"ಫಾರ್ರೆಸ್ಟ್ ಗಂಪ್"(೧೯೯೪)

"ಫಾರ್ರೆಸ್ಟ್ ಗಂಪ್"(೧೯೯೪)

               ಈ ದಿನ ಕುಳಿತು ಯೋಚಿಸುತಿರುವಾಗ ನನ್ನ ಒಂದು ನೆಚ್ಚಿನ ಹಾಲಿವುಡ್ ಚಲನಚಿತ್ರವಾದ "ಫ಼ಾರ್ರೆಸ್ಟ್ ಗಂಪ್" ಬಗ್ಗೆ ಸಂಪದಿಗರ ಹತ್ತಿರ ಏಕೆ ವಿಷಯ ಹಂಚಿಕೊಳ್ಲಬಾರದೆನ್ನಿಸಿ ಈ ಲೇಖನವನ್ನು ಬರೆಯಲು ಅಣಿಯಾದೆ. "ಫ಼ಾರ್ರೆಸ್ಟ್ ಗಂಪ್" ನನ್ನ ನೆಚ್ಚಿನ ಚಲನಚಿತ್ರಗಳಲ್ಲೊಂದು. ಈ ಚಿತ್ರಕ್ಕೆ ರಾಬರ್ಟ್ ಝೆಮಿಕೀಸ್ ರವರ ನಿರ್ದೇಶನವಿದೆ. ಇದರ ಮುಖ್ಯ ಭೂಮಿಕೆಯಲ್ಲಿ ಟಾಮ್ ಹ್ಯಾಂಕ್ಸ್, ರಾಬಿನ್ ವ್ರ್ಯೆಟ್, ಸ್ಯಾಲಿ ಫ಼ೀಲ್ಡ್, ಗ್ಯಾರಿ ಸಿನ್ಯೆಸ್ ಅಭಿನಯಿಸಿದ್ದಾರೆ. ಅದೇ ಹೆಸರಿನಲ್ಲಿರುವ ವಿಂನ್ಸ್ಟನ್ ಗ್ರೂಮ್ ರವರ ಕಾದಂಬರಿಯನ್ನಾಧರಿಸಿದೆ. ಈ ಚಿತ್ರದ ಫ಼ಾರ್ರೆಸ್ಟ್ ಗಂಪ್(ಟಾಮ್ ಹ್ಯಾಂಕ್ಸ್) ನ ಯಶೋಗತೆಯನ್ನ ನಿರೂಪಿಸುತ್ತದೆ. ಈತ ಚಿತ್ರದಲ್ಲಿ ಸರಾಸರಿ ಬುದ್ದಿವಂತಿಕೆಯ ಮಟ್ತಕಿಂತ ಕೆಳಗಿರುವ ವಿದ್ಯಾರ್ಥಿ. ಆ ದೌರ್ಬಲ್ಯವನ್ನು ಮೆಟ್ಟಿ ನಿಂತು ತನಗರಿವಿಲದೆ ಕೆಲವು ಸಾದನೆಗಳನ್ನು ತನ್ನ ಜೀವನದ ನಂತರದ ದಿನಗಳಲ್ಲಿ ಮಾಡುತ್ತಾನೆ. ಅದರ ಪ್ರಾಮುಖ್ಯತೆ ಅಥವಾ ಅದರ ಕಷ್ಟಸಾದ್ಯತೆಗಳ ಪರಿವಿಲ್ಲದೆ ಸಾಧಿಸುತ್ತಾನೆ. 

                 ತಾನು ಚಿಕ್ಕವನಿರುವಾಗ ತನ್ನ ಊನ ಕಾಲುಗಳಿಗೆ ಪಟ್ತಿಕಟ್ಟಿಸಿಕೊಂಡು ನಡೆದಾಡುವ ಅನಿವಾರ್ಯತೆ ಅವನಿಗೆ. ಈ ಎಲ್ಲಾ ಅಡ್ಚಣೆಗಳನ್ನು ಮೆಟ್ಟಿ ನಿಲ್ಲಲು ಅವನಮ್ಮ ಮಿಸೆಸ್. ಗಂಪ್(ಸ್ಯಾಲಿ ಫ಼ೀಲ್ಡ್) ರ ಬೆಂಬಲ ಮತ್ತು ಸಹಾಯ. ಅವನನ್ನು ಮೊದಲ ಬಾರಿಗೆ ಶಾಲೆಗೆ ಸೇರಿಸಲು ಅವನಮ್ಮ ಪಟ್ಟ ಕಷ್ಟ ಮತ್ತು ಅವಳು ತನ್ನ ಶರೀರವನ್ನೆ ಶಾಲೆಯ ಮುಖ್ಯಸ್ಥನಿಗೆ ಒಡ್ಡುವ ಪರಿಸ್ತಿತಿ. ಇದು ಮಗನ ಮೇಲಿನ ಉತ್ಕಟ ಪ್ರೀತಿಯನ್ನು ತೋರಿಸುತ್ತದೆ. ಎಲ್ಲರಂತೆ ತನ್ನ ಮಗನು ಸಾಮಾನ್ಯ ಶಾಲೆಗೆ(ಬುದ್ದಿಮಾಂದ್ಯ ಮಕ್ಕಳಿಗಲ್ಲದು) ಹೋಗಬೇಕೆಂದು ತಾಯಿಯ ಆಸೆ. ತನ್ನ ಕಾಲಿನ ದೌರ್ಬಲ್ಯವನ್ನು ಒಮ್ಮೆ ಪವಾಡವೆಂಬಂತೆ ಸರಿಯೋಗಿಸಿಕೊಳ್ಳುತ್ತಾನೆ. ಅದಕ್ಕೆ ತನ್ನ ಗೆಳತಿ ಜೆನ್ನಿ(ರಾಬಿನ್ ವ್ರ್ಯೆಟ್) ಕಾರಣ. ತನ್ನ ಜೀವನದುದ್ದಕ್ಕೂ ಅವಳು ಹೇಳಿದ, "ಅಪಾಯ ಸಂಭವಿಸಿದರೆ ಅಲ್ಲಿಂದ ಓಡಿಹೋಗು, ದ್ಯೆರ್ಯವನ್ನು ಪ್ರದರ್ಶಿಸಬೇಡ," ಎಂಬ ವಾಕ್ಯವನ್ನು ಪಾಲಿಸುತ್ತಾನೆ. ಏಕೆಂದರೆ ಅವನ ಪರಿಸ್ತಿತಿಯ ಬಗ್ಗೆ ಅವಳಿಗರಿವಿರುತ್ತದೆ. ಇದೆ ಅವನಿಗೆ ಕಾಲು ಸ್ವಾದೀನಕ್ಕೆ ಬರಲು ಸಹಕಾರಿಯಾಗುತ್ತದೆ.

                ಮುಂದೆ ಇದೆ below- average ಹುಡುಗ ಅಮೇರಿಕದ ಸ್ಯೆನ್ಯಕ್ಕೆ ಸೆರುತ್ತಾನೆ! ಅದಕ್ಕೂ ಮುಂಚೆ ದೇಶದ ರಗ್ಬಿ ಆಟಗಾರನಾಗುತ್ತಾನೆ! ಸ್ಯೆನ್ಯಕ್ಕೆ ಸೇರಿದಾಗ ಪ್ರಮುಖವಾಗಿ ಇಬ್ಬರ ಪರಿಚಯವಾಗುತ್ತದೆ, ಒಬ್ಬ ತನ್ನ ಸಹಸ್ಯೆನಿಕ, ಮತ್ತು ಸ್ಯೆನ್ಯದ ಲೆಫ಼್ಟಿನೇಂಟ್ ದರ್ಜೆಯ ತನ್ನ ಅಧಿಕಾರಿ, ಡ್ಯೆನ್(ಗ್ಯಾರಿ ಸಿನ್ಯೆಸ್). ಈ ಇಬ್ಬರ ಪ್ರಭಾವ ಅವನ ಜೀವನದುದ್ದಕ್ಕೂ ಪಸರಿಸುತ್ತದೆ. ತನ್ನ ಸ್ನೇಹಿತನ ಆಶೆಯಂತೇ ಮುಂದೆ ಶ್ರಿಂಪ್ ಗಳ(shrimp) ಉಧ್ಯಮದಿಂದ ಅಮೇರಿಕದ ಹೆಸರಾಂತ ಶ್ರಿಮಂತನಾಗುತ್ತಾನೆ. ಅದಕ್ಕೆ ಲೆಫ಼್ಟಿನೇಂಟ್ ಡ್ಯೆನ್ ನ ಸಹಾಯವಿರುತ್ತದೆ. ಚಿತ್ರದ ಉಳಿದ ಭಾಗ ಪ್ರೇಕ್ಷಕರ ಮನ ಕಲಕಿ ಕಣ್ನೀರು ತರಿಸುತ್ತದೆ. ಕೊನೆಗೆ ತನ್ನ ಗೆಳತಿ, ಜೆನ್ನಿ ಕ್ಯಾನ್ಸರ್ ಗೆ ತುತ್ತಾಗುತ್ತಾಳೆ. ಅವಳನ್ನೆ ಮದುವೆಯಾಗಿ ಅವಳಿಂದ ಒಂದು ಮಗುವನ್ನು ಪಡೆಯುತ್ತಾನೆ. ತನ್ನ ಮಗು ಸಾಮಾನ್ಯರಂತೆ ಬುದ್ದಿವಂತನಾಗಿ ತನ್ನ ಲಕ್ಷಣಗಳು ಅವನಲ್ಲಿಲ್ಲವೆಂದು ಸಂತೊಷಿಸುತ್ತಾನೆ. ಜೆನ್ನಿ ಸಾವನಪ್ಪುತ್ತಾಳೆ. ಅವಳ ಸಮಾಧಿಯ ಕಲ್ಲಿನ ಮೇಲೆ ತನ್ನ  ಹೆಂಡತಿಯನ್ನು, ತಾಯಿ, ಹೆಂಡತಿ ಮತ್ತು ಪ್ರೀತಿಯ ಗೆಳತಿಯೆಂದು ಸಂಭೋದಿಸುತ್ತಾನೆ!  

                ಇದು ಒಂದು ಸದಭಿರುಚಿಯ ಚಿತ್ರ. ಈ ಚಿತ್ರದ ಮನೋಜ್ನ್ಯೆ ಪಾತ್ರಕ್ಕೆ ಟಾಮ್ ಹ್ಯಾಂಕ್ಸ್ ಗೆ ಅಕಾಡೆಮಿ(ಆಸ್ಕರ್) ಪ್ರಶಸ್ತಿ ಲಭಿಸಿದೆ. ಈ ನಟನ ವಿಶೇಷತೆಯಂದರೆ, ಅಕಾಡೆಮಿ ಪ್ರಶಸ್ತಿಯ ಇತಿಹಾಸದಲ್ಲಿ ಎರಡು ವರ್ಷ ಸತತವಾಗಿ ಒಂದರ ಹಿಂದೆ ಒಂದರಂತೆ ಅಕಾಡೆಮಿ ಪ್ರಶಸ್ತಿ ಪಡೆದಿರುವ ಎರಡನೆ ನಟ! ಈ ಸಾಧನೆ ಮಾಡಿರುವ ಇಬ್ಬರಲ್ಲಿ ಒಬ್ಬರು! ೧೯೯೩ ರಲ್ಲಿ ಬಿಡುಗಡೆಗೊಂಡ ಇವರ "ಫಿಲಡೆಲ್ಫಿಯ" ಚಿತ್ರಕ್ಕೂ ಲಭಿಸಿದೆ. ಸಾದ್ಯವಾದರೆ ಒಮ್ಮೆ ಈ ಸಿನಿಮಾವನ್ನು ವೀಕ್ಷಿಸಿ. ಮತ್ತೆ ಮತ್ತೆ ನೋಡುವ ಹಾಗೆ ಮಾಡದಿದ್ದರೆ ಕೇಳಿ!!! 

         

                 

Rating
No votes yet

Comments