ಮನುಷ್ಯನನ್ನು ಲಿಬರೇಟ್ ಮಾಡುತ್ತಲೇ ಹೋಗುವ `ಒಂದು ಕೈಫಿಯತ್'

ಮನುಷ್ಯನನ್ನು ಲಿಬರೇಟ್ ಮಾಡುತ್ತಲೇ ಹೋಗುವ `ಒಂದು ಕೈಫಿಯತ್'

ಬರಹ

ಚಂದ್ರಕಾಂತ ಕುಸನೂರರ ಹೊಸ ಕಾದಂಬರಿ `ಒಂದು ಕೈಫಿಯತ್' ಈ ದಿಸೆಯಲ್ಲಿ ಒಂದು ಹೊಸತನದ, ವಿಶಿಷ್ಟ ಪ್ರಯೋಗ. ಕುಸನೂರರ ಮೂಲಭೂತ ಕಾಳಜಿ ಮನುಷ್ಯನನ್ನು ಎಲ್ಲದರಿಂದ ಲಿಬರೇಟ್ ಮಾಡಿಯೂ ಅವನ ಜೀವನಾಸಕ್ತಿಯನ್ನು ಸಾಯಿಸದೇ, ಸಂನ್ಯಾಸಿಯಾಗಿಸದೇ ಬದುಕಿನೊಳಗೇ ಇರಿಸಿ ಈ ಶೋಧವನ್ನು ನಡೆಸಬೇಕೆನ್ನುವುದು. ಒಂದು ಅರ್ಥದಲ್ಲಿ ಇಲ್ಲಿರುವುದು ಒಂದು ಸಂಘರ್ಷ. ಕಾದಂಬರಿ ಮಾತು, ವಿವರ, ನೋಟಗಳಿಗಿಂತ ಮೌನ, ಅಮೂರ್ತ ಮತ್ತು ಅನೂಹ್ಯಗಳನ್ನೆ ಹೆಚ್ಚು ನೆಚ್ಚಿಕೊಂಡಿರುವಂತಿದೆ. ನಿಜಕ್ಕೂ ಇದೊಂದು ವಿಶಿಷ್ಟ ಪ್ರಯೋಗ, ಹೊಸತನದಿಂದ ಕೂಡಿದ ಕಾದಂಬರಿ.

 

ಕಾದಂಬರಿಯ ಹೆಸರು : ಒಂದು ಕೈಫಿಯತ್

ಪ್ರಕಾಶಕರು: ಪ್ರಗತಿ ಗ್ರಾಫಿಕ್ಸ್, ೧೧೯, ೩ನೆಯ ತಿರುವು, ೮ನೆಯ ಮುಖ್ಯ ರಸ್ತೆ, ಆರ್.ಪಿ.ಸಿ. ಬಡಾವಣೆ, ಬೆಂಗಳೂರು - ೫೬೦ ೦೪೦ (೦೮೦ ೨೩೪೦೯೫೧೨)

ಪುಟಗಳು :೧೨೦ ಬೆಲೆ: ೬೦.೦೦