'ಧರ್ಮ’ ಎಂದರೆ ಏನು?

'ಧರ್ಮ’ ಎಂದರೆ ಏನು?

Comments

ಬರಹ

 ’ತಾಯಂದಿರು ನಿರಂತರವಾಗಿ ಪೂಜೆ-ಪುನಸ್ಕಾರ ನಡೆಸಿಕೊಂಡು ಬರುತ್ತಿರುವುದರಿಂದ ದೇಶದ ಧರ್ಮ, ಸಂಸ್ಕೃತಿ, ಪರಂಪರೆಗಳು ಉಳಿದುಕೊಂಡು ಬಂದಿದೆ’ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪವರು ಅಪ್ಪಣೆ ಕೊಡಿಸಿರುವುದಾಗಿ ವರದಿಯಾಗಿದೆ. ’ಧರ‍್ಮ’ ಉಳಿದಿರುವುದು ಅತ್ತವಿರಲಿ, ಈ ’ಪುನಸ್ಕಾರ’ ಎಂದರೇನು? ಇದನ್ನು ನಡೆಸಿಕೊಂಡು ಬರುವ ವಿಧಾನವೇನು?ತಾಯಂದಿರ ಅನುಕೂಲಕ್ಕಾಗಿ ಇದರ ಬಗ್ಗೆಯೂ ’ಬೋಧನೆ’ ಮಾಡಬಹುದಾಗಿತ್ತಲ್ಲವೇ?
 ’ಪುನಸ್ಕಾರ’ ಎಂಬುದು ಎಷ್ಟುಮಟ್ಟಿಗೆ ಅರ್ಥರಹಿತವೋ, ಅದಕ್ಕಿಂತಲೂ ಅರ್ಥಹೀನವಾಗಿದೆ, ದೇಶದಲ್ಲಿ ಉಳಿದುಕೊಂಡು ಬಂದಿರುವ ’ಧರ್ಮ’. ’ರಾಜಧರ‍್ಮ’ವಂತೂ ಅನರ್ಥಕಾರಿಯೇ ಆಗಿದೆ! ’ಧರ್ಮ’ ಎಂದರೆ ಹಿಡಿದೆತ್ತುವುದು ಅಥವಾ ಎತ್ತಿ ನಿಲ್ಲಿಸುವುದು. ಸರಕಾರವನ್ನು ’ಎತ್ತಿ ನಿಲ್ಲಿಸುವುದ’ಕ್ಕಾಗಿ ರೆಸಾರ‍್ಟ್ ರಾಜಕೀಯ ಮತ್ತು ಕುದುರೆ ಖರೀದಿ ಬಹಿರಂಗವಾಗಿಯೇ ನಡೆಯುತ್ತಿದೆ; ಶಾಸಕರೆನ್ನುವವರ ಸ್ವಂತಿಕೆ ಸ್ವಾಭಿಮಾನದ ನರ ಕತ್ತರಿಸುವ ನೈತಿಕ ’ಆಪರೇಷನ್’ಗಳು ಅವ್ಯಾಹತವಾಗಿದೆ; ಇದೆಕ್ಕೆಲ್ಲಾ ಎಗ್ಗಿಲ್ಲದೇ ಬಂಡವಾಳ ಹೂಡುವುದು ಅವ್ಯವಹಾರದ ಹಣವನ್ನೇ! ಸರಕಾರಿ ಆಡಳಿತವೆಂದರೇ ’ಅವ್ಯವಹಾರಿಗಳು, ಅವ್ಯವಹಾರಿಗಳಿಂದ ನಡೆಸುವ ಅವ್ಯವಹಾರದ ದಂಧೆ’ ಎಂಬಂತಾಗಿದ್ದು ಇರುವ ಲೋಕಾಯುಕ್ತ, ನ್ಯಾಯಪಾಲಿಕೆ ಮತ್ತು ಹುಟ್ಟಲಾರದ ಲೋಕಪಾಲಗಳನ್ನೇ, ಪ್ರಜ್ಞಾವಂತರು ಕಾಕದೃಷ್ಟಿಯಿಂದ ನೋಡುವಂತಾಗಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet