ಲಂಗರು
ತೊರೆದೊಂದು ವರುಷ ಸಂದರೂ
ಬಿಡಲಾಗದಲ್ಲ ಲಂಗರು
ಕುಡಿದೆದ್ದು ಕಣ್ಣು ಬಿಟ್ಟರೂ
ಒಲವೆಂಬ ನಶೆಯ ಮಂಪರು!
ಹಿಂಗಾರ ಕೊನೆಯ ತೂಗದೆ
ಶೃಂಗಾರದ ಕೊನೆಯಾಗಿದೆ
ಅನುರಾಗ ಕಾಂತವಲಯವೇ? ಅನುದಿನವು ನನ್ನ ಮರಣವೇ?
ಹೊಸತೊಂದು ಹೆಜ್ಜೆ ಮೂಡಲು
ಹಿಂಜರಿಕೆ ಹಾದಿ ಮುಗಿಸಿದೆ
ಕಸಿವಿಸಿಯ ಕದನ ಮುಗಿಯದ
ಬಿಸಿಯುಸಿರಲವಳ ಹೆಸರಿದೆ!
ಮದ್ದೆಷ್ಟೇ ಅರೆದು ಕುಡಿದರೂ
ಬಾವೆದ್ದ ನಂಜು ಇಳಿಯದೆ
ಸದ್ದಡಗದೊಲವು ಭೃಂಗವೇ? ಪ್ರತಿ ಕ್ಷಣವು ಶಾಂತಿಭಂಗವೇ?
Rating
Comments
ಉ: ಲಂಗರು