ದೇವ ದರ್ಶನ (ಶ್ರೀನರಸಿಂಹ 18)

ದೇವ ದರ್ಶನ (ಶ್ರೀನರಸಿಂಹ 18)

ಜಗವನು ನೋಡುವ ಅಕ್ಷಿಯದು ಕಾಣಿಸದು ನಮಗೆ

ಕನ್ನಡಿಯು ಬೇಕಿಹುದು  ಕಾಣಲು ನಮ್ಮಕ್ಷಿ ನಮಗೆ

ದೇವನಿರುವಿಕೆಯು ಅಂತೆ ಅಕ್ಷಿಗೆ ಕಾಣದಂತಿಹುದು

ದೇವರನು ಕಾಣೆ ಭಕ್ತಿಯೆನುವ ಕನ್ನಡಿ ಬೇಕಿಹುದು

 

ಸಾಕಾರ ನಿರಾಕಾರಗಳೆ ದೇವರೂಪಗಳಾಗಿಹವು

ಸಾಧನೆಯ ಮಾಡಿ ಪಡೆಯ ಬೇಕಿಹ ಅನುಭವವು

ಭಕ್ತಿ ಮಾರ್ಗದಲಿ ಸಾಗುವುದೆ ಸುಲಭ ಸಾಧನೆಯು

ಮನಸಿನಲಿ ಇರಿಸಬೇಕಿಹುದು ಅಚಲ ನಂಬಿಕೆಯು

 

ಎಲ್ಲ ಜೀವಿಗಳಲಿ ದೇವನಿರುವನು ಎನುವ ಸತ್ಯವನು ತಿಳಿದು

ಸಮದೃಷ್ಠಿ ಎಲ್ಲರಲಿರಿಸೆ ಹರಸುವನು ಶ್ರೀನರಸಿಂಹ ಒಲಿದು
Rating
No votes yet

Comments