ನಗರಗಳಲ್ಲಿ ಕಚಡಾ ಡಬ್ಬದ ಕಚಡಾ ವಿಲೇವಾರಿ ಕಾರ್ಯ, ಬಹುದೊಡ್ಡ ಸವಾಲೇ ಸರಿ
ನಗರಗಳಲ್ಲಿ ತ್ಯಾಜ್ಯವಸ್ತುಗಳನ್ನು ವಿಲೇವಾರಿ ಮಾಡುವ ಕಾರ್ಯ ಆಯಾ ನಗರಗಳ ಮುನಿಸಿಪಾಲಿಟಿಗಳ ಅಧಿಕಾರ ವರ್ಗದ ಅಧೀನದಲ್ಲಿರುತ್ತಿತ್ತು. ಆದರೆ ಆ ನೌಕರರು ಕೆಲಸಗಳ್ಳರಾಗಿ ತಮ್ಮಕರ್ತವ್ಯಗಳನ್ನು ಮರೆತಾಗ ಅವರನ್ನು ಎಚ್ಚರಿಸಿ ಸರಿಪಡಿಸುವ ಕೆಲಸ ಯಾರೂ ಮಾಡುತ್ತಿಲ್ಲ. ಅವರುಗಳು ಕೆಲವಾರು ಟ್ರೇಡ್ ಯೂನಿಯನ್ ಗಳಿಗೆ ಸೇರಿ ವಂತಿಗೆ ಕೊಟ್ಟು ರಕ್ಷಣೆಪಡೆಯುತ್ತಿದ್ದಾರೆ. ಇದನ್ನು ಪುರಸ್ಕರಿಸುವುದರಿಂದ ನಗರವಾಸಿಗಳಿಗೆಲ್ಲಾ ತಲೆನೋವು; ಅಲ್ಲದೆ ಕಾಯಿಲೆಗಳಿಗೆ ಇದು ಆಹ್ವಾನನೀಡುತ್ತದೆ. ಮುಂಬೈನಲ್ಲೂ ಇದೇ ಸಮಸ್ಯೆ ಹಲವಾರು ದಶಕಗಳಿಂದ ಇತ್ತು. ಈಗ ಪ್ರೈವೇಟ್ ಠೇಕೇದಾರರ ಬರುವಿಕೆಯಿಂದ ಸ್ವಲ್ಪ ಸನ್ನಿವೇಶ ಸುಧಾರಿಸಿರುವಂತಿದೆ.
೧೫, ಡಿಸೆ೦ಬರ್, ನಾನು ಹೊರಗೆ ಹೋಗುವಾಗ ನೋಡಿದಾಗ, ಖಾಲಿಯಾದ ಕಚಡಾ ಡಬ್ಬವನ್ನು ಬೆಳಿಗ್ಯೆ ೯ ಗಂಟೆಗೆ ಇಟ್ಟಿದ್ದರು. ದೊಡ್ಡ ಲಾರಿ ಬಂದು ಕಚಡಾ ಡಬ್ಬದದ ತ್ಯಾಜ್ಯವಸ್ತುಗಳನ್ನೆಲ್ಲಾ ಲಾರಿಯಲ್ಲಿ ಎತ್ತಿ ಹಾಕಿ ಖಾಲಿಮಾಡಿದ ಕಚಡಾ ಡಬ್ಬವನ್ನು ನಾವೆಲ್ಲಾ ನೋಡಿದ್ದೆವು. ಅವುಗಳ ಸುತ್ತಮುತ್ತ ಚೆನ್ನಾಗಿ ಗುಡಿಸಿ ಶುಚಿಯನ್ನು ಸಹಿತ ಮಾಡಿದ್ದರು.
ನಾನು ನನ್ನ ಕೆಲಸ ಮುಗಿಸಿ ೨-೪೫ ಕ್ಕೆ ಮನೆಗೆ ಬಂದಾಗ, ಕಚಡಾ ಡಬ್ಬಗಳೆರಡೂ ತುಂಬಿ ಕಸವೆಲ್ಲಾ ಅಲ್ಲಿ ಇಲ್ಲಿ ಹರಿದಾಡಿದ್ದು, ಹಸುಗಳು, ನಾಯಿಗಳು, ಹೆಕ್ಕಿ ಹೆಕ್ಕಿ ತಿನ್ನುತ್ತಿರುವ ನೋಟ ನೋಡಿದಾಗ, ಆ ನೋಟವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಮನಸ್ಸಾಯಿತು. ನಿಜವಾಗಿಯೂ ತ್ಯಾಜ್ಯವಸ್ತುಗಳನ್ನು ಹೊತ್ತು ಹೊರಗೆ ಹಾಕುವ ಕಾರ್ಯ ಒಂದು ದೊಡ್ಡ ಸವಾಲೆ ಸರಿ !
ಮೊದಲು ಬೀ.ಎಂ.ಸಿ. ನೌಕರರು ಇದೆ ಕೆಲಸವನ್ನು ಸರಿಯಾಗಿ ಮಾಡುತ್ತಿರಲಿಲ್ಲ. ಒಂದು ದಿನ ಬಂದರೆ ಮತ್ತೆ ೩ ದಿನ ಕೆಲಸಕ್ಕೆ ಗುಲ್. ಹೀಗೆ ವರ್ಷಗಳು, ದಶಕಗಳು ಕಳೆದಿವೆ. ಆದರೆ ಈಗ ಪ್ರೈವೇಟ್ ಠೇಕೆದಾರರು ಬಂದಮೇಲೆ ಪರಿಸ್ಥಿತಿ ಸುಧಾರಿಸಿದಂತಿದೆ.
Rating