ಅ ಕಪ್ ಓಫ್ ಕಾಫಿ ... ಸಿಪ್ - ೧೯
ಸಿಪ್ : ೧೯
ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....
ಗಂಗಾ, ಯಮುನಾ ಸರಸ್ವತಿ ಮೂರು ಗುಂಪುಗಳು ಸೇರಿ ನನ್ನನ್ನು ತ್ರಿವೇಣಿ ಸಂಗಮದಲ್ಲಿ ಮುಳುಗಿಸುತಿದ್ದವು; ನಡುವಲ್ಲಿ ಕ್ರಿಸ್ ಅವನ ಮನ್ಯುಲೈಫ್ ಪ್ರಾಜೆಕ್ಟ್ ಹಿಡಿದು ಬೆನ್ನು ಬಿಡದ ಬೇತಾಳನಂತೆ ಕಾಡುತಿದ್ದನು; ಬೆಳಗ್ಗೆ ೯ ರಿಂದ ಸಂಜೆ ೪ ರ ವರೆಗೆ ಕೋಡಿಂಗ್ ನಲ್ಲಿ ಕೆಡಿಸಿಕ್ಕೊಂಡಿದ್ದ ತಲೆಗೆ ನಾಲ್ಕರ ಬಳಿಕ ದಿನೇಶ್ ಇನ್ನಿಲ್ಲದ ಕಾಟ ಕೊಡಲಾರಂಬಿಸಿದ. ಡಿಸೆಂಬರ್ ಎರಡನೇ ವಾರದಿಂದ ಶುರುವಾದ ಡಿ- ಫ್ಯಾಕ್ಟರ್೨೦೦೫ ನ ಆಕಾಶಕ್ಕೆರಿಸುವ ಕಲ್ಪನೆಗೆ ದಿನ ಕಳೆಯುತಿದ್ದಂತೆ ಸುಂದರವಾಗಿ ರೆಕ್ಕೆ ಪುಕ್ಕಗಳು ಮೂಡಿದವು.ಸಂಜೆ ೫ ರಿಂದ ಪ್ರತಿದಿನ ಒಂದೊಂದು ಕಾರ್ಯಕ್ರಮದ ಜವಾಬ್ದಾರಿಯನ್ನು ನೀನೆ ನಿರ್ವಹಿಸಬೇಕು ಎಂಬ ಒತ್ತಡ ೧೭- ೧೮ ನೇ ವೀಕ್ ಎಂಡ್ ನಲ್ಲಿ ಸ್ಪೋರ್ಟ್ಸ್ ಡೇ ಮಾಡಲು ಕರ್ನಲ್ ಸರ್ ಸೂಚಿಸಿದ್ದರು; ಹೇಗಾದರೂ ಮಾಡಿ ಗ್ರೌಂಡ್ ನ ವ್ಯವಸ್ತೆ ಮಾಡಬೇಕಿತ್ತು; ಅವಿನಾಶ್ ಒಂದು ಕಿ.ಮಿ ದೂರದಲ್ಲಿನ ರೋಟರಿ ಗ್ರೌಂಡ್ ಬಗ್ಗೆ ಸಲಹೆ ನೀಡಿದ್ದನು; ಅವಿನಾಶ್ ಜೊತೆಗಿದ್ದರೂ ಈ ಬದಿಮನಿ ಗೆ ನಾನೇ ಬೇಕಿದ್ದೆ; ಕೋಡಿಂಗ್ ನಲ್ಲಿ ಮುಳುಗಿದ್ದ ನನ್ನ ಡೆಸ್ಕ್ ನಲ್ಲಿಗೆ ಬಂದು ನನ್ನನ್ನು ಹಾರಿಸಿಕ್ಕೊಂಡು ಹೋದರು.
ವೆಗನಾರ್ ನಲ್ಲಿ ನಾನು, ಅವಿನಾಶ್ ಮತ್ತು ಬದಿಮನಿ ರೋಟರಿ ಕ್ಲಬ್ ನ ಗ್ರೌಂಡ್ ನ ದಾರಿಯಲ್ಲಿ ಸಾಗುತಿದ್ದರೆ; ಬದಿಮನಿ ತನ್ನ ಡೆಕ್ ನಲ್ಲಿ ಅಶ್ವಥ್ ಹಾಡಿದ ಭಾವಗೀತೆಯ ಸಿಡಿ ಗೆ ತಲೆದೂಗುತಿದ್ದರು; 'ತರವಲ್ಲ ತಗಿ ನಿನ್ನ ತಂಬೂರಿ' ಹಾಡಿಗೆ ಬದಿಮನಿ ತನ್ನ ಕರ್ಕಶ ವೀಣೆಯಿಂದ ಶ್ರುತಿ ಹಚ್ಚುವ ಪ್ರಯತ್ನದಲ್ಲಿದ್ದರು; ನನಗೆ ಆ ಸಾಲುಗಳನ್ನು ಕೆಡಿಸಿದಕ್ಕೆ ಇವನ ಮೇಲೆ ಕೊಪ ಬರುತಿದ್ದರೆ ಹಿಂದಿನ ಸೀಟ್ ನಲ್ಲಿ ಕುಳಿತ ನೋರ್ಥಿಅವಿನಾಶ್ ಗೆ ಇವನ ಹುಚ್ಚುತನದ ಮೇಲೆ ನಗೆ ಮತ್ತು ಪ್ರಶ್ನಾರ್ತಕ ನೋಟ ಮೂಡುತಿದ್ದವು.
"ಒರು ಮಾಲೈ" ಮತ್ತೆ ರಿಂಗಿಣಿಸಿತು.
ಅನ್ನೋನ್ ನಂಬರ್ ಆದರೂ ಈಗ ಬದಿಮನಿಯ ಬಾಯಿಯಿಂದ ತಪ್ಪಿಸಿಕ್ಕೊಳಲು ಒಳ್ಳೆಯ ಉಪಾಯ ಮೂಡಿದಂತಾಯಿತು.
'ಕೆಲವೊಮ್ಮೆ ಕೆಲವೊಂದು ಅನ್ನೋನ್ ನಂಬರ್ ಗಳು ನಮಗೆ ಟೈಮ್ ಪಾಸ್ ಮಾಡುವ ಮಾದ್ಯಮಗಳಾಗುತ್ತವೆ' ಎನ್ನುವ ಸತ್ಯ ದ ನೆನಪಾಗಿ ಈಗ ಬಂದಿರುವ ಕಾಲ್ ಗೆ ಉತ್ತರಿಸಲು ಬದಿಮನಿಗೆ ಕಣ್ಣಲ್ಲೇ ತಮ್ಮ ವೀಣೆಯನ್ನು ಮೌನಕ್ಕೆ ಜಾರಿಸಲು ತಿಳಿಸಿದೆ; ಈ ಪುಣ್ಯಾತ್ಮನ ಕೈಯಿಂದ ಬಿಡುಗಡೆ ಪಡೆಯ ಬೇಕಾದರೆ ಬಂದ ಕಾಲನ್ನು ಕನಿಷ್ಠ ಅರ್ದ ಘಂಟೆ ಮಾತಾಡಬೇಕು, ಕ್ರೆಡಿಟ್ ಕಾರ್ಡ್ ಕಂಸಲ್ಟೆನ್ಸಿ ಆಗಿದ್ದರೆ ಅವರಲ್ಲಿ ಇಲ್ಲ ಸಲ್ಲದ ಪ್ರಶ್ನೆ ಕೇಳಿ ಅವರನ್ನೇ ಗೊಂದಲದ ಗೂಡಿಗೆ ನೂಕ ಬೇಕು; ಅದೇ ಮೊಬೈಲ್ ಪ್ರೋವೈಡೆರ್ ನವರದ್ದಾದರೆ ಗೊತಿಲ್ಲದ ಹೊಸ ಆಫರ್ ಗಳ ಬಗ್ಗೆ ಚರ್ಚಿಸ ಬೇಕು; ಹೌಸಿಂಗ್ ಲೋನ್ ನವರದ್ದಾದರೆ ಇನ್ನೂ ಹುಟ್ಟದ ನನ್ನ ಮರಿಮಕ್ಕಳ ಗ್ರಹಪ್ರವೇಶದ ಮುಹೂರ್ತ ಇಡಬೇಕು ಎಂಬೆಲ್ಲಾ ಯೋಜನೆಯಿಂದಲೇ ೧.೨ " X ೧.೬ " ಇಂಚಿನ ಸ್ಕ್ರೀನ್ ನಲ್ಲಿ ಮಿಂಚಿ ಮರೆಯಾಗುತಿದ್ದ ನಂಬರ್ ಅನ್ನು ನೋಡಿದೆ.
ಅನ್ನೋನ್ ನಂಬರ್ ಹೌದು ಆದ್ರೆ ಇದು ನಿಜಕ್ಕೂ ಅನ್ನೋನ್ ಅಲ್ಲ ಅನ್ನೋನ್ ನಂಬರ್ ಆಗೇ ಇರಲು ಬಯಸಿದಂತ ಅದೇ ಕರ್ನಾಟಕದ ಬಿಎಸ್ಎನ್ಎಲ್ ನಂಬರ್; ಪ್ರೀತಿಯ ಪ್ರಿಯಕರ ವಿವೇಕ್ ಕರೆ ಮಾಡಿದ್ದ. ಕನ್ಸಲ್ಟೆನ್ಸಿಯವರಿಗೆ ಉತ್ತರ ಕೊಡಲು ಉತ್ಸುಕನಾಗಿದ್ದ ನಾನು ಖುದ್ದು ಕನ್ಸಲ್ಟೆನ್ಸಿಯ ಕಾಲ್ ಬಾಯ್ ಆಗಿದ್ದಕ್ಕೆ ಬೇಜಾರಾಯಿತು.
"ಗೆಳೆಯನ ಪ್ರೀತಿಯ ಕುರಿತು ಗೆಳೆಯನಾದ ಇನ್ನೊಬ್ಬ ಪ್ರೇಮಿ ಚಿಂತಿಸುತ್ತಾ ಇರಬೇಕು; ಇನ್ನೊಬ್ಬನ ಪ್ರೇಮದಲ್ಲಿ ಮುಳುಗಿರುವ ಈ ಗೆಳೆಯನಿಗೆ ತನ್ನ ಪ್ರೇಮದ ಕುರಿತು ಚಿಂತಿಸಲು ಆ ಪ್ರೇಮಿ ಬಿಡುವುದಿಲ್ಲ, ಅದಕ್ಕಾಗಿಯೇ ಪ್ರೇಮಿ ಗಳಾಗಿದ್ದರೆ ತನ್ನ ಗೆಳೆಯರ ಪ್ರೇಮದಲ್ಲಿ ಮೂಗು ತುರಿಸಿಕ್ಕೊಳಲು ಹೋಗಬಾರದು"
"ಯಾಕಾದರೂ ಗೆಳೆಯ ನೆನೆಸಿಕ್ಕೊಂಡ ಈ ಹೊಸ ಗೆಳೆಯ ಕರೆ ಮಾಡಿದನೋ ...? ಇನ್ನೇನಾದರು ಸುರ್ಪ್ರೈಸ್ ಕೊಡುವ ಆಸೆಯೇ ಮಗನಿಗೆ" ಎಂಬ ಗೊಂದಲದಲ್ಲೇ "ಹಲೋ ವಿವೇಕ್ ಹೇಳೋ ..."
"ವೈಭವ್ ಬ್ಯುಸಿ ಇದ್ದಿಯೇನೋ"
"ಇಲ್ಲ ಹೇಳೋ .."ಅಷ್ಟರಲ್ಲಿ ವೆಗನಾರ್ ರೋಟರಿ ಕ್ಲುಬ್ ನ ಗ್ರೌಂಡ್ ನಲ್ಲಿತ್ತು. ಮೂವರು ಕೆಳಗಿಳಿದೆವು.
ನಾನು ಬದಿಮನಿ ಮತ್ತು ಅವಿನಾಶ್ ಕೆ ಹೋಗಿ ಮಾತಾಡುವಂತೆ ಹೇಳಿ ಮೊಬೈಲ್ ನಲ್ಲಿ ನನ್ನ ಮಾತು ಮುಂದುವರಿಸಿದೆ.
"ಹೇಳೂ .. ಏನು ಕಾಲ್ ಮಾಡಿದ್ದು..?"
"ನಿನ್ನತ್ರ ಮಾತಾಡೋದಿದೆ; ಬ್ಯುಸಿ ಇದ್ದರೆ ಹೇಳು ರಾತ್ರಿ ಕಾಲ್ಮಾಡ್ತೇನೆ.."
"ಇಲ್ಲ ಪರವಾಗಿಲ್ಲ ನೀನು ಹೇಳೋ, ನಾನು ಹೊರಗಿದ್ದೇನೆ ,ಏನಾಯ್ತು ಏನೋ ತುಂಬಾ ಟೆನ್ಶನ್ ನಲ್ಲಿರುವ ಹಾಗೆ ಇದ್ದೀಯ ಏನಾಯ್ತು ?"
"ಟೆನ್ಶನ್ ಏನು ಇಲ್ಲ ಕಣೋ; ಅವಳನ್ನು ನೋಡದೆ ತುಂಬಾ ದಿನ ಆಯ್ತಲ್ಲಾ ಹಾಗೆ ..."
"ಓಹೋ ವಿರಹದ ಬೆನೆಯೋ... ಬಂದು ಬಿಡಿ ಯಜಮಾನ್ರೇ ಪುಣೆ ಸುತ್ತಿ ನಿಮ್ಮ ರಾಣಿಯನ್ನು ಭೇಟಿ ಆಗಿ ಹೋಗುವಿರಂತೆ"
"ಅದೇ; ಪುಣೆಗೆ ಒಂದು ಭೇಟಿ ಕೊಡ ಬೇಕೆಂದಿದ್ದೇನೆ; ನೀನು ಯಾವ ಸಮಯದಲ್ಲಿ ಫ್ರೀ ಇದ್ದಿ ಹೇಳಿದರೆ ಅದೇ ಸಮಯಕ್ಕೆ ಬರುತ್ತೇನೆ"
"ನೀನು ಹೇಳೋ; ನಾನು ಫ್ರೀ ಮಾಡ್ಕೊಳ್ತೆನೆ; ಪರವಾಗಿಲ್ಲ"
"ನ್ಯೂ ಇಯರ್ ಈವ್ ..? ಬರ ಬಹುದಾ ..?"
"ಶೂರ್, ಬಾ ಆ ಸಮಯದಲ್ಲಿ ನಮ್ಮ ಆಫೀಸ್ ನ ಇವೆಂಟ್ ಇದೆ; ನೀನು ಎನೋಜೋಯ್ ಮಾಡ ಬಹುದು"
"ನನ್ನದಿನ್ನೂ ಫಿಕ್ಸ್ ಆಗಿಲ್ಲ,ಪ್ಲಾನ್ ಫಿಕ್ಸ್ ಮಾಡಿ ನಿನಗೆ ಹೇಳ್ತೇನೆ"
"ಸರಿ ಹಾಗಾದ್ರೆ; ನೋಡು ನಿನ್ನ ಪುರಸೊತ್ತು ಮಾಡ್ಕೊಂಡು ಬಾ .."
"ಮತ್ತೆ ಹೇಗಾಗ್ತಾ ಇದೆ ಕೆಲಸ ...?"
"ಅದು ಅದ್ರ ಪಾಡಿಗೆ ನಡೀತಾ ಇದೆ; ಈ ಶುಕ್ರವಾರದ ವರೆಗೆ ಕೆಲಸ ಮಾಡಿದ್ರೆ ಆಯಿತು ಮತ್ತೆ ೨ ವಾರದ ರಜೆ, ಪ್ರೊಡಕ್ಷನ್ ಇರಲ್ಲ ಜನವರಿ ಎರಡನೇ ವಾರದ ತನಕ"
"ನಿನ್ನ ಲೈಫ್ ಗಮತ್ತಪ್ಪಾ; ಇಲ್ಲಿ ನೋಡು ನಾನು ಹೊಡ್ಕೊಳ್ತಾ ಇದ್ದೇನೆ; ಇವತ್ತು ಈ ಕಂಪೆನಿ; ನಾಳೆ ಆ ಕಂಪೆನಿ ಅಂತ ಇಂಟರ್ವ್ಯೂ ಕೊಡ್ತಾ ಇದ್ದೇನೆ; ಎಲ್ಲೂ ಆಗ್ತಾ ಇಲ್ಲಾ, ಇ ಅಂಡ್ ಇ ಮಾಡಿ ನಾನು ಕೆಟ್ನಪ್ಪಾ .. ನಾನು ನಿಮ್ಮಂತೆ ಸಿ.ಎಸ್ ಐ ಎಸ್ ಮಾಡಿದರೆ ಇವತ್ತು ಅರಾಂಸೆ ಏಸಿ ಹವೆಯಲ್ಲಿ ಇರ್ತಿದ್ದೆ"
"ಹಾಗೇನು ಇಲ್ಲ; ನಿಂಗು ಆಗುತ್ತೆ ಕೆಲಸ... ಟೆನ್ಶನ್ ತೆಕೋ ಬೇಡ"
"ಏನಾಗುತ್ತೋ ಏನು ಬಿಡುತ್ತೋ.. ಇನ್ನೂ ಬರಿ ನಾಲ್ಕು ತಿಂಗಳಿದೆ; ಆಗುವುದಾದರೆ ಅದರ ಒಳಗಾಗಬೇಕು; ಇಲ್ಲನ್ತಾದ್ರೆ ನಮಗೆ ಕೊಂಪಿಟಿಶನ್ ಕೊಡಲು ೨೦೦೫ ರ ಬಾತ್ಚ್ ಸೇರಿಕೊಳ್ಳುತ್ತೆ "
"ಏನು ಆಗಲ್ಲ, ದೇವರಿದ್ದಾನೆ"
"ತಲೆ ಕೆಟ್ಟು ಹೊಯ್ತ್ಹೋ; ಕೆಲಸ ಇರ್ಬೇಕು , ಕೈಯಲ್ಲಿ ಹಣ ಇರ್ಬೇಕು ; ಇಲ್ಲನ್ತಾದ್ರೆ ಯಾರು ಮೂಸಲ್ಲ; ಕಾಲ ಕಸಕ್ಕಿಂತ ಕಡೆಯಾಗಿ ನೋಡ್ತಾರೆ"
"ಬಿಡೋ ಅದೆಲ್ಲಾ" ಎನ್ನುತ್ತಾ ಅವನನ್ನು ಸಮಾಧಾನಿಸುತ್ತಿರುವಷ್ಟರಲ್ಲಿ ಬದಿಮನಿ ಬಂದ ಕೆಲಸ ಮುಗಿಸಿ ಕಾರ್ ಏರಿದರು.
ನಾನು ಅವನಲ್ಲಿ "ಸರಿ ಕಣೋ.. ಬಾಯ್" ಎನ್ನುತ್ತಾ ಕಾಲ್ ಕಟ್ ಮಾಡಿದೆ.
ಹೊಸದಾಗಿ ಜೋಯಿನ್ ಆಗಿದ್ದ ಆ ೩೬ ಮಂದಿಯ ಗ್ರೂಪ್ ಇವತ್ತು ಎರಡನೇ ಬಾರಿಗೆ ನಮ್ಮ P2 ಪ್ರವೇಶಿಸಿತ್ತು; ಉಳಿದ ದಿನವೆಲ್ಲ ಅವರು ಬಿಲ್ಡಿಂಗ್ ನಂಬರ್ ೧೧ ನ ಟ್ರೇನಿಂಗ ನಲ್ಲಿ ಇರುತಿದ್ದರು; ಇವತ್ತಿಂದ ಮುಂದಿನ ೩೧ ಕ್ಕೆ ನಡೆಯುವ ಫೈನಲ್ ಇವೆಂಟ್ ದಿನ ನಡೆಯಬೇಕಾದ ಸಭಾಕಾರ್ಯಕ್ರಮದ ಪ್ರಾಕ್ಟಿಸ್ ನಡೆಸುವುದಿತ್ತು; ಬದಿಮನಿ ಸಂಜೆ ಗ್ರೌಂಡ್ ನಿಂದ ಒಪಾಸ್ ಬರಬೇಕಾದರೆ ನೀನು ಆ ಚರ್ಚೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದ್ದ; ಸರಿ ಎಂದ ನಾನು ಸಂಜೆ ೮ ಆದರೂ ಕ್ರಿಸ್ ನೊಂದಿಗೆ ಕಾಲ್ ನಲ್ಲಿ ಮುಳುಗಿದ್ದೆ; ಅರ್ದ ಗಂಟೆ ಗೆ ಬುಕ್ ಆದ ಮೀಟಿಂಗ್ ೨ ಗಂಟೆ ಯಾದರೂ ಅದರಪಾಡಿಗೆ ನಡೆಯುತ್ತಲೇ ಇತ್ತು; ನಡುವಲ್ಲಿ ಎರಡು ಬಾರಿ ಆಕೃತಿ ಬಂದು ನನ್ನನ್ನು ಕರೆದರೂ ನಾನೆದ್ದಿರಲಿಲ್ಲ; ಪ್ರೀತಿ ಹೇಳಿದ ಹಾಯ್ ಗೆ ಕಣ್ಣ ಸನ್ನೆಯಲ್ಲೇ ಉತ್ತರಿಸಿದ್ದೆ.
ನನ್ನ ಅನುಪಸ್ಥಿತಿಯಲ್ಲಿ ಪ್ರೀತಿ ಡಿ - ಫ್ಯಾಕ್ಟರ್ ೨೦೦೫ ನ ಕೊರ್ಡಿನೆಟರ್ ಆಗಿ ಅವಿರೋದವಾಗಿ ಆಯ್ಕೆ ಆಗಿದ್ದಳು; ಎರಡು ಗಂಟೆ ಚರ್ಚಿಸಿ ಅವರು ಫೈನಲ್ ಇವೆಂಟ್ ನ ಕರಡು ಪ್ರತಿ ತಯಾರಿಸಿದ್ದರು.ಕ್ರಿಸ್ ನ ಕಾಲ್ ಆದ ಬಳಿಕ ನಾನು ಕಪ್ ಸಿಪ್ ಕಾಫಿ ಯ ಸಿಪ್ ಹೀರಲು ಕೆಫೆಟೆರಿಯಾ ಹೋದಾಗ ನನ್ನಲ್ಲಿ ಬದಿಮನಿ ನನ್ನ ಅಭಿಪ್ರಾಯ ಕೇಳಿ ೮ ಬಗೆಗಳಿಗೆ ಹಸಿರು ನಿಶಾನಿ ತೋರಿಸಿದ್ದರು. ಆಕೃತಿ ಚಾನ್ಸ್ ಹೊಡೆದಿದ್ದಳು ಮೊದಲ ಪ್ರಾರ್ಥನೆ ಸೇರಿ ಇನ್ನೊಂದು ಹಾಡನ್ನು ಅವಳು ಅವಳ ಜೋಳಿಗೆಗೆ ಹಾಕಿದ್ದಳು;ಒಂದು ಸೋಲೋ ಮತ್ತೊಂದು ಡುಯೆಟ್ ನ ಪ್ರೊಪೋಸಲ್ ನಲ್ಲಿ ಬದಿಮನಿ ಒಂದಕ್ಕೆ ಮಾತ್ರ ಒಪ್ಪಿಗೆ ಸೂಚಿಸಿದರು.ಉಳಿದಂತೆ ೬ ರಲ್ಲಿ ಒಂದು ಡ್ರಾಮ, ಎರಡು ಇಂಷ್ಟ್ರುಮೆಂಟಲ್, ಒಂದು ಸೋಲೋ ಡ್ಯಾನ್ಸ್; ಎರಡು ಗ್ರೂಪ್ ಡ್ಯಾನ್ಸ್ ಹೀಗೆ ಎಲ್ಲ ಕಾರ್ಯಕ್ರಮದ ಪಟ್ಟಿ ರೆಡಿ ಯಾಗಿತ್ತು. ನನ್ನನ್ನು ನಿರೂಪಕ ನಾಗಿ ನೇಮಿಸಿದ್ದಾರೆ; ಜೊತೆಗೆ ಒಂದು ನಿರೂಪಕಿಯ ಆಯ್ಕೆಯನ್ನು ನನಗೆ ಬಿಟ್ಟು ಕೊಡಲಾಗಿತ್ತು.
ನನ್ನನ್ನು ನೋಡಿ ಬದಿಮನಿ "ವೈಭು; ನಾನು ಸಲ್ಪ ಅರ್ಜೆಂಟ್ ನಲ್ಲಿದ್ದೇನೆ; ಏನೆಲ್ಲಾ ಇರಬೇಕು ಎಂಬ ಬ್ಲೂ ಪ್ರಿಂಟ್ ರೆಡಿ ಮಾಡಿದ್ದೇವೆ; ನೀವೆಲ್ಲ ಸೇರಿ ಡ್ಯಾನ್ಸ್ ಮತ್ತು ಸಿಂಗಿಂಗ್ ಗೆ ಯಾವ ಸಾಂಗ್ ಸೆಲೆಕ್ಟ್ ಮಾಡಬಹುದು; ಮತ್ತು ಡ್ರಾಮದ ಕಾನ್ಸೆಪ್ಟ್ ಬಗ್ಗೆ ಚರ್ಚಿಸಿ ಪ್ಲಾನ್ ರೆಡಿ ಮಾಡಿ; ನಾಳೆಯಿಂದ ಪ್ರಾಕ್ಟೀಸ್ ಶುರುಮಾಡಬೇಕು " ಎನ್ನುತ್ತಾ ಲ್ಯಾಪ್ಟಾಪ್ ಅನ್ನು ಹೆಗಲಿಗೇರಿಸಿ ಹೊರ ಹೋದರು.
"ನಾನೂ ಇವತ್ತು ಬ್ಯುಸಿ; ನೀವು ಡಿಸ್ಕುಸ್ ಮಾಡಿ; ನಾನು ಯಾವುದೇ ಇವೆಂಟ್ ನಲ್ಲಿ ಇರುವುದಿಲ್ಲ ನಿರೂಪಕನ ಜವಾಬ್ದಾರಿ ನಾನು ತೆಗೆದು ಕೊಳ್ಳುತ್ತೇನೆ; ಉಳಿದಂತೆ ನೀವೇ ಚರ್ಚಿಸಿ ಪ್ಲಾನ್ ರೆಡಿ ಮಾಡಿ" ಎನ್ನುತ್ತಾ ಕಪ್ ಹಿಡಿದು ಡೆಸ್ಕ್ಗೆ ಬಂದು ಕ್ರಿಸ್ ಕೊಟ್ಟ ಅಪ್ಡೆಟ್ಸ್ ಗಳನ್ನು ಆಗಲೇ ಡೆಲಿವರಿ ಮಾಡಿರುವ ಫಸ್ಟ್ ಇಟೆರೆಶನ್ ನಲ್ಲಿ ಅಳವಡಿಸಲು ತೊಡಗಿಕ್ಕೊಂಡೆ.
ಆಕೃತಿ ಬಳಿಯಲ್ಲೇ ಬಂದು ಕುಳಿತುಕ್ಕೊಂಡಳು; ಕಳೆದ ಹಲವು ದಿನಗಳಿಂದ ನನ್ನ ದಿನಚರಿಯಲ್ಲಿ ಇದೂ ಸೇರಿ ಹೋಗಿತ್ತು. ನಾನು ಪೆರ್ಸನಲ್ ಆಗಿ ಸಿಗುತಿದ್ದ ಈ ತಿಳಿ ಸಂಜೆಯ ರಮ್ಯತೆಯು ಅವಳಿಗೆ ನನ್ನ ಮನಸ್ಸಿನ ಭಾವನೆಗಳನ್ನು ವ್ಯಕ್ತ ಪಡಿಸಲು ನನಗೆ ಅವಳ ಭಾವನೆಗಳನ್ನು ಖರೀದಿಸಲು ಉತ್ತಮ ಮಾರುಕಟ್ಟೆ ಯಾಗಿತ್ತು.
ಡಾಕ್ಯುಮೆಂಟ್ ಓದುವುದರಲ್ಲಿ ಬುಸಿ ಆಗಿದ್ದ ನನ್ನಲ್ಲಿ "ಇನ್ನೆಷ್ಟು ಹೊತ್ತು ಹಿಡಿಯುತ್ತೆ..?"
"ಮೂರರಿಂದ ನಾಲ್ಕು ಗಂಟೆ"
"ಅಂದ್ರೆ ಮದ್ಯ ರಾತ್ರಿ ವರೆಗೆ ಇಲ್ಲೇ ಝಾಂಡಾ ಅನ್ನು!!"
"ಹೌದು; ಕ್ರಿಸ್ ಈ ಇಟೆರೆಶನ್ ಅನ್ನು ಇವತ್ತೇ ಫಾರ್ವರ್ಡ್ ಮಾಡಲು ಹೇಳಿದ್ದಾನೆ; ನಾಳೆ ಒಂದು ದಿನ ಇದೆ; ಸೋಮವಾರದಿಂದ ಅಲ್ಲಿನ ಸೆಂಟರ್ ಕ್ಲೋಸ್ ಇರುತ್ತೆ; ಅದರ ಮೊದಲು ಇದನ್ನು ಪ್ರೊಡಕ್ಷನ್ ಗೆ ಕೊಡಬೇಕು ಎನ್ನುವುದು ಅವನ ಅಭಿಪ್ರಾಯ"
"ನೀನು ಒಬ್ಬ ಇದ್ದೀಯ ದಿನದ ೧೨ ಗಂಟೆಗೂ ಹೆಚ್ಚು ಪ್ರಾಜೆಕ್ಟ್ ಅಂತ ಸಾಯ್ತಾ ಇದ್ದೀಯ, ನಾನು ನೋಡು ಜೋಯಿನ್ ಆದಾಗಿಂದ ಪ್ರಾಜೆಕ್ಟ್ ಇಲ್ಲ ಹೇಳಿ ಇಲ್ಲಸಲ್ಲದ ಟ್ರೈನಿಂಗ್ ಗೆ ಎನ್ರೋಲ್ ಮಾಡ್ಕೊಂಡು ಬೇಡದ ವಿಚಾರಗಳನ್ನು ಕಲೀತಾ ಇದ್ದೇನೆ"
"ನೀನು ಈ ಟ್ರೈನಿಂಗ್ ಆ ಟ್ರೈನಿಂಗ್ ಅಂತ ಸೇರುವ ಬದಲು ನಮ್ಮ ಪ್ರಾಜೆಕ್ಟ್ ಗೆ ಸೇರಿ ಬಿಡು ನಾನು ನಿನ್ನ ಟ್ರೈನ್ ಮಾಡ್ತೇನೆ; ಹೇಗೂ ಒಟ್ಟಿಗೆ ಬರ್ತೀವಿ ಒಟ್ಟಿಗೆ ಹೋಗ್ತೀವಿ ; ಇಬ್ಬರ ಜೋಡಿ ಸರಿಯಾಗಿರುತ್ತೆ"
"ಹೌದು ವೈಭು; ನಿನಗೆ ನಾನು ಸಹಾಯ ಮಾಡುವುದು , ನಂಗೆ ನೀನು ಸಹಾಯ ಮಾಡುವುದು ನೆನಸಿ ಕೊಂಡ್ರೆನೆ ಏನೂ ಖುಷಿ ಆಗುತ್ತೆ; ನಿನ್ನ ಲಕ್ಷ್ಮಿ ಸರ್ ನಲ್ಲಿ ನನ್ನ ಹೆಸರನ್ನು ರೆಫರ್ ಮಾಡು"
"ಜೀವನ ಲೀವ್ ಮುಗಿಸಿ ಬರಲಿ; ಅವನಲ್ಲಿ ಹೇಳುತ್ತೇನೆ; ಅವನು ಹೇಳಿದರೆ ಆ ಮಾತಿಗೆ ವೈಟ್ ಇರುತ್ತೆ; ಮತ್ತು ನಾನೇ ನಿನ್ನನ್ನು ರೆಫರ್ ಮಾಡಿದ್ದು ಅಂತ ಗೊತ್ತಾದ್ರೆ ಇಲ್ಲಿ ನಮ್ಮಿಬ್ಬರ ಮೇಲೆ ಗುಲ್ಲು ಶುರುವಾಗಬಹುದು; ಸುಮ್ಮನೆ ತಿಳಿದು ತಿಳಿದು ಊರ ಮಾತಿಗೆ ತುತ್ತಾಗುವುದು ಬೇಡ... ಎರಡು ವಾರ ತಡಿ"
"ಸರಿ ನಿನಿಷ್ಟ ವೈಭು..."
"ಮತ್ತೆ ಏನಾದ್ರೂ ಹೇಳು.."
"ಏನಾದ್ರೂ ಅಂದ್ರೆ ..?"
"ಏನಾದ್ರೂ ... ನಾನು ಯಾವಾಗಲು ಏನಾದ್ರೂ ಹೇಳು ಅಂದಾಗ ನೀನು ಹೇಳ್ತಿಯಲ್ಲ ಅದೇ ಮೂರು ಶಬ್ದ ಮತ್ತೆ ಇವತ್ತು ಪುನಃ ಹೇಳು.."
"ಓಯ್ ಡಂಬು.. ಯಾವತ್ತೂ ಹೇಳ್ತೇನೆ ಹೇಳಿ ಇವತ್ತು ನೀನು ಕೇಳುವುದಾ..? ಯಾವತ್ತು ನಾನು ಮತ್ತು ನೀನು ಇಬ್ಬರೇ ಇರ್ತೇವೆ ೪೦ ಡೆಸ್ಕ್ ಗಳ ನಡುವಲ್ಲಿ; ಆದರೆ ಇವತ್ತು ಇಲ್ಲಿ ೪೦ ಮಂದಿ ಇದ್ದಾರೆ ಎಚ್ಚರ ವಿರಲಿ"
"ಅವರಿರುವುದು ಕೆಫೆಟೆರಿಯ ದಲ್ಲಿ ಅಲ್ಲವೇ .. ಹೇಳೋ ರಾಜಾ ..." 'ರಾಜ ಅವಳ ಮುದ್ದಿನ ಹೆಸರು !'
ಆಚೆ ಈಚೆ ನೋಡಿ ಕಿವಿಯ ಬಳಿ ಬಂದು ಆ ಮೂರು ಶಬ್ದಗಳನ್ನು ಉಸುರಿದಳು. ತಲೆಯಲ್ಲಿನ ಎಲ್ಲ ಕೋಡ್ ಗಳು ಶಿಫ್ಟ್ ಡಿಲೀಟ್ ಆಗಿ ಹೋದವು!!
ಕಣ್ಣಲ್ಲಿ ಕಣ್ಣಿಟ್ಟು ನೋಡುತಿದ್ದೆ; ಅವಳೂ ಅದನ್ನೇ ಮಾಡುತಿದ್ದಳು.
ಪ್ರೀತಿ ಬಾಗಿಲು ಸರಿಸಿದಳು; ನಾನು ದೃಷ್ಟಿಯನ್ನು ಆಗಲೇ ಸ್ಲೀಪ್ ಮೋಡ್ ಗೆ ಹೋದ ಮೊನಿಟರ್ ನೋಡಲು ಶುರುಮಾಡಿದೆ; ಅಲ್ಲಿ ಏನು ಕಾಣುತ್ತಿರಲಿಲ್ಲ; ಮೆದುಳೇ ಬ್ಯಾಂಕ್ ಆಗಿದೆ ಇಲ್ಲ ಸ್ಕ್ರೀನ್ ಲೋಕ್ ಆಗಿದೆ ಎಂದು ತಿಳಿಯುವಷ್ಟರಲ್ಲಿ ಪ್ರೀತಿ ನನ್ನ ಡೆಸ್ಕ್ ನಲ್ಲಿದ್ದಳು; ಅವಳನ್ನು ಕಂಡು ಬೆಚ್ಚಿ ಮೌಸ್ ಗೆ ಕೊಟ್ಟ ಶಾಕ್ನಿಂದ ಮೊನಿಟರ್ ನಲ್ಲಿ ಮತ್ತೆ ಕ್ರಿಸ್ ನ ಮೇಲ್ ಕಾಣ ತೊಡಗಿತು.
ವಾಸ್ತವಕ್ಕೆ ಮರಳಿ "ಪ್ರೀತಿ ಹೇಗಿದ್ದಿಯಾ ..? ಹೇಗಾಗ್ತಿದೆ ಟ್ರೈನಿಂಗ್...? ಹೇಗಾಗ್ತಿದೆ ಡ್ರೀಮ್-ಟೆಕ್ ...?" ಎಂದು ಪ್ರಶ್ನೆಗಳ ಸರಮಾಲೆಯನ್ನೇ ಎದುರಿಟ್ಟೆ;ನಾನು ಮಾತಾಡಬೇಕು ಹೇಳಿ ಮಾತಾಡುತಿದ್ದೆ ವಿನಃ ಅವಳ ಉತ್ತರದ ನಿರೀಕ್ಷೆ ಖಂಡಿತವಾಗಿಯೂ ಇರಲಿಲ್ಲ.
ಪ್ರೀತಿ "ಆರಾಮ್ ಸೇ... ನಾನೇನು ನೋಡಲಿಲ್ಲ .. " ಎಂದು ನಕ್ಕಳು.
ಪಕ್ಕದಲ್ಲೇ ಕೂತಿದ್ದ ಆಕೃತಿ ಯನ್ನು ನೋಡಿದೆ. ದೃಷ್ಟಿ ಕಾಲ ಕೆಳಗಿರುವ ಕಾರ್ಪೆಟ್ ಮೇಲೆ ನೆಟ್ಟಿತ್ತು; ಕಾಲು ರಂಗೋಲಿ ಬರೆಯುತ್ತಿತ್ತು.
"ಹೇಳಮ್ಮಾ.. ಹಿಡಿಸಿತಾ ಪುಣೆ ಲೈಫ್ ..?"
"ಸೂಪರ್ ಕಣೋ ! ನಮ್ ಮಂಗಳೂರ್ ಗಿಂತ ಸಾವಿರ ಪಾಲು ಮೇಲು"
"ಮಂಗಳೂರು ಯಾವಾಗಲು ಮಂಗಳೂರೇ... ಏನು ಹೇಳಬೇಡ ನಮ್ಮ ಮಂಗಳೂರಿಗೆ"
"ನೋಡಪ್ಪ ಜನ ಮಂಗಳೂರಲ್ಲೇ ಇರುವ ತರಹ ಮಾತಾಡ್ತಾ ಇದ್ದಾನೆ, ಹುಟ್ಟಿದ್ದು ಎಲ್ಲೋ; ಈಗ ಇರುವುದು ಎಲ್ಲೋ, ನಡುವಲ್ಲಿ ಬೆಳೆದ ಮಂಗಳೂರ ಮೇಲೆ ಯಾಕಪ್ಪಾ ಈ ರೀತಿಯ ಮಮಕಾರ..?"
"ಅದು ಹಾಗೆಯೇ.. ಮಂಗಳೂರು ಇಸ್ ಮಂಗಳೂರು" ಅಂದೇ; ಆಕೃತಿಯ ಕಾಲಬೆರಳು ಇನ್ನೂ ರಂಗೋಲಿ ಇಡುತಿದ್ದವು.
"ನಾನು ಹೋಗ್ತಾ ಇದ್ದೇನೆ; ನಿಂದು ಎಷ್ಟು ಹೊತ್ತಾಗುತ್ತೆ..? ನಿಲ್ತೇನೆ ಒಟ್ಟಿಗೆ ಹೋಗೋಣಾ .."
"ಇನ್ನೂ ೨-೩ ಗಂಟೆ ಆಗಬಹುದು ; ಪರವಾಗಿಲ್ಲ ನೀನು ಹೋಗು" ಅಂದೆ
ಅವಳು "ಓಕೆ ನಪ್ಪ ನಾನ್ಯಾಕೆ ಕಬಾಬ್ ಮೇ ಹಡ್ಡಿ ಆಗ್ಲಿ...? ನೀನು ಮುಂದುವರಿಸು.. "ಎನ್ನುತ್ತಾ ಅವಳು ಆಕೃತಿಯಲ್ಲಿ "ಆರ್ ಯು ಕಮಿಂಗ್..?" ಅಂದಳು
ಕೆಳಗೆ ಬಾಗಿದ್ದ ತಲೆನ್ನು ಕೆಳಗಿನ ಕಾರ್ಪೆಟ್ ಗೆ ಸಮಾನಾಂತರವಾಗಿ ಮೂರು ಬಾರಿ ಬಲಕ್ಕೆ ಎಡಕ್ಕೆ ತೂಗಿಸಿದಳು; ಲಜ್ಜೆ ಇನ್ನೂ ಇಳಿದಿರಲಿಲ್ಲ.
ಪ್ರೀತಿ ಇಬ್ಬರಿಗೆ ಬಾಯ್ ಹೇಳಿ ಹೊರ ನಡೆದಳು. ಮುಂದಿನ ಹದಿನೈದು ನಿನ್ಶದಲ್ಲಿ ಕೆಫೆಟೆರಿಯಾ ದಲ್ಲಿ ಆವರಿಸಿದ ನಿಶ್ಯಬ್ದ ಉಳಿದ ಎಲ್ಲ ಕಾಗೆಗಳು ತಮ್ಮ ತಮ್ಮ ಗೂಡಿಗೆ ಹಾರಿದ ವಾರ್ತೆ ತಲುಪಿಸಿದವು; ಒಳಗೆ ನಾವಿಬ್ಬರೇ ಸ್ವಚ್ಚಂದ ಹಕ್ಕಿ ಗಳಂತೆ ಮೌನ ಸಲ್ಲಾಪ ನಡೆಸುತಿದ್ದೆವು.
ನಡುವಲ್ಲಿ ಡೋಮಿನೋಸ್ ಹೋಂ ಡೆಲಿವೆರಿ ಗೆ ಕರೆ ಮಾಡಿ ಪಿಜ್ಜಾ ತಂದು ಇಬ್ಬರು ಸೇರಿ ತಿಂದು ೧೧ ಗಂಟೆಗೆ ಕ್ರಿಸ್ ಗೆ ಪ್ರಾಜೆಕ್ಟ್ ನ ಎರಡನೇ ಇಟೆರೆಶನ್ ಅನ್ನು ಮೇಲ್ ಮಾಡಿ ಡಿಸೆಂಬರ್ ನ ತಡರಾತ್ರಿಯ ಚಳಿಯಲ್ಲಿ ಬೈಕ್ನಲ್ಲಿ ಮೂರು ಕಿ.ಮಿ ದೂರದ ರೂಂ, ಹಾಸ್ಟೆಲ್ ನ ದಾರಿ ಹಿಡಿದೆವು. ಚಳಿಗಾಳಿ ಬೀಸುತಿದ್ದರೂ ಬೆಚ್ಚನೆಯ ಅಪ್ಪುಗೆ ಮನಸನ್ನು ವೈಶಾಕದ ಕೋಗಿಲೆಯಂತೆ ಹಾಡಲು ಪ್ರೇರೇಪಿಸುತಿತ್ತು.