ಕಾಲ ಪಾದದಡಿ ಅಡಗಿಸಿಟ್ಟ ಸತ್ಯ

ಕಾಲ ಪಾದದಡಿ ಅಡಗಿಸಿಟ್ಟ ಸತ್ಯ

ಕವನ

 ಒಂದು ದಿನ ನಾ ಊರ ದಾರೀಲಿ
ಸತ್ಯ ಹುಡುಕುತ ಹೊರಟೆನು
ಬರಡು ನೆಲವದು ನಡೆದು ನಡೆದು
ಆಸೆ ಬಿಟ್ಟು ಕುಳಿತೆನು
ಮದುವೆ ಮಾಡಲು ಅಪ್ಪನವನು
ಹತ್ತು ಸುಳ್ಳನು ಹೇಳುವ
ವೈದಿಕನವ ದುಡ್ಡ ಆಸೆಗೆ
ಗ್ರಹವ ಪಲ್ಲಟ ಮಾಡುವ
ದಿನಸಿಯವನು ದನದ ಹಿಂಡಿಗೆ
ಕಲ್ಲ ಗುಂಡನು ಬೆರೆಸುವ
ಕಾಮಿಯವನು ಸತಿಗೆ ಹೇಳದೆ
ಸೂಳೆ ಮನೆಗೆ ಓಡುವ
ನ್ಯಾಯವಾದಿಯು ನ್ಯಾಯವನ್ನು
ದುಡ್ಡಿನಾಸೆಗೆ ಮಾರುವ
ಜನರ ನಾಯಕ ಸೇವೆ ನೆಪದಲಿ
ದುಡ್ದನೆಲ್ಲ ಹೊಡೆಯುವ
ಸತ್ಯವನ್ನು ಅಡಗಿಸಿಟ್ಟರು
ಕಾಲ ಪಾದದ ಅಡಿಯಲಿ
ಕಾಲ ಗೋರಿಸಿ ನಡೆಯುತಿಹರು
ಅದನು ಮುಚ್ಚುವ ಭರದಲಿ
ಹೇಗೆ ನಡೆದರೂ ಒಂದು ದಿನವದು
ಸತ್ಯ ಹೊರಗೆ ಬರುವುದು
ಪಾದ-ಭೂಮಿಯ ನಡುವೆ ಅದುವೇ
ಪುಟ್ಟ ಅಂತರವಿರುವುದು
ಸತ್ಯ ಕಟುವದು ಅದರೂ ಸಹ
ಹೂವ ಕಂಪನು ಬೀರ್ವುದು
ಸುಳ್ಳು ಕ್ಷಣಿಕ ಖುಷಿಯ ನೀಡಿ
ಕೊನೆಗೆ ಕೊಳಕನು ನಾರ್ವುದು...


 

Comments