ಕಾಲನ ಕುಣಿತಕ್ಕೆ ಗೆಜ್ಜೆ ಕಟ್ಟಿದವರು

ಕಾಲನ ಕುಣಿತಕ್ಕೆ ಗೆಜ್ಜೆ ಕಟ್ಟಿದವರು

 



ಹಳದಿಂಕರನ " The Glow of Hope" ಚಿತ್ರದ


ಮಹಿಳೆಯ ಕೈಲಿಡಿದ ದೀಪದ ಬೆಳಕು


ಬರೀ ಬೆಳಕೇ?


 


ರವಿ ವರ್ಮನ "ಶಾಕುಂತಲೆಯ"


ದುಶ್ಯಂತನನುಡುಕುವ ಕಣ್ಣೋಟವಿನ್ನೊ


ಮಾಸಿಲ್ಲವೇಕೆ?


 


ವ್ಯಾನ್ ಗೊ ನನ " The Potato Eatars " ನೈದು


ಮಂದಿ ವಿಶ್ವ ಕುಟುಂಬದಲೊಂದಾದದ್ದನ್ನ


ಮರೆವುದಾದರು ಹೇಗೆ?


 


ಲಿಯಾನರ್ಡೊನ "ಮೊನಾಲಿಸಾಳ"


ಮಾರ್ಮಿಕ ನಗುವಿಗರ್ಥವನುಡುಕುಡುಕಿ


ಸೋತರೆಲ್ಲರು ಹೇಗೆ?


 


ಪಿಕಾಸೊನ "Guernica"


ಯುದ್ಧ ಪಿಪಾಸುಗಳಿಗೆಚ್ಹರಿಕೆಯ


ಗಂಟೆಯಾಗಿರುವುದನ್ನ ಮರೆವುದುಂಟೇ?


 



ಕಾಲನ ಕುಣಿತಕ್ಕೆ ಗೆಜ್ಜೆ ಕಟ್ಟಿ 


ಸೌಂಧರ್ಯದ ಮಾಧುರ್ಯವ ತುಂಬಿ


ಆವನಂತರಾಳದೆದೆಯ ಮೀಟಿ ಸಂಗೀತವನೊರಡಿಸುವ


ಗಾನ ಗಾರುಡಿಗೆ ರೆಕ್ಕೆ ಬಿಚ್ಹಿ ನಲಿವ ನವಿಲಾಗುತ್ತೇನೆಂದು


ಮನೆಯ ಗೊಡೆಯ ಅಲಂಕಾರಕ್ಕೆ


ನೇತುಬಿದ್ದ ಚಿತ್ರ ಹಾಡುತ್ತಿತ್ತು,


ಕೂಗಬಹದೇನು, ನನ್ನ ಭಾವನ ಸೌಂಧರ್ಯಕ್ಕೆ,


ನಾನುಲಿವ ಆಂತರ್ಯ್ದದೊಳಗಿನರ್ಥಗಳಿಗೆ ಬೆಲೆಯಿಕ್ಕಿ ಹರಾಜಿನಲಿ


 



ಪ್ರಶ್ನೆಗಳನೇ ಇರಲಿ, ಕಾಲನ ಕುಣಿತ ನಿಲ್ಲುವುದಿಲ್ಲ


ಗೆಜ್ಜೆ ಕಟ್ಟುವ ಮಂದಿಗೆಂದಿಗೊ ಬರವಿಲ್ಲ


ಈಗ ಪ್ರಶ್ನೆ ಅದೇ,


ಎಲ್ಲರೊಲುಮೆಯ ಕುಣಿತಕ್ಕೆ


ಕಾಲನ ಹೆಜ್ಜೆಗೆ ಗೆಜ್ಜೆ ಕಟ್ಟಿ ಕುಣಿಸುವ


ಗಾರುಡಿಗರಾರು?


 


 

Rating
No votes yet

Comments