ಮನದ ಮುಂದಣ ಮಾಯೆ

ಮನದ ಮುಂದಣ ಮಾಯೆ

ಬರಹ

ಪ್ರಹ್ಲಾದ ಅಗಸನಕಟ್ಟೆಯವರ `ಮನದ ಮುಂದಣ ಮಾಯೆ' ಸಂಕಲನಕ್ಕೆ ಸಾಹಿತ್ಯ ಅಕೆಡಮಿಯ ಪುರಸ್ಕಾರ ಸಂದಿದೆ. ಈ ಸಂಕಲನದಲ್ಲಿ ಒಟ್ಟು ಹನ್ನೆರಡು ಕಥೆಗಳಿವೆ. ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘ ಹೊರತಂದಿದೆ.

ಅಗಸನಕಟ್ಟೆಯವರ ಕಥೆಗಳ ಓದು ಒಂದು ಚೇತೋಹಾರಿ ಅನುಭವವನ್ನು ನೀಡುವ ಕಸು ಹೊಂದಿವೆ. ಇನ್ನಷ್ಟು ಮತ್ತಷ್ಟು ಇಂಥ ಕಥೆಗಳನ್ನು ಓದುವ ಆಸೆಯನ್ನು ಇವು ಹುಟ್ಟಿಸುತ್ತವೆ. ಇಲ್ಲಿನ ಪ್ರತಿಯೊಂದು ಕಥೆಯೂ ನಮಗೆ ಯಾವುದೋ ಹೊಸ ಒಳನೋಟ, ಜೀವನ ದರ್ಶನ, ಬದುಕಿಗೆ ಒಂದು ಕಾಣ್ಕೆ ನೀಡುತ್ತವೆ ಎನ್ನಲಾಗದು. ಆದರೆ ಈ ಓದು ಕೊಡುವ ಖುಶಿ ಕೇವಲ ಮನರಂಜನೆಯದ್ದಲ್ಲ. ಅದು ನಿರ್ಮಿಸುವ ಒಂದು ವಾತಾವರಣ, ಅವು ತೆರೆದು ತೋರಿಸುವ ಒಂದು ಸಹಜ ಬದುಕು, ಥಟ್ಟನೇ ಅಪ್ತವಾಗುವ ಅವರ ನಿರೂಪಣಾ ವಿಧಾನ, ನಡುನಡುವೆ ಬರುವ ಅನನ್ಯವಾದ ಕೆಲವು ಅಪರೂಪದ ಕಥೆಗಳು - ಈ ಎಲ್ಲ ಕಾರಣಗಳಿಗಾಗಿ ಮತ್ತೆ ಮತ್ತೆ ಮುಖ್ಯವೆನಿಸುವ ಕಥೆಗಾರ ಅಗಸನಕಟ್ಟೆ.

(ಶ್ರೀ ಮಹಾಬಲಮೂರ್ತಿ ಕೂಡ್ಲೆಕೆರೆಯವರ ಒಂದಲ್ಲಾ ಒಂದೂರಿನಲ್ಲಿ ಹೆಸರಿನ ಕಥೆಗಳಿಗಾಗಿಯೇ ಇರುವ ಹೊಸಪತ್ರಿಕೆಯಲ್ಲಿ ಪ್ರಕಟಿತಲೇಖನದ ಆಯ್ದ ಭಾಗ).