ಬನ್ನಿರಿ ಗೆಳೆಯರೆ

ಬನ್ನಿರಿ ಗೆಳೆಯರೆ

ಕವನ

 

ಬನ್ನಿರಿ ಗೆಳೆಯರೆ

ಬನ್ನಿರಿ ಗೆಳೆಯರೆ ಒಲುಮೆಯ ಹಂಚುತ    
ಧನ್ಯತೆ ಪಡೆಯೋಣ  ||

ತನ್ನಿರಿ ಗೆಲುಮೆಯ ಮೆಲುನಗೆ ಮಿಂಚುತ
ಮಾನ್ಯತೆ ಗಳಿಸೋಣ ||ಪ||


ಹಕ್ಕಿಗಳಂತೆಯೆ ಹಾರುತ ಲೋಕದ 

ನೋಟವ ಸವಿಯೋಣ ||

ಹೆಕ್ಕುವ ಒಳ್ಳೆಯ ಸಂಗತಿಗಳನದ

ಪಾಠವ ಕಲಿಯೋಣ ||

ನೋಟವ ಸವಿಯೋಣ |
ಪಾಠವ ಕಲಿಯೋಣ ||೧||

ಹೂವಿನ ಮಕರಂಧವ ಸವಿಸವಿಯುತ
ಜೇನಾಗಿಸೊ ಕಲೆಯು ||

ನಾವರಿತರೆ ಬಲು ಸೊಗಸೆನಿಸುವುದದ

ತಾನೀವನೆ ಗುರುವು ||

ಜೇನಾಗಿಸೊ ಕಲೆಯು |
ತಾನೀವನೆ ಗುರುವು ||೨||


ಹೆಮ್ಮರವಾಲದ ನೆರಳಲಿ ನೆಗೆಯುತ

ನಲಿನಲಿದಾಡೋಣ ||

ನಮ್ಮೆಲ್ಲರ ಬದುಕಾಬಗೆ ತಂಪಿನ

ನೆಲ ನೆರಳಾಗೋಣ ||

ನಲಿನಲಿದಾಡೋಣ |
ನೆಲ ನೆರಳಾಗೋಣ ||೩||

ಹರಿಯುವ ನದಿ ನೀರಿನ ಸನಿಹದಲಿಹ 
ಹುಲ್ಲಲಿ ನಡೆಯೋಣ ||
ಝರಿ ತೊರೆ ಹಳ್ಳದ ಕೊಡುಗೆ ನಿರಂತರ
ಮೇಲ್ಮೆಗೆ ನಮಿಸೋಣ ||
ಹುಲ್ಲಲಿ ನಡೆಯೋಣ |
ಮೇಲ್ಮೆಗೆ ನಮಿಸೋಣ ||4||

                                                           - ಸದಾನಂದ