ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ.. (ಹಾಸ್ಯ )-೧೦
ಒತ್ತರಿಸಿ ಬಂದ ಕೆಮ್ಮಿನ ಮೇಲೆಯೂ ಇಲ್ಲ ಮಗನ ಮೇಲೆಯೂ ಕೋಪಕ್ಕೆ ಸಿಟ್ಟಿಂದ ಎಂಬಂತೆ ಒಮ್ಮೆ 'ಕ್ಯಾಕರಿಸಿ ಕೆಮ್ಮಿ' ಪಕ್ಕಕ್ಕೆ ಉಗುಳಿದ ಕೆಮ್ಮೀರಪ್ಪ ಹೇಳಿದ -ಲೋ ಮಗನೆ ನಾ ಅವತ್ತೇ ಹೇಳ್ದೆ ನಮ್ಗ್ಯಕಲ 'ಆ ಕುರ್ಚಿ' ಅಂತ ನನ್ ಮಾತ್ ಕೇಳ್ದ ನೀ? ನಾನಂತೂ ಅದ್ನ ಯಾರ್ಗೂ ಕರ್ದು ಕೊಟ್ಟಿಲ್ಲ, 'ಅದ್ಯಾರ' ಕಣ್ಣು ಅದ್ರ ಮೇಲೆ ಬಿತ್ತೋ ನಾ ಕಣೆ, ಒಟ್ನಲ್ಲಿ 'ಅನಿಸ್ಟ'ಒಂದು ದೂರಾಯ್ತು ಬಿಡು ಪೀಡೆ ತೊಲಗ್ತು ... ಈಗ ನೀ ಅದ್ರ ಬಗ್ಗೆ ಜಾಸ್ತಿ ಏನು ಯೋಚ್ಸೋ ಅಗತ್ಯ ಇಲ್ಲ, ಅದ್ನ ಮರ್ತು ಬಿಡು ಹೊಗೊಗ್ ಕೆಲಸ ನೋಡು..
ತನ್ನ ಮನದಲ್ಲಿ ಆಗ್ತಿದ್ದ ಕುರ್ಚಿ ಕಳೆದೋದ್ ವೇದನೆಗಿಂತ ಅಪ್ಪಯ್ಯ ಹೀಗ್ ಅದ್ರ ಬಗ್ಗೆ ಹೀಯಳ್ಸಿ ಮಾತಾಡ್ ಅದೊಂದು ಯಕಶ್ಚಿತ್ ಕುರ್ಚಿ ಶನಿ ಪೀಡೆ ಅಂದದ್ದು ಬೋರಂಗೆ ಬೊ ಘಾಸಿ ಮಾಡ್ತು. ಇನ್ನೆನಾರ ಮಾತಾಡಿದ್ರೆ ಅಪ್ಪಯ್ಯ ಬೆಲ್ ಬೆಳಗ್ಗೆ ಕೋಲ್ ತಗಂಡ್ ಬಾರ್ಸೋದ್ ಖಾತ್ರಿ ಅದ್ಕೆ ಅದ್ನ ನಾನೇ ಗುಟ್ತಾಗ್ ಹುಡುಕ್ಬೇಕ್ ಮತ್ತೆ ಮನೆಗ್ ತರ್ಬೇಕ್, ನನ್ಗನ್ಸ್ತೆ ಅದ್ನ ಆ ಬೆಂಕಿ ಮುನಿಯನೆ ತೆಗೆದ್ಕೊಂಡ್ ಹೋಗಿರ್ಬೇಕ್ ಅವ್ನೋಬ್ಬಂಗೆ ಮಾತ್ರ ಅದ್ರ ಬಗ್ಗೆ ಗೊತ್ತು ಅಲ್ದೆ ಅಪ್ಪಯ್ಯ ಬೇರೆ ಅವನನ್ನ ಮನೆಗ್ ಕರೆ ತಂದಿದ್ದು ನಾ ಅದ್ನ ಕೊಡದೆ ಇದ್ದದ್ದು ಅವ್ನು ಮುಖ ಚಿಕ್ಕದ ಮಾಡ್ಕಂಡ್ ಒಂಥರಾ ನೋಡ್ಕೊಂಡ್ ಹೋಗಿದ್ದು ಎಲ್ಲವೂ ಬೋರಂಗೆ ಒಮ್ಮೆ ತಲೇಲಿ ಹಾದು ಹೋದವು. ಒಮ್ಮೆ ಮುನಿಯನ ಮನೆಗೊಗ್ ನೋಡಿದರಾಯ್ತು.ಅದೆನರಾ ಅವ್ನ ಮನೇಲ್ ಸಿಕ್ರೆ ಊರ ಮಂದಿ ಮುಂದೆ ನಿಲ್ಸಿ ಅವ್ನ ಮಾನ ಹರಾಜ್ ಮಾಡ್ಬೇಕ್.
ಅಪ್ಪಯ್ಯ ನಾ ಬಯಲಿಗ್ ಹೋಗ್ತಿದೀನ್ ಬಾಗಿಲ ಕಡೆ ಜ್ವಾಪಾನ್. ಒಂದೇ ಉಸಿರ್ಗ್ ಮುನಿಯನ ಜೋಪಡಿಯ ಮುಂದೆ ಬಂದು ನಿಂತು ಮೆತ್ತಗೆ ಒಳ ಹೋಗಲು ಹಣಿಯಾಗಲು ಮುನಿಯನ ಹೆಂಡ್ತಿ 'ಚಿಕ್ಕೀರಿ' ಗುಡಿಸಿದ ಕಸ ಚೆಲ್ಲಲು ಹೊರಬಂದವಳೇ ಬೋರನ್ನ ನೋಡಿ ಒಹ್ ಬೋರ ಬಾ ಬಾ ಮುನಿಯ ಒಳಗಡೆ ಅವ್ನೆ ಅಂದ್ಲು. ಬೋರಂಗೆ ಬೊ ಖುಷಿಯಾತು ಅಲ್ಲ ಮುನಿಯ ಕುರ್ಚಿ ತಂದಿದ್ದು ಅಲ್ದೆ ನಾ ಬರಬಹುದು ಅಂತ ಮೊದಲೇ ಹೆಣ್ತಿಗ್ ತಿಲಿಸ್ಬಿತ್ತವ್ನಲ್ಲ ಆಇನಾತಿ ನನ್ಮಗಂನ್ ತಂದು:))
ಗುಡಿಸಿಲಿನ ತೂತು ಬಿದ್ದ ರಂದ್ರಗಳಿಂದ ಬೀಳ್ತಿದ್ದ ಬೆಳಕು ಬಿಸಿಲನ್ನ ನೋಡ್ತಾ ಹಗಲಗಂಸು ಕಾಂತ ಇದ್ದ ಮುನಿಯ ಈ ಬೋರನ ಪ್ರವೇಶದಿಂದ ಕೊಂಚ 'ಅಧೀರನಾದ ತಕ್ಷಣವೇ ಸುಧಾರ್ಸಿಕೊಂಡು ಏನ್ಲ ಬೋರ ಇತ್ಕಡೆ ಬಂದಿದ್ಯ? ಏನಾರ ಕೆಲಸವಿತ್ತ? ಬೋರಂಗೆ ಆ ಮುನಿಯನ ಮಾತು ಕೇಳೋಕೆ ಪುರ್ಸೋತ್ತೆ ಇಲ್ಲ, ಅವ್ನು ಅದಾಗಲೇ ಮೂಲೆ ಮೂಲೆ ಜಾಲಡ್ತಿದಾನೆ ಕಣ್ಣಲ್ಲೇ. ಮೊದ್ಲೇ ಚಿಕ್ಕ ಗುಡಿಸಲು ಉದುರಿಬಿದ್ದ ಗೋಡೆ ,ರಂದ್ರ ಬಿದ್ದ ಮಾಡು ಕೈ ಕಾಲ್ ಚಾಚಲೂ ಜಾಗವಿಲ್ಲದ ಇಲ್ಲಿ 'ಅದೆಲ್ಲಿ' ಅವ್ನು ಕುರ್ಚೀನ ಇಕ್ಕಿರ್ಬಹುದು?
ಮುನಿಯನೇನೋ ಬೋರನ ಆಗಮನವನ್ನ ಎಕ್ಸ್ ಪೆಕ್ಟ್ ಮಾಡಿದ್ದ ಆದರೆ ಬೆಳ್ ಬೆಳಗ್ಗೆ ಅಲ್ಲ. ಮತ್ತೊಮ್ಮೆ ಕೇಳದ ಲೋ ಬೋರ ಯಾಕಲ ಹ್ಯಾಂಗ್ ನೊಡ್ತಿಯ? ಏನೋ ಬಡವರ ಮನೆನಪ್ಪ ಹಿಂಗ್ ಇಟ್ಕಂಡಿದಿವ್. ಕೂತ್ಕೋ ಅಂದ. ಬೋರ ಹೇಳ್ದ- ನೋಡ್ಲ ಮುನಿಯ ನಾ ಡೈರೆಕ್ತಾಗ್ ವಿಷಯಕ್ ಬರ್ತೀನ್, ನನ್ನ ಕುರ್ಚಿ 'ಕಳ್ದೊಗಿದೆ' ಹಾಗಂತ ಅದು 'ತಾನಾಗೆ' ಎಲ್ಲೋ ಹೋಗಿಲ್ಲ ಅದ್ನ 'ಯಾರೋ' ಎತ್ಕಂಡ್ ಹೋಗವ್ರೆ ಅಂತ ಗೊತ್ತು, ಆ ಕುರ್ಚಿನ ನೀ ಒಬ್ನೇ ನಾ ಹೊತ್ ತರ್ವಾಗ ಮತ್ತು ನಮ್ಮನೇಲಿ ನೋಡಿದ್ದು ಅದ್ಕೆ ನಿಜ ಹೇಳು ಅದ್ನ ನಮ್ಮಪ್ಪಯ್ಯನೆ ನಿಂಗ್ ಕೊಟ್ನ ಇಲ್ಲ?
ಕಳ್ಳನೇ ಆದರೂ ಬಹಿರಂಗ ಅವಮಾನ ಆದನ್ತಾಗ್ ಕುದ್ದು ಹೋದ ಮುನಿಯ ಸಿಟ್ಟಿಂದ ಬೋರಂಗೆ ಹೇಳ್ದ ಪರವಾಗಿಲ್ಲ ಕಾಣಲ ನಾ ಏನೋ ಅನ್ಕಂದಿದೆ ನಿನ್ನ. ನನ್ನೇ ಅನುಮನ್ಸ್ತ್ಯ? ನನ್ ಮೇಲ ಸಂಶಯವೇ? ನಾ ನಿನ್ನ ಕುರ್ಚಿ ನೋಡಿದ್ದು ನಿಜ ನಿಮ್ಮಪ್ಪಯ್ಯ ಹೇಳ್ದ್ರು ಅಂತ ಅದ್ನ ತೆಗೆದ್ಕೊಂಡ್ ಹೋಗೋಕ್ ನಿಮ್ಮನ್ನೆಗ್ ಬಂದಿದ್ದು ನಿಜ ನೀ ಕೊಡಲಿಲ್ಲ ಹಾಗಂದ್ ಮಾತ್ರಕ್ಕೆ ಅದ್ನ ನಾನೇ ಎತ್ಕೊಂಡ್ ಹೋಗ್ತೀನ್ ಅಂತ ಅದೆಂಗ್ಲ ಉಹಿಸ್ದೆ?
ನಿನ್ನ ಬೆಳ್ ಬೆಳಗ್ಗೆ ಮನೆ ಒಳಗಡೆ ಬಿಟ್ಕೊಂದಿದ್ಕೆಯ ನೀ ಹಿಂಗ್ ಆಡ್ತಿರೋದ್. ಆ ಗುಡೀಲ್ 'ಎಮ್ಮೆ ಮೇಲ ಕುಳ್ತ್ ಎಮ್ಮರೆಮ್ಮ' ನ ಸಾಕ್ಷಿ ನಿನ್ ಕುರ್ಚಿಗ್ ಕಾಣೆಯಗೊದ್ಕು ನಂಗು ಎಂಥ ಸಂಬಂಧವು ಇಲ್ಲ. ಈಗ ನೀ ಹೋಗಪ್ಪಪ ಮನೆಗ್, ನಂಗೆ ಬೇಜಾನ್ ಕೆಲಸ ಆಇತೆ... ಕಣ್ಣಿಂದ ಎಲ್ಲೆಡೆ 'ಸ್ಕಾನ್' ಮಾಡಿ ನೋಡಿರೂ ಕುರ್ಚಿ ಹೋಗ್ಲೀ ಅದ್ರ 'ಒಂದು ಕಾಲೂ' ಕಾಣದೆ ಬೋರ ನಿರಾಸೆ ಸಿಟ್ಟಿಂದ ಹೇಳ್ದ ಮುನಿಯಂಗೆ, -ಮುನಿಯ ನಿಜವಾಗಲು ನೀ ಅದ್ನ ತೆಗೆದ್ಕೊಂಡ್ ಬಂದಿಲ್ಲ ಅನ್ನೋದಾದರೆ ಆ ಎಮ್ಮರೆಮ್ಮನೆ ನಿನ್ನ ಕಾಯಲಿ ಇಲ್ಲವಾದರೆ 'ರಕ್ತ ಕಾರ್' ಸಾಯ್ತೀಯ. ಅದ್ನ ತೆಗೆದ್ಕೊಂಡ್ ಹೋದವರು ಹಾಳಾಗ್ ಹೋಗ್ತಾರೆ ,ಅವ್ರ ಕೈ ಸೇದ್ ಹೋಗ, ನರ ಬಿದ್ದೋಗ ಎಂದೆಲ್ಲ 'ಹಳ್ಳಿ ಹೆಂಗಸರ ಸ್ವತಾಗಿದ್ದ ಈ ಬೈಗುಳಗಳನ್ನ' ಉಪ್ಯೋಗ್ಸಿ ಮನೆಗ್ ವಾಪಾಸ್ ಹೊರಟ.
ಅವ್ನು ಹೋಗ್ತಿದ್ದಂತೆ ನಿರಾಳವಾಗ್ ಉಸ್ಸಪ್ಪ ಸಧ್ಯ ತೊಲಗ್ದ ಅದೆಲ 'ಜನ್ಮ ಜಾಲದ್ಬಿಡ್ತಾನೋ' ಅನ್ತ ನಕಂಡಿದ್ದೆ ಮುನಿಯನ ಸ್ವಗತ.ಲೇ ಚಿಕ್ಕೀರಿ ಬೇಗ ಸ್ನಾನಕ್ ಬಿಸ್ ನೀರ್ ಕಾಯ್ಸೆ ನಾ 'ಬಯ್ಲಿಗ್' ಹೋಗ್ಬರ್ತಿನ್. ನಾ ಇವತ್ ಕೆಲ್ಸದ ಮೇಲ ವಸಿ 'ಪಟ್ಟಣಕ್ 'ಹೋಗೋದಿದೆ ಅದ್ಕೆಯ. ಊರಲ್ಲಿದ್ರೂ ದುಡಿಯಲ್ಲ ಆ ಪತ್ತನಕ್ಕೊಗ್ ಈ ವಯ್ಯ ಅದೇನ್ ಕಿಸ್ದಾನು? ಮನದಲ್ಲೇ ಹೇಳ್ಕೊಂದ್ಲು ಚಿಕ್ಕೀರಿ ಅವಳಿಗ್ಗೊತ್ತು ಅದ್ಯಕ್ ಹೋಗ್ತೀಯ ಅಂದ್ರೆ ಮುಂದೆನಾಗ್ತೆ ಅಂತ:)) ಹಿಂದೊಮ್ಮೆ ಹೊರಟ ನಿಂತವನನ್ನ ಎಲ್ಲಿಗ ಅಯಾಕೆ ಅನ್ದದ್ಕೆ ಮುಖ ಮೂತಿ ನೋಡದೆ ರಪ ರಪ ಕೊಟ್ಟಿದ್ದ ಬಹುಮಾನ ನೆನಪಿತ್ತಲ್ಲ:))
ಸುಳ್ಳು ಹೇಳಿದ್ರೆ ರಕ್ತ ಕಾರಿ ಸಾಯ್ತಾರಂತೆ")) ಈ ಡಬ್ಬಾ ನನ್ ಮಗ ಬೋರ ಇನ್ನು 'ಅದ್ಯಾವ್ದೋ' ಕಾಲದಲ್ಲವ್ನೆ, ಸಿಟ್ಟಾದ್ 'ಎಮ್ಮರೆಮ್ಮಂಗೆ' ಕುರ್ಚಿ ಮಾರ್ ಬಂದ ಕಾಸಲ್ಲಿ 'ಕೊಂಚ ಕಾಸು ಬಿಚ್ಚಿ' ಒಂದು 'ಕೋಳಿ' ಬಲಿ ಕೊಟ್ರೆ ಆಯ್ತು 'ಪಾಪ ತೊಳೆದ್ ಹೊದಾಗೆಏ' ...
ಈ ವಯ್ಯ ಪಟ್ಟಣಕ್ಕೊಗ್ ಮಜಾ ಉದಾಯ್ಸ್ತಾನೆ ನಾವಿಲ್ಲಿ ಹಗಲು ರಾತ್ರಿ 'ಗೆಯ್ಮೆ ಮಾಡ್ ಮೈ ಮುರಿದು ದುಡಿದು ಕಾಸು ಸಂಪದ್ಸೋದ್ ಈ ವಯ್ಯ ಅದ್ನ ಖರ್ಚು ಮಾಡೋದ್ ಹಿಂಗಾದ್ರೆ ನಮ್ಮಕ್ಕಳ ಬಾಳ್ವೆ ಅಸ್ಟೆಯ.. ತತ್ ಈ ವಯ್ಯನ್ ಜನ್ಮಕ್ಕಸ್ಟು ಈ ವಯ್ಯನ್ ಬಗ್ಗೆ ಊರ್ ಜನ 'ಗುಣ ಗಾನ' ಮಾಡೋದ್ ಕೇಳ್ತಾ ಕಿವಿ ಕಿವುಡಾದ್ರೆ ಸಾಕಪ್ಪ ದೇವ್ರೇ ..
ಲೋಟ ಹಿಡಿದು 'ಭಲೇ ಹಡವುಡಿಯಿಂದ' ಹೋಗ್ತಿದ್ದ ಮುನಿಯನ್ನ ನೋಡಿದವರು 'ಬಡ್ಡೀ ಮಗ' ಮುನಿಯ ಎಲ್ಲೋ ರಾತ್ರಿ 'ಬಿಟ್ಟಿ ಬಾಡೂಟ' ಮಾಡಿರ್ಬೇಕ್ ಅದ್ಕೆ 'ಫುಲ್ ಫ್ರೀ ಅವ್ಟ್ ಗೊಇಂಗ್' ಆಗ್ತಿರ್ಬೇಕ್ ಅಂತ ನಕ್ರು... ಆದ್ರೆ ಮುನಿಯ ಅವರ್ಯಾರ ಕುಹಕ -ಗೇಲಿ -ನಗೆಯನ್ನ ಗಮನಿಸದೆ ಅವೆಲ್ಲ 'ಸೆಗಣಿಯೊಳಗಿನ ಹುಳಗಳು' ಅಂತ ಮನಸಲೆ ಅಂಕಳ್ತಾ ಹೊರಟ.. ಬಯಲು ದಾಟಿ ಮುಳ್ಳು ಗಿಡ ಗಂಟಿ ಬೇಲದ ಆ 'ಕುರ್ಚಿ ಬಚ್ಚ್ಸಿಟ್ ಜಾಗಕ್ಕೊಗ್' ಅದು ಯಥಾಸ್ಥಾನದಲ್ಲಿ ಇಟ್ಟಂಗೆ ಇದೆ ಅಂತ ಗೊತಾಗ್ ಮನಸ್ಗೆ 'ಧಿವ್ಯ ಆನಂದವಾಯ್ತು'. ಒಂದೈದು ನಿಮಿಷ ಸುಮ್ನೆ ನಿಂತು ಮತ್ತೆ ವಾಪಸ್ಸು ಮನೆಗೆ 'ನಾರ್ಮಲ್ ಸ್ಪೀಡಲ್ಲಿ' ಹೊರಟ.
ಮನೆಗ್ ಬಂದು ಬಿಸಿ ನೀರನ್ನ ಹಂಡೆಗ್ ಹುಯ್ಕೊನ್ದು ಬೇಗ್ ಬೇಗನೆ ಸ್ನಾನ ಮುಗ್ಸೋಣ ಅಂತ ನೀರ್ ಹುಯ್ಕೊಬೇಕಾದ್ರೆ 'ಚಿಕ್ಕೀರಿ ಕೇಳಿದಳು 'ಬೆನ್ನು ಉಜ್ಲ? ಮುನಿಯನ್ಗೆನೋ ಬೆನ್ನು ಉಜ್ಜಿದರೆ ಚೆನ್ದಿರ್ತೇನೋ ಅಂತ ಅನ್ಸ್ತು ಆದ್ರೆ ಈಗ ಟೈಮಿಲ್ಲ ಮೊದ್ಲು ಕೆಲಸ ಆಮೇಲ ಬಾಕಿ... ಬೇಡ ಕಣೆ ಚಿಕ್ಕ್ರಿ ನಾ ಬೇಗನೆ ಪಟ್ಟಣಕ್ ಹೊಗ್ಬೆಕ್. ಸ್ನಾನ ಮುಗ್ಸಿ ಇದ್ದುದರಲ್ಲಿಯೇ ಕೊಂಚ ಚೆನ್ದಾಗಿದ್ದ ಪಂಚೆ ಅಂಗಿ ಹಾಕೊನ್ದವ್ನೆ ತಲೆ ಬಾಚ್ತ 'ಒಡೆದ್ ಕನ್ನಡೀಲ್' ಮುಖ ನೋಡ್ಕೊಬೇಕಾರೆ ನೆನಪಿಗ್ ಬಂತು ' ಗಡ್ಡ ಪೋಗ್ದಸ್ತಾಗ್' ಬೆಳೆದ್ಬಿತ್ತಿದೆ
ತತ್ !ದರಿದ್ರದ್ದು ಇದೊಂದು ನೋಡ್ 'ಗೊಬ್ಬರ ನೀರು ಏರೀದೆ' ಇದ್ರೂ ಬೆಳ್ಯೋದು ಗಂಡ್ಸರ್ಗೆ ಇದೊಂದು 'ವರ' ಹಂಗೆ 'ಶಾಪವೂ' ಹೌದು -ಮನದಲ್ಲೇ ಹೇಳೋಕ್ ಹೊರಟ ಮಾತು ತುಟಿ ದಾಟಿ ಹೊರಬಂತು. ಛೆ ಈಗ ಟೈಮಿಲ್ಲ 'ಅಲ್ಲೇ' ಮಾಡಿಸ್ಕೊನ್ದ್ರಾಯ್ತು. ಚಿಕ್ಕಿರ್ಗೆ ಮನೆ ಕಡೆ ಜ್ವಾಪಾನ ಅನ್ತೆಲ್ದ ಸ0ಜೆಗ್ ವಾಪಸ್ ಬಂದ್ ಬಿಡ್ತಿನ್ ಹಂಗೆ ಬರ್ತಾ ನಿಂಗೆ 'ಹೊಸ ಸೀರೆ' ತರ್ತೀನ್ ಅನ್ತೆಲ್ದ ನೋಡ್ , ಮೊದಲ್ಗೆ ಅವ್ನು ಮನೆ ಕಡೆ ಜ್ವಾಪಾನ ಅಂದಾಗ ಮೈ ಉರ್ದೊಗಿತ್ತು. ಈ ವಯ್ಯಾ ಹೊಸ್ದಾಗ್ ನಂಗೇನ್ ಹೇಳೋದ್ ಮನೆ ಕಡೆ ಜ್ವಾಪಾನ ಅಂತ? ಆಗಲೂ -ಈಗ್ಲೂ- ಮುಂದೆಯೂ 'ನಾ' ತಾನೇ ಮನೆ ಜ್ವಾಪಾನ ಮಾಡ್ತಿರೋದ್?
ಆದ್ರೆ ಹೊಸ ಸೀರೆ ಅಂದ ನೋಡಿ ಚಿಕ್ಕೀರಿಗೆ ಸಂಶಯವಾಯ್ತು ಜೊತೆಗ್ ಖುಷಿಯೂ , ಈ ವಯ್ಯಾ ನಂಗ್ ನಿಜವಾಗಲೂ ಸೀರೆ ತರ್ತಾನ? ಯಾರ್ಗ್ಗೊತ್ತು ತಂದರೂ ತರಬಹುದು ತರ್ದೇನು ಇರಬಹುದು:)) ನೋಡವ ಸಂಜೆ. ಆಯ್ತು ಕತ್ಲಾಗೊದ್ರೋಲ್ಗ್ದೆ ಮನೆಗ್ ಬನ್ನಿ ಅಂದ್ಲು... ಮಕ್ಳು ಹೇಳಿದ್ರು ಅಪ್ಪಯ್ಯ ಅಪ್ಪಯ್ಯ ಬರ್ತಾ ನಮಗೆ 'ಬತ್ತಾಸು -ಬೆಂಡು' ತತ್ತಾ ...
ಇತ್ತ ಮಹಾನಗರದಲ್ಲಿ ಸಭೆ ಸೇರಿ ಕುರ್ಚೀನ್ ಹುಡ್ಕೋ ಬಗೆಯನ್ನ 'ಸಾರ್ವಜನಿಕರ' ಶ್ರಮದ ಹಣವನ್ನ 'ಕೋಲ್ಡ್ ಬಿಸ್ಲೇರಿ ಬಾಟಲ್ ನೀರು ,ಕುಡಿದು ಕುರ್ -ಕುರೆ ತಿಂತಾ ಡಿಸ್ಕಸ್ಸ್ ಮಾಡ್ತಿದ್ರು:)) ಏನೆಲ ತಲೆ ಕೆಡಿಸ್ಕೊನ್ದ್ರೂ ಪ್ಲಾನ್ ಮಾಡಿದರೂ ಆ ಕುರ್ಚೀನ ಹುಡ್ಕೊಕ್ ಆಗದೆ ಇರೋ ಬಗ್ಗೆ ಬೇಜಾನ್ 'ವರಿ' ಆಗಿದ್ದ ಅಪ್ಸೆಟ್ ಆಗಿದ್ದ ಡೀ ಆಯ್ ಜೀ ಅವ್ರಿಗ್ ಇದ್ದಕ್ಕಿದ್ದಂತೆ ಒಮ್ಮೆ ತಾ-ಮು ಗಳಿಗೆ ಫೋನ್ ಮಾಡ್ ಯಾವುದ್ಕೂ ಒಮ್ಮೆ ಶ್ರೀ ಶ್ರೀ ಶ್ರೀ ಬೂದಿನಾಥ ಸ್ವಾಮಿಗಳವ್ರನ್ನ 'ಆ ಕುರ್ಚಿ'ಯಾರಬಹುದಾದ ಜಾಗವನ ಅಥವ ಸುಳಿವನ್ನ ಕೇಳಿ ಅಂದ್ರೆ ಹೆಂಗೆ? ಸ್ವಾಮಿಗಳು ಸ್ವಲ್ಪ ಸುಳಿವ ಕೊಟ್ರೆ ನಾವ್ ರಂಗಕ್ಕಿಳಿಬಹುದು.
ಈಗ ಬಂದೆ ನೀವ್ ಡಿಸ್ಕಸ್ಸ್ತ ಮಾಡ್ತೀರಿ ಎಂದು ಅಲ್ಲಿ ಸಭೆ ಸೇರಿದ್ದವ್ರ್ಗೆ ಹೇಳಿ ಎದ್ದು ಪಕ್ಕಕ್ಕೆ ಹೋಗಿ ತಾ-ಮು ಗಳಿಗೆ ಫೋನ್ ಹಚ್ಹ್ಹ್ಸಿದ್ರು, ಅತ್ತ ಕಡೆ ಅದೇ ವರಿ ಮಾಡ್ಕೊಂಡು ಅಪ್ಸೆಟ್ ಆಗಿದ್ದ ತಾ ಮು ಗಳಿಗೆ ಅವ್ರ ಆಪ್ತ ಸಹಾಯಕ ಡೀ ಆಯ್ ಜೀ ಲೈನಲಿದ್ದರೆ ನಿಮ್ಜೊತೆ ಏನೋ 'ಮುಖ್ಯವದ್ದನ್ನ' ಮಾತಾಡಬೇಕಂತೆ ಅಂದ. ತಾ ಮು ಗಳಿಗೆ ಖುಷ್ಯಯ್ತು ಅಪ್ಪಿ ತಪ್ಪಿ ಕುರ್ಚಿ ಏನಾರ ಸಿಕಿರ್ಬಹುದ? ಸಧ್ಯ ಅದು ಸಿಕ್ಕಿದ್ರೆ ಸಾಕಪ್ಪ ಮಂಜುನಾಥ ಅಂದ್ರು ಮನದಲ್ಲೇ. ಹೇಳು ಡೀ ಆಯ್ ಜೆ ಏನ್ ವಿಷ್ಯ? ಅದು ಸಿಕ್ಕಿತ?
ಅವ್ರ ಈ ಪ್ರಶ್ನೆ ನಿರೀಕ್ಷೆ ಮಾಡಿದ್ದ ಡೀ ಆಯ್ ಜೀ ಸಾವರ್ಸಿಕೊಂಡು ಹೇಳಿದ್ರು ಹಿಂಜರಿಯುತ್ಲೇ -- ಸ್ಸಾರ್ ಅದು ಇನ್ನ್ನು ಸಿಕ್ಕಿಲ್ಲ ನಮ್ಮವರು 'ಹುಡುಕುತ್ತಲೇ' ಇದ್ದಾರೆ ಇನ್ನೇನು ಸಿಗಬಹುದು ಆದರೂ ಅದು ಇನ್ನಸ್ಟು 'ಬೇಗ' ಸಿಗಬೇಕಂದರೆ ನಾವೊಮ್ಮೆ ಯಾವುದ್ಕೂ' ಶ್ರೀ ಶ್ರೀ ಶ್ರೀ ಬೂದಿನಾಥ ಸ್ವಾಮಿಗಳತ್ರ' ಹೋಗ್ 'ಕುರ್ಚಿ' ಬಗ್ಗೆ ಏನಾರ 'ಸುಳಿವು' ಕೊಡಿ ಎನ್ನೋಣವೇ ಸ್ಸಾರ್? ಅಲ್ಲಿಗ್ ತಾ-ಮು ಗಳಿಗ ಗೊತ್ತಾತು ಇದು ಡೀ ಆಯ್ ಜೀ ಮತ್ತವರ ಪಡೆಯಿಂದ ಆಗೋ ಕೆಲಸ ಅಲ್ಲ ಅದ್ಕೆ ಈ ಡೀ ಆಯ್ ಜೀ ಸ್ವಾಮಿಗಳ ಬಗ್ಗೆ ಹೇಳ್ದ , ಸ್ವಾಮಿ ಸುಳಿವ ಕೊಟ್ಟು ಈ ಯಪ್ಪಾ ಏನ್ ಹುಡ್ಕೋದು? ಆದರೂ ಒಂದೊಳ್ಳೆ ಆಯ್ಡಿಯಾ ಕೊಟ್ಟನಲ್ಲ
ಆಯ್ತು ನೀವ್ ನಮ್ಮ ಗೃಹ ಕಚೆರಿಗ್ ಅನ್ನಿ ಅಲ್ಲಿಂದ ನಾವು ಸ್ವಾಮಿಗಳ ಆಶ್ರಮಕ್ಕೆ ಹೋಗೋಣ ವಿಷ್ಯ ಗುಟ್ಟ ಆಗಿರಲಿ ಆಪ್ತ್ ಸಹಾಯಕಂಗೆ ಸ್ವಾಮಿಗಲ್ಗೆ ಫೋನಆಯ್ಸಿ ನಾವ್ ಬರೊ ವಿಷ್ಯ ಹೇಳು ಅಂದ್ರು.. ಅತ್ತ ಕಡೆ ಸ್ವಾಮಿಗಳು ಉತ್ತರ್ಸಿ ಆಗಬಹುದು ಎಂದಪ್ಪನೆ ಕೊಡಿಸಿದರು. ಆಶ್ರಮ ಮುಟ್ಟಿ ಸ್ವಾಮಿಗಳ ಪಾದಕ್ಕೆ 'ಉದ್ಧಂಡ ನಮಸ್ಕಾರ' ಹಾಕಿದರು ತಾ-ಮು ಮತ್ತು ಡೀ ಆಯ್ ಜೀ ಮತ್ತವರ ಹಿಂಬಾಲಕರು.. ಖುದ್ದು ತಾ-ಮು ಗಳೇ ತಮ್ಮಣ್ಣ ಕಾಣಲು ಬಂದವರೆ ಅಂದ್ರೆ ವಿಷ್ಯ ಏನೋ ಮುಖ್ಯವದ್ದೆ ಇರ್ಬೇಕು , ಬನ್ನಿ ಬನಿ ಒಳ ಹೋಗೋಣ ಅಲ್ಲಿ ಕುಳಿತ ಮಾತಾಡೋಣ. ತಮ್ಮ 'ಅಂತರಂಗದ ಕೋಣೆಯಲ್ಲಿ' ತಾ-ಮು ಗಳನ್ನ ಮಾತ್ರ ಬರಮಾಡಿಕೊಂಡ ಸ್ವಾಮಿಗಳು ಉಳಿದವರನ ಆಶ್ರಮದ ಪ್ರಾಂಗಣದಲ್ಲಿ ಕುಳಿತುಕೊಳ್ಳಲು ಹೇಳಿದ್ರು.
ಸ್ವಾಮಿಗಳ ಅಂತರಂಗದ ಕೋಣೆ ಪ್ರವೇಶಿಸಿ ಅಲ್ಲಿನ 'ವೈಭವ -ಅದ್ಧೂರಿತನ' ನೋಡಿ ತಾ ಮು ಗಳಿಗೆ ಕಣ್ಣು ಕುಕ್ಕಿ ಬವಳಿ ಬಂದಂತಾಯ್ತು 'ತಮ್ಮದೇ 'ವೈಭವ ಅದ್ಧೋರಿತನದ ಜೀವನ ಅಂದುಕೊಂಡಿದ್ದ ಅವ್ರಿಗ್ ಈ ಸ್ವಾಮಿಗಳು 'ಭಲೇ ಉಂಟು' ಅಂತ ಗೊತ್ತಯ್ತು. ಅದ್ನ ಕಂಡ ಸ್ವಾಮಿಗಳು ಇವರ ಮನ್ದಲ್ಲೆನ್ ಅಯ್ಯ್ತು ಅನ್ನೋ ಸುಳಿವ ಸಿಕ್ಕು ಸುಮ್ನೆ ನಕ್ಕರಸ್ಟೇ. ತಾ ಮು ಗಳು ಕುರ್ಚಿ ಕಳುವಾಗಿದ್ದರಿಂದ ಹಿಡಿದು ಇಲ್ಲಿವರ್ಗೆ ಅದು ಸಿಗದೆ ಇರೋದ್ನ ಹೇಳಿ, ಅದು ಆದಷ್ಟು ಬೇಗ ಸಿಗ್ವಂತೆ ಮಾಡಿ, ಅದು ಎಲ್ಲಿರಬಹುದು ಎನ್ನುವ ಸುಳಿವನ್ನ ಭವಿಷ್ಯ ನೋಡಿ ಹೇಳಿ ಅಂದ್ರು...
'ಬೆಂಗಳೂರಿನ ಮ್ಯಾಪನ್ನು' ಸ್ವಾಮಿಗಳು ಬೇಕು ಅಂದಾಗ ಯಾರನ್ನೋ ಓಡಿಸಿ ಆ ಮ್ಯಾಪ್ ತರ್ಸಿ ಅದರ ಮೇಲೆ ಸ್ವಾಮಿಗಳು 'ಕವಡೆ' ಹಾಕಿ ನೋಡಿದಾಗ ಒಂದು ಕವಡೆ ಮಾತ್ರ ಬೆಂಗಳೂರಿನ ಪಕ್ಕದ 'ಯಾವ್ದೋ ಜಾಗದಲ್ಲಿ' ಬಿತ್ತು. ಆ ಕವಡೆ ಶಾಸ್ತ್ರ ದ ಬಗ್ಗೆ ಅಷ್ಟೇನು ಗೊತ್ತಿರದಿದ್ದ ತಾ ಮು ಗಳಿಗೆ ಅದೇನೂ ಅರ್ಥವಾಗಲಿಲ್ಲ. ಆಗ ಸಾಮಿಗಳ ಮುಖವನ್ನ ಧೈನ್ಯತೆಯಿಂದ ಧಿಟ್ಟಿಸಲಾಗಿ, ಸ್ವಾಮಿಗಳು ಹೇಳಿದ್ರು ನೋಡಿ ಮುಖ್ಯಮಂತ್ರಿಗಳೇ ಇಲ್ಲೇ ಎಲ್ಲೋ ಆಸು ಪಾಸು ಬೆಂಗಳೂರಿನ ಹತ್ರವೇ ಆ ಕುರ್ಚಿ ಇದೆ ಅಲ್ಲಿ ಹೋಗಿ ಜಾಲಾಡಿ ಸಿಗ್ತೆ ಎಂದರು..
ಮತ್ತೊಮ್ಮೆ ಅವ್ರ ಕಾಲಿಗ್ ಬಿದ್ದು ಅವ್ರು ಕೊಟ್ಟ ಫಲ-ಬೂದಿಯನ್ನ ಹಣೆಗ್ ಹಾಕೊಂಡು ತಾ-ಮು ಗಳು 'ಭಲೇ ಗೆಲುವಿಂದ ' ಹೊರ ಬಂದಿದು ಕಂಡಾಗ ಅವ್ರ್ಗಾಗೆ ಹೊರಗಡೆ ಕಾದಿದ್ದ ಎಲ್ಲರ್ಗೂ ಅನ್ಸ್ತು ಒಹ್ ತಾ ಮು ಗಳ ಮಿಖ ನೋಡಿದ್ರೆ ಏನೋ 'ಸುಳಿವ್' ಸಿಕ್ಕಂಗಿದೆ.. ಸಧ್ಯ ಅದ್ ಸಿಕ್ರೆ ಸಾಕು.. ತಮ್ಮದೇ ಕಾರಲ್ಲಿ ಜೊತೆಗ್ ಬರವಂತೆ ಡೀ ಆಯ್ ಜೀಗಳ್ಗೆ ಹೇಳಿದ್ರು ತಾ ಮು ಗಳು.
ಕಾರಲ್ಲಿ ಇಬ್ಬರೂ ಹತ್ತಿ ಕುಳಿತುಕೊಳ್ಳುತ್ತಿದ್ದಂತೆ ಬಾಗಿ ಹಾಕಿ ದೇ ಅಯ್ಯ ಜೀ ನ ನೋಡ್ತಾ ಹೇಳಿದ್ರು ನೋಡಯ್ಯ ಡೀ ಅಯ್ಯ ಜೀ ನಿನ್ನಿನ್ದಂತೂ ಅದನ್ ಹುಡ್ಕೊಕ್ ಆಗ್ಲಿಲ ಸಧ್ಯಕ್ ಸ್ವಾಮಿಗಲ್ ನಮ್ಮೇಲೆ ದಯೆ ತೋರ್ಸಿ ಅದ್ ಇರಬಹುದಾದ ಜಾಗ ಹೇಳವ್ರೆ ಅಲ್ಲಿಗ್ನಿಮ್ಮ ನಂಬಿಕಸ್ತ ಜನರನ್ನ ಕಳ್ಸಿ ಅದ್ನ ಅದಸ್ತು ಬೇಗ ತರ್ಸಿ. ಅವಮಾನವಾದನ್ತಾದ್ರೂ ಡೀ ಆಯ್ ಜೀ ಹಿಂಜರಿಯುತ್ಲೇ ಕೇಳಿದರೂ'ಹಲ್ಲು ಗಿಂಜುತ್ತ' ಸ್ಸಾರ್ ಮತ್ತೆ 'ಆ ಬಹುಮಾನ' ವಿಷ್ಯ? ತತ್ ಬರೀ 'ಬಹುಮಾನದ' ಬಗ್ಗೆ 'ಕನಸ' ಕಂಡ್ರೆ ಸಲ್ದೂರಿ ಅದ್ನ ಹುಡ್ಕೊಗ್ 'ಪ್ರಾಮಾಣಿಕ ಪ್ರಯತ್ನ' ಮಾಡ್ಬೇಕ್, ಹೊಗೊಗ್ ಮೊದ್ಲು ಅದ್ನ ತನ್ನಿ ಬಹುಮಾನ 'ಖಂಡಿತ' ಕೊಡ್ತೀವ್ ಮೊದ್ಲು ಅದ್ನ ಇಲ್ಲಿ ತನ್ನ್ನಿ ಹೋಗ್ರೀ. ದಾರಿ ಮಧ್ಯವೇ ಡೀ ಆಯ ಜೀ ನ ಇಳ್ಸಿ ಹೊರಟರು.. ಹಿಂದೆ ಬಂದ ತಮ್ಮ ಕಾರನ್ನ ನಿಲ್ಲಿಸಿ ಅದ್ರಲ್ಲಿ ಹತ್ತಿ ಕುಳಿತ್ ಡೀ ಆಯ್ ಜಿ ಗ್ ಏನೇನೋ ಕನಸ್ಗಳು.. :))
Comments
ಉ: ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ.. (ಹಾಸ್ಯ )-೧೦
In reply to ಉ: ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ.. (ಹಾಸ್ಯ )-೧೦ by partha1059
ಉ: ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ.. (ಹಾಸ್ಯ )-೧೦