ಒಂದು ಮಾತು...
ಜೀವನ ತುಂಬಾ ಕ್ಲಿಷ್ಟ ಹಾಗೂ ಊಹಿಸಲಾರದ್ದು.
ನಾವು ಜೀವನ ಪೂರ್ತಿ ನಮ್ಮ ಬೇಸಿಕ್ ನೀಡ್ಸ್ ಪೂರೈಸಿಕೊಳ್ಳಲು ಮತ್ತು ದಿನನಿತ್ಯ ಕಾರ್ಯಗಳಿಗೆ ನಮ್ಮ ಸಮಯವನ್ನು ಮೀಸಲಿಡುತ್ತೇವೆ.
ಕಾಲೇಜ್ ಮುಗಿಸಿ ಕೆಲಸ ಮಾಡುತ್ತಿರುವವರು ಒಮ್ಮೆ ಸೆಟ್ಲ್ ಆದಮೇಲೆ ಎಂಜಾಯ್ ಮಾಡೋಣವೆಂದು,ತಂದೆ ತಾಯಿಯರು ಮಗನ ಮದುವೆ ಮಾಡಿ ನಂತರ ಆರಾಮಾಗಿ ಬದ್ರಿಯಾತ್ರೆ ಮಾಡೋಣವೆಂದೋ,ಅಪ್ಪ ರಿಟೇಯರ್ಡ್ ಆದಮೇಲೆ ಒಂದು ಲಾಂಗ್ ಟ್ರಾವೆಲ್ಲ್ ಮಾಡೋಣವೆಂದೋ ಹೀಗೆ ಯಾವುದೋ ಒಂದು ಕಾರಣದಿಂದ ನಮ್ಮ ಆಸೆಯನ್ನು ಮುನ್ದುದುತ್ತೆವೆ. ಅದು ಒಳ್ಳೆಯದೇ ಇರಬಹುದು ಆದರೆ ಸ್ನೇಹಿತರೆ ಒಮ್ಮೆ ನಿಮ್ಮ ಲೈಫ್ನಲ್ಲಿ ಹಿಂದೆ ತಿರುಗಿ ನೋಡಿದಾಗ ನೀವು ಬಿಟ್ಟ ಅಥವಾ ಕಟ್ಟಿಟ್ಟ ಆ ಆಸೆಗಳ ಬಿಟ್ಟ ಸ್ಥಳಗಳು ನಿಮ್ಮನು ಕಾಡುತ್ತಿದರೆ ಅಥವಾ ಆ ಸ್ಥಳ ಪೂರ್ತಿಮಾಡಲು ಈಟ್ಸ್ ದ ರೈಟ್ ಟೈಮ್.
ಅದು ನೀವು ೭ನೇ ತರಗತಿಯಲ್ಲಿ ಬಿಟ್ಟ ಸ್ಕೂಲ್ ಟ್ರಿಪ್,ಡಿಗ್ರೀಯಲ್ಲಿ ಬಿಟ್ಟ ಸೆಂಡೋಫ್ ಪಾರ್ಟೀ,ಮೊದಲನೆ ಪ್ರೀತಿ,ಮೊದಲನೆ ಬ್ರೇಕ್ ಅಪ್, ಮಿಸ್ ಮಾಡಿಕೊಳುವ ಗೆಳೆಯ ಅಥವಾ ಗೆಳತಿ,ಜಗಳ,ಕೋಪ,ಮನಸ್ತಾಪ,ನೂವು ಏನಾದರೂ ಆಗಿರಬಹುದು.
ಈ ಕ್ಷಣಿಕ ಜೀವನದಲ್ಲಿ ಕ್ಷಮಿಸಿ,ಪ್ರೀತಿಸಿ,ಕ್ಷಮೆಕೇಳಿ,ಬದುಕಿ ಬದುಕಲು ಅವಕಾಶ ಮಾಡಿಕೊಡಿ.
ಆ ಕಟ್ಟಿಟ್ಟ ಆಸೆ ಯನ್ನು ಹಾರಲುಕಲಿಸಿ.ಈ ಚಿಕ್ಕದಾದ ಲೈಫ್ಅನ್ನು ಎಂಜಾಯ್ ಮಾಡಿ ಮೇಬೀ ಮತ್ತೆ ಅದು ಬರದೇ ಇರಬಹುದು.
ನಾನು ಇದನ್ನು ಬರೆಯಲು ಕಾರಣವೇನೆಂದರೆ ಒಬ್ಬ ಕ್ಯಾನ್ಸರ್ ರೋಗಿಯನ್ನು ನೋಡಿ ಮಾತಾಡಿ ಅವನ ಮತ್ತು ನಿಮ್ಮ ಜೀವನವನ್ನು ನೂಡುವ ಪರಿ ಬೇರೆಇರುತ್ತದೆ ಗೆಳೆಯರೇ ಅದು ನನಗೆ ತುಂಬಾ ಕಾಡುವ ಪ್ರಶ್ನೆ.ಅವನಿಗೆ ನಾಳೆಯ ಬರವಸೆ ಇಲ್ಲ ಆದರೂ ಅವನ ಜೀವನ ಅದ್ಭುತ ಮತ್ತು ಶ್ರೇಷ್ಟ. ಆದರೆ ಇಷ್ಟೆಲ್ಲಾ ಸಂಪತ್ತು ಮತ್ತು ಆರೋಗ್ಯ ಇರುವ ನಾವು ಎಷ್ಟು ಸೆಲ್ಫಿಶ್ ಎಷ್ಟು ಕಾಲ್ಮಶ ಹೃದಯದವರು ಎಂದು ಒಮ್ಮೆ ಯೋಚಿಸಿ.
ಬೆಂಗಳೂರಿನ BMTC ಯಲ್ಲಿ ಪ್ರಯಾಣಿಸುತ್ತಿದ ಒಂದು ಅನುಭವ ಹೇಳುತ್ತೇನೆ ಶುಗರ್ ಲೋ ಆಗಿ ಒಬ್ಬ ಯಂಗ್ ಯುವಕ ಬಸ್ನಲ್ಲಿ ಬಿದ್ದರು ಅವನನ್ನು ಬಸ್ನಿಂದ ಹೊರಹಾಕಿ ನಮ್ಮ ಜನ ನಮಗೆ ಯಾಕೆ ಬೇಕು ಎಂದು ಸುಮ್ಮನೇ ಮೇಜಾಸ್ತಿಕ್ ನಲ್ಲಿ ಹೋಗುತ್ತಾರೆಂದರೆ ನಾವು ಬದುಕುತ್ತಿರುವುದು ಮನುಷ್ಯರ ಮಧ್ಯೆ ಎಂದರೆ ನಂಭಲು ಅಸಾಧ್ಯ. ಅವನಿಗೆ ನೀರು ಕೊಡಲು ಅಲ್ಲಿಗೆ ಪೋಲೀಸ್ ಬರಬೇಕು. ಗೆಳೆಯರೇ ನೀವು ಏನೇ ಸಂಪಾದಿಸಿ ಎಷ್ಟೇ ವಿದ್ಯಾವಂತರಾಗಿ ನಿಮ್ಮಲಿ ಹ್ಯೂಮನ್ ವ್ಯಾಲ್ಯೂಸ್ ಸತ್ತಿದರೆ ನೀವು ಬದುಕಲು ಅನರ್ಹರು ....BE HUMAN AND WE DESERVE MORE.