ಹೀಗೊಂದು (ಅಪ ) ಹಾಸ್ಯೋತ್ಸವ: ಹೇಳಿದ್ನೇ ಹೇಳೋ ಕಿಸ್ ಬಾಯ್ ದಾಸಪ್ಪಗಳು:)) (ಹಾಸ್ಯ ಬರಹ)

ಹೀಗೊಂದು (ಅಪ ) ಹಾಸ್ಯೋತ್ಸವ: ಹೇಳಿದ್ನೇ ಹೇಳೋ ಕಿಸ್ ಬಾಯ್ ದಾಸಪ್ಪಗಳು:)) (ಹಾಸ್ಯ ಬರಹ)


 

ಬೆಳಗೆ  ತಿಂಡಿ ತಿಂದು ಈ 'ಸನ್  ಡೇ ನ ಫಂಡೆ'   ಹೆಂಗ್ ಮಾಡೋದು ಅಂತ ಪೇಪರ್ ಓದ್ತಾ- ಅರ್ಧಾಂಗಿ ಕೊಟ್ಟ  ಕಾಫೀ ಕುಡೀತ ಯೋಚಿಸ್ತಿರ್ಬೇಕಾದ್ರೆ 'ಮುದ್ದಿನ ಮಡದಿ' ಅಡುಗೆ ಕೋಣೆಯಿಂದ ಉಲಿದಳು- ರ್ರೀ ನಿಮ್ಗೆ ಬೆಳಗೆ ಆದ್ರೆ ಸಾಕು ಆ 'ದರಿದ್ರ ಪೇಪರ್' ಮತ್ತು ಅದ್ರಲ್ ಬರೋ 'ಸುದ್ದ್ಘಿಗಳೇ' ಇಮ್ಪಾರ್ತಂತ್ , ಮನೇಲ್ ಏನಾಯ್ತು? ಯಾಕಾಯ್ತು? ಏನ್ ಕೊರತೆ(ಅದು ಎನಗೆ  'ಕೊರೆತ'-ಕೆರೆತ'  ತರಹ ಕೇಳಿಸ್ತು:))  ಇದೆ? ಯಾಕಾಯ್ತು? ಅದೂ ಹೋಗ್ಲೀ ಇತ್ತೇಚೆಗೆ 'ನನ್ನ ಬಗ್ಗೆ' ಗಮನ ಹರಿಸುವುದು ಸಹಾ ಕಡಮೆ ಆಗಿದೆ, ಮದ್ವೆ ಆಗ್ ಬರೀ ೫ ವರ್ಷ ಆಯ್ತು ಅನ್ನೋದ್ ಮರ್ತ್ರ?

 

ಹಠತಾಗ್ ಹೇಳ್ದೆ -ಕೇಳ್ದೆ(ಅದೇನು ಶುಭ ಸಮಾಚಾರವೆ?) ಸುಳಿವೂ ಕೊಡದೆ ಧಾಳಿ ಮಾಡಿದ 'ಚೀನಾ -ಪಾಕಿಸ್ತಾನದ' ಸೈನ್ಯದಂತೆ ಬೆಳಮ್ಬೆಳಗ್ಗೆ  'ಧುತ್ತನೆ'  ನನ್ನೆಡೆಗೆ ನನ್ನ ಮಡದಿ ಎಸೆದ ಆ ಪ್ರಶ್ನ  ಎದುರಿಸದೆ ,ನಾ ನನ್ನ ಮುಂದೆಯೇ  ಕುಳಿತ 'ನಮ್ಮ' ಮಗು 'ವಿಜಿ'ಯನ ಪ್ರಶ್ನಾರ್ಥಕವಾಗ್ ನೋಡಿದೆ, ಪಾಪ ಅದೋ 'ನಾಲ್ಕೇ' ವರ್ಷದ ಪುಟ್ಟ ಮಗು 'ನಂಗೇ' ಅರ್ಥವಾಗದ್ದು ಅದ್ಕೆ ಹೆಗರ್ಥವಾಗ್ಬೇಕ್:)

'ವಿಜಿ' ನನ್ನನ್ನು ಅಯ್ಯೋ  ಪಾಪ! ಎನ್ವಂತೆ ನೋಡಿದಳು ಮತ್ತು ತನ್ನ ಪಾಡಿಗ್ ತಾನು, ಹಿಂದಿನ ದಿನ ತಮ್ಮ 'ಮಿಸ್ಸು'  ಭಾನುವಾರ  ಬರೆದು ಮುಗ್ಸಿ, ಮರು ದಿನ ತೋರಿಸಬೇಕಾದ ಕೊಟ್ಟಿದ್ದ 'ಖಂಡುಗಗಟ್ಟಲೆ' ಹೋಂ ವರ್ಕ್ ಬರೆಯಲು ಕುಳಿತಳು:)೦ ನಾ ಈಗ  ಅಕ್ಷರಶ  'ಒಬ್ಬಂಟಿಯಂತಾದೆ '!  ಮೆಲ್ಲಗೆ  ಅಡುಗೆ ಮನೆ ಕಡೆ ತಿರುಗಿ 'ನನ್ನವಳನ್ನೇ' ನೋಡುವವನಂತೆ 'ನಟಿಸುತ್ತ' ಕೇಳ್ದೆ- 'ಅಲ್ಲ  ಕಣೆ ನಿಂಗ್ಯಾಕೆ ಅನ್ಸ್ತು ನಾ ನಿನ್ನ 'ಕೇರೇ' ಮಾಡ್ತಿಲ್ಲ ಅಂತಾ ?ಮನೇಲಿ ಪ್ರಾಬ್ಲಮ್ಮ? ಕೊರತೇನ? ಏನಾಯ್ತು? ಯಾಕಾಯ್ತು?

 

 

 

 

ಈಗ ನಾ ಏಕಾಂಗಿ, ಏನಾರ 'ಚಂಕಾಯ್ಸಿ ಚಿಂದಿ ಉಡಾಯ್ಸಿ'ಅವಳನ್ನ ಉಬ್ಸಿ, ಹಿಮಾಲಯಕ್ಕೆರ್ಸಿ 'ಬೆಳಗಿನ ಈಯುದ್ಧದಿಂದ' ಬಚಾವಾಗ್ಬೇಕ್, ಆದ್ರೆ ಆ ಪೇಪರ್ ಓದ್ತಾಅದರಲ್ಲಿದ್ದ ಕೊಲೆ-ಸುಲಿಗೆ-ಅತ್ಯಾಚಾರ-ಅನಾಚಾರ-ಬೈಗುಳ-ನಿಂದನೆ-ದೂಷಣೆ-ಆರೋಪ-ಪ್ರತ್ಯಾರೋಪ-ಹಗರಣ-ಗಲಿನ್ದಚೆ ಹೊರಗೆ ಬರೋಕೆ ,ನಂಗೇ ಸಹಾಯ ಮಾಡೋಕೆ 'ನನ್ನದೇ'ಮನಸು ಒಪ್ತಿಲ್ಲ, ಆದರೂ 'ಯಾವ್ಯಾವ್ದೋಪೇಪರ್-ಕಾದಂಬರಿ-ಕವನದಲ್ಲಿ  ಓದಿದನ್ನ  ನೆನಪಿಸ್ಕೊಳ್ತಾ  ಅದ್ರಲ್ ಬರ್ದ ಹಾಗೆ ನನ್ನವಳನ್ನಒಲಿಸಿಕೊಂಡು 'ಬೀಸೋ ದೊಣ್ಣೆಯಿಂದ  ತಪ್ಪಿಸ್ಕೊಬೇಕು'.

 

ಆದ ಸ್ಸರಿ ಏನಂತ   ಹೇಳೋದು ?  ಚಿನ್ನ(ಅಂತಾಹೊಗಳೋಕೆ  ಭಯ- ಆಮೇಲೆ ಆ ಆಕಾಶಕ್ಕೆರಿದ ಹಳದಿಲೋಹವೇ  ಬೇಕು  ಅಂದ್ರೆ :)) ಒಹ್  ನನ್ನ ಮುದ್ದಿನನಲ್ಲೆ(ಇದು ಕವನಕ್ಕೆ ಮಾತ್ರ ಸರಿ ಒಂದುತ್ತೆ:))ಅರ್ಧಾಂಗಿ(ಛೆ ಛೆ ಬೇಡ, ಪ್ರಿಯತಮೆ(ಮದ್ವೆ ಆಗ್ ನಾಲ್ಕ್ವರ್ಷ ,ಆ ಹಳೆ ಜೋಶ್ ಇಂದ ಹೇಳೋಕ್ ನಾಲ್ಗೆತಡವರ್ಸ್ತಿದೆ:)೦ ಉಹೂ , ಮತ್ತೆ ಅಲ್ಲ ಕಣೆ ಪದ್ದು (ಅದು'ಪೆದ್ದು'  ಅಂತಾ ಅವಳ್ಗೆ   ಕೆಳ್ಸಿದ್ರೆ:))  ಮತ್ತೆನಪ್ಪಹೇಳೋದು? 'ನನ್ಗೆಗನ್ಸುತ್ತೋ-ಯಾವ್ದು ಒಪ್ಪುತೋ ಅದ್ನೇಕರ್ಯೋದು ಒಳ್ಳೇದು -ನಮಗ್ಯಾಕೆ ಆ ಕವಿಗಳ-ಕಥೆಗಾರರಹಂಗು?  ಅನುಕರಣೆ? ಸ್ಸೋ

'ಅಲ್ಲಾ ಕಣೆ' ಅಂತಾ ಶುರು ಮಾಡಿದೆ(ಮನಸ್ಸಿಗ್ ಹಿತಅನ್ಸ್ತು ಅ ಪದ ಪ್ರಯೋಗಕ್ಕೆ:))

 

ಬಾ  ಇಲ್ಲಿ ಕುಳಿತ್ಕೋ, ಪಾಪ ನೀನು ಬೆಳಗ್ಗೆ ಎದ್ದ್ದುನಂಗೂ,ಪಾಪೂಗು,ನೀರ್ ಕಾಯ್ಸಿ, ತಿಂಡಿ ರೆಡಿ ಮಾಡಿ,ಅವಳನ್ನ  ಸ್ಚೂಲಿಗ್ ನನ್ನನ್ನ ಆಫೀಸೀಗ್ ಕಳ್ಸೋದು ನಿನದೆ  ಜವಾಬ್ಧಾರಿ  ಹಾಗಾಗ್ ನಿಂಗೆ ಸುಸ್ತಾಗಿರ್ಬೇಕ್,ಇವತ್ತು ಭಾನುವಾರ ಅಲ್ಲವ? ಮಧ್ಯಹ್ನ ಊಟ ಹೊರಗಡೆಮಾಡೋಣ, 'ಯಾವ್ದಾರ' ಒಳ್ಳೆ 'ಕನ್ನಡ ಚಲನ ಚಿತ್ರ'ನೋಡೋಕ್ ಹೋಗೋಣ. ನೀ ಮಧ್ಯಾಹ್ನಕ್ ಸರ್ಯಾಗ್ರೆಡಿ ಆಗ್ 'ಮಂತ್ರಿ ಮಾಲಿನ ಆಯ್ನಾಕ್ಸ್ ಗೆ ' ಹೋದ್ರಾಯ್ತುಟಿಕೆಟ್ ರೇಟ್ 'ಜಾಸ್ತೀನೇ' ಆದರೂ ನಮ್ಮನೆ ಹತ್ತಿರ ಅಲ್ವಬೇಗ ವಾಪಾಸ್ಸು ಬರ್ಬಹುದು.

 

 

ಆದರೆ ನೆನಪಿರಲಿ 'ನಾವು ಚಲನ ಚಿತ್ರ ನೋಡಹೊರಟಿರ್ವದು 'ಇವತ್ತೇ' ನಾಡಿದ್ದು  ಅಲ್ಲಾ:)) ಮೊದಲಿಗೆನನ್ನ ಸಂತಾಪ-ಸಂತೈಸುವಿಕೆ-ಕನಿಕರ ನೋಡಿ ಕರುಣೆಯೇಮೈವೆತ್ತನ್ತಾಗಿದ್ ,ಮೈ-ಮನಸು ಸಡಿಲ ಮಾಡಿಕೊಂಡುನಗ್ತಿದ್ದ 'ನನ್ನವಳ' ಹಾವ-ಭಾವ ನನ್ನ ಯಕಶ್ಚಿತ್ 'ಆ ಒಂದುಮಾತಿಂದ' ಬಲೂನ್ ಒಂdu  ರಂದ್ರಕ್ಕೆ 'ಟುಸ್ಸ್ 'ಅಂದಂತೆಒಡೆದು ಹೋಗ್  'ಆಲ್ ಇಂಡ್ಯಾ ಲೆವೆಲ್ಗೆ ಅವಳ ಮುಖಸೀರಿಯಸ್ಸಯ್ತು':)೦

 

ಅಸ್ಟು ಖುಷಿಯಾಗಿದ್ದ 'ಅವಳ' ಹವಾ(ಹಾವ) -ಭಾವ ಚೇಂಜ್ ಆಗ್ ಆ ಪರಿ ಗಂಭೀರವಾಗಲು ಕಾರಣವೇನು? ಅನ್ನುವ ಆಲೋಚನೆ ನನ ಮನದಲ್ಲಿಮೂಡಿತು(ಕಥೆ-ಕವನದಲ್ಲಿ ಓದಿದ್ದಂತೆ ಮೊದಲಿಗೆ ಕೋಪ-ತಾಪ-ಆಮೇಲೆ- ಶೃಂಗಾರ -ಸರಸ -ಅಲ್ಲಿಗೆ ವಿರಸಕ್ಕೆ ಕೊನೆ,ಒಮ್ಮೊಮ್ಮೆ ನಾ ಯಾಕೆ 'ಸೋಲಲಿ' ಎಂವ ಭಾವನೆ ಸ್ವಲ್ಪ ಹೀಗೆಯೇ 'ಮುಗುಮ್ಮಾಗ್' ಇದ್ದು ನೋಡೋಣ ಹೆಂಗಿರ್ತೆ ಎನ್ನುವ ಕಲ್ಪನೆ ಇವಳಗೆ ಬಂತಾ ಎನ್ನುವ ಸಂಶಯ ಎನಗೆ ಬಂತು)

 

 

ಕೊನೆಗೆ ಹೊಳೆಯಿತು ನನ 'ಪೆದ್ದು' ಮನಸ್ಸಿಗೆ ನಾ ಹೇಳಿದಆ ಮಾತು' ಇವತ್ತೇ ನಾವ್  ಸಿನೆಮಾಗೆ ಹೋಗೋದು, 'ನಾಡಿದ್ದು' ಅಲ್ಲಾ:)) ಹೌದು ನಾ ಹೇಳಿದ್ದರಲ್ಲಿ ಸತ್ಯಾಮ್ಶವಿತ್ತು- ಏನದು? ಹಿಂದೊಮ್ಮೆ

 

 

ಹಿಂದೊಮ್ಮೆನನ್ನವಳಿಗೆ ಸಂಬಂಧಿಕರೊಬ್ಬರ ಮದ್ವೆಗ್ ಯೆಶ್ವನ್ತಪುರಕ್ಕೆ ಹೋಗಬೇಕೆಂದು ಅದ್ಕೆ ರೆಡಿ ಆಗು ಎಂದಾಗ್ 'ಸ್ಸುಮಾರ್ ಹೊತ್ತು' ಮೇಕಪ್ ಮುಸಿ ಬಂದಾಗ ಖುಷಿಯಾಗ, ಆಟೋ ಹತ್ತೊಗ್, ಅಲ್ಲಿ ಇಳಿದು ಹೋದ್ರೆ ಮಾಂಗಲ್ಯ ಧಾರಣೆ ಆಗ್ ,ಭೋಜನ ಶಾಲೆಗೊಗ್ ಕ್ಯೂ ನೋಡ್ ವಾಪಸ್ ಮನೆಗ್ ಬರವಾಗ ಬಸ್ಸಲ್ಲಿ ಕಂಡಕ್ಟರ್ ಜೊತೆ ಚಿಲ್ರೆ ಪ್ರಸಂಗ ಎಲ್ಲವೂ ಆಗಿತ್ತಲ್ಲ:)) ಅದ್ಕೆ ಆ ಮಾತು ಬಾಯಿಂದ ಬಂದಿತ್ತು.. ಮತ್ತೆ ಅವಳನ್ನ ಸಮಜಾಯಿಷಿ ನೀಡಿ  ಕಾಡಿ-ಬೇಡಿ ಒಪ್ಪಿಸ ಹೊರಟರೆ ಅವ್ಳು ಮುಖವನ್ನ 'ಹ್ಯದರಾಬಾದ ಹಪ್ಪಳ' ಮಾಡಿಕೊಂಡು  ರೂಮಿಗ್ ಹೋಗ್ ಬಾಗಿಲ ಹ್ಹಾಕಿದ್ಲು ಧಬ್ಬ್ ಅನ್ತ.

ನನ್ನ  ತಾಯಿಯತ್ತ ನೋಡಲು ಅವ್ರು ಹೇಳಿದ್ರು ಅವಳೀಗ ಕೊಪದಲ್ಲಿದಲ್ಲಿ ಇದ್ದಾಳೆ ಸಮಜಾಯಿಷಿ-ಸಾಂತ್ವಾನ ಏನೂ ಪರಿಣಾಮ ಬೀರೋಲ್ಲ, ನಾ ಸಮಧಾನಿಸ್ತೀನಿ, ನೀ ಕೊಂಚ ಹೊತ್ತು 'ಹೊರಗಡೆ' ಹೋದ್ರೆ ಒಳ್ಳೇದ್ ಆಮೇಲ್ ಅವ್ಳು ಸರಿ ಹೋಗ್ತಾಳೆ. ಸ್ಸರಿ ಎಲ್ ಹೋಗೋದ್ ಒಬ್ಬಂಟಿಯಗ್? 'ಅವ್ಳು' ಜೋತೆಗಿದ್ರೆ ಚೆನ್ನಿತ್ತೇನೋ? ನನ್ನ ಮುಖ ನೋಡ್ ನಸು ನಕ್ಕು ತಾಯಿ ಒಳ ಹೋದರು.. ನ ಪತ್ರಿಕೆಯಾತ ಕಣ್ಣಾಡಿಸಿದೆ ನಗರದಲ್ಲಿ ಇವತ್ತು ಏನೇನು ಧಾರ್ಮಿಕ,ಸಾಂಸ್ಕೃತಿಕ, ಕಾರ್ಯಕ್ರಮಗಳಿವೆ ಅನ್ತ...

ಹನುಮನಗರದಲ್ಲಿ ಹನುಮನ ದೇವಸ್ಥಾನದಲ್ಲಿ ಹನುಮನಿಗೆ ವಿಶೇಷ ಪೂಜೆ(ಯಾರ್ಗೆ:))

ರಾಮನಗರದಲ್ಲಿ ಶ್ರೀ ರಾಮನಿಗೆ ಕ್ಷೀರಾಭಿಷೇಕ

ಗಿರಿನಗರದಲ್ಲಿ ಕೃಷ್ಣನ ಶ್ರೀ ಕೃಷ್ಣ ಕಥಾಮೃತ

ಉಹೂ ಇದ್ಯಾವ್ದೂ ನಮಗಲ್ಲ ಅಂತ

ಸಾಹಿತ್ಯ ಸಂಬಂಧಿ  ಕಾರ್ಯಕ್ರಮಗಳತ್ತ ದೃಷ್ಟಿ ಹಾಯಿಸಿದೆ

ಕುಡಿತ   ಬಿಡುವುದು ಹೇಗೆ? ಪುಸ್ತಕ ಬಿಡುಗಡೆ ಖ್ಯಾತ ಸಾಹಿತಿ    'ಎಣ್ಣೆ ಶ್ ' ಅವರಿಂದ ಸ್ಥಳ ಮಧುವನ:))

ಕೋಪ-ತಾಪ್ ನಿಗ್ರಹ ಕುರಿತು ಚರ್ಚೆ ನಡೆಸುವವರು- ಶ್ರೇ ಮಾನ್ ಉಗ್ರ ನರಸಿಂಹ  ,ಸ್ಥಳ ಶ್ರೀ ರಾಮಪುರ:)

ಶೇರು  ಪೇಟೆ -ಹಣ ಹೂಡಿ ಕೊಟ್ಯಾಧಿಪತಿಗಳಾಗಿ - ಉಚಿತ ಉಪನ್ಯಾಸ -ಶ್ರೀ 'ಬರ್ಬಾದ್  ಸಿಂಗ್' ಅವರಿಂದ ಸ್ಥಳ- ಶಿರೂರು ಪಾರ್ಕ್- ಪ್ರವೇಶ ಉಚಿತ- ನೋಂದಣಿ ಶುಲ್ಖ ಇಲ್ಲ:)೦

ತತ್! ಇದ್ಯಾವ್ದೂ ನಮಗೆ ಲಾಯಕ್ಕಿಲ್ಲ

ಇನ್ನೇನು ಸಾಂಸ್ಕೃತಿಕ ಕಾರ್ಯಕ್ರಮಗಳತ್ತ  ಕಣ್ಣು ಹಾಯಿಸಿದೆ.

ಮಲ್ಲೇಶ್ವರಂ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು

ಮೊದಲಿಗೆ ದ್ವಾಜಾರೋಹನ- ಕನ್ನಡವೇ ನಮ್ಮಮ್ಮ ವೇದಿಕೆಯ 'ಗುಂಡಣ್ಣ ' ಅವರಿಂದ,

ಸ್ಥಳೀಯ ಶಾಸಕರ ಅಭಿನಂದನಾ ಸಮಾರಂಭ, ಮನವಿ ಸಲ್ಲಿಕೆ:)

ಡೊಳ್ಳು ಕುಣಿತ

ಆಟೋಟ,  ರಾತ್ರಿ  ಹಾಸ್ಯೋತ್ಸವ'

ಹಾಸ್ಯೋತ್ಸವ-ಹಾಸ್ಯಗಾರರು  ಪೈಸೂರು  ಪಾನಂದ್ , ಪಿಚರ್ಡ್ ಪಿಯೂಸ್  -ಗೀಣೆಶ್-  ಗಿಮ್ಕ್ರಿ ಗಯಾನಂದು ಮುಂತಾದವರಿಂದ , ಸಂಜೆ ನೃತ್ಯ- ಸೂಪರ್ ಡ್ಯಾನ್ಸರ್ ತಂಡದವರಿಂದ

ಇನ್ನು ಎಲ್ಲೆಲ್ಲೋ  ಇದೆ ರೀತಿಯ  ಸಮರಮ್ಭಾಗಲಿದ್ದರೂ ಮಲ್ಲೇಶ್ವರಂ 'ಹತ್ತಿರ 'ಅಂತ ಅಲ್ಲಿಗೆ ಹೋಗಲು ತಿರ್ಮಾನ್ಸಿದೆ  ಇನ್ನು ಸಮಯವಿದೆ ಹಂಗೆ ಒಮ್ಮೆ ಮಂತ್ರಿ ಮಾಲಿಗ್ ಹೋಗ್ 'ವಿಂಡೌ  ಶಾಪಿಂಗ್' ಮಾಡಿದ್ರೆ ಆಯ್ತು.. ಸ್ಸರೀ ಇನ್ನು ಸಂಜೆವರಗೆ ಸಮಯವಿದೆ ಮೊದಲಿಗೆ ಈಗ ಸ್ವಲ್ಪ ಹೊತ್ತು ತೀ ವೀ ನೋಡೋಣ  , ಒಂದನೇ ಚಾನೆಲ್ಲಿಗೆ ಹೋದೆ 'ಥಟ್  ಅಂತ ಹೇಳಿ!ಕಾರ್ಯಕ್ರಮ ಬಂತು ಕನ್ನಡಕ್ಕಾಗ್ ಇಷ್ಟು 'ಶ್ರಮಿಸುತ್ತರಲ್ಲ' ಅವ್ರು ಸಂದಾಗಿರ್ಲಿ ಅಂತ ಹಾರಿಸಿದೆ.

೨ ನೆದಕ್ಕೆ ಹೋದೆ ಟಿ  ವೀ ೯ ನೇರ ಧಿಟ್ಟ ಈಗಿನ ಕಾರ್ಯಕ್ರಮ ಹೀಗೂ ಉಂಟೆ?  ಅದು ಹಾಗಾದ್ರೆ  ಇರ್ಲಿ, ಇಲ್ದ್ರೆ 'ಹಾಳಾಗ್' ಹೋಗ್ಲಿ ಅಂತ ಮುಂದಿನ  ಚಾನೆಲ್ಲಿಗೆ ಹೋದೆ,ಸುವರ್ಣ ಈಗ ಬಂದ ಸುದ್ಧಿ ಮಾ-ಮುಗಳು ದೆಹಲಿಗ್ ಹೋಗಿದ್ದು ಅಲ್ಲಿ ಬಿರುಸಿನ ಚಟುವಟಿಕೆ ನಡೆಸ್ತಿದ್ದರೆ, ನಾವು ಅವರ 'ಬೆನ್ನ ಹಿಂದೆಯೇ' ಇದ್ದು ಕ್ಷಣ-ಕ್ಷಣದ ಮಾಹಿತಿ ನೀಡುತೇವೆ ನೋಡ್ತಿರಿ ಸುವರ್ಣ( ಸಧ್ಯ ಮ-ಮು ಗಳನ್ನ ಒಂದಕ್ಕೆ-೨ಕ್ಕೆ  ಬಿಟ್ರೆ ಸಾಕು:)) ಇವರನ್ನ ನೋಡಿದ್ರೆ ಅಲ್ಲಿಗೂ ಹಿಂಬಾಲಿಸೋ ಹಾಗ ಇದಾರೆ:)) ಮತ್ತೆ ಮುಂದಿನದಕ್ಕೆ ಹೋದೆ, ಈ ಟಿ ವಿ  ಈಗ ಧಾರವಾಹಿ 'ಈ ಶತಮಾನದ ನಾರಿ' ಮೊದಲಿಗೆ ಜಾಹೀರಾತು- ಯಾವ 'ಚಕ್ರವ್ಯೂಹಕ್ಕೆ' ಸಿಕ್ಕಿದೀಯ ಸೀಮಾ?

ಕಲೆ ಹೋಗ್ತಿಲ್ಲ, ಬಿಳುಪು ಸಿಗ್ತಿಲ್ಲ, ಅದ್ಕ್ಯಕ್ ಚಿಂತೆ ತ್ರಿಶೂಲ ಬಳಸು.. ಆಮೇಲೆ ಮೆಂತೊಸ್  ತಿನ್ನಿ ಬುದ್ಧಿ ಚುರುಕುಗೊಳಿಸುತ್ತೆ:)), ಉಪ್ಪಿನ ಬಗ್ಗೆ ಒಂದು ಕೆಜಿ ಉಪ್ಪು ಕೊಡು, ಯಾವ ಉಪ್ಪು? ಶುದ್ಧ ಉಪ್ಪು ಗೊತ್ತಿಲ್ಲ್ವ?, ಇದನ್ನೇ ಬಳ್ಸಿ ಆರೋಗ್ಯವಾಗಿರಿ .ನೀವು ದಪ್ಪಗಗಬೇಕೆ? ಇಂದೇ ತಿನ್ನಿ ಆಯುರ್ ಗೆನ್' ತೆಳ್ಳಗಗಬೇಕೆ?   ಕುಡಿಯಿರಿ  ಕಷಾಯ್ ತೈಲಂ':)೦  ತತ್!! ಮುಂದಕ್ಕೊದೆ ಅಲ್ಲಿ ಬಂತು ಕಾರ್ಟೂನ್  ನೆಟ್ವರ್ಕ್  ಬೆಕ್ಕು-ಇಲಿಯ ಟಾಮ್ ಮತ್ತು  ಜೆರಿ ಅದ್ಳದ್ಕಿಂತ ಇದೆ ವಾಸಿ ಅಂತ ನೋಡ್ತಾ ಪಾಪುನ ಪಕ್ಕಕ ಕರೆದ್ಕೊಂಡು ಕುಳಿತೆ ನಾನೂ ನಾಮ್ಮ ವಿಜಿಯೂ ಆ ಬೆಕ್ಕು ಇಲಿಯ ಆಟ ನೋಡ್ತಾ ನಕ್ಕು ನಲಿದೆವು. ಅದೂ ಮುಗೀತ.

ಹೊತ್ತು ೨ ಆಯಿತು 'ನನ್ನವಳು' ಇನ್ನು  ರೂಮಲ್ಲೇ, ನಾ ಪಾಪುನ ಕರೆದ್ಕೊಂಡು ಅಮ್ಮ ನೀಡಿದ ಊಟ ಮಾಡ ಹಾಲಿನಲ್ಲೇ ಹಾಗೆ ಸೋಫಾ ಮೇಲೆ ನಿದ್ರೆಗೆ ಹೋದೆ, ಅಮ್ಮ ಎಬಿಸಿದ್ಲು  ಸಂಜೆ ನಾಲ್ಕಕ್ಕೆ ಗಡಿಬಿಡಿಯಿಂದ ಮುಖ ತೊಳೆದ ಫ್ರೆಶ್ ಆಗ್ ಬಟ್ಟೆ ಹಾಕೊಂಡ್ ಅಮ್ಮಂಗೆ ಹೇಳಿ ಮಲ್ಲೇಶ್ವರಂ ಮೈದಾನದ   ಹತ್ತಿರ ಬಂದಾಗ ಅದಾಗಲೇ ಚಿಳ್ಳೆ-ಪಿಲ್ಲರಿಗಳು ದೊಡ್ಡವರೂ ಸೇರಿದರು, ಕೆಲವರ್ಗೆ ಆಮೇಲ್ 'ಸೀಟ್ 'ಸಿಗದಿದ್ರೆ ಎನ್ನೋ 'ಮುಂದಾಲೋಚನೆ', ಡ್ಯಾನ್ಸು ಮೊದಲಿಗೆ  ಆದ ಮುಗ್ಯೋಕ್ ೨ ಘಂಟೆ ಅಂದ್ರೆ ಹಾಸ್ಯೋತ್ಸವ ಶುರು ಆಗೋದ್ ೭-೮ ಸುಮಾರಿಗೆ ಸಧ್ಯಕ್ಕೆ ಮಂತ್ರಿ ಮಾಳಿಗೆ ಹೋದ್ರಾಯ್ತು..

ಹಾಸ್ಯ್ ಕೇಳಿ ನೋಡಿ ಖುಷಿ ಪಟ್ಟು ಮನಸಾರೆ ನಗಬಹುದು ಅದೂ ಬಿಟ್ಟಿಯಾಗಿ:)೦ ಮಂತ್ರಿಮಾಲಿಗ್ ಹೋಗ್ ದ್ವಾರದಲ್ಲಿ ತಪಸನೆಗೊಳಪತ್ತು ಒಳ ಹೋಗ್ ಅಲ್ಲಲ್ಲಿ ಎಲೆಕ್ಟ್ರಾನಿಕ್ ಸಾಧನಗಳನ್ನ ಪರೀಕ್ಷಿಸಿ ವಾಪಾಸ್ ಇತ್ತು ಹೊರ ಬರ್ತಾ  ಮೇಲಿನ ಕ್ಯಾಂಟೀನ್ ಗೆ  ಹೋಗ್ ಬಿಸಿ ಬಿಸಿ ಕಾಫೀ ಕುಡಿದು ಅಲ್ಲಿ ಹಾಕಿದ ಚೇರಿನ ಮೇಲೆ ಕುಳಿತು ಅತಿತ್ತ ಓಡಾಡುವ ಯುವ ಪ್ರೇಮಿಗಳು, ಅವರನ್ನ ಇವರನ್ನ ನೋಡ್ತಾ ಕುಳಿತೆ ಸಮಯ ಆಯ್ತು ೭ ಮೆಲ್ಲಗೆ ಮಲ್ಲೇಶ್ವರದ ಮೈದಾನದತ್ತ ಹೆಜ್ಜೆ ಹಾಕಿದೆ. ಅದಾಗಲೇ ಮುಕ್ಕಾಲು ಭಾಗ ತುಂಬಿದ್ದ ಮೈದಾನದಲ್ಲಿ ಕೊನೆ ಮೂಲೇಲಿ ಕುರ್ಚಿ ಮೇಲ ಕುಳಿತೆ.

 

.ಇನ್ನು ಡ್ಯಾನ್ಸ್ ಸ್ವಲ್ಪ ಬಾಕಿ ಇತ್ತು ಕೆಲವರು ಅವ್ರ ಹಾಡು ಹಾಕಿ,ಇನ್ನೊಬರು  ನಮ್ಮ ಹಾಡು ಹಾಕಿ ನೃತ್ಯ ಮಾಡಿ ಎನ್ನುತ್ತಿದ್ದರು. ಅದೂ ಆಗೋಯ್ತು ಆಗ  ಶುರು ಆಯ್ತು 'ಉದ್ಘೋಷಕರ'   ಇನ್ನು ಐದೇ ನಿಮಿಷದಲ್ಲಿ ಎನ್ನೋ ಘೋಷಣೆ.. ನಿವಾಸಿಗಳೇ ನೀವೆಲ್ಲ ಕಾತರದಿಂದ ಕಾಯ್ತಿರೋ ಹಾಸ್ಯೋತ್ಸವ್ಕ್ಕೆ  ಈಗ ಚಾಲನೆ ನೀಡುತೇವೆ ದಯವಿಟ್ಟು ಶಾಂತರಾಗಿ..

 ಮೊದಲಿಗೆ ಪೈಸೂರು ಪಾನಂದ್ ಅವರಿಂದ ಹಾಸ್ಯ-

ನಮಸ್ಕಾರ ಏಏಏ ಚಳಿಗ ಎಲ್ರೂ ಗಡ ಗಡ ನಡುಗ್ತಿದಿರಿ ಅಂತ ಗೊತ್ತು ಸ್ವಲ್ಪ ಹಂಗೆ ನಕೂ 'ಪಕ್ಕೆಲುಬು ಸಡಿಲಿಸ್ರಳ' ಅಂದ ಹ್ಹೀ ಹೇ ಹ್ಹಾ ಹಃ ಕೆಲವರ ಬಲವಂತದ ನಗೆ:)೦ ನನ್ನ ಪಕ್ಕ ಕುಳಿತ ಒಬ್ಬರು ಶುರು ಹಚ್ಹ್ಕೊಂಡರು ನಿಮಗೆ ಹಾಸ್ಯ ಅಂದ್ರೆ ಇಸ್ಟಾನ? ಇಲ್ಲ ಸ್ಸಾರ್ ಸುಮ್ನೆ ಹಾಗೆ ಬಂದೆ ಎಂದೇ ತುಸು ಕೋಪದಿಂದ, ಮತ್ತೊಂದು ಮಾತು, ನಂಗೂ ಅಸ್ತೆ ಇಷ್ಟ ಏನು ಇಲ್ಲ ಆದರೂ ಫ್ರೀ ಅಲ್ಲವ ಅದ್ಕೆ ಬಂದೆ, ಈ 'ಪೈಸೂರು ಪಾನಂದು' ಬಹು ಹೆಸರಾಂತ ಹಾಸ್ಯಗಾರ ಕಣ್ರೀ, ನಂಗೂ ಗೊತ್ತಿಲ್ಲ ಯಾರೋ ಹೇಳಿದ್ರು, ನಾ ಹಾಸ್ಯದತ್ತ ಕಿವಿ ನೆಟ್ಟಿದ್ದೆ…

. 'ಪೈಸೂರು ಪಾನಂದ್'  ಜನ ಯಾವಾಗ ಆಸಕ್ತಿ ಕಳೆದುಕೊಳ್ತರೋ ಆಗ ಕೆಲ ನಗೆ ಬಾಂಬು ಸಿಡಿ ಜನರನ್ನ ಎಚ್ಚರಿಸ್ತಿದ್ದ ನಿದ್ದೆಗ ಜಾರದಂತೆ:))  ಅದೇ 'ಹಳಸಲು' ಜೋಕುಗಳು ಹಿಂದೆ ಕೇಳಿದ್ದು ನೋಡಿದು,ಕೊನೆಗ್ ತಮ್ಮನ   ತಾವೇ ಗೇಲಿ ಮಾಡ್ಕೊಂಡು ಜಾಗ ಖಾಲಿ ಮಾಡಿದ್ರು, ಆಮೇಲ್ ಬಂದವರು  'ಪಿಚರ್ಡ್ ಪಿಯೂಸ್' ಅವರದೂ ಅದೇ ರಾಗ ಅದೇ ಹಾಡು ಯಥಾ ಪ್ರಕಾರ ಜನರಲಿ ಕೆಲವರು ಈ 'ಬಿಟ್ಟಿ ಉಯ್ಯಾಲೆ  ಕೇಳ್ತಾ 'ನಿದ್ದೆಗ' ಜಾರಿದರು, ನಾ ಆಗಲೋ-ಈಗಲೋ ಒಳ್ಳೆ ಜೋಕ್ ಬರಬಹುದು ಅಂತ ಕಾಯ್ತಾ ಕುಳಿತೆ. ಅವರದೂ ಮುಗೀತು ಚಪ್ಪಾಳೆ ತಟ್ಟಿದ ಕೆಲವರನ್ನ ನೋಡಿದಾಗ ಅವ್ರು 'ತೊಲಗಿದರೆ' ಸಾಕು ಅಂತ ಚಪ್ಪಾಳೆ ತಟ್ಟಿದ ಹಾಗಿತ್ತು:))

ನಂತರ ಬಂದವರು ಗೀಣೆಶ್  ಇದ್ದುದರಲ್ಲಿ ಕೊಂಚ ವಿನೂತನ ಭಾಷ ಶಿಲಿಯಲ್ಲಿ ಕೆಲ ಜೋಕ್ ಹೇಳಿ ನಗಿಸಿದರು ಚಪ್ಪಾಳೆ ಧ್ವನಿ ತಕ್ಕ ಮತ್ತಿಗ್ ಇತ್ತು. ಅಆಮೆಲ್ ಬಂದವರು ಗಿಮಿಕ್ರಿ ಪಯನಂದು  ಈ ಯಪ್ಪಾ  ಬರ್ತಲೇ  ಏನೇನೋ 'ಗಿಮ್ಮಿಕ್' ಮಾಡ್ಕೊಂಡು ಬಂದು ಆಮೇಲ್ 'ಗಿಮಿಕ್ರಿ' ತೋರ್ಸ್ತಿನ್ ಅಂತ ಏನೇನೋ ಹಳೆಯದನ್ನೇ ಹೇಳ್ತಾ ಒಂದ್ ಅರ್ಧ ಘಂಟೆ 'ಕೊರೆದ'.. ಆಗಲೇ ಜನ ಇದೇನು ಹಾಸ್ಯವೋ ಇನ್ನೇನೋ ಅಂತ ಕಂಗಾಲಾಗಿ ಸಧ್ಯ ಇಷ್ಟು ಹೊತ್ತಾದರೂ  'ಮನೆವ್ರ' ಕಾಟದಿಂದ ಮುಕ್ತಿ ಸಿಕ್ತಲ್ಲ, ಇವರ 'ಬಿಟ್ಟಿ ಉಯ್ಯಾಲೆ 'ಕೇಳ್ತಾ ನಿದ್ದೆ ಬಹು 'ಪಸಂದಾಗ್' ಬಂತು ಇವರ 'ಹೊಟ್ಟೆ ತಣಗಿರ್ಲಿ' ಎಂತ ಮನೆ ದಾರಿ ಹಿಡಿದರು ಆಕಳಿಸುತ್ತಾ.:))
>>>ಚಪ್ಪಾಳೆ ಹೊಡೆದ ಕೆಲವರಲ್ಲಿ ಯಾರೋ ಹೊಡೆದರು ಅಂತಕೆಲವರು, ನಾ ಚಪ್ಪಾಳೆ ಹೊಡೆಯದಿದ್ರೆ ಅವ್ರುಏನನ್ನುಕೊಲ್ತಾರೋ ಅಂತ ಕೆಲವರು ಚಪ್ಪಾಳೆ ತಟ್ಟಿದ್ದುಸೋಜಿಗ:))
 ಹಸ್ಸ್ಯೋತ್ಸವದಲಿ 'ಏನೋ'  ನಿರೀಕ್ಷಿಸಿ ಹೋಗಿದ್ದ ನಾ ನಿರಶವದಿಯಾಗಿ ಮನೆ ದಾರಿ ಹಿಡಿದೇ, ಮನೆ ತಲುಪಿ ಊಟ ಮಾಡ ಮಲಗಿದೆ . ..

ಚಿತ್ರದ ಮೂಲ/ಸಂಗ್ರಹ : <http://www.hindu.com/thehindu/mp/2003/03/06/stories/2003030600960300.htm >

 

 

Comments