ಹನಿಗಳು
ಸತ್ಯ
ಹಿರಿ ಹಿರಿ ಹಿಗ್ಗಿದ್ದೆ
ಸುಟ್ಟಾಗ ಸುರು ಸುರು ಬತ್ತಿ
ತಿಳಿದಿರಲಿಲ್ಲ ಸತ್ಯ
ಅದ ತಯಾರಿಸುವ ಕೈಗಳು
ಸುಡುತ್ತಿವೆ ನಿತ್ಯ
ಸೂರ್ಯ ಮತ್ತು ನಾನು
ಬೆಳಕಿನ ಒಡೆಯ ಸೂರ್ಯ
ದೂರದಿಂದಲೆ ಕಾರ್ಯ
ಮನದ ಒಡತಿ ನಾನು
ನೀರಿನೊಳಗಿನ ಮೀನು
ಮಾನಸ-ಸರೋವರ
ನೀರು ತುಂಬಿರಲು ತಿಳಿ ಕೊಳವು
ಕಲ್ಲೆಸೆದರು ಸುಳಿಸುಳಿಯಾಗೆ ಹರಡುವುದು ಚೆಲುವು
ಅರಿವು ಹರಳಾಗಿರಲು ಸಂಪನ್ನ ಮನವು
ಕೆದಕಿದರು ತಿಳಿತಿಳಿಯಾಗೆ ಇರುವುದು ನುಡಿಯು
Rating
Comments
ಉ: ಹನಿಗಳು
In reply to ಉ: ಹನಿಗಳು by manju787
ಉ: ಹನಿಗಳು
ಉ: ಹನಿಗಳು
In reply to ಉ: ಹನಿಗಳು by sathishnasa
ಉ: ಹನಿಗಳು