಯುಲಿ ಐ ಅಂ ಪ್ಳನ್ನಿಂಗ್ ಫಾರ್ ಅ ಬ್ರೇಕ್ ...!" ಎಂದು ಜಾರಿಕ್ಕೊಳಲು ನೋಡಿದೆ.

 

 

 

ಆ ವಯ್ಯ ಸೀದಾ ತನ್ನ ಉತ್ತರ ಕನಾಟಕದ ಧಾಟಿಗೆ ಬಂದು "ಮಂಗ್ಯಾ, ಊರ್ಗೆ ಆರಾಮಾಗಿ ಹೋಗ್ವಿಯಂತೆ, ಫುಂಕ್ಶನ್ ನ ಎಂ.ಸಿ ಆಗ್ಕೊಂಡು ಹುಡ್ಗೀರ ಮನಸಲ್ಲಿ ಟಿಕಾಣಿ ಹೊಡ್ಯೋಕೆ ಏನೋ ದಾಡಿ ನಿಂಗ ..?"

 

"ಸರ್ , ೫ ತಿಂಗಳಾಯ್ತು, ಅದು ಬಿಟ್ಟು ನಂಗೆ ಈ ಕೆಲಸದಲ್ಲಿ ಎಲ್ಲ ಇಂಟರೆಸ್ಟ್ ಇಲ್ಲ, ಸಾರೀ ಸರ್ ಆಗಲ್ಲ, ಕ್ಷಮಿಸಿ"

 

"ನಾನ್ ಹೇಳಲಿಲ್ಲ ಅಪ್ಪ ನಿನ್ನನ್ನ MC ಮಾಡ್ಕೆಕು ಅಂತ, ಕರ್ನಲ್ ಸಾಹೇಬ್ರೆ ಹೇಳಿದ್ರು, ಆ ಹುಡುಗನ್ನೇ MC ಆಗ್ಬೇಕು ಹೇಳಿ " ಎಂದು ಕರ್ನಲ್ ಮಹೆಂದೆರ್ ಮೆಹ್ತಾ ನ ಮೇಲೆ ದೂರು ಇಟ್ಟರು; ಸೆಂಟರ್ ಹೆಡ್ ನ ಆಜ್ಞೆ ಆಗಿದೆ ಎಂದರೆ ನನ್ನ ಪ್ಲಾನ್ಸ್ ಮಣ್ಣು ಪಾಲೇ ಎಂದು ನಾನು ಕೊನೆಗೆ ಒಪ್ಪಿಕ್ಕೊಂಡೆ.

 

"ಸರಿ ಸರ್ "ಅಂದೇ.

 

ಅವರು" ಮದ್ಯಾಹ್ನ ಫೈನಲ್ ಡಿಸ್ಕಶನ್ ಇದೇ ಇನ್ನು ೧೫ ದಿನದಲ್ಲಿ ನಾವು ಪ್ರೆಪರಶನ್ ಮುಗಿಸಬೇಕು; ಎಲ್ಲ ಸ್ಪೋರ್ಟ್ಸ್ ಆರ್ಟ್ಸ್ ಮತ್ತುಫೈನಲ್ ಡೇ ಇವೆಂಟ್ ಬಗ್ಗೆ ಚರ್ಚಿಸುವ; ಚೆನ್ನೈ ನಿಂದ ಸಿ.ಇ.ಓ ಬರುವರಿದ್ದಾರೆ, ಐ ಆಮ್ ಶೂರ್ ಯು ವಿಲ್ ರೊಕ್ ದಿ ಡೇ !! ಫೈನಲ್ ಡೇ ಗೆ ಪ್ರೆಪರೆಶನ್ ಶುರು ಮಾಡು; ೩ ಗಂಟೆಯ ಪ್ರೊಗ್ರಾಮ್ ಎಲ್ಲ ನಿನ್ನ ಕೈಯಲ್ಲಿದೆ; ಹಿಂದಿನಂತೆ ನಿನ್ನ ಕ್ರಿಯೇಟಿವಿಟಿ ತೋರಿಸು"

 

ಒಮ್ಮೆ ಬಗ್ಗಿದ್ದೆ ಈ ಎಚ್ ಆರ್ ಮುಂದೆ ಈಗ ದಿನಾ ಬಗ್ಗ ಬೇಕಾಯಿತು ಎಂದು ನನ್ನನ್ನು ನಾನೇ ಬೈಯಲಾರಂಬಿಸಿದೆ.

 

"ದೆನ್ ವಿಲ್ ಡಿಸ್ಕುಸ್ ದೇರ್ ಓನ್ಲಿ" ಹೇಳುತ್ತಾ ಅಲ್ಲಿಂದ ನಾನು ಕಾಲು ಕಿತ್ತೆ. ಕಾಕತಾಳಿಯ ಎಂಬಂತೆ ರಫಿ "ಅಭಿ ನ ಜಾವೋ ಚೋಡ್ ಕೆ "ಹಾಡಲು ಶುರು ಮಾಡಿದ; ಇಲ್ಲಿ ವರೆಗೆ ಹಿಡಿಸಿದ್ದ ಗೀತೆಯ ಮೇಲೆ ವೈರಾಗ್ಯ ಮೂಡಿತು; ಯಿಯರ್ ಫೋನ್ ಕೆಳಗಿಳಿಸಿ ೧೦೦ % ಕೋಡಿಂಗ್ ನಲ್ಲಿ ಮುಳುಗಿದೆ.


 

*******

 

ಊಟ ಮುಗಿಸಿ ಕೆಲಸದ ನಡುವಲ್ಲಿ ಈ ಬದಿಮನಿಯ ಮೀಟಿಂಗ್ ಮರೆತಿದ್ದೆ; ಮೀಟಿಂಗ್ ಇನ್ವಿಟೇಶನ್ ನ ರೆಮೈನ್ಡೆರ್ ಮೇಲ್ ನೋಡಿ ಮತ್ತೆ ಎಚ್ಚೆದ್ದು ಆ ಮೀಟಿಂಗ್ ರೂಂ ತಲುಪಿದೆ.

 

ಮಹೆಂದೆರ್ ಮೆಹ್ತಾ ನಡುವಲ್ಲಿ ಕೂತಿದ್ದರು; ಲಕ್ಷ್ಮಿ ಸರ್ ಮತ್ತು ದಿನೇಶ್ ಅವರ ಎರಡು ಬದಿಯಲ್ಲಿ ಕೂತಿದ್ದರು; ನಾಲ್ಕನೇ ಚೇರ್ ನನ್ನನ್ನೇ ಕಾಯುತ್ತಿತ್ತು; ಒಂದು ಬಾರಿಗೆ ನನಗೆ ನನ್ನಲ್ಲಿ ಹೆಮ್ಮೆ ಮೂಡಿತು. 3.X ಶ್ರೇಣಿಯವನಿಗೆ ಡೈರೆಕ್ಟ್ 9.X ನ ಸನ್ಮಾನ !!

 

ದಿನೇಶ್ ಬದಿಮನಿ ನನ್ನನು ನೋಡಿ "ವೈಭವ್, ಇದು ನಮ್ಮ ಸೆಂಟರ್ ನ ಮೊದಲ ಪ್ರೊಗ್ರಾಮ್ ಅದರಿಂದ ಎಲ್ಲರ ಇನ್ವೊಲ್ವೇಮೆಂಟ್ ಇದರಲ್ಲಿರುವುದು ಅಷ್ಟೇ ಮುಕ್ಯ; ಎಲ್ಲರನ್ನೂ ಸೇರಿಸಿ, ನಗಿಸಿ, ಅಳಿಸಿ ಒಬ್ಬರನೋಬ್ಬರಿಗೆ ಪರಿಚಯಿಸಬೇಕು; ಹಲವು ವರ್ಷಗಳಿಂದ ಕಳೆದು ಹೋದ ಅವರ ಕಾಲೇಜ್ ದಿನ, ಬಾಲ್ಯದ ದಿನಗಳನ್ನು ಪುನಃ ಇಲ್ಲಿ ನಾವು ತರ ಬೇಕು, ಮುಂದಿನ ಒಂದು ವರ್ಷದ ಮಟ್ಟಿಗೆ ಆ ಎನ್ಜೋಯ್ಮೆಂಟ್ ಅವರನ್ನು ಎನ್ರಿಚ್ ಮಾಡಿಡಬೇಕು  "

 

'ಬಾಲ್ಯ ನೆನಪಿಸಲು ಯಾವುದೇ ಇವೆಂಟ್ನ ಅಗತ್ಯ ವಿಲ್ಲ; ಒಂದು ಗೋಳಿ, ಒಂದು ಪೈಸೆಯ ಬಿಸ್ಕೆಟ್,೧ ರುಪಾಯಿಯ ಹಾಲ ಕೇಂಡಿ- ಬೊಂಬೆ ಮಿಟಾಯಿ , ಬೋರೆ ಹಣ್ಣು, ನೆಲ್ಲಿಕಾಯಿ, ಬಾಲಮಂಗಳ-ಚಂದಮಾಮ  ತಂದು ಎದುರಿಟ್ಟರೆ ಸಾಕು, ೮೦-೯೦ ದಶಕದ ಯಾವುದೇ ಮಾಡೆಲ್ ಇರಲಿ ಫ್ಲಾಶ್ ಬಾಕ್ ಗೆ ಹೋಗುತ್ತದೆ !!!'

 

"ಸರಿ ಸರ್; ಏನೆಲ್ಲಾ ಇವೆಂಟ್ ಇಡಬಹುದು..?"

 

ಕಂಚಿನ ಕಂಠ ದ ಮಹೇಂದರ್ ಮೆಹ್ತಾ "ವೀಕ್ ಎಂಡ್ ನಲ್ಲಿ ಸ್ಪೋರ್ಟ್ಸ್ ಡೇ, ವೀಕ್ ಡೇಸ್ ನಲ್ಲಿ ಕಲ್ಚರಲ್ ಆಕ್ಟಿವಿಟಿ; ಹೀಗೆ ಪ್ಲಾನ್ಸ್ ಮಾಡು"

 

"ಸ್ಪೋಟ್ಸ್ ಅಂದ್ರೆ ..?"

 

ದಿನೇಶ್ "ಕ್ರಿಕೆಟ್, ವಾಲಿಬಾಲ್, ಎಲ್ಲಾ !!"

 

ನಾನು ಗೊಂದಲದಲ್ಲಿ "ಅಲ್ಲ ಸರ್ ಹುಡುಗಿಯರಿಗೆ ?"

 

ದಿನೇಶ್ "ಅವರೂ ಆಡುತ್ತಾರೆ, ತ್ರೋವ್ಬಾಲ್ ಮತ್ತು ಕ್ರಿಕೆಟ್ ಅವರಿಗೆ ಇಡಬಹುದು"

 

"ಅಲ್ಲ ಸರ್ ಕ್ರಿಕೆಟ್ ಎಲ್ಲ ಹುಡುಗರು ಆಡ್ತಾರೆ ಸರಿ, ಆದ್ರೆ ಹುಡುಗೀಯರ ಪ್ರತಿಭೆಯನ್ನು ಮನೆಯವರು ಮುರಿದಿರುತ್ತಾರೆ, ಹುಡುಗೀಯರಿಗೆ ಸ್ಪೋರ್ಟ್ಸ್ ಎಷ್ಟು ಅಂದ್ರೆ ಅಷ್ಟೇ!! ಬೇಡ ಅನ್ಸುತ್ತೆ" ಎಂದು ನನಗೆನಿಸಿದ ಅನಿಸಿಕೆ ಕೊಟ್ಟೆ.

 

ಕರ್ನಲ್ "ಇಲ್ಲ, ಹಾಗಾಗಲ್ಲ, ಎಲ್ಲರು ಸಮಾನರು; ನಾವು ಅವರಿಗೆ ಒಂದು ಚಾನ್ಸ್ ಕೊಟ್ಟು ನೋಡೋಣ; ಅವರಿಗೂ ಬಾಟ್ ನಲ್ಲಿ ಆಡಬೇಕು ಎಂದೆನಿಸಿರಬಹುದು; ಸಂದರ್ಭ ಕೂಡಿ ಬಂದಿರಲಿಕ್ಕಿಲ್ಲ; ಅದನ್ನು ನಾವು  ಡಿ- ಫ್ಯಾಕ್ಟರ್ ನಲ್ಲಿ ಹೊರ ತರಿಸಬೇಕು"

 

ಅವರ ಮಾತಿಗೆ ಲಕ್ಷ್ಮಿ ಸರ್ ಸಮ್ಮತಿ ಇಟ್ಟರು.ನನ್ನ ಒಂದು ವಿರುದ್ದ ಮತ ಮೌನದಲ್ಲೇ ಮರೆಯಾಯಿತು.

 

ದಿನೇಶ್ "ಇಲ್ಲಿ ಶನಿವಾರ ಭಾನುವಾರ ಎಲ್ಲ ಸೇರಿ ಕ್ರಿಕೆಟ್ ಆಡುತ್ತಾರೆ ಎಂದು ಕೇಳಿದ್ದೆ ; ಯಾರು ಅದನ್ನು ಕೊರ್ಡಿನೆಟ್ ಮಾಡ್ತಾರೆ? ನೀನು ಆಡ್ತೀಯೇನೋ ವೈಭವ್ ?"

 

ನಾನು ನನ್ನ ಜವಾಬ್ದಾರಿಯನ್ನು ಕಮ್ಮಿ ಮಾಡುವ ಉದ್ದೇಶದಿಂದಲೇ "ಅವಿನಾಶ್ ೨೦೦೪ ELTP ಅದನ್ನು ನೋಡ್ಕೊಳ್ತಾನೆ"ಅಂದೆ.

 

ಅದಕ್ಕವರು "ಹಾಗಾದ್ರೆ ಸ್ಪೋರ್ಟ್ಸ್ ಡೇ ಬಗ್ಗೆ ಅವನಲ್ಲೇ ವಿಚಾರಿಸುತ್ತೇನೆ; ನೆಕ್ಷ್ಟ್ ಹೆಂಗಸರಿಗಾಗಿಯೇ ಬೇರೆ ರೀತಿಯ ಸ್ಪರ್ಧೆ ಗಳನ್ನೂ ಇಡಬೇಕು.."

 

ಲಕ್ಷ್ಮಿ ಸರ್ "ಜಾನಕಿ ಇದ್ದಾರೆ; ಫೆಮೆಲ್ ಎಂಪ್ಲೋಯೀ ಯಲ್ಲಿ ಸಿನಿಯರ್ ಅವರು ಈ ಜವಾಬ್ದಾರಿ ತೆಗೆದುಕೊಳ್ಳುವರು, ಅವರಲ್ಲಿ ಚರ್ಚಿಸಿದರಾಯಿತು"

 

ಕರ್ನಲ್"ಎಸ್, ಜಾನಕಿ ವಿಲ್ ಟೆಕ್ ದೆಟ್ ರೆಸ್ಪೋನ್ಸಿಬಿಲಿಟಿ" ಅಂದರು.

 

"ಇನ್ನು ಉಳಿದಿರುವ ಫೌಂಡೆಶನ್ ಕೆಲಸ ಗುರು ಚೆನ್ನಾಗಿ ನಡೆಸುತ್ತಾರೆ, ಅವರಲ್ಲೇ ಕೇಳಿ ನೋಡುತ್ತೇನೆ" ಅಂದರು ದಿನೇಶ್.

 

ಅದಕ್ಕೂ ಕರ್ನಲ್ ಸಮ್ಮತಿಸಿದರು.

 

ಇನ್ನೇನು ಆ ಸಭೆ ಮುಗಿಯುವುದರಲ್ಲಿತ್ತು ನಾನು "ಸರ್ ಇನ್ಡಿವಿಜುಲ್ ಕೊಂಪಿಟಿಶನ್ ಕ್ಕಿಂತ ಸೆಂಟರ್ ಅನ್ನು ಗುಂಪಲ್ಲಿ ವಿಂಗಡಿಸಿ ಪರಸ್ಪರ ಗುಂಪುಗಳ ನಡುವಲ್ಲಿ ಸ್ಪರ್ಧೆ ಮಾಡಿದರೆ ಚೆನ್ನಾಗಿರುತ್ತೆ" ಅಂದೆ.

 

ಮೊದಲ ಬಾರಿಗೆ ನನ್ನ ಮಾತು ಎಲ್ಲರಿಗೆ ಸರಿ ಎಂದೆನಿಸಿತು "ಎಷ್ಟು ಗ್ರೂಪ್ಸ್ ಮಾಡೋಣ ವೈಭವ್ " ಎಂದರು ಲಕ್ಷ್ಮಿ ಸರ್.

 

"ಒಂದೊಂದು ಗ್ರೂಪ್ ನಲ್ಲಿ ೩೦ ಮಂದಿ ಇದ್ದರೆ ಎಲ್ಲ ಇವೆಂಟ್ ಗೆ ಸರಿ ಯಾಗಿರುತ್ತೆ"

 

"ಸರಿ ೩ ಮಾಡೋಣ;" ಅಂದರು ದಿನೇಶ್.

 

ಲಕ್ಷ್ಮಿ ಸರ್ "ಹಾಗೆಯೇ ಹೆಸರು ಸುಜ್ಜೆಸ್ಟ್ ಮಾಡು ವೈಭವ್" ಅಂದ್ರು.

 

"ಗಂಗಾ ಯಮುನಾ ಸರಸ್ಪತಿ..?"

 

ಎಲ್ಲರು ಒಪ್ಪಿದರು. ಲಕ್ಷ್ಮಿ ಸರ್ ಮತ್ತು ಕರ್ನಲ್ ಹೊರ ನಡೆದರು.

 

ದಿನೇಶ್ ನನ್ನಲ್ಲಿ "ನೀನಿಲ್ಲೇ ಇರು ನಾನು ಅವಿನಾಶ್, ಗುರು, ಜಾನಕಿಯನ್ನು ಕರೀತೇನೆ; ಎಲ್ಲ ಇವೆಂಟ್ ಬಗ್ಗೆ ಡಿಸ್ಕುಸ್ ಮಾಡೋಣ" ಅಂದ್ರು.

 

ಸಲ್ಪದರಲ್ಲಿ ಆ ಮೂವರು ಅಲ್ಲಿದ್ದರು; ಮುಂದಿನ ಮೂವತ್ತು ನಿಮಿಷದಲ್ಲಿ ಮುಂದಿನ ಎರಡು ವಾರದ ಇವೆಂಟ್ಗಳನ್ನೂ ಫೈನಲ್ ಮಾಡಿ ಹೊರ ಬಂದೆವು.

 

ಪ್ರಾಜೆಕ್ಟ್ ನ ಕೆಲಸ ಮುಗಿಸಿ ಇವತಿಂದ ನನ್ನ ಮೇಲೆ ಬಿದ್ದ ಹೊಸ ಹೊರೆಗೆ ಹೆಗಲುಕ್ಕೊಟ್ಟೆ.

 

ದಿನೇಶ್ ಕಳಿಸಲು ಹೇಳಿದ ಮೇಲ್ ಅನ್ನು ಡ್ರಾಫ್ಟ್ ಮಾಡಲು ಇನ್ನು ೩ ಗಂಟೆ ಹಿಡಿಯಿತು. ಎಟಾಚ್ಮೆಂಟ್ ನಲ್ಲಿ ೯೮ ಮಂದಿಯನ್ನು ಮೂರು ಗುಂಪಲ್ಲಿ ವಿಂಗಡಿಸಿದ ಎಕ್ಷೆಲ್, ಈ ವೀಕ್ ಎಂಡ್ ಇಂದ ಶುರುವಾಗುವ ಎಲ್ಲ ಇವೆಂಟ್ ಗಳ ಒಂದು ಲಿಸ್ಟ್ ಮತ್ತು ಅವುಗಳ ರೂಲ್ಸ್ ಬುಕ್ ನ ಪಿ.ಡಿ.ಎಫ್ ಗಳಿದ್ದವು; ಅದನ್ನು ಅವರಿಗೆ ಕಳುಹಿಸಿ ಸೀಟ್ ಇಂದ ಮೇಲೇಳಲು ರಾತ್ರಿ ೯ ದಾಟಿತ್ತು; ಆಕೃತಿ ಆರಕ್ಕೆ ತನ್ನ ಟ್ರೈನಿಂಗ್ ಮುಗಿಸಿ ನನ್ನ ಬಳಿ ಕುಳಿತು ಸಹಾಯ ಮಾಡುತಿದ್ದಳು; ಬೆಳಗಿನಿಂದ ಉಳಿದಿದ್ದ ಮೂರು ಕಪ್ ಗಳನ್ನೂ ಆ ಮೂರು ಗಂಟೆಯಲ್ಲಿ ಆಸ್ವಾದಿಸಿದ್ದೆವು.

 

ದಿನದ ಕೆಲಸ ಮುಗಿಸಿ ಸೆಕ್ಯುರಿಟಿ ಕೌಂಟರ್ ನಲ್ಲಿದ್ದ ಲಕ್ಕಿ ಗೆ ಬಾಯ್ ಹೇಳಿ ಕೈಯಲ್ಲಿ ಇನ್ನೊಂದು ಸಿಪ್ ಹಿಡಿದು ಹೊರ ಬಂದೆವು.

 

ಮುಂದಿನ ಸಿಪ್

 

Rating
No votes yet

Comments