ನಲ್ಲೆಯೊಂದಿಗೆ ಕಡಲ ತಟದಲಿ...
ಕವನ
ನಲ್ಲೆಯೊಂದಿಗೆ ಕಡಲ ತಟದಲಿ...
-----------------------------------
ನಲ್ಲೆಯವಳು ಮೆಲ್ಲು ದನಿಯಲಿ
ಪ್ರೀತಿ ರಸವನು ಜಿನುಗುತ
ಕಡಲ ತಟದಲಿ ಬಳಿಗೆ ಕುಳಿತಿರೆ
ಮಿನುಗು ನಗೆಯನು ಚೆಲ್ಲುತ
ನುಣುಪು ಶಿಲೆಯ ಬಂಡೆಯಿಂದಲಿ
ರವಿಯ ಕಿರಣವು ಪ್ರಖರಿಸಿ
ಅವಳ ಅಂದವ ನೋಡಿ ಸೋತದು
ಹೋಗುತಿಹುದು ಚುಂಬಿಸಿ
ಅವಳ ನೋಡಲು ಪೋಲಿ ತೆರೆಗಳು
ಓಡಿ ಓಡದು ಬರುತಿರೆ
ಹೊಟ್ಟೆ ಕಿಚ್ಚಲಿ ಗಟ್ಟಿ ಹಿಡಿದೆನು
ಅಂಗಲಾಚುತ ಅಕ್ಕರೆ
ಮೇಘಸುಂದರ ಬಾನ ಪಥದಲಿ
ಮೆಲ್ಲ ಮೆಲ್ಲಗೆ ಬರುತಿಹ
ದಾರಿ ಮಧ್ಯದಿ ಅವಳ ನೋಡಿ
ಕೈಯ್ಯ ಬೀಸಿ ಕರೆದಿಹ
ಇವಳ ಚೆಂದವ ನೋಡಿ ನಾಚಿ
ಬಾನು ಕೆಂಪಲಿ ಮಿಂಚಿದ
ರವಿಯು ಚೆಲುವೆಯ ಕಣ್ಣ ನೋಡುತ
ಕಡಲ ನೀರೊಳು ಜಾರಿದ...