ಸರಕಾರಕ್ಕೆ ಮುಖಭಂಗ - ಅಣ್ಣಾ ಹಜಾರೆ ಮತ್ತು ತಂಡದ ವಿಜಯ?

ಸರಕಾರಕ್ಕೆ ಮುಖಭಂಗ - ಅಣ್ಣಾ ಹಜಾರೆ ಮತ್ತು ತಂಡದ ವಿಜಯ?

  ಲೋಕಪಾಲ ಮಸೂದೆ ಲೋಕಸಭೆಯಲ್ಲಿ ಪಾಸಾದರೂ ಆ ಸಂಬಂಧದ ಸಂವಿಧಾನ ತಿದ್ದುಪಡಿ ವಿಧೇಯಕ ಸೋಲುಂಡಿದೆ. ಒಂದರ್ಥದಲ್ಲಿದನ್ನು ಕೇಂದ್ರ ಸರಕಾರದ ಮುಖಭಂಗ ಎನ್ನುವವರೂ ಇದ್ದಾರೆ. ಹಾಗೂ ಇರಬಹುದು. ಲೋಕಪಾಲ ಮಸೂದೆ, ಮಹಿಳಾ ಮೀಸಲಾತಿ ಮಸೂದೆಯಂತೆ ರಾಜಕೀಯ ತುಯ್ದಾಟಕ್ಕೊಂದು ಹಗ್ಗ, ಕಗ್ಗ. ಅಷ್ಟಲ್ಲದೆ, ದೇಶದಿಂದ ಭ್ರಷ್ಟಾಚಾರ ಹೊಡೆದೋಡಿಸುವ ಪ್ರಾಮಾಣಿಕತೆ, ನಿಶ್ವಯಗಳ ಲಕ್ಷಣವೇನೂ ಇದರರಲ್ಲಿಲ್ಲ. ಆದ್ದರಿಂದ ಸರಕಾರದ ಸೋಲು, ಅಣ್ಣಾ ಹಜಾರೆ ತಂಡದ ರಾಜಕೀಯ ಗೆಲುವೆನ್ನಬಹುದು.
  ಲೋಕಾಯುಕ್ತ, ವಾರಕ್ಕಿಬ್ಬರು-ಐವರು, ಶತಕೋಟಿ, ದಶಕೋಟಿ ದಂಧೆಕೋರ ಆರೋಪಿಗಳನ್ನು ಹಿಡಿದು ಹಾಕಿಲ್ಲವೇ? ಮಂತ್ರಿ ಮಹೋದಯರನ್ನೂ, ಶಾಸಕ ಮಹಾಶಯರನ್ನೂ ಬಿಡದೆ, ಮುಖ್ಯಮಂತ್ರಿಗೇ ಜೈಲು ಕಂಬಿ ತೋರಿಸಿಲ್ಲವೇ? ಇದರಿಂದ ಅವರ ಪ್ರತಿಷ್ಠೆ, ಪ್ರಾಬಲ್ಯ ಮತ್ತು ದುಷ್ಟಾಚಾರಕ್ಕೆ ಒಂದಿಷ್ಟಾದರೂ ಮುಕ್ಕಾದಿದ್ದಿದೆಯೇ?
 ನಮ್ಮಲ್ಲಿನ ಪ್ರಜಾಪ್ರಭುತ್ವವೇ ಭಂಡರು, ಭಂಡರಿಂದ, ಭಂಡರಿಗಾಗಿ ನಡೆಸುವ ಕಾರುಭಾರಾಗಿದೆ. ಈ ಸಮಾಜದಲ್ಲೂ ಸಭ್ಯರೆನಿಸುವವರಿದ್ದಾರೆ; ಅವರು ಬಹುಸಂಖ್ಯೆಯಲ್ಲೇ ಇದ್ದಾರೆ. ಆದರೆ ಭಂಡ ವ್ಯವಸ್ಥೆ, ಅವರ ದನಿ ಅಡಗಿಸಿಟ್ಟಿದೆ.
 ಯಾರೋ ಒಬ್ಬ, ಸಾರ್ವಜನಿಕರ ಎಷ್ಟೆಷ್ಟೋ ಕೋಟಿ ಗುಳಕಾಯಿಸಿದರೆ, ಅಂಥ ವ್ಯಕ್ತಿಗೆ ಎಕ್ಸೆಂಪ್ಲರಿ ಶಿಕ್ಷೆಯಾಗಲಿ; ಅದಷ್ಟಕ್ಕೇ ಚಳುವಳಿ ಧನ್ಯವಾಗದು. ಇಂತಹ ಸ್ವಾಹಾಕಾರದ ಅವಕಾಶವೇ ಇರಬಾರದು; ಶೇ. 50+ ಮತ ಪಡೆದವರು ಮತ್ರಾ ಪ್ರಜಾಪ್ರತಿನಿಧಿಗಳಾಗುವಂತೆ ಚುನಾವಣಾ ಸುಧಾರಣೆಯಾಗದೆ, ಭ್ರಷ್ಟಾಚಾರ ವಿರೋಧಿ ಬರಿ ಕೂಗು, ರಾಜಕೀಯದ ಸೋಗು!
 

Rating
No votes yet