ಒಂದಾನೊಂದು ಕಾಲದಲ್ಲಿ...ಭಾಗ ಒಂದು.

ಒಂದಾನೊಂದು ಕಾಲದಲ್ಲಿ...ಭಾಗ ಒಂದು.


ಮುಂಜಾನೇಯ ಜಾಗಿಂಗ್ ಮುಗಿಸಿ ಬಂದು ಅಮ್ಮನ ಹತ್ರ ಕಾಫೀ ಕೇಳಿದೆ .ಸ್ವಲ್ಪ ಇರು ಎನ್ನುವ ಉತ್ತರ ಒಳಗಿನಿಂದ ಬಂತು . ಜಾಗಿಂಗ್ ನನ್ನ ಹವ್ಯಾಸವಲ್ಲ ಕೇವಲ ಸಮಯ ಸಿಕ್ಕಾಗ ಮಾಡುವ ಒಂದು ಚಟ ಎನ್ನುವುದು ನನ್ನ ನಂಬಿಕೆ. 

ಒಬ್ಬ ರಿಚ್ ಹುಡುಗನ ಮುಂಜಾನೆಯ ಕೆಲಸ ಏನು ಎಂಬುದು ನಿಮ್ಗೆ ಗೊತಿರುವುದು ಸಾಧ್ಯ ಅಂದು ಕೊಂಡರೆ ಅದು ನನ್ನ ಮಂಕುತನ ಎಂದು ಭಾವಿಸುತೇನೆ.

ಈ ಕತೆಯ ಸಾರಾಂಶ ಏನೆಂದು ನಾನು ಹೇಳಲು ಈಗ ಬಯಸುವುದಿಲ್ಲ ಪೂರ್ಣ ಸಂಪೂರ್ಣ ಮುಗಿದ ಬಳಿಕ ಹೆಳುತೇನೆಂದು ಹೇಳಿದೆ ನನ್ನ ದೊಸ್ತ್ಗೆ.

ಆದಾಗಲೇ ೧೧ ಗಂಟೆ ಸದ್ದು ಕೇಳಿ ಬಂತು . ಕಾಫೀ ಕೇಳಿದ ನಾನು ತಿಂದೂ ಮುಗಿಸಿದ್ದೆ ನನ್ನ ಮುಂಜಾನೇಯ ಬ್ರೇಕ್‌ಫಾಸ್ಟ್ ಅನ್ನು.

ಅಪ್ಪ ಆಗಲೇ ಡ್ಯೂಟೀಗೆ ಹೋಗಿದ್ದರು . ದೊಡ್ಡ ಮನೆಯಲ್ಲಿ ಸಣ್ಣ ಪುಟ್ಟ ವಿಷಯಗಳು ತಿಳಿಯದೇ ನಡೆದು ಹೋಗಿ ಬಿಡ್ತಾವೆ .

 

ಸಂದರ್ಭ ೧.

"ಅದು ಇಂಡಿಯಾ ಎಂಬ ಬೃಹತ್ ಅದ್ಬುತವಾದ ರಾಷ್ಟ್ರದ ವಾರ್ ಆರ್ ಯುದ್ಧ ನಡೆಯುತಿದ್ದ ಸಮಯ . ಕಾಲ ಅಥವಾ ಸಮಯ ಅಷ್ಟು ಆಪ್ತವಾಗಿ ನೆನಪಿನಲ್ಲಿ ಹಚ್ಚಿಕೊಳ್ಳುವ ಬಯಕೆ ಇರಲಿಲ್ಲ " ನಾನು ನನ್ನ ಸ್ನೇಹಿತನಿಗೆ ಹೇಳಿದೆ.

"ವಾರೆ, ಯುದ್ಧವೇ!" ಯಂಬ ಅವನ ಪ್ರಶ್ನೆಯನ್ನು ನನಗೆ ಎಸೆದ. ಹೂ ಎಂದು ಸುಮ್ಮನಾದೆ.

ಅದ್ಯಾವ ವಾರ್ ಲೇ ನಂಗೆ ಗೊತ್ಹಿಲ್ದು ? ಮರು ಪ್ರಶ್ನೆ ತಟ್ಟನೆ ಬಂತು .

ಪ್ರಯೋಜನ ಇಲ್ಲ ಎಂದು ಏನಿಲ್ಲ ಬೀಡು . ಮಾತು ಮುಗಿಸಿ ಆಮೇಲೆ ಸಿಗೋಣ ಟೆಂಪಲ್ ಹತ್ರ ಓಕೇನ, ಹೊರಟೆ .

(ಟೆಂಪಲ್ ಅಂದರೆ ಅದು ಹನುಮ,ಗಣೇಶ ಮತ್ತು ನವಗ್ರಹದ ದೇವಸ್ಥಾನ ಅಲ್ಲಿ ನಾವು ಸಂಜೆ ಗಳಿಗೆಯಲ್ಲಿ ಸೇರುವ ಮಹೊನ್ನತ ಸ್ಥಳ.)

ಇಂಜಿನಿಯರಿಂಗ್ ಮುಗಿಸಿದ ಕಾಲವಾದು ಕೆಲ್ಸಾ ಮಾಡಲು ಹೊಡೆದಾಡುತಿದ್ದ ಅದ್ಬುತ ದಿನಗಳು.

ಆದರೆ ನಮಗೆ ಆ ಯುದ್ಧ ಅಷ್ಟಾಗಿ ಡಿಸ್ಟರ್ಬ್ ಮಾಡಲಿಲ್ಲ ಅಂತಾನೆ ಹೇಳಬೇಕು .

ಮೇತ್ರಪೊಳಿಸ್ ೧೯೨೭ ಒಂದು ಅದ್ಬುತ ಮೂಕಿ ಚಿತ್ರ ವೀಕ್ಷಿಷಿ ಸಮಯ ನೋಡಿ ಟೆಂಪಲ್ ಕಡೆ ಮುಖ ಮಾಡಿದೆ.

ಅಲ್ಲಿ ಆದಾಗಲೇ ನಮ್ಮ ದೇಶದ ವಾರ್ ಬಗ್ಗೆ ಚರ್ಚೆ ಶುರುವಾಗಿ ಕಾವೇರಿತ್ತು. ಎದಕೆಲ್ಲಾ ಕಾರಣ ನನ್ನ ಮತ್ತು ನನ್ನ ಗೆಳಯನ ಹಿಂದಿನ ಬೇಟೀಯ ರಿಸಲ್ಟ್ ಎಂದು ನಂಗೆ ಆದಾಗಲೇ ಗೋತಾಗಿತ್ತು .

 

"ಲೇ ಮಾವ ಯಾವ್ದಲೆ ಯುದ್ಧ ಅದು ನಮ್ಗೆ ಗೊಥಿಲ್ಲ್ದು?" ಪ್ರಶ್ನೆ ಜಿಗಿದು ಬಂತು.

ಯಾವ ಯುದ್ಧ ? ಶಾಕ್ ಆಗಿರುವನ ತರಹ ನನ್ನ ರಿಯಾಕ್ಶನ್.

ಮಂಡಕ್ಕಿ ಮೆಣಶಿನಕಾಯಿ ತೀನ್ತಿದ್ದ ನನ್ನ ಆಪ್ತ ಗೆಳೆಯ ಬೇಸ್ತುಬಿದ್ದ.

ಅವ ಎಲ್ಲೋ ಯನ್ನಿ(ಡ್ರಿಂಕ್ಸ್) ಹೊಡ್ದಿರ ಬೇಕು ಎನ್ ಏನೋ ಹೇಳುತಿದ್ದಾನೆ ಎಂದು ಟಾಪಿಕ್ ಚೇಂಜ್ ಮಾಡಿದೆ.

ಸೂಕ್ಷ್ಮ ತಿಳಿದ ನನ್ನ ಆಪ್ತ ಗೆಳಯ ಸುಮ್ಮನಾದ.

ನಾನು ಬರುತ್ತೇನೆ ಕೆಲಸ ಈದೆ ಎಂದು ನಿರ್ಗಮಿಸಿದೆ.

ರಾತ್ರಿ ಕರೆಂಟ್ ಹೋಯಿತು ಲ್ಯಾಟಿನ್ ಹಚ್ ಬಂದು ಕುಳಿತೆ ನಿದ್ರೆ ಬಂದಿತ್ತು ,ಊಟಕೆ ಕರೆ ಆದಾಗಲೇ ಹೊರಟಿತ್ತು.

 

ಸಂಧರ್ಭ ೨.

ಆರ್ಮೀಯಲ್ಲಿ ಎನ್‌ಲಿಸ್ಟ್ ಮಾಡಿಕೊಳ್ತಾ ಇದ್ದಾರೆ ಎಂಬ ವಿಷಯ ಪ್ರಜಾವಾಣಿ ಪತ್ರಿಕೆಯ ಮುಖ್ಯ ಮುಖಪುಟದ ಸುದ್ದಿಯಾಗಿತ್ತು.

ನಮ್ಮ ಊರಿನ ದಿನಾಂಕ ಕೂಡ ಮೆನ್ಶನ್ ಮಾಡಿದ್ದರು . ಅದು ಮಾರ್ಚ್ ೯ ಸಮಯ ೧೧ ಗಂಟೆ ಇಂದ ಆಸಕ್ತಿ ಇರುವ ಯಂಗ್ ಯುವಕರು ಬಂದು ಹೆಸರು ನೋಂದಾಯಿಸಬಹುದು. ಎಲಿಜೆಬಲಿಟೀ ಕ್ರೈಟೀರಿಯ ಕೂಡ ಮೆನ್ಶನ್ ಮಾಡಿದ್ದರು.

ನನಗೆ ಅಷ್ಟಾಗಿ ಆಸಕ್ತಿ ಇರಲಿಲ್ಲ ನೋಡಿ ಸುಮ್ಮನಾದೆ.

ಪೇಪರ್ ನೋಡಿದ್ಯಾ? ಅಪ್ಪ ಡೈನಿಂಗ್ ಟೇಬಲ್ ಮೇಲೆ ಬ್ರೇಕ್‌ಫಾಸ್ಟ್ ಮಾಡುತ್ತಾ ಕೇಳಿದರು.

ಹಾ .....! ಉತ್ತರಿಸಿದೆ.

ಅಭಿಪ್ರಾಯ? ಅಪ್ಪ ಕೇಳಿದರು.

ಏನಿಲ್ಲ.....ನನ್ನ ಉತ್ತರ.

ಕೈ ತೊಳೆದು ಎದ್ದು ಹೋದರು,ಡಿಸ್ಕಶನ್ ಅಂತ್ಯ ವಾಯಿತು ಏನುವಷ್ಟರಲ್ಲಿ ಒಮ್ಮೆ ಹೋಗಿಬಾ....ತಿಳಿತೇನು! ಹೂ ಎಂದೆ.

ಇಂಜಿನಿಯರಿಂಗ್ ಮುಗಿಸಿ ಆರ್ಮೀಗೆ ಹೋಗುವುದೇ ಅದಕ್ಕೆ ಇಂಜಿನಿಯರಿಂಗ್ ಏಕೆ ಮಾಡಬೇಕಾಗಿತ್ತು ಎಂದು ಅಮ್ಮನಬಳಿ ಕೇಳಿದೆ...

ಊಪಿಟ್ಟು ಕೇಸರಿಬಾತು ತಿಂದು ಕಾಲ್ಕಿತ್ತಿದೆ.

ಟೆಂಪಲ್ ಹತ್ತಿರ ಯಾರು ಸೇರುವವರು ಎಂಬ ದೊಡ್ಡ ಡಿಸ್ಕಶನ್ ...ಎಲಿಜಿಬಿಲಿಟೀ ನೋಡಿದರೆ ಎಲ್ಲರೂ ಒಂದು ಕೈ ನೋಡಬಹುದು ಎಂದು ತೀರ್ಮಾನಕ್ಕೆ ಬಂದಿರುವಹಾಗೆ ಕಾಣುತಿತು.

ಎನ್ಲ ಪೇಪರ್ ನೋಡಿದಿ? ಪ್ರಶ್ನೆ ಸ್ನೇಹಿತನಿಂದ....

ಹೂನ್ಲ ನೋಡಿದೆ ಏನೋ ಆರ್ಮೀ ಎನ್‌ಲಿಸ್‌ಟಿಂಗ್ ಯೂತ್ಸ್ ಫಾರ್ ವಾರ್ ಅಂತೆ? ನನ್ನ ಮುಗ್ಧ ಉತ್ತರದ ಪ್ರಶ್ನೆ.

ಒಂದ್ ಕೈ ನೋಡವ ಏನಂತಿಯೇ?...ಇಷ್ಟವಾಗಲಿಲ್ಲ.

ನೋಡವ ಟೈಮ್ ಐತಲ ಇನ್ನುವೆ .....ನನ್ನ ಉತ್ತರ.

ಇಷ್ಟವಿಲ್ಲ ಅಂತ ಅನ್ಸುತ್ತೆ ...ಫ್ರೆಂಡ್ ಪ್ರಶ್ನೆ

ಹಂಗೇನಿಲ್ಲಾ ಎಂದು ಸುಮ್ಮನಾದೆ. ......to be continued.