ನೂರಾರು ವಿಷಯಗಳು ತುಂಬಿವೆ ಬಾಳೆಂಬ ಪುಸ್ತಕದಲ್ಲಿ

ನೂರಾರು ವಿಷಯಗಳು ತುಂಬಿವೆ ಬಾಳೆಂಬ ಪುಸ್ತಕದಲ್ಲಿ

ಕವನ

 

ನೂರಾರು ವಿಷಯಗಳು ತುಂಬಿವೆ ಬಾಳೆಂಬ ಪುಸ್ತಕದಲ್ಲಿ

ಒಂದೊಂದು ಘಟನೆಗಳು ಕಲಿಸುತಿವೆ ಒಂದೊಂದು ಪಾಠವ 

ಸುಲಭದಿ ಅರ್ಥವಾಗುವುದು ಕೆಲ ಪಾಠಗಳು 

ಎಷ್ಟೇ ಪ್ರಯತ್ನಿಸಿದರೂ ಅರ್ಥವಾಗದು ಕೆಲ ಪಾಠಗಳು

 

ಅರ್ಥಮಾಡಿಕೊಳ್ಳುವ ಮುನ್ನವೇ ಮುಗಿದು

ಹೋಯಿತು ಬಾಲ್ಯವೆಂಬ ಅತಿ ಸುಂದರ ಪಾಠವು

ಉತ್ತರವಿಲ್ಲದ ಹಲವಾರು ಪ್ರಶ್ನೆಗಳು ಪ್ರಶ್ನೆಗಳಾಗೇ

ಉಳಿದು ಹೋಯಿತು ಪ್ರೌಡಾವಸ್ಥೆಯಲ್ಲಿ 

 

ಉತ್ತಗಳು ಸಿಕ್ಕವು ಕೆಲ ಪ್ರಶ್ನೆಗಳಿಗೆ ಯೌವನಾವಸ್ಥೆಯಲ್ಲಿ 

ಗೊಂದಲ ಮೂಡಿಸುತ್ತಿವೆ ಕೆಲ ಉತ್ತರಗಳು ಸರಿಯೋ ತಪ್ಪೋ ಎಂದು

ಮತ್ತೆ ಗೊಂದಲ ಮೂಡಿಸುತ್ತಿದೆ ಕೆಲ ಪ್ರಶ್ನೆಗಳೇ

ಭಯವಾಗುತ್ತಿದೆ ಎನಗೆ ಎಲ್ಲಿ ಕಳೆದು ಹೋಗುವುದೋ 

ನನ್ನೀ ಜೀವನ ಅರ್ಥ ಮಾಡಿಕೊಳ್ಳುವ ಮುನ್ನ  ಬಾಳೆಂಬ ಪುಸ್ತಕವ...

Comments