ಜಾಗತಿಕ ಸಮಸ್ಯೆಗಳು: ಪಕ್ಷಿನೋಟ 1
ಸ್ನೇಹಿತರೇ,
ಇತ್ತೀಚೀನ ಜಾಗತಿಕ ಸಮಸ್ಯೆಗಳಿಂದಾಗಿ ಇಡೀ ಪ್ರಪಂಚ ಅತ್ಯಂತ ಅಭೊತಪೊರ್ವ ಸಂಕಷ್ಟಗಳಿಗೆ ಸಿಲುಕಿ, ನಲುಗಿ ತನ್ನ ಗೋರಿಗೆ ತಾನೆ ಗುಂಡಿ ತೂಡುವ ಮೂರ್ಕತನಕ್ಕೆ ಇಳಿದಿದೆ. ಹಾಗಾದರೆ ಮಾನವ ಜನಾಂಗ ಹೆದರಿಸುತ್ತಿರುವ ಆ ಸಮಸ್ಯೆಗಳಾವು?
ಜಾಗತಿಕ ತಾಪಮಾನ, ಪರಿಸರ ಹಾನಿ, ನೈರ್ಮಲ್ಯ, ಶುದ್ಧ ಕುಡಿಯುವ ನೀರಿನ ಕೊರತೆ, ಅಪೌಸ್ಟಿಕತೆ, ಗಣಿಗಾರಿಕೆ, ಅಣು ವಿಕಿರಣ, ಅಧ್ಯಾತ್ಮಿಕ ದಿವಾಳಿತನ, ನಿರುಧ್ಯೋಗ, ಸಾಂಸ್ಕ್ರುತಿಕ ಅದಃಪತನ, ಕೊಳಕು ಸಿನಿಮಾ ಸಾಹಿತ್ಯ, ಸಂಗೀತ, ಮಾದಕ ವ್ಯಸನದ ದಾಸ್ಯ, ಪ್ರಾಕ್ರುತಿಕ ಸಂಪನ್ಮೊಲಗಳ ಅತಿಯಾದ ಬಳಕೆ, ಉಗ್ರವಾದ, ಜಾಗತಿಕ ಹಣದುಬ್ಬರ, ದೋಷಯುಕ್ತ ಆಂತರಾಷ್ಟೀಯ ನೀತಿಗಳು, ಲಂಚಾವತಾರ, ವಿಧ್ಯಾನಿಲಯಗಳಲ್ಲಿ ಶಿಕ್ಷಣ ಮರಾಟದ ಸರಕು, ಮಹಿಳೆ ಮತ್ತು ಮಕ್ಕಳ ಮೇಲಿನ ನಿರಂತರ ದಬ್ಬಾಳಿಕೆ, ಹಿಂಸೆ, ಅತ್ಯಾಚಾರ, ಕೊಲೆ, ಸುಲಿಗೆಗಳು, ರಾಷ್ಟ್ರ- ರಾಷ್ಟ್ರ ಗಳ ಮಧ್ಯೆ ವಿರಸ, ಯುದ್ಧಗಳು, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸಾಂಕ್ರಾಮಿಕ ರೋಗ ರೊಜಿನಗಳು, ಅತ್ಯಂತ ಅಪಾಯಕಾರಿ ವತ್ತಡದ ಬದುಕಿನಿಂದುಟಾದ ಕ್ಯಾನ್ಸರ್, ಹ್ರುದಯದ ಬೇನೆ, ಮಧುಮೇಹ, ರಕ್ತದೊತ್ತಡ, ಮಾನಸಿಕ ಕಿನ್ನತೆ, ಹತ್ತು ಹಲವಾರು ಸಂಸ್ಕ್ರುತಿಕ ಹಾಗು ನೈತಿಕ ಅರಾಜಕತೆಯಿಂದುಂಟಾದ ಮಾನೊವ್ಯಾಕುಲತೆಯ ಪರಿಣಾಮವಾಗಿ ಹುಟ್ಟಿದ AIDS, ಮುಂತಾದ ಹತ್ತು ಹಲವು ಲೈಂಗಿಕ ರೋಗಗಳು, ಮಹಿಳೆಯರ ಮತ್ತು ಮಕ್ಕಳ ಕಳ್ಳಸಾಗಣೆ, ರೈತರ ಅತ್ಮಹತ್ಯೆ, ಗಡಿ ವಿವಾದ, ಧಾರ್ಮಿಕ ಮೂಲಭೊತವಾದ, ಬಾಲ ಕಾರ್ಮಿಕತೆ ಮತ್ತು ಇವುಗಳನ್ನೆಲ್ಲ ಮೀರಿದ ನೈಸರ್ಗಿಕ ವಿಕೋಪಗಳು ಹಾಗೊ ನಿಸರ್ಗ ಹೊರಗೆಡಹುವ ಹೊಸ ಹೊಸ ರೋಗಗಳು, ಪಟ್ಟಿ ಇನ್ನೊ ಸಾಕಷ್ಟಿದೆ.........
ಇವಕ್ಕೆಲ್ಲಾ ಉತ್ತರಗಳೇನು? ಇವುಗಳಿಗೆ ಎದೆಯೊಡ್ಡಿ ನಿಲ್ಲಲು ಬೇಕಾದ ತಾತ್ವಿಕ ನಿಲುವುಗಳೇನು? ಈ ಕಾಡುವ ಪ್ರಶ್ನೆಗಳಿಗೆ ಉತ್ತರಗಳನ್ನ ಹತ್ತಾರು ಜಾಗತಿಕ ರಾಜಕೀಯ, ಅರ್ಥಿಕ, ಸಮಾಜಿಕ ವಿಜ್ನಾನಿಗಳು ತಮ್ಮದೇ ದ್ರುಶ್ಟಿಯಲ್ಲಿ ವ್ಯಾಕನಿಸಿದರೆ ಹಲವರು ಇನ್ನೊ ಉತ್ತರ ಹುಡುಕುವತ್ತ ಮುಖಮಾಡಿ ಶ್ರಮಿಸುತ್ತಿದ್ದಾರೆ. ಅವುಗಳನ್ನ ಇಲ್ಲಿ ನಾಲುಕ್ಕು ಪ್ರಮುಖ ಬಾಗಗಳಲ್ಲಿ ವಿಂಗಡಿಸಿ, ವಿಷ್ಲೇಸಿಸುವ ಉದ್ದೇಶವಿದೆ.
೧ ನಿಸರ್ಗದೊಡನೆ ಮಾನವ ಸಂವಾದ
೨. ಸಮಾಜಿಕ, ಅರ್ಥಿಕ, ರಾಜಕೀಯ ಕ್ಷೇತ್ರಗಳ ಜಾಗತಿಕ ವಿಚಾರ- ವಿನಿಮಯ
೩. ಆಧ್ಯಾತ್ಮಿಕ ದಿವಾಳಿತನ
೪. ಕಲ್ಪನಾ ಲೋಕ