ಒಂದಾನೊಂದು ಕಾಲದಲ್ಲಿ..... ಭಾಗ ೩.

ಒಂದಾನೊಂದು ಕಾಲದಲ್ಲಿ..... ಭಾಗ ೩.

 ಸಂದರ್ಭ . 

ನನ್ನ ಆತ್ಮೀಯ ಗೆಳೆಯಶಿಕಾಮಣಿಗಳು ನಾನು ಸೆಲೆಕ್ಟ್ ಆಗಿರುವನೆಂದು ಯೆಸ್ಟರ್‌ಡೇ ಪಾರ್ಟೀ ಮಾಡಲು ಹೋಗಿದ್ದರಂತೆ. 

ವಿಷಯವೇನೆಂದರೆ ನಾನು ಅಲ್ಲಿಂದ ಅಂದರೆ ಆಫ್ಟರ್ ಇಂಟರ್‌ವ್ಯೂ ಮನೆಗೆ ಬಂದ ನಂತರ ಅರೌಂಡ್ .೩೦ಪೀಯೆಮ್ ಸೆಲೆಕ್ಟೆಡ್ ಕ್ಯಾಂಡಿಡೇಟ್ಸ್ ಹೆಸರನ್ನು 

ಅನೌನ್ಸ್ ಮಾಡಿದ್ದರು. 

ವಿಷಯ ಆಮೇಲೆ ತಿಳಿಯಿತು,ನಮ್ಮ ಗುಂಪಿನಲಿ ಇನ್ನೂ ಇಬ್ಬರು ಸೆಲೆಕ್ಟ್ ಆಗಿದ್ದರು. ರಿಟನ್ ಎಗ್ಸ್ಯಾಮ್ ಅಂಡ್ ಫಿಸಿಕಲ್ ಟೆಸ್ಟ್ ಹೈದೆರಾಬಾದ್ನಲ್ಲಿ ಆಯೋಜಿಸಲಾಗಿತ್ತು. 

ಅದು ಹೈದೆರಾಬಾದ್ನ ಸಿಕಂದರಾಬಾದ್ ಪ್ರಾಂತ್ಯದ ಆರ್ಮೀ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ಅಂಡ್ ಸರ್ವೀಸಸ್ ನಲ್ಲಿ ಏರ್ಪಡಿಸಿದ್ದರು. 

ವಿಷಯ ತಿಳಿದ ನಾನು ಹೌಹರಿದೆ. ಸೆಲೆಕ್ಟ್ ಆದ ಬೇಜಾರಿನ ಜೊತೆಗೆ ಮನೆಗೆ ವಾಪಸ್ ಬಂದೆ. 

ಡೀಟೇಲ್ಸ್ ಅನ್ನು ಪೋಸ್ಟ್ ಮಾಡುತಾರಂತೆ ಮುಂದಿನ ವಾರದಲ್ಲಿ ಹೋಗ್ತೀಯ ಹೆಂಗೆ?..ಅಮ್ಮನ ಉಚಿತ ಪ್ರಶ್ನೆ. 

ನೋಡೋಣ ....ನನ್ನ ಎಂದಿನ ಉತ್ತರ. 

ಎನನ್ನು ಪ್ಲಾನ್ ಮಾಡದ ನಾಳೆಯ ಬಗ್ಗೆ ಯೋಚಿಸದ ಜಾಯಮಾನದವನಾದ ನಾನು ಚಿಂತೆಗೆ ಈಡು ಮಾಡಿದ ಯುದ್ಧಕೆ ನನ್ನ ಶಾಪ ಹಾಕಿದೆ. 

ಸಂಜೆ ೫ರ ಸಮಯ ಸೋಮವಾರ ಸಂತೆ ಗೆ ಹೋಗಿ ಅಮ್ಮನ ತರಕಾರಿ ಚೀಲ ತೆಗೆದುಕೊಂಡು ಮುನ್ನಡೆದೆ,ಅಮ್ಮ ಹಿಂದೆ ಪಕ್ಕದ ಮನೆಯ ಆಂಟೀಯೊಂದಿಗೆ ಮಾತನಾಡುತ ಬರುತ್ತಿದರು. 

ಮಾತು..ನನ್ನ ಬಗ್ಗೆ, ಚರ್ಚೆ "ವೆದರ್ ವಿಲ್ ಗೋ ಆರ್ ನಾಟ್ "..... 

ಕೇಳಿಸಲಿಲ್ಲ ಎನ್ನುವಂತೆ ನನ್ನ ಬಿಹೇವಿಯರ್ ನನ್ನ ಜೊತೆ ಯುದ್ಧಕೆ ನಿಂತಿತ್ತು,ಮನೆಗೆ ಹೋಗಿ ಚೀಲ ಬಿಸಾಡಿ ಈಗ ಬರುತ್ತೇನೆಂದು ಹೊರಟೆ. 

ಸಣ್ಣಕಿ ಮೇಷ್ಟ್ರು ಎಂಬ ಒಬ್ಬ ಜೀನಿಯಸ್ ಮಾಸ್ಟರ್ ಪರಿಚಯವಿತ್ತು ಅವರು ಸ್ಯಾನ್ಸ್ಕ್ರಿಟ್ ಪ್ರವೀಣರು "ಅಂಡ್ ಹೀ ವಾಸ್ ವೆರೀ ನಾಲೆಜಬಲ್ ಪರ್ಸನ್". 

ಅವರ ತಂದೆ ಆರ್ಮೈಲೀ ಇದ್ದರು ಎಂಬಂತೆ ಕೇಳಿದ ನೆನಪಿತ್ತು. 

ಅವರ ಮನೆಗೆ ಹೋಗಿ ವಿಷಯ ಕನ್ಫರ್ಮ್ ಮಾಡಿಕೊಂಡೆ .....ಸರಿ ಏನು ಡಿಸೈಡ್ ಮಾಡಿರುವೆ...?ಸರ್ ಕೇಳಿದರು. 

ಏನು ಮಾಡಿಲ್ಲ ಸರ್..." ವಾಸ್ ಥಿಂಕಿಂಗ್ ನಾಟ್ ಟು ಗೋ" ಅಂದೆ. 

ವೈ ಮಿಸ್‌ಟರ್ ...ಮಾಸ್ಟರ್ನ ಪ್ರಶ್ನೆ  

ನಾಟ್ ಇಂಟ್ರೆಸ್ಟೆಡ್ ಸರ್ ಇಂಜಿನಿಯರಿಂಗ್ ಮುಗಿಸಿ ಆರ್ಮೀ ಗೆ ಸೇರುವುದೆ ಸರಿಕಾಣುತ್ತಿಲ್ಲ ...ಎಂದೆ. 

ಮನೇಲಿ ಏನು ಪರಿಸ್ಥಿತಿ ಕೇಳಿದರು ಮಾಸ್ಟರ್... 

ನನ್ನಗೆ ಬಿಟ್ಟಿದ್ದಾರೆ ಡಿಸೈಡ್ ಮಾಡೋಕೆ ಇನ್ನೂ ಯಾವುದೇ ಕಂಕ್ಲೂಷನ್ ಗೆ ಬಂದಿಲ್ಲ ಸೋ ಕೇಮ್ ಟು ಸೀ ಯೂ.... 

ಹಾ!!!! ಸರ್ನ ನಗು ಅರ್ಥವಾಗಲಿಲ್ಲ ಅವರು ಅದನ್ನು ಬಿಡಿಸಲಿಲ್ಲ ನಾನು ಕೇಳಲಿಲ್ಲ. 

ನೀನು ಡಿಸೈಡ್ ಮಾಡಿ ನನ್ನ ಹತ್ತಿರಬಾ.... 

ಥ್ಯಾಂಕ್ ಯೂ ಸರ್ ...ಅಲ್ಲಿಂದ ಹೊರಟೆ, 

ಲಿಸನ್..."ಯೂ ಆರ್ ನಾಟ್ ಸೆಲೆಕ್ಟೆಡ್ ಟು ಫೈಟ್, ಯೂ ಆರ್ ಗ್ರ್ಯಾಜುಯೇಟ್ ದೇ ಡೊಂಟ್ ಟೇಕ್ ಗ್ರ್ಯಾಜುಯೇಟ್ಸ್ ಟು ಡೊ ಗ್ರೌಂಡ್ ಫೈಟಿಂಗ್ "...ಮಾಸ್ಟರ್. 

ಸರ್ ನೋ ದಟ್....ಹೊರಟೆ 

ಮಾಸ್ಟರ್ ನಾನು ಯುದ್ಧ ಭೂಮಿಯಲ್ಲಿ ಹೋರಾಟ ಮಾಡಬೇಕೆಂದು ತಿಳಿದು ಹೆದರಿ ಹೋಗುತ್ತಿಲ್ಲ ಎಂದು ಭಾವಿಸಿರುವರು ..ಗೊತ್ತಾಯಿತು. 

ಪ್ರೊಬ್ಬಬ್ಲೀ ಎಲ್ಲರೂ ಹಾಗೆ ಊಹಿಸಿದ್ದರು ಬಟ್ ಅದು ಕಾರಣ ವಾಗಿರಲಿಲ್ಲ . 

 

ಸಂದರ್ಭ . 

ಆಕೆ ಕಾಲೇಜ್ಗೆ ಹೋಗುವ ಹುಡುಗಿ ನನ್ನದು ಕಾಲೇಜ್ ಮುಗಿದ ದಿನಗಳು.... 

ಶೀ ವಾಸ್ ಮೈ ಜೂನಿಯರ್ ಇನ್ ಕಾಲೇಜ್ ಯೂ ನೋ...ಉತ್ತರಿಸಿದೆ ನನ್ನ ಗೆಳಯನಿಗೆ  

ಅವನ ಪ್ರಶ್ನೆ ಯಾರಲೆ ಆಕೆ? ಎಂಬುದು... 

"ಬಾರಿ ಚಂದ್ ಅದಾಳಲೇ ಮಾವ ಒಂದ್ ಸಲಿ ಮಾತಾಡ್ಸಿ ನೋಡೋಣ ಎನ್ ಅಂತೀಯ"....ಗೆಳೆಯನ ಕ್ಯೂರಿಯೋಸಿಟಿ.. 

ಅವಳ ಮೇಲೆ ಯಾಕೋ ಪ್ರೀತಿ ಹುಟ್ಟಿದ ಹಾಗಿ ಐತಲೆ ನಿನ್ನ ಸಹಾಯ ಬೇಕು ನೋಡ್ ಮತ್ತೆ ಮಾಡ್ತೀಯೋ ಇಲ್ಲವೋ...ಡೌಟ್ ನಿಂದಲೇ ಕೇಳಿದ. 

ಗೆಳೆಯ ಪ್ರೀತಿ ಪ್ರೇಮ ಅಂದರೆ ಬರಲ್ಲ ಅನ್ನೋ ನಾಲಿಗೆ ಬರಲಿಲ್ಲ ಸರಿಲೇ ಮಾಡೋಣ ಎಂದೆ. 

ಹುಡುಗಿ ಕೈತೊಳೆದು ಮುಟ್ಟುವಂತೆ ತುಂಬಾ ಗಾರ್ಜಿಯಸ್ ಅಂಡ್ ಬ್ಯೂಟಿಫುಲ್ ಆಗಿದ್ದಳು "ವೆಲ್ ಇಟ್ಸ್ ಫೇರ್ ಟು ಸೇ ವಾಸ್ ಇನ್ ಲವ್". 

ಆದರೆ ಗೆಳಯನಿಗೆ ಎಕ್ಸ್‌ಪ್ಲೇನ್ ಮಾಡಲು ಹೋಗಲಿಲ್ಲ "ಅಂಡ್ ವೀ ಬೋತ್ ಫೆಲ್ಲ್ ಇನ್ ಲವ್ ವಿತ್ ಸೇಮ್ ಗರ್ಲ್". 

ನಾನೇ ನನ್ನ ಗೆಳಯನಿಗೆ ಪರಿಚಯಿಸಿದೆ ಇಬ್ಬರು ಓಬರನೊಬ್ಬರು ಪರಿಚಯಿಸಿಕೊಂಡರು ... 

ಟ್ರಿನ್ ಟ್ರಿನ್ ...ಆಕೆಯ ಸ್ನೇಹಿತೆ ಸೈಕಲ್ ಬೆಲ್ ಮಾಡಿ ವಾಚ್ ಕಡೆ ಕೈ ತೋರಿಸಿದಳು. 

ಆಯಿತು ನಾನು ಇನ್ನೊಮೆ ಸಿಗುತ್ತೇನೆ ಬರಲೇ...ಹೊರಟು ಹೋಗಿಯಾಗಿತ್ತು. 

ಕೋಪ ಆಕೆಯ ಸ್ನೇಹಿತೇಯ ಮೇಲೆ ಬಂದಿತಾದರೂ ಒಂದ್ ರೀತಿ ಒಳಗೆ ಸಂತೋಷವಾಯಿತು. 

ಲೇ ಥ್ಯಾಂಕ್ಸ್ ಮಾವ....ಗೆಳೆಯ ಸಂತೋಷದಿಂದ ನುಡಿದ. 

ಸೆಡ್ ನತಿಂಗ್ ...ವೀ ವೆಂಟ್ ನಿಯರ್ ಟೆಂಪಲ್,ಟೈಮ್ ವಾಸ್ ಅರೌಂಡ್ .೩೦ಪೀಯೆಮ್. 

ಅಲ್ಲೇ ಮಂಡಕ್ಕಿ ತಿಂದು ಕುಳಿತೆವು.. 

ನಾಳೆ ಗಡಾನೆ ಎದ್ದು ಮುಂಜಾನೆ ಅವಳ ಕಾಲೇಜ್ ಟೈಮ್ಗ್ ಹೋಗಿ ಮಾತಾಡಿಸ್ತೀನಿ ಎನ್ ಅಂತೀಯ...ಗೆಳೆಯ. 

"ಒದಿತಿನಿ ಮಗನೆ"..ಬಾಯಿಗೆ ಬರಲಿಲ್ಲ. 

ಓಕೇ ಗುಡ್ ಐಡಿಯಾ..ಮಾತಾಡ್ಸು ಆಲ್ ಬೆಸ್ಟ್ ಹೇಳಿ ಜಾರಿದೆ ಮನೆಯೆಡೆಗೆ. 

ಮಾರನೆ ದಿನ ಸಂಜೆ ಟೈಮ್ ಸುಮಾರು ನಾಲ್ಕು ಗಂಟೆ ಇರಬೇಕು... 

ಸೈಕಲ್ ಕೈಲಿ ತಳ್ಳುತ್ತಾ ನನ್ನ ಸ್ನೇಹಿತ ಹುಡುಗಿಯೊಂದಿಗೆ ಬಂದನು. ಸೈಕಲ್ ಅವಳದು ! 

ಹೇ ಗೆಳೆಯ ಹೌ ಆರ್ ಯೂ ? ಕೇಳಿದನು. 

ನೆನ್ನೆ ಸಂಜೆ ಸಿಕ್ಕ ಜೊಥೆಲಿದ್ದ ಸ್ನೇಹಿತ ಹೌ ಆರ್ ಯೂ ? ಕೇಳಿದ ಬೇಸರವಾಗಲಿಲ್ಲ 

ಸಧ್ಯ "ಹೂ ಆರ್ ಯೂ" ಅನ್ನಲಿಲ್ಲ ಎಂದು ಕುಶಿ ಪಟ್ಟೇ. 

ಆಕೆ ಮುಗುಳ್ನಕ್ಕಳು ಬೇರೇನು ಮಾತಾಡಲಿಲ್ಲ.... 

ಓಕೇ ಕ್ಯಾರೀ ಆನ್ ಬೈ....ಅಲ್ಲಿಂದ ಹೊರಡಲು ಆಕ್ಸಿಜನ್ ಸಿಕ್ಕಂತಾಯಿತು. 

" ನ್ಯೂ ಶೀ ವಾಸ್ ಔಟ್ ಆಫ್ ಮೈ ರೀಚ್..." ಒಳ್ಳೇ ಹುಡ್ಗಿರು ಆಲ್ವೇಸ್ ಬಿಸೀ ವಿತ್ ರಾಂಗ್ ಕ್ರೌಡ್. 

ಬೇಸರವಾಗಿತ್ತು ಇಟ್ ವಾಸ್ ವೆರೀ ಬ್ಯಾಡ್ ಟೈಮ್ ಮೇ ಬಿ ಬ್ಯಾಡ್ ಲಕ್ ಎಂದು ಗೊಣಗಿದೆ. 

ಗೆಳೆಯನ ಮೇಲಿನ ಕೋಪ ಹುಡುಗಿಯ ಮೇಲಿನ ಪ್ರೀತಿ ಈಕ್ವಲ್ ಆಗಿತ್ತು ನನ್ನ ಬೇಸರ ಆರ್ಮೀ ಜಾಯ್ನಿಂಗ್ ಗೆ ಒಂದು ಕಾರಣವಾಗಿತ್ತು. 

Rating
No votes yet