ನೋಡೆಮ್ಮ ಬೆಂಗಳೂರ....!!!
ಕರುನಾಡ ಸೀಮೆಯಲಿ,
ಬಹುಜನರ ಹೊರೆಯುತಲಿ
ಎಳೆದಿಹುದು ಪ್ರೀತಿ ತೇರ
ನೋಡೆಮ್ಮ ಬೆಂಗಳೂರ...!!!!
ಎತ್ತ ನೋಡಿದರತ್ತ,
ವಾಹನಗಳ ಮೊರೆತ
ಸಂಚಾರದಲಿ ನಿಧಾನಿ,
ಈ ನಮ್ಮ ರಾಜಧಾನಿ..!!!!
ಗ್ರೀನಿಗಿದು ಫೇಮಸ್ಸು,
ಬದುಕಿಲ್ಲಿ ಸರ್ಕಸ್ಸು
ತುಂಬಿ ತುಳುಕುವುದಿಲ್ಲಿ
ಹೆಮ್ಮೆಯಾ ಬಿಟಿಎಸ್ಸು....!!!!
ಆಳುವರು ಕುಳಿತಿಹರು,
ಸಿಹಿಗನಸ ತೋರುವರು
ಬಡಿದಾಡಿ ಸಾಯುವರು,
ಅವರವರ ಸ್ವಾರ್ಥಕಾಗಿ...!!!!
ಅಲ್ಲೊಂದು ಯೂಬಿ ಸಿಟಿ
ಸಿಲಿಕಾನಿಗೊಂದು ಸಿಟಿ
ನಗರದೊಳು ಉಪನಗರ
ಎಲ್ಲೆಲ್ಲೂ ಜನಸಾಗರ....!!!!
ಬಂದಿಹುದು ನವ ಮೆಟ್ರೊ,
ವೇಗದಲಿ ಇದು ಸ್ಯಾಂಟ್ರೊ
ಓಡಾಡಬಹುದಂತೆ ತರಾತುರಿ
ಕುಂಟುತ್ತ ಸಾಗಿಹುದು ಕಾಮಗಾರಿ...!!!!
ಹೈಫೈ ಜನರಿರಲಿ ಕೂಲಿಕಾರ್ಮಿಕರಿರಲಿ
ಎಲ್ಲರೂ ಮಾಡುವರು ಹಾರ್ಡುವರ್ಕು...
ಜೀವನದ ಮಟ್ಟದಲಿ ನೆಮ್ಮದಿಯ ಬದುಕಿನಲಿ
ದೇಶದಲೆ ಪಡೆದಿಹುದು ಮೊದಲ Ranku ....!!!!
ಎಷ್ಟೇ ಕಷ್ಟವು ಬರಲಿ,
ಎನೇ ತೊಂದರೆ ಇರಲಿ
ಎಂದೆಂದು ಪ್ರೀತಿಸುವೆ ನಮ್ಮೂರ
ಬದುಕನ್ನು ಕೊಟ್ಟಿರೊ ಬೆಂಗಳೂರ...!!!!!