ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾಜನ "ಸ್ವಪ್ನ ಸಾರಸ್ವತ"
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾಜನ' ಸ್ವಪ್ನ ಸಾರಸ್ವತ '
ಇಂದು ಬೆಳಗಿನ ದಿನಪತ್ರಿಕೆ ಮೇಲೆ ಕಣ್ಣಾಡಿಸುತ್ತಿದ್ದಂತೆ ಒಂದು ಸುದ್ದಿ ಅಂಕಣ ನನ್ನ ಗಮನ ಸೆಳೆಯಿತು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಸಕ್ತ ಸಾಲಿನ 22 ಪ್ರಶಸ್ತಿಗಳನ್ನು ಕೊಡಮಾಡಿದೆ. ಓದುತ್ತ ಹೋದಂತೆ ಕನ್ನಡಕ್ಕೆ ಮೂರು ಪ್ರಶಸ್ತಿಗಳು ಸಂದಿರುವುದನ್ನು ಓದಿ ಕುತೂಹಲವಾಯಿತು. ಒಬ್ಬರು ರಾಮಚಂದ್ರ ಗುಹಾ, ಇನ್ನೊಬ್ಬರು ಗೋಪಾಲಕೃಷ್ಣ ಪೈ ಮತ್ತೊಬ್ಬರು ರೋಡ್ರಿಗಸ್. ಅಂಕಣ ಬರಹಗಾರ ಮತ್ತು ಇತಿಹಾಸಕಾರ ಗುಹಾರವರ ' ಇಂಡಿಯಾ ಅಫ್ಟರ್ ಗಾಂಧಿ ' ಕೃತಿಗೆ ಪ್ರಶಸ್ತಿ ಸಂದಿದ್ದರೆ, ರೋಡ್ರಿಗಸ್ ರವರ ' ಪ್ರಕೃತಿ ಜೋವಿಸ್ ' ಕವನ ಸಂಕಲನಕ್ಕೆ ಪ್ರಶಸ್ತಿ ಬಂದಿದೆ. ನಾನು ಗುಹಾರವರ ಅಂಕಣ ಬರಹಗಳನ್ನು ಓದಿದ್ದೇನೆ ವಿನಃ ಮೇಲ್ಕಂಡ ಅವರ ಕೃತಿ ಓದಿಲ್ಲ. ರೋಡ್ರಿಗಸ್ ರವರ ಕವನ ಸಂಕಲನದ ಭಾಷೆ ಕೊಂಕಣಿಯಾದ ಕಾರಣ ಆ ಕೃತಿ ವಿಶೇಷ ನನಗೆ ಗೊತ್ತಿಲ್ಲ. ಮೂರನೆಯದು ಗೋಪಾಲಕೃಷ್ಣ ಪೈ ಯವರ ಕಾದಂಬರಿ ' ಸ್ವಪ್ನ ಸಾರಸ್ವತ '. ಇದು ನನ್ನನ್ನು ಧೀರ್ಘಕಾಲ ಕಾಡಿದ ಕೃತಿ.
' ಸ್ವಪ್ನ ಸಾರಸ್ವತ 'ವನ್ನು ನಾನು 2009 ರ ಕೊನೆಯ ಭಾಗದಲ್ಲಿ ಓದಿದ ನೆನಪು.ಇದೊಂದು ಅದ್ಭುತ ಕಾದಂಬರಿ ಎನ್ನುವುದರ ಜೊತೆಗೆ ಗೌಡ ಸಾರಸ್ವತ ಸಮಾಜದ ಮೂಲ ನೆಲೆ ಅವರು ಕರಾವಳಿಗೆ ವಲಸೆ ಬರಲು ಕಾರಣವಾದ ಸಂಧರ್ಭ ಮತ್ತು ಇತಿಹಾಸಗಳನ್ನು ಒಳಗೊಂಡ ಕೃತಿ. ಇಲ್ಲಿ ಕಥಾನಕ ಮೂರು ತಲೆಮಾರುಗಳನ್ನು ದಾಟಿ ವರ್ತಮಾನದ ಪೀಳಿಗೆಯವರೆಗೂ ಸಾಗಿ ಬರುತ್ತದೆ. ಕಥಾನಕದ ಕಾಲ್ಪನಿಕ ಪಾತ್ರಗಳು ಅವರ ಚರಿತ್ರೆಯ ಮೂಲಕ ಹಾಯ್ದು ಬರುವುದನ್ನು ಓದಿದರೆ ಇದು ನಿಜಕ್ಕೂ ನಡೆದ ಒಂದು ಕುಟುಂಬ ಸಾಗಿಬಂದ ಪರಂಪರೆಯ ಕಥಾನಕವೇನೋ ಎಂಬಷ್ಟರ ಮಟ್ಟಿಗೆ ನಮ್ಮನ್ನು ಕಾಡುತ್ತದೆ. ಈ ಕಾದಂಬರಿಗಾಗಿ ಪೈ ಯವರು ಪಟ್ಟ ಶ್ರಮವನ್ನು ನಾವು ಗಮನಿಸಬೇಕು. ಇದಕ್ಕಾಗಿ ಇವರು ತೆಗೆದುಕೊಂಡ ಕಾಲಾವಧಿ ಐದು ವರ್ಷಗಳು. ಪರಾಮರ್ಶಿದ್ದು ನಾಲ್ಕುಸಾವಿರ ಆಕರ ಗ್ರಂಥಗಳು, ಎರಡು ಸಾವಿರ ಪುಟಗಳಷ್ಟು ಟಿಪ್ಪಣೆ, ದಕ್ಷಿಣ ಕರಾವಳಿಯುದ್ದಕ್ಕೂ ಅಧ್ಯಯನ ಪ್ರವಾಸ, ಇಷ್ಟಲ್ಲದೆ ಇದನ್ನು ಆರು ತಿದ್ದಿ ಬರೆದಿದ್ದಾರೆ, ಮೇಲಾಗಿ ಇದು ನಾಲ್ಕು ಮುದ್ರಣಗಳನ್ನು ಕಂಡ ಕಾದಂಬರಿ. ಈ ಒಂದು ಕೃತಿಯ ರಚನೆಯ ಬಗೆಗಿನ ಅವರ ಬದ್ಧತೆ ಅದು ಅಷ್ಟು ಸತ್ವಪೂರ್ಣವಾಗಿ ಮೂಡಿ ಬರಲು ಕಾರಣ. ಈ ಸಮುದಾಯ ಕರ್ನಾಟಕದಲ್ಲಿ ನೆಲೆ ಕಂಡುಕೊಂಡ ನಂತರ ಕನ್ನಡದವರೆ ಆಗಿ ವ್ಯಾಪಾರ, ವಾಣಿಜ್ಯ, ಉದ್ದಿಮೆ, ಸಾಹಿತ್ಯ, ಶಿಕ್ಷಣ, ಕಲೆ ಮತ್ತೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮಾಡಿದ ಸಾಧನೆ ಅನನ್ಯ. ಕನ್ನಡದ ಖ್ಯಾತನಾಮರಾದ ಗೋವಿಂದ ಪೈ, ಪಂಜೆ ಮಂಗೇಶರಾಯರು ಮಂತಾದವರ ಹೆಸರುಗಳನ್ನು ಉಲ್ಲೇಖಿಸ ಬಹುದು.
ಈ ಗೌಡ ಸಾರಸ್ವತ ಸಮಾಜ ಮೂಲತಃ ಸರಸ್ವತಿ ನದಿ ತೀರದಲ್ಲಿ ಅರಳಿದ ಸಂಸ್ಕೃತಿ. ಆ ನದಿ ಬತ್ತಿದಾಗ ಆ ಜನಾಂಗ ಕಾಶ್ಮೀರ, ಬಂಗಾಲ ಉತ್ತರ ಪ್ರದೇಶ, ಗುಜರಾತ, ಮಹಾರಾಷ್ಟ್ರ ಮತ್ತೂ ಗೋವಾಕ್ಕೆ ವಲಸೆ ಬರುತ್ತಾರೆ. ಗೋವಾದಲ್ಲಿ ಪೋರ್ತಗೀಜರಿಂದ ಮತಾಂತರದ ತೊಂದರೆ ಅವರನ್ನು ಬಹಳ ಕಾಡುತ್ತದೆ.ಕೆಲವರು ಮತಾಂತರ ಪ್ರಕ್ರಿಯೆಗೆ ಒಳಗಾದರೆ ಒಪ್ಪದವರು ಕರ್ನಾಟಕ ಕೇರಳ ಕರಾವಳಿಗೆ ವಲಸೆ ಬಂದು ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಾರೆ. ಆ ಕಥಾನಕವೆ ಈ ಕಾದಂಬರಿಯ ಮೂಲವಸ್ತು. ಕನ್ನಡದ ಅತ್ಯುತ್ತಮ ಕಾದಂಬರಿಗಳಲ್ಲಿ ಈ ಕೃತಿ ಸಹ ಒಂದು. ಆ ಸಮಾಜ ಇಂದು ಮೇಲ್ಮಟ್ಟಕ್ಕೆ ತಲುಪಲು ಅವರ ಪೂರ್ವ ಸಮುದಾಯ ಪಟ್ಟ ಕಷ್ಟ ಉಳಿಸಿ ಬೆಳೆಸಿಕೊಂಡ ಬಂದ ಸಂಸ್ಕೃತಿಗಳು ಕಾರಣವೆನ್ನಬಹುದು. ಇದೇ ಜಾಡಿನಲ್ಲಿ ಕೃತಿ ಸಾಗುತ್ತದೆ. ಇಲ್ಲಿ ಉಲ್ಲೇಖಿಸ ಬಹುದಾದ ಅಂಶವೆಂದರೆ ಕೊಂಕಣಿ ಮಾತೃಭಾಷೆಯಾದರೂ ಕನ್ನಡದಲ್ಲಿ ಅವರು ಮಾಡಿದ ಸಾಧನೆ ಎಲ್ಲರಿಗೂ ಆದರ್ಶವಾಗಬೇಕು ಎಂಬುದು.
ಗೋಪಾಲಕೃಷ್ಣ ಪೈ ಬರಿ ಕಾದಂಬರಿ ಕಾರರಷ್ಟೆ ಅಲ್ಲ ಅವರು ಸಣ್ಣ ಕತೆಗಾರರು, ಅನುವಾದಕರು, ಚಿತ್ರಕಥೆ ಸಂಭಾಷಣೆಗಾರರು ಹೌದು. ಇವರ ಕೃತಿಗಳನ್ನು ಹೆಸರಿಸುವುದಾದಲ್ಲಿ ಆಧುನಿಕ ಚೀನಿ ಸಣ್ಣ ಕಥೆಗಳು, ಈ ಬೆರಳ ಗುರುತು, ತಿರುವು, ಹಾರುವ ಹಕ್ಕಿಯ ಗೂಡಿನ ಹಾದಿ ಪ್ರಮುಖ ಕಥಾ
ಸಂಕಲನಗಳು. ಆರ್.ಕೆ.ನಾರಾಯಣರ ಸುಪ್ರಸಿದ್ಧ ಕೃತಿ ' ವೇಟಿಂಗ್ ಫಾರ್ ದಿ ಮಹಾತ್ಮ ' ವನ್ನು ಅನುವಾದಿಸುತ್ತಿದ್ದಾರೆ. ಇನ್ನೊಂದು ಬೇರೆ ಕೃತಿಯನ್ನು ಸಹ ಅನುವಾದ ಮಾಡಿದ್ದಾರೆ. ಈ ಕಥೆಗಳ ವಿಶೇಷವೆಂದರೆ ಕಥಾವಸ್ತುವಿನ ಗಟ್ಟಿತನ, ವಾಸ್ತವಾಂಶದ ನೆಲೆಗಟ್ಟು. ಈ ಅಂಶಗಳು ಅವರ ಎಲ್ಲ ಕೃತಿಗಳಿಗೂ ಅನ್ವಯಿಸುತ್ತದೆ. ಇವರು ಗಿರೀಶ ಕಾಸರವಳ್ಳಿ ಯವರ ' ಕನಸೆಂಬ ಕುದುರೆಯನೇರಿ ' ಮತ್ತು ಕಾಸರಗೋಡು ಚಿನ್ನಾರವರ ' ಇಜ್ವಾಡು ' ಚಿತ್ರಗಳಿಗೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಕಾಸರವಳ್ಳಿ ಜೊತೆ ' ಕನಸೆಂಬ ಕುದುರೆಯನೇರಿ' ಚಿತ್ರಕ್ಕೆ ಪ್ರಶಸ್ತಿ ಪಡೆದಿದ್ದಾರೆ. ಗೋಪಾಲಕೃಷ್ಣ ಪೈಗಳಿಗೆ ಶುಭ ಹಾರೈಸಿ ಅವರಿಂದ ಇನ್ನೂ ಉತ್ತಮ ಕೃತಿಗಳು ಬರಲಿ ಎಂದು ಆಶಿಸೋಣ.
Comments
ಉ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾಜನ "ಸ್ವಪ್ನ ಸಾರಸ್ವತ"
In reply to ಉ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾಜನ "ಸ್ವಪ್ನ ಸಾರಸ್ವತ" by santhosh_87
ಉ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾಜನ "ಸ್ವಪ್ನ ಸಾರಸ್ವತ"
In reply to ಉ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾಜನ "ಸ್ವಪ್ನ ಸಾರಸ್ವತ" by santhosh_87
ಉ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾಜನ "ಸ್ವಪ್ನ ಸಾರಸ್ವತ"
In reply to ಉ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾಜನ "ಸ್ವಪ್ನ ಸಾರಸ್ವತ" by vijay pai
ಉ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾಜನ "ಸ್ವಪ್ನ ಸಾರಸ್ವತ"
In reply to ಉ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾಜನ "ಸ್ವಪ್ನ ಸಾರಸ್ವತ" by ಗಣೇಶ
ಉ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾಜನ "ಸ್ವಪ್ನ ಸಾರಸ್ವತ"
ಉ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾಜನ "ಸ್ವಪ್ನ ಸಾರಸ್ವತ"
In reply to ಉ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾಜನ "ಸ್ವಪ್ನ ಸಾರಸ್ವತ" by partha1059
ಉ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾಜನ "ಸ್ವಪ್ನ ಸಾರಸ್ವತ"
ಉ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾಜನ "ಸ್ವಪ್ನ ಸಾರಸ್ವತ"
In reply to ಉ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾಜನ "ಸ್ವಪ್ನ ಸಾರಸ್ವತ" by venkatb83
ಉ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾಜನ "ಸ್ವಪ್ನ ಸಾರಸ್ವತ"
ಉ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾಜನ "ಸ್ವಪ್ನ ಸಾರಸ್ವತ"
In reply to ಉ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾಜನ "ಸ್ವಪ್ನ ಸಾರಸ್ವತ" by swara kamath
ಉ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾಜನ "ಸ್ವಪ್ನ ಸಾರಸ್ವತ"
ಉ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾಜನ "ಸ್ವಪ್ನ ಸಾರಸ್ವತ"
In reply to ಉ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾಜನ "ಸ್ವಪ್ನ ಸಾರಸ್ವತ" by makara
ಉ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾಜನ "ಸ್ವಪ್ನ ಸಾರಸ್ವತ"
ಉ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾಜನ "ಸ್ವಪ್ನ ಸಾರಸ್ವತ"
In reply to ಉ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾಜನ "ಸ್ವಪ್ನ ಸಾರಸ್ವತ" by vijay pai
ಉ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾಜನ "ಸ್ವಪ್ನ ಸಾರಸ್ವತ"
ಉ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾಜನ "ಸ್ವಪ್ನ ಸಾರಸ್ವತ"
In reply to ಉ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾಜನ "ಸ್ವಪ್ನ ಸಾರಸ್ವತ" by Shreekar
ಉ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾಜನ "ಸ್ವಪ್ನ ಸಾರಸ್ವತ"