ಹೃದಯ ದೇಗುಲದಲ್ಲಿರುವ ದೇವತೆ

ಹೃದಯ ದೇಗುಲದಲ್ಲಿರುವ ದೇವತೆ

ಕವನ

ಅಳುತ ಭೂಮಿಗೆ ಬಂದ ಮಗುವಿಗೆ  ನಗುವುದ ಕಲಿಸಿದಳಮ್ಮ,

ಮೂಕಳಾಗಿದ್ದಾಗ ಮಾತು ಕಲಿಸಿದಳಮ್ಮ,

ಹೆಳವಳಾಗಿದ್ದಾಗ  ನಡೆಯಲು ಕಲಿಸಿದಳಮ್ಮ,

ಕುರುಡಳಾಗಿದ್ದಾಗ ಜಗವ ತೋರಿದಳಮ್ಮ,

ಸೋತು ಬಂದಾಗ ದೈರ್ಯ ತುಂಬಿದಳಮ್ಮ,

ಹೆಜ್ಜೆ ಹೆಜ್ಜೆಗೂ ನೋವ ನುಂಗಿ ನಗುವ ನೀಡಿದಳಮ್ಮ,

 

         ಸಾರ್ಥಕವಾಯಿತು  ನಿನ್ನ ಪರಿಶ್ರಮ,

          ಪಡೆದೆ ನಾ ಜೀವನದಲ್ಲಿ ಪರಾಕ್ರಮ//

            ಅಂದು ನೀ ನನಗಾಗಿ ಪಟ್ಟ ಶ್ರಮ

         ಮರೆತು, ನಾ ಸೇರಿಸಲಾರೆ ವೃದ್ದಾಶ್ರಮ//

         ನನ್ನ ಹೃದಯ ದೇಗುಲವೆ ನಿನಗೆ ಆಶ್ರಮ,

          ಓ ದೇವತೆ ನಿನಗೆ ನನ್ನ ಪ್ರಣಾಮ//

 

Comments