ಒಂದಾನೊಂದು ಕಾಲದಲ್ಲಿ..... ಭಾಗ 4
ಸಂದರ್ಭ ೭.
ಸೊ ಎನ್ ಡಿಸೈಡ್ ಮಾಡಿದೆ? ಅಪ್ಪ ಕೇಳಿದರು ಮುಂಜಾನೆ..
ಹೋಗ್ತೀನಿ ....ಉತ್ತರಿಸಿದೆ.
ಓಕೇ ಐ ವಿಲ್ ಅರೇಂಜ್ ಎವೆರಿತಿಂಗ್,ಮತ್ತೆ ಯಾರ್ ಯಾರು ನಿನ್ನ ಜೊತೆ ಬರ್ತಿದ್ದಾರೆ ಕೇಳಿದರು...
ಇಬ್ಬರು ದೊಸ್ತ್...ಹೇಳಿದೆ.
ಮಾತು ಮುಗಿದಿತ್ತು ,ಪತ್ರ ಬಂದಿತ್ತು ದಿನಾಂಕ ಕೂಡ ನಿಗದಿಯಾಗಿತ್ತು.
ನಾನು ಹೊರಡಲು ಸಿದ್ದನಾದೆ.
ಲಾಸ್ಟ್ ಟೈಮ್ ಐ ಥಾಟ್ ಆಫ್ ಮೀಟಿಂಗ್ ಹರ್ ಬಟ್ .....
ಮನಸ್ಸು ಮತ್ತು ಚಿಂತನೆಯ ಹೊಡೆದಾಟದಲ್ಲಿ ಮನಸ್ಸು ಮುರಿದಿತ್ತು ಚಿಂತೆಕಾಡಿತ್ತು ಟ್ರೈನ್ಗೆ ಟೈಮ್ ಆಗಿತ್ತು.
ನನ್ನ ಇಬ್ಬರು ಆಪ್ತ ಸ್ನೇಹಿತರೊಂದಿಗೆ ಟ್ರೈನ್ ಹತ್ತಿದೆ ಹೈದೆರಾಬಾದ್ಗೆ.
೪೯೭ ಮೈಲಿ ....ಸ್ನೇಹಿತ ನುಡಿದ.
ಇಬ್ಬರು ಸ್ನೇಹಿತರು ಅಂದರ್-ಬಾಹರ್ ಆಡ ತೊಡಗಿದರು.
ನನ್ನ ಅಂದರ್ರ್-ಬಹಾರ್ ಎರಡು ಸರಿ ಇಲ್ಲದ ಕಾರಣ ಡೋರ್ ಬಳಿ ಹೋಗಿ ನಿಂತೆ .
ಸಂಜೆ ಸೂರ್ಯ ಮುಳುಗುವ ಸಮಯ ಕಾಲಿ ಬೋಗಿ ತಂಪಾದ ಗಾಳಿ,ಟಾಟಾ ಮಾಡುವ ಸಣ್ಣ ಮಕ್ಕಳು,ಟ್ರೈನ್ ನನ್ನೇ ಸೋಲಿಸುವ ವೇಗದಲ್ಲಿ ಓಡುವ ಬೀದಿ ನಾಯಿಗಳು,ಮಧ್ಯ ಬರುವ ಕೆರೆ ಕೊಳ್ಳಗಳು,ಜಿಂಕೆ ನವಿಲುಗಳು....ಹಿತವಾದ ಅನುಭವ ನೀಡಿದ್ದು ಸುಳ್ಅಲ್ಲ.
ನಾನು ತಿಳಿದ ನಂಬಿದ ಓದಿದ ಉತ್ತರಗಳು ಪ್ರಶ್ನೆ ರೂಪಕ್ಕೆ ತಿರುಗಿದ್ದವು.
ಆ ಹುಡುಗಿಯ ಬಗ್ಗೆ ಯೋಚಿಸುತ್ತಾ ಡೋರ್ ನಲ್ಲೇ ಕುಳಿತೆ.
"ಲವ್ ಈಸ್ ಬ್ಲೈಂಡ್ ವಾಟ್ ಕ್ಯಾನ್ ಯೂ ಡೂ ಮೈ ಫ್ರೆಂಡ್" ನಿಜವೆನಿಸಿತು. ರಾತ್ರಿ ೧೧ ಆಗಿತ್ತು ನಿದ್ರೆ ಆವರಿಸಿತ್ತು.ಟ್ರೈನ್ ಸದ್ದು ಮಾಡುತಿತ್ತು.
ಸಂದರ್ಭ ೮.
"ಇಟ್ ವಾಸ್ ಏ ಡೇ ಫುಲ್ಲ್ ಆಫ್ ಕಾನ್ಫಿಡೆನ್ಸ್" ಅಂಡ್ ಇಟ್ ವಾಸ್ ಸನ್‌ಡೇ .....
ಮನೆಯಲ್ಲಿ ಸಾಮಾನ್ಯವಾಗಿ ಬೆಳಿಗ್ಗೆ ಸುಮಾರು ೫.೪೫ಏಮ್ ಗೆ ನಾನು ಏಳುವುದು ವಾಡಿಕೆ.
ಅಂದು ಸ್ವಲ್ಪ ತಡವಾಗಿ ಎದ್ದು ಜಾಗಿಂಗ್ ಗೆ ಹೊರಡಲು ಸಿದ್ದನಾದೆ,ವಿತ್ ಮೈ ಫ್ರೆಂಡ್ ಐ ವೆಂಟ್ .
ನಾವು ಸಾಮಾನ್ಯವಾಗಿ ಸುಮಾರು ೨-೨.೫ ಮೈಲಿ ಓಡುವುದು ಅನಂತರ ರೆಸ್ಟ್ ೧೫ಮಿನಿಟ್ ಅಗೈನ್ ಜಾಗಿಂಗ್ .
ಮಾವ ಆಮೇಲೆ ಸಿಗೋಣ ಕಾಲೇಜ್ ನಲ್ಲಿ.... ಹೇಳಿದ ಸ್ನೇಹಿತ.
ಓಕೇ ಶಿವ...ಉತ್ತರಿಸಿದೆ.
ಅವು ಕಾಲೇಜ್ ಗೆ ಹೋಗುವ ದಿನಗಳು "ಐ ವಾಸ್ ಇನ್ ಪ್ರೀಫೈನಲ್ಯಿಯರ್ ಅಂಡ್ ಇಟ್ ವಾಸ್ ವೆರೀ ಫೈನ್."
ಮನೆಯಿಂದ ಬುಸ್ಸ್ಟಾಂಡ್ ನಂತರ ಬುಸ್ಸ್ಟಾಂಡ್ ಟು ಕಾಲೇಜ್ ಸುಮಾರು ೩೦ಮೈಲಿ
ಜೋಕ್ಸ್ ಅಂಡ್ ಕಾಮೆಡೀ ಇದ್ದ ದಿನಗಳು ಅಂದರೆ ಐ ಕ್ಯಾನ್ನಾಟ್ ಎಕ್ಸ್‌ಪ್ಲೇನ್.
ನನ್ನ ಗೆಳೆಯರಲ್ಲಿ ಕೆಲವರು ಇನ್ ಏ ರಿಲೇಶನ್ಶಿಪ್ ಹಣೆಪಟ್ಟಿ ಯವರಾಗಿದ್ದರೆ ನಾವು ಸಿಂಗಲ್ ಅಂಡ್ ಅವೇಲಬಲ್, ಬಟ್ ನೋ ವನ್ ಈಸ್ ಇಂಟ್ರೆಸ್ಟೆಡ್.
ಮಾವ,ಮಾಮ ಬಹು ಬಳಕೆಯ ಪದಗಳು ಯಾರಾದರೂ ನಿಮಗೆ ಮಾವ ಎಂದು ಕರೆದರು ಅವನು ನಿಮ್ಮ ಸ್ವಂತ ಅಣ್ಣನಿಗಿಂತ ಆಪ್ತ ಎಂಬ ಸಂಕೇತ.
ಬಟ್ ಪೀಪಲ್ ಆಲ್ವೇಸ್ ಗೇಟ್ ಇಟ್ ರಾಂಗ್...ನಮ್ಮ ರುಚಿವುಳ್ಳ ಕನ್ನಡ ಭಾಷೆ ನೀವು ಜೀರ್ಣಮಾಡಿಕೊಳ್ಳಲು ಅದನ್ನು ಪ್ರೀತಿಸಬೇಕಷ್ಟೇ. ಅದು ಡಿಗ್ರೀ ಅಥವಾ ಮಾಸ್ಟರ್ಸ್ ನಿಂದ ಬರುವುದಿಲ್ಲ .
"ಹಾಗಾದರೆ ಮಧ್ಯ ಮಧ್ಯ ಎಂಗ್ಲೀಷ್ ಪದ ಬಳಕೆ ಏಕೆ?" ನನ್ನ ಗೆಳೆಯನ ಪ್ರಶ್ನೆ.
ನಿಜ ಹೇಳಬೇಕೆಂದರೆ ನನಗೆ ಉತ್ತರ ಗೊತ್ತಿರಲಿಲ್ಲ ನಾನು ಸರಿಪಡಿಸುತ್ತೇನೆ ಎಂದಷ್ಟೇ ಹೇಳಿ ಸುಮ್ಮನಾದೆ...
ನನಗೆ ಕೆಲಸವಿದೆ ಆಮೇಲೆ ಸಿಗುತ್ತೇನೆ ಬರ್ಲ...ಗೆಳೆಯ ಹೊರಟ.
ಓಕೇ ಬೈ..... ಎಂದು ಹೊತ್ತಿಗೆ ಮಡಚಿ ಹೊರನಡೆದೆ.
ಈಟ್ಸ್ ಆ ಗುಡ್ ಸ್ಟೋರೀ ಕಣ್ಲಾ ಕೀಪ್ ಇಟ್ ಅಪ್ ಮುಂದಿನ ಭಾಗ ಕೇಳಲು ನಂಗೆ ಕುತೂಹಲವಿದೆ ಎಂದು ಪ್ರಸಂಶೆ ಕೊಟ್ಟು ಹೊರಟ ನನ್ನ ಆರ್ಮೀಯ ಗೆಳೆಯ.
ಅದು ನನ್ನ ಆರ್ಮೀ ಬದುಕಿನ ೩ನೇ ವರ್ಷ ತುಂಬಿದ ದಿನಗಳು "ಎಸ್ ಇಟ್ ವಾಸ್ ವಂಡರ್‌ಫುಲ್ ".
ಮೇ ಐ ಕಮ್ ಇನ್ ಸರ್? ಧ್ವನಿ ಬಂತು.
ಎಸ್..ಧ್ವನಿ ಮಾಡಿದೆ.
ಸಲ್ಯೂಟ್ ಮಾಡಿ ....
ಲ್ಯೂಟೆನೆಂಟ್ ಆರ್ ಯೂ ರೆಡೀ...? ಸೋಲ್ಜರ್ ಕೇಳಿದ.
ಯ ಐ ಅಮ್.....