"ಯಾರೂ ಅರಿಯದ ವೀರರು"

"ಯಾರೂ ಅರಿಯದ ವೀರರು"

ಬರಹ

ಕನ್ನಡದ ಪುಸ್ತಕಲೋಕದಲ್ಲಿ ಅವಿಷ್ಕಾರಗಳು ನಡೀತಾನೇ ಇರುತ್ತವೆ. ಮಕ್ಕಳ ಸಾಹಿತ್ಯದಲ್ಲೂ ಇಂತಹ ಪ್ರಯೋಗಗಳಿಗೆ ಕೊರೆತೆಯಿಲ್ಲ. ಮಕ್ಕಳ ಮನ ತಟ್ಟುವ...ಮನರಂಜಿಸುವ ಅದೆಷ್ಟೋ ಪುಸ್ತಕಗಳು ಪ್ರಕಟಗೊಂಡಿವೆ. ಕಾಮಿಕ್ ಪುಸ್ತಕಗಳು ಇದೆ ಸಾಲಿಗೆ ಸೇರುವ ಮತ್ತೊಂದು ಸಚಿತ್ರ ಸಾಹಿತ್ಯವೆಂತಲೇ ಹೇಳಬಹುದು. ಆದ್ರೆ, ಸಾಹಿತಿ ತಿರುಮಲೆ ಎಂ.ಎಸ್.ರಾಮಮೂರ್ತಿ ನಿಜಕ್ಕೂ ಹೊಸ ಪ್ರಯೋಗ ಮಾಡಿದ್ದಾರೆ. ಅಂದ್ರೆ, ಮಕ್ಕಳ ಇಷ್ಟಪಡುವ ವಿಷಯವನ್ನೆ ಆಧರಿಸಿ ಇಡೀ ಕಾದಂಬರಿಯನ್ನ ರಚಿಸಿದ್ದಾರೆ..

ಕಾದಂಬರಿ ಮುಖ ಪುಟ ನೋಡಿದರೆ ಮಕ್ಕಳ ಪುಸ್ತಕವೇ ಅಂತಹ ಹಿರಿಯರು ದೂರ ಸರಿಯಬಹುದು. ಆದ್ರೆ, ಓದುತ್ತಾ..ಓದುತ್ತಾ ಹೋದಂತೆ ಕಾದಂಬರಿ ಆಪ್ತವಾಗುತ್ತದೆ. ಕಾಡು ಪ್ರಾಣಿಗಳ ಜೀವನದ ಅರಿವು ಮೂಡುತ್ತಾ ಹೋಗುತ್ತದೆ. ಮೊದಲ ಅಧ್ಯಾಯದಲ್ಲೆ ಲೇಖಕರು ಓದುಗರನ್ನ ಹಿಡಿದಿಡುವ ನಿರೂಪಣೆ ಆರಂಭಿಸುತ್ತಾರೆ. ಮೊದಲ ಒಂದರೆಡು ಪ್ಯಾರಾಗಳು ಏನೂ ಅನಿಸುವುದಿಲ್ಲ. ಓದು ಮುಂದೆ ಸಾಗಿದಂತೆ, ಕಾಡು ಪ್ರಾಣಿಗಳ ಜೀವನ ಶೈಲಿ ಆಶ್ಚರ್ಯಗೊಳಿಸುತ್ತದೆ, ಏಕೆಂದ್ರೆ, ಪ್ರಾಣಿಗಳು ಆಡುವ ಮಾತು-ಕಥೆಗಳು ನಮ್ಮ-ನಿಮ್ಮ ದೈನಂದಿನ ಜೀವನದಲ್ಲಿ ಇರುವ ಹಾಗೇನೆ ಸಂಭಾಷಣೆಗಳಿವೆ. ಹಾಗಾಗಿ, ಕಾಂಬರಿಯ ಮೊದಲ ಅಧ್ಯಾಯ ನಿಮ್ಮನ್ನ ದಟ್ಟ ಕಾಡಿನ ದರುಶನ ಮಾಡಿಸುತ್ತಲೇ ಮುನ್ನಡೆಯುತ್ತದೆ...

ಇದರೊಟ್ಟಿಗೆ ಕಾಡು ಪ್ರಾಣಿಗಳಾದ ಗಂಭೀರ-ರಾಜ (ಸಿಂಹ), ಗಜೇಂದ್ರ-ಮಂತ್ರಿ (ಆನೆ), ಕರಿಯ-ಕಾಡು ಕೋಣಗಳ ನಾಯಕ , ಹನುಮ-ಕೋತಿಗಳ ನಾಯಕ, ಮನೋಹರ - ಸಾರಂಗಳ ನಾಯಕ, ಭೈರವ-ಕಾಡಿನ ಕ್ರೂರ ಹುಲಿ, ರಾಮಸೇವಕ (ಅಳಿಲು), ಭೂಪತಿಯ-ಆನೆಗಳ ನಾಯಕ, ನವನೀತ-ಪಕ್ಷಿಗಳ ನಾಯಕ, ಚತುರ- ನರಿಗಳ ನಾಯಕ. ರೀತಿ ನಮ್ಮ ನಡುವಿನ ನಾಯಕರ ಕಲ್ಪನೆಯೂ ಇಲ್ಲಿ ಬಂದು ಹೋಗುತ್ತದೆ....

ಆದ್ರೆ, ಲೇಖಕರು ಪ್ರಾಣಿಗಳ ಬಗೆಗಿನ ಸಣ್ಣ ಕಥೆಗಳನ್ನೇ ಬರೆಯಲು ಕುಳಿತಿದ್ದರಂತೆ. ಪಾತ್ರಗಳು ಇವರಿಂದ ಕಾದಂಬರಿಯನ್ನೇ ಬರೆಸಿಹಾಕಿವೆ. ಕಾರಣ, ಕಥೆಯಲ್ಲಿ ಬರುವ ಪ್ರತಿ ಪಾತ್ರವೂ ಒಂದೊಂದು ಕಥೆ ಹೇಳುತ್ತವೆ. ಅವುಗಳ ಸುತ್ತಣ ಬದುಕನ್ನು ನಿರೂಪಿಸಿಬಿಡ್ತವೆ. ಹಾಗಾಗಿ, "ಯಾರೂ ಅರಿಯದ ವೀರರು" ಕಾದಂಬರಿಯಲ್ಲಿ ಅಧ್ಯಾಗಳ ಸೃಷ್ಟಿಯಾಗಿದೆ. ಒಂದೊಂದು ಅಧ್ಯಾಯವೂ ಪ್ರಾಣಿಗಳ ಜೀವನದ ಮೇಲೆ ಬೆಳಕು ಚೆಲ್ಲುತ್ತಲೇನೇ ಕಾಡಿನ ಕಥೆ ಹೇಳುತ್ತವೆ...

ಕಥೆಯಲ್ಲಿ ಕೇವಲ ಪ್ರಾಣಿ ಪಕ್ಷಿಗಳಿಲ್ಲ. ಅರಣ್ಯ ನಾಶ ಮಾಡುವ ಮನುಷ್ಯರೂ ಬಂದು ಹೋಗುತ್ತಾರೆ. ಅದರಿಂದ ಪ್ರಾಣಿಗಳಿಗೆ ಆಗುವ ಅನಾಹುತಗಳ ಅನಾವರಣವೂ ಇಲ್ಲಿ ಆಗುತ್ತದೆ. ಕಾಡ ಬಿಟ್ಟು ನಾಡಿಗೆ ಪ್ರಾಣಿಗಳು ಏತಕ್ಕೆ ಬರುತ್ತವೆಂಬ ಸತ್ಯವೂ ಕಾದಂಬರಿಯಲ್ಲಿ ವ್ಯಕ್ತವಾಗುತ್ತವೆ...ಪ್ರಾಣಿಗಳನ್ನ ಉಳಿಸಿ..ಕಾಡು ಬೆಳಸಿ ಅನ್ನೋ ಸಂದೇಶವೂ ಕಥೆಯ ಮೂಲಕ ಆಗಾಗ ಮನತಟ್ಟುವಂತೆ ಹೇಳುವ ಪ್ರಯತ್ನವೂ ಆಗುತ್ತದೆ...

ತಿರುಮಲೆ ಎಂ.ಎಸ್.ರಾಮಮೂರ್ತಿಯವರ ಎರಡನೇ ಕೃತಿಯನ್ನ ನವರಸ ಕನ್ನಡ ಪ್ರಕಾಶನವರು ಪ್ರಕಟಿಸಿದ್ದಾರೆ. ೧೦೦ ರುಪಾಯಿ ಬೆಲೆಯ ಕಾದಂಬರಿ ಸುಮಾರು ೫೨ ಅಧ್ಯಾಗಳನ್ನ ಹೊಂದಿದೆ. ಚಿಕ್ಕ ಚಿಕ್ಕ ಕಥೆಯ ಪುಸ್ತಕ ಓದಿಸಿಕೊಂಡು ಹೋಗುತ್ತದೆ..ಓದಿ ನೋಡಿ...ನಿಮಗೂ ಅನಿಸುತ್ತದೆ...

- ರೇವನ್ ಪಿ.ಜೇವೂರ್