ಮಣಿಪುರದ ಜನತೆಯ ಮಾರಣ ಹೋಮ‍‍ ; ಚಾನು ಶರ್ಮಿಳರ, ಹೋರಾಟ !

ಮಣಿಪುರದ ಜನತೆಯ ಮಾರಣ ಹೋಮ‍‍ ; ಚಾನು ಶರ್ಮಿಳರ, ಹೋರಾಟ !

 

ಪುಣೆಯ ಮಾನವ ಅಧಿಕಾರದ ಒಬ್ಬ ಪ್ರತಿನಿಧಿ,ಸಂಘಟನೆಯ 'ಓಜಸ್ ಸುನೀತಿ ವಿನಯ್' ಕೊಡುವ  ವಿವರಣೆಗಳು ಪ್ರತಿಪಾದಿಸುವ ವಿಷಯಗಳು ಎಂಥ ಕಲ್ಲು ಹೃದಯಗಳನ್ನೂ ಕರಗಿಸುವಂತಹದು. 'ಚಾನು ಶರ್ಮಿಳ ರ ಕಥೆ', ಮಣಿಪುರದ ಒಂದು ದುರದೃಷ್ಟಕರವಾದ  ಕಥೆಗಳಲ್ಲೊಂದು. ಶರ್ಮಿಳರವರು  ಹತ್ತು ವರ್ಷಗಳ ಕಾಲ ಅನ್ನನೀರು ತೊರೆದು ತನ್ನ ರಾಜ್ಯದ ಅಭಾಗನಿಯರ ಬಗ್ಗೆ ದೇಶಕ್ಕೆ, ವಿಶ್ವಕ್ಕೆ ಕೈಯೆತ್ತಿ ಮುಗಿದು ಯಾಚಿಸುತ್ತಿರುವ ಮಹಿಳೆ. ಯಾವ ಹೆಣ್ಣೂ ಇದುವರೆಗೆ ಮಾಡದಷ್ಟು, ದೀರ್ಘಕಾಲಾವಧಿಯ ಸತ್ಯಾಗ್ರಹ ದಿನಾಂಕ ೨ ನವೆಂಬರ್ ೨೦೦೦ ದಂದು ಮಣಿಪುರದ ಇಂಫಾಲ್ ಕಣಿವೆಯಲ್ಲಿ ಆದ ನರಹತ್ಯೆಯನ್ನು ಕಣ್ಣಾರೆ ಕಂಡಬಳಿಕ ತಳೆದ ಧೋರಣೆಗಳಲ್ಲೊಂದಾಗಿದೆ. ಅದೂ ನಮ್ಮ ದೇಶವನ್ನು ರಕ್ಷಿಸುವ ವೀರಯೋಧರೆಂದು ಹಾಡಿ ಹಾಡಿ ಹರಸಿ, ಪೂಜಿಸಲ್ಪಡುವ ನಮ್ಮವರೇ ಆದ ಯೋಧರಿಂದ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಹೆಂಗಸರು, ಮಕ್ಕಳುಗಳಮೇಲೆ 'ಅಸ್ಸಾಮ್ ರೈಫಲ್ಸ್ ಸೇನಾ ಯೋಧ'ರು ಹುಚ್ಚಾಪಟ್ಟೆ ಗುಂಡಿನ ಮಳೆಗರೆದು ಕೊಂದದ್ದು ಏಕೆ ?

ಆ ದಿನ ಬೆಳಿಗ್ಯೆ ಸೇನೆಯ ಮೇಲೆ ಯಾರೋ ಒಂದು ಬಾಂಬ್ ಎಸೆದಿದ್ದರು. ದೆಂಗೆಕೋರರನ್ನು ಬಗ್ಗುಬಡೆಯಲು ಹೊರಟ ಸೇನೆ, ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ಅಮಾಯಕರ ಮೇಲೆ ಮಾಡಿದ ಈ ತರಹದ ಪ್ರಹಾರಕ್ಕೆ ಏನಾದರೂ ಅರ್ಥವಿದೆಯೇ  ೫೨ ವರ್ಷದ ಮಹಿಳೆಯಲ್ಲದೆ ಒಬ್ಬ ಗರ್ಭಿಣಿ ಹೆಂಗಸೂ ಈ ದೌರ್ಜನ್ಯಕೆ ತುತ್ತಾಗಿದ್ದರು. ೧೮ ವರ್ಷದ ಬಾಲಕನೊಬ್ಬ ಆ ಜಾಗದಲ್ಲೇ ಕೆಳಗೆ ಬಿದ್ದು ರಕ್ತಕಾರಿ ಮರಣಿಸಿದ್ದ. ಬಾಲಕ ನೆತ್ತರಿನಿಂದ ತೊಯ್ದ ಭೂಮಿಯನ್ನು ಕಂಡು ಬೆಚ್ಚಿಬಿದ್ದ ಸೂಕ್ಷ್ಮ ಮನಸ್ಸಿನ  ಶರ್ಮಿಳ ಮೂಕ ಸಾಕ್ಷಿಯಾಗಿ ನಿಲ್ಲಲು ಇಚ್ಛಿಸಲಿಲ್ಲ ? ತನ್ನ ಜನರ ಮಾನವಹಕ್ಕುಗಳಿಗಾಗಿ ಹೋರಾಡದ್ದಿದ್ದರೆ ಬದುಕಿದ್ದೂ ವ್ಯರ್ಥವಲ್ಲವೆ !

ಅದಕ್ಕಾಗಿ ಉಪವಾಸಮಾಡಿ ಪ್ರತಿಭಟಿಸುವ  ನಿರ್ಧಾರ ತೆಗೆದುಕೊಂಡರು. ಈ ಅರ್ಥಹೀನ   ಕಾಯಿದೆಯನ್ನು ಸರಕಾರ ಹಿಂತೆಗೆಯುವ ತನಕ. ಆಮರಣಾಂತವಾದರೂ ಸರಿಯೆ. ೨೦೦೦ ನವೆಂಬರ್, ೪ ರಂದು ತಾಯಿಯ ಆಶೀರ್ವಾದದೊಂದಿಗೆ  ಹಾಗೆ ಶುರುವಾದ ಉಪವಾಸ ಜಗತ್ತಿನ ಇತಿಹಾಸಲ್ಲಿ ಒಂದು ಹೊಸ ಅಧ್ಯಾಯಕ್ಕೆ ಎಡೆಮಾಡಿಕೊಟ್ಟಿದೆ. (AFSPA – Aarmy Force Special Powers Act)  ಕಾಯಿದೆಯನ್ನು ವಜಾಗೊಳಿಸುವ ವರೆಗೆ ಈ ಸಂಘರ್ಷ. ಹೆಣ್ಣೊಬ್ಬಳು ಎಷ್ಟು ಕಾಲತಾನೆ ಹೋರಡಿಯಾಳು, ಅದೂ ಭಾರತೀಯ ಫೌಜ್ ಎದುರಿಗೆ ? ಇಂತಹ ಮಾತಾಡಿ ಧರ್ಯಗೆಡಿಸುವ ಸನ್ನಹಕ್ಕೆ ಆಕೆ ಮಣಿಯಲಿಲ್ಲ. ವಿಚಳಿತಳಾಗಲ್ಲಿಲ್ಲ. 

'ಜೆ.ಎನ್. ಆಸ್ಪತ್ರೆ'ಯ ಚಿಕ್ಕ ತಣ್ಣನೆಯ ಕತ್ತಲುಕೋಣೆಯಲ್ಲಿ ಒಂದು ದಶಕದಿಂದ ಬಂಧನದಲ್ಲಿ ನವೆಂಬರ್, ೨೧ ರಂದು ಆಕೆಯ ಸ್ಥಿತಿ ಉಲ್ಬಣಹೊಂದಿ ಇನ್ನೇನು ಸಾವಿನ ಅಂಚನ್ನು ತಲುಪಿದ್ದಾರೆ ಎಂಬ ವಾರ್ತೆ ಬಂದಾಗ ಆಕೆಯ ಮೇಲೆ ಆತ್ಮಹತ್ಯೆ ಆರೋಪ ಹಾಕಿ ಇಂಫಾಲದ ಆಸ್ಪತ್ರೆಗೆ ಸೇರಿಸಿ ಮೂಗಿನಲ್ಲಿ ನಳಿಕೆ ಸೇರಿಸಿ ಬಲವಂತವಾಗಿ ದ್ರವ್ಯ ಸುರಿದು, ಆಕೆಯನ್ನು ಉಳಿಸುವ ನಾಟಕ. ಮತ್ತೆ,  ಜನರ ಆಕ್ರೋಶದಿಂದ ಆಗಬಹುದಾದ ಅನಾಹುತವನ್ನು ಗ್ರಹಿಸಿ, ಒಂದು ವರ್ಷದ ವಾಸದನಂತರ ಬಿಡುಗಡೆ.  ಪುನಃ ಅದೇ ಆರೋಪದ ಮೇಲೆ ಮತ್ತೆ ಜೈಲುವಾಸ. ಹೊಡೆದಾಟಕ್ಕೆ ಸಂಘರ್ಷಕ್ಕೆ ಧುಮಿಕಿದ ವೀರ ಯುವತಿಗೆ ಆತ್ಮಹತ್ಯೆ ಹೇಗೆ ಸಾಧ್ಯ ?
 
ಆತ್ಮಹತ್ಯೆ ಹೇಗೆ ಬೇಕಾದರೂ ಮಾಡಿಕೊಳ್ಳಬಹುದು. ಉಟ್ಟ ದುಪ್ಪಟ್ಟವೇನು ಸಾಲದೆ, ಕುತ್ತಿಗೆಗೆ ಉರುಲು ಬಿಗಿದುಕೊಳ್ಳಲು. ಇಲ್ಲವೇ,  ವಿದ್ಯುತ್ ಸಾಕೆಟ್ ನಲ್ಲಿ ಬೆರಳಿಟ್ಟರೆ ಸಾಕು. ಈ ನನ್ನ ತಾಯ್ನಾಡಿನಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ನನ್ನ ಹೋರಾಟ, ಅಚಲವಾದದ್ದು.  ಯೋಗದಲ್ಲಿ ನಂಬಿಕೆಯಿರುವ ಶರ್ಮಿಳ,  ತನ್ನ ಅಗಾಧ ಇಚ್ಛಾಶಕ್ತಿಯಿಂದ ಇದುವರೆಗೂ ಜೀವಂತವಾಗಿರುವುದಲ್ಲದೆ ಅದೆ ಮಾನಸಿಕ ಸ್ಥಿತಿಯನ್ನು ಹೊಂದಿದ್ದಾಳೆ.
 
'AFSPA ಕಾನೂನಿನ ನೈಜತೆ' :
 
೧೯೫೮ ರಲ್ಲಿ ಜಾರಿಗೆ ಬಂದ ಈ ಕಾನೂನಿನ ನೈಜತೆಯಾದರೂ ಏನು ? ಒಬ್ಬ ವ್ಯಕ್ತಿ ದಂಗೆ ಕೋರನೆಂಬ ಸಣ್ಣ ಸುಳಿವು ಸಿಕ್ಕರೂ ಆತನನ್ನು ವಿಚಾರಣೆಗೂ ಗುಂಡಿಟ್ಟು ಕೊಲ್ಲುವ ಅವೈಜ್ಞಾನಿಕ ವಿಧಿ ಆತಂಕವಾದಿ ಎನ್ನುವ ಅನುಮಾನ ಯಾವುದೇ ವಾರೆಂಟ್ ಇಲ್ಲದೆ ಎಳೆದೊಯ್ದು ಚಚ್ಚಿಹಾಕುವ ಹಾಗೇ ಮುಂದುವರೆದ ಕುರುಡು ಕಾನೂನಿನ ದುರುಪಯೋಗದಿಂದ ೨೦೦೪ ಜುಲೈ, ೧೧ ರಂದು ನಿರಶನ ಆರಂಭ ಚಿಕ್ಕ ಪ್ರಾಯದ ಮಾನವ ಹಕ್ಕುಗಳ ಹೋರಾಟಗರ್ತಿ ಮನೋರಮಳ, ದಾರುಣ ಹತ್ಯೆಯಾಯಿತು. ಆದಿನ ರಾತ್ರಿ ಸೇನೆ ಮನೆಗೆ ನುಗ್ಗಿ ನೀನು 'ಆತಂಕವಾದಿ' ಎಂದು ಹೇಳಿ ಮನೆಯಿಂದ ಎಳೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ನಡೆಸಿ ಹಿಂಸೆಯಿಂದ ಕೊಲೆಮಾಡಿದರು. ಆಕೆಯ ಹೆಣ್ತನಕ್ಕೆ ನಡೆಸಿದ ಗುಂಡಿನೇಟಿನ ದಾಳಿ ವಿಚಾರವಂತ ಭಾರತೀಯರ ರಕ್ತ ಹೆಪ್ಪುಗಟ್ಟುವಂತೆ ಮಾಡಿದೆ.
 
ಈ ಅಮಾನುಷ ಘಟನೆಯ ಬಳಿಕ ಅಸಹಾಯಕ ಮಹಿಳೆಯರು ಮಣಿಪುರದ ಮಾತೆಯರು ಆಕ್ರೋಶದಿಂದ ಬೆತ್ತಲೆಯಾಗಿ ನಿಂತು ತಮ್ಮ ಜಿಗುಪ್ಸೆಯನ್ನು ವ್ಯಕ್ತಪಡಿಸಿದ್ದರು. AFSPA , ಬ್ರಿಟಿಷ್ ಕಾಲದ ಕಾಯಿದೆ, ೧೯೪೨ ರ ಎಂದು ಅಂದು ನಮ್ಮ ಒಡೆಯರಾಗಿದ್ದ ಬ್ರಿಟಿಷ್ ಸಾಮ್ರಾಜ್ಯ ಶಾಹಿಗಳು ೨ ನೆಯ ವಿಶ್ವಮಹಾಯುದ್ಧದ ಸಮಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿ ಅವರ ಕಾರ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ತಂದ ಕಾಯಿದೆ.
 
ಸ್ವಾತಂತ್ರ್ಯಾನಂತರವೂ ಇದೇ ಕಾನೂನು ಜಾರಿಯಲ್ಲಿದೆ. ಎಲ್ಲಕ್ಕೂ ವ್ಯಭಿಚಾರವೆಂಬಂತೆ ನಮ್ಮ ಸೇನಾ ನಾಯಕರೇ ಕಣಿವೆಯ ಅಸಂಖ್ಯಾತ ಅಮಾಯಿಕರ ಹತ್ಯೆಗೆ ಕಂಕಣಕಟ್ಟಿರುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದ ದುರದೃಷ್ಟಕರ ಸನ್ನಿವೇಶ ಬೇಸರವನ್ನು ತಂದಿದೆ.
 
ಅಸಹಾಯಕ ಅಕ್ಕ ತಂಗಿಯರು ತಾಯಂದಿರು  ಬೆತ್ತಲೆಯಾಗಿ ಭಾರತೀಯ ಸೈನ್ಯದ  ಮುಂದೆ, ಹೊಳೆಯುವ ಬಟ್ಟೆ ಮೇಲೆ ರಕ್ತವರ್ಣದಲ್ಲಿ ಬರೆದ ಅಕ್ಷರಗಳು ಯಾವ ದುಷ್ಟ ವ್ಯಕ್ತಿಯ ಮನಸ್ಸನ್ನು ಕಲಕಬಲ್ಲರು. ('Indian Army come; rape us'),  "ಬನ್ನಿ ನಮ್ಮಮೇಲೆ ಅತ್ಯಾಚಾರಮಾಡಿ ನಿಮ್ಮ ಹಸಿವನ್ನು ನೀಗಿಸಿಕೊಳ್ಳಿ. ನಿಮಗೆ ಹಾಲುಣಿಸಿದ ನಿಮ್ಮ ತಾಯಂದಿರ ಮೊಲೆಗಳನ್ನು ನೋಡಿ. ಅಕ್ಕ ತಂಗಿಯರ ಮೇಲೆ ಅತ್ಯಾಚಾರಮಾಡುವ ಮನಸ್ಸು ನಿಮಗೆ ಹೇಗೆಬರುತ್ತದೆ ನೀವು ಹುಟ್ಟಿಬಂದ ತೊಡೆ, ಜಘ್ನಗಳನ್ನು ನೋಡಿ, ಮಾತೃಹಂತಕರೆ, ವಿಶ್ವ ಇಂತಹ ಅಮಾನುಶ ಕೃತ್ಯವನ್ನು ನೋಡಲಿ. 
 
ಶರ್ಮಿಲಾರ ತಾಯಿ, ಸಾಖಿ ಇರೊಂ ಪ್ರತಿಕ್ರಿಯೆ :
 
೭೮ ವರ್ಷ ಪ್ರಾಯದ  'ಸಾಖೀ ಇರೋಮ್' ಹತ್ತುವರ್ಷಗಳಿಂದೀಚೆಗೆ ಮಗಳನ್ನು ಕಾಣಳು. ಮಗಳ ಹಸಿದ, ಕಂಗೆಟ್ಟ, ಮಾಸಿದ, 'ಆದರೆ ಅದಮ್ಯ ಧೃಢನಿರ್ಧಾರದ ಮುಖವನ್ನು ನೋಡಿ ನನ್ನ ಹೃದಯ ಸ್ಮಶಾನವಾಗುತ್ತದೆ'. 'ಹರಸುವುದೊಂದೆ ನನಗೆ ಗೊತ್ತಿರುವುದು'.  'ಸತತವಾಗಿ ಇರುವ ಮನೋಬಲ ಕಡಿಮೆಯಾಗದಿರಲಿ ಎನ್ನುವುದೇ ನನ್ನ ಆಶೆ'. 'ಎಂದಾದರೊಂದು ಸುದಿನ ನನ್ನ ಮಗು ಈ ಹೋರಾಟದಲ್ಲಿ ವಿಜಯಿಯಾಗಿ ಖಂಡಿತ ಹೊರಬರುವುದನ್ನು ನಾನು ನನ್ನ ಕಣ್ಣಿನಿಂದ ನೋಡಿ ಆಕೆಗೆ ಒಂದು ತುತ್ತು ಅನ್ನವನ್ನು ನಾನೇ ಕೈಯ್ಯಾರ  ತಿನ್ನುಸುವ ಸುದಿನಕ್ಕಾಗಿ ಕಾಯುತ್ತಿರುವೆ'. ಎನ್ನುತ್ತಾರೆ ಆಕೆ.
 
ಶರ್ಮಿಳ,' ನಾನು ನನ್ನ ಸತ್ಯಾಗ್ರಹವನ್ನು ಮಹಾತ್ಮ ಗಾಂಧೀಜಿಯವರ ತತ್ವದ ಮೇಲೆ ಮಾಡುತ್ತಿದ್ದೇನೆ'. 'ಅವರ ಆದರ್ಶ, ತ್ಯಾಗ, ಸದ್ವಿಚಾರಗಳು ನಾನು ಮುಂದೆ ನಡೆಯಲು ಪ್ರೇರಣೆನೀಡುತ್ತಿವೆ'.  'ನನ್ನ ಈ ಸಂಕಲ್ಪಕ್ಕೆ ನಿಮ್ಮ ಸಹಕಾರ ಕೊಡಿವಿರಲ್ಲವೇ. ನನಗೆ ಬೇಕಾಗಿರುವುದು ಮಾನವ ಹಕ್ಕುಗಳು ನಮ್ಮ ದೇಶದ ಜನರ ಬೆಂಬಲ ಮತ್ತು ಎರಡು ಒಳ್ಳೆಯ ಮಾತುಗಳು'.
 
ಓದುಗರೇ, ಎರಡು ಸಾಲಿನ ಪತ್ರ ಬರೆಯಿರಿ :
 
'ಕೇವಲ ಎರಡು ಸಾಲಿನ ನಿಮ್ಮ ಪತ್ರ ನನ್ನ ಮಾನಸಿಕ ಸ್ಥಿರತೆಯನ್ನು ಹೆಚ್ಚಿಸುತ್ತದೆ. ಯಾವುದಾದರು ಭಾರತೀಯ ಭಾಷೆಯಲ್ಲಿ ಬರೆಯಿರಿ. ಅವುಗಳಲ್ಲಿ ನನ್ನ ಹೋರಾಟಕ್ಕೆ ನಿಮ್ಮ ಸಹಕಾರ  ಜೊತೆ ಇದೆ ಎಂದು ಹೇಳಿದರೆ ಸಾಕು. ನನ್ನ ಘಾಸಿಗೊಂಡು  ನೊಂದಿರುವ ಮನಸ್ಸಿಗೆ ಸಾಂತ್ವನ ಸಿಗುತ್ತದೆ'. ಎನ್ನುತ್ತಾರೆ ಅವರು. 
 
 ಬರೆಯಿರಿ :
 Ojas. S. V, 6, Raghav,
Shri. Raghuraj Society, Sinhagad road, Pune-411 030
9403579416
 
 
 
Rating
No votes yet

Comments