ಅ ಕಪ್ ಓಫ್ ಕಾಫಿ ... ಸಿಪ್ - ೨೫

ಅ ಕಪ್ ಓಫ್ ಕಾಫಿ ... ಸಿಪ್ - ೨೫

ಸಿಪ್ - ೨೫

 

 

ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....

ಹಿಂದಿನ ಸಿಪ್ 



ಕೊರೆಯುವ ಚಳಿಯಲ್ಲಿ, ನಡುರಾತ್ರಿಯ ಮೂರುವರೆ ಸುಮಾರಿಗೆ ಎಚ್ಚರಾದೆ; ರೂಂ ನ ಮಂಚದ ಮೇಲೆ ನಾನು ಬಿದ್ದಿದ್ದೆ, ಬರೇ ಒಳ ಅಂಗಿಯಲ್ಲಿ ಕೊರೆಯುವ ಚಳಿಯಲ್ಲಿ ಒಂಟಿಯಾಗಿ. ರೂಂ ನ ದೀಪ ಇನ್ನು ಉರಿಯುತ್ತಿತ್ತು, ಹೊರಗಿನ ಬಾಗಿಲಿಂದ ತಂಗಾಳಿ ನುಸುಳಿ ಬರುತಿತ್ತು; ಬಾಗಿಲು ಅರ್ಧ ತೆರೆದೇ ಇತ್ತು. ಕಣ್ಣುಜ್ಜಿ ಕ್ಕೊಂಡು ಜ್ಯಾಪಿಸಲು ಪ್ರಯತ್ನಿಸಿದೆ.

ಅರ್ಧ ಗಂಟೆ ಮುಂಜೆ ಏರಿಸಿದ ರಂ ನ ರಮ್ಮು ಇನ್ನು ದೇಹದೊಳಗೆ ಇತ್ತು, ಒಮ್ಮೆ ತೆಲಾಡಿಸಿ ಮತ್ತೊಮ್ಮೆ ಜೆರ್ಕ್ ಕೊಡುತ್ತಿತ್ತು. ಬೈಕ್ ನಲ್ಲಿ ಮರಳುವಾಗ ಅಲ್ಲೋಲ ಕಲ್ಲೋಲ ವೆನಿಸಿದರೂ , ಖಾಲಿ ರೋಡ್ ನಲ್ಲಿ ಯಾವುದೇ ತೊಂದರೆ ಎನಿಸದೆ ಪ್ರೀತಿಯನ್ನು ಹಾಸ್ಟೆಲ್ ನಲ್ಲಿ ಬಿಟ್ಟು ರೂಂ ತಲುಪಿದ್ದೆ, ಪ್ಯಾಂಟ್ ಕಳಚಿದ್ದು ನೆನಪಿದೆ; ಯಾವಾಗ ನಿದ್ದೆ ಹತ್ತಿತೋ ತಿಳಿಯಲಿಲ್ಲ.ಚಳಿಯಲ್ಲಿ ದೇಹವೆಲ್ಲ ಬಿಸಿಯಾಗಿತ್ತು.

ಸತ್ಯದ ಮಂಥನಕ್ಕೆ ಸಿಪ್ ಇಳಿಸುತ್ತಾರೆ ಅಂದು ಕೊಂಡಿದ್ದೆ, ನನ್ನ ಅಸ್ತಿತ್ವವೇ ಮರೆತು ಹೋಗಿತ್ತು; ಹಾಟ್ ಡ್ರಿಂಕ್ಸ್ ಶಕ್ತಿ ತುಂಬುತ್ತದೆ ಎನ್ನುತ್ತಿದ್ದರು ಕಾಂಪೌಂಡ್ ನಲ್ಲಿ ಕುಡಿಯುತಿದ್ದ ಸಹಪಾಟಿಯರು ಆದರೆ ಇಲ್ಲಿ ಚೆನ್ನೈನಿಂದ ಬಂದ ಮೆಸ್ಸೇಜ್ ಗೆ ರಿಪ್ಲೈ ಟೈಪ್ ಮಾಡಲಾಗದಷ್ಟು ಸುಸ್ತು ನನ್ನನ್ನು ಆವರಿಸಿತ್ತು; ಬಾಗಿಲಿಗೆ ಚಿಲಕ ಏರಿಸುವುದಕ್ಕೂ ಆಲಸ್ಯ, ಬಟ್ಟೆ ಹಾಕಲು ತ್ರಾಣ ವಿರಲಿಲ್ಲ; ಕಳಚಿದ ಬಟ್ಟೆಯ ನಡುವಲ್ಲೇ ಬಿದ್ದುಕ್ಕೊಂಡಿದ್ದೆ.

ಬೆಡ್ ನಿಂದ ಎದ್ದು ತ್ರೀ ಫೋರ್ಥ್ ಹಾಕಿ, ಸ್ವೆಟರ್ ಧರಿಸಿಕ್ಕೊಂಡೆ, ಹೋಗಿ ಬಾಗಿಲು ಮುಚ್ಚಿ, ಸೊಳ್ಳೆ ಬತ್ತಿ ಹಚ್ಚಿ ಟ್ಯೂಬ್ ಆರಿಸಿ ಮಲಗಿದೆ.

ನಿದ್ದೆ ಹತ್ತಲಿಲ್ಲ, ಮತ್ತೆ ಮಗ್ಗುಲು ಬದಲಾಯಿಸಿದೆ, ನಿದ್ದೆಯ ಸುಳಿವಿಲ್ಲ.

"ಒಮ್ಮೆ ನಿದ್ದೆ ಹತ್ತಿದರೆ, ಚಳಿಯಲ್ಲಿ ಮತ್ತೆ ಎಚ್ಚರ ಆಗದು, ಬೆಳಗ್ಗಿನ ಕೌಸಲ್ಯ ಸುಪ್ರಜಾ ರಾಮಾ ಕೂಡ ಯಾವುದೋ ಶೆಹನಾಯಿಯಂತೆ ಕೇಳುವುದು ಈ ಚಳಿಯಲ್ಲಿ, ಆದ್ರೆ ನಡುವಲ್ಲಿ ಎಚ್ಚರ ಆದ್ರೆ ಏನೆಲ್ಲಾ ಕೋರಿಕೆಗಳು, ಬೇಡಿಕೆಗಳು, ಈಡೆರಿಕೆಯ ವಾಂಛೆಗಳು, ಕಡೆಗೆ ನಿದ್ರೆ ಬರದ ರಾತ್ರಿಗಳು, ಬರಿ ನಡುಕ"

ನಿಶ್ಯಬ್ದ ರೂಮಿನಲ್ಲಿ ಗೋಡೆ ಗಡಿಯಾರದ ತಿಕ್ಟಿಕ್ ಮಾತ್ರ ಕೇಳುತಿತ್ತು, ಸೊಳ್ಳೆಗಳೂ ಅಮಲೇರಿ ಮಂಚದ ಅಡಿ ಸೇರಿದ್ದವು. ಮನಸ್ಸು ಈಗ ಸತ್ಯ ಮಂಥನ ಮಾಡುತಿತ್ತು.ಒಳಗಿನ ಅಲ್ಕೋಹಾಲ್ ಮಂಥನ. ಪಾಪ ಪ್ರಜ್ಞೆ ಕಾಡುತಿತ್ತು; ಪ್ರೀತಿಗೆ ನಾನು ಅವಳ ಹುಟ್ಟುಹಬ್ಬದ ದಿನ ವಿವೇಕ್ ಕೊಡಿಸಿದ ಸುರ್ಪ್ರೈಸ್ ಹೇಳ ಬೇಕಿತ್ತು, ಸ್ವಾರ್ಥಕ್ಕಾಗಿ ಒಂದು ಪ್ರೇಮವನ್ನೇ ಚಿವುಟಿದೆ ಎಂದು ಒಂದು ಬದಿಯಲ್ಲಿ ಕಾಡುತಿದ್ದರೆ, ಅದಕ್ಕೆ ಇನ್ನೊಂದು ಭಾಗದ ಮನಸ್ಸು ನೀನು ಯಾವುದೇ ತಪ್ಪು ಮಾಡಿಲ್ಲ, ಅವರವರ ನಡುವೆ ಹೊಂದಿಕೊಂಡು ಹೋಗುವ ಗುಣ ವಿರಲಿಲ್ಲ, ಇದ್ದರೆ ನಿನ್ನ ಸಹಾಯ ಬೇಡುತ್ತಿರಲಿಲ್ಲ, ನಿನ್ನಲ್ಲಿ ಒಬ್ಬರು ಇನ್ನೊಬ್ಬರನ್ನು ದೂರುತ್ತಿರಲಿಲ್ಲ ಎಂದು ಸಾಂತ್ವನ ನೀಡುತ್ತಿತ್ತು.

ಸಮಾಧಾನ ಗೊಂಡ ಮನಸ್ಸಿನಲ್ಲಿ ಮತ್ತೆ ಪ್ರಶ್ನೆ ಕಾಡಲಾರಮ್ಬಿಸಿತು 'ಯಾಕಾದರೂ ನಾನು ಪ್ರೀತಿಯ ಬಗ್ಗೆ ಸ್ವಾರ್ಥಿಯಾದೆ...?'
ಅವಳಲ್ಲಿ ಮೋಹಿತ ನಾದೇನೋ, ಇಲ್ಲ ಗೊತ್ತಿಲ್ಲದೇ ಅವಳಲ್ಲಿ ಪ್ರೇಮ ಪಾಶಕ್ಕೆ ಬಿದ್ದಿರುವೇನೋ...? ಹಲವು ಪ್ರಶ್ನೆಗಳು ಒಂದೊಂದಾಗಿ ಮೇಲೇಳಲು ಶುರುಮಾಡಿದವು.
'ಇಲ್ಲಾ ಅವಳಲ್ಲಿ ಪ್ರೀತಿ ಇಲ್ಲ, ಇದ್ದರೆ ಬರೇ ಗೆಳೆತನ,ಅದಕ್ಕೆ ಹೊರತಾದ ಇನ್ನೊಂದು ಶಬ್ದ ಇಲ್ಲ'
'ಆದ್ರೆ ಯಾಕಾಗಿ ನೀನು ಆಕೃತಿಯ ಅನುಪಸ್ತಿತಿಯಲ್ಲಿ ಪ್ರೀತಿಗೆ ಹತ್ತಿರವಾದೆ..? ಸಂಧರ್ಭವನ್ನು ಬಳಸಿದೆ ?'
'ಇಲ್ಲ, ಹತ್ತಿರವಾಗಿಲ್ಲ, ಆಕೃತಿ ಇರುವಾಗ ಇಷ್ಟೊಂದು ಸಲುಗೆ ತೋರಿಸಿ ಕೊಟ್ಟಿರಲಿಲ್ಲ, ಆ ಸಲುಗೆ ಅವಳಿಲ್ಲದಾಗ ಹೊರ ಬಂತು ಅಷ್ಟೇ'
'ನಾಳೆ ಆಕೃತಿ ಬಂದಾಗ ಈಗಿರುವ ಸಲುಗೇನೆ ಮುಂದುವರಿಸುತ್ತಿಯಾ...?'
'ಇಲ್ಲ, ಸಾದ್ಯವಿಲ್ಲ'
'ಅಂದ್ರೆ, ಪ್ರೀತಿಯನ್ನು ಬಿಡುತ್ತೀಯ..?'
'ಹೌದು, ಆದ್ರೆ..'
'ಬಿಡಲು ಇಷ್ಟ ಇಲ್ಲ ಅಲ್ಲ..?'
'ಇಲ್ಲ, ಬಿಟ್ಟು ಬಿಡ ಬಹುದು, ಆದ್ರೆ ಮೊದಲಪ್ರೀತಿಯ ವೈಫಲ್ಯದಲ್ಲಿ ಬೆಂದಿರುವ ಅವಳಿಗೆ ಆಸರೆಯ ಅಗತ್ಯವಿದೆ, ಬೆಸ್ಟ್ ಫ್ರೆಂಡ್ ಆಗಿ ಇರ್ತೇನೆ'
'ಅಂದ್ರೆ, ಕದ್ದುಮುಚ್ಚಿ ಪ್ರೀತಿಯೊಂದಿಗೆ ಓಡಾಟ...?'
'ಕದ್ದು ಮುಚ್ಚಿಯಾದರು ಸರಿ, ಅವಳ ಗೆಳೆತನ ತಪ್ಪಿಸ ಬಾರದು'
'ಮತ್ತೆ, ಆಕೃತಿ..?'
'ಅವಳಿಗೆ ನನ್ನ ಪ್ರೀತಿ, ಈ ಪ್ರೀತಿ ಬರೇ ಗೆಳತಿ'
'ಹಾಗಾದ್ರೆ ಓಪನ್ ಆಗಿಯೇ ಅವಳನ್ನು ಗೆಳತಿ ಎಂದು ಒಪ್ಪ ಬಹುದಲ್ಲ, ಯಾಕಾಗಿ ಈ ಕಣ್ಣ ಮುಚ್ಚಾಲೆ ಆಕೃತಿಯೊಂದಿಗೆ..?'
"ಹೆದರಿಕೆ, ಪ್ರೀತಿಯನ್ನು ಕಳಕ್ಕೊಳುವ ಹೆದರಿಕೆ"
"ಪ್ರೀತಿ..? ಯಾವ ಪ್ರೀತಿ..? ಮಂಗಳೂರಿನ ಪ್ರೀತಿ..? ಆಪ್ರೀತಿ ಯೊಂದಿಗಿನ ಪ್ರೀತಿ..? ಇಲ್ಲ ಆಕೃತಿಯೊಂದಿಗಿನ ಪ್ರೀತಿ...?"
"ಮೂರೂ... ಮೂರೂ ಬೇಕು, ಈ ವೈಭವ್ ಗೆ"


ಮನಸ್ಸು ಗೊಂದಲದ ಗೂಡಾಯಿತು, ಇನ್ನೊಂದು ಸಿಪ್ಪೆರಿಸಿ ನಿದ್ದೆಗೆ ಹೋಗುವ ಎನ್ನುವಷ್ಟು ಮಟ್ಟಕ್ಕೆ ಹಳಸಿತು. ಗಂಟೆ ನಾಲ್ಕು ಮುಕ್ಕಲಾದರು ನಿದ್ದೆ ಹತ್ತಲಿಲ್ಲ; ಇಲ್ಲ ಸಲ್ಲದ ಆಲೋಚನೆಗಳು. ಇನ್ನು ನಿದ್ದರೆ ಬಾರದು ಸಮಯ ಕಳೆಯಲು ದಾರಿ ಇಲ್ಲದೆ ಮೊಬೈಲ್ ಕೈಗೆತ್ತಿಕ್ಕೊಂಡು ಇಷ್ಟದ ಪ್ಲೇ ಲಿಸ್ಟ್ ಶುರು ಮಾಡಿದೆ.

ಆಕೃತಿ ರಾತ್ರಿ ೨ ರ ವರೆಗೆ ನನಗೆ ಮೆಸ್ಸೇಜ್ ಕಳುಹಿಸುತಿದ್ದಳು, ಒಟ್ಟು ೨೦ ಮೆಸ್ಸೇಜ್ ಗಳು ೯ ಮಿಸ್ ಕಾಲಗಳು ನೀಡಿ ಕಡೆಗೆ ನಿದ್ದೆಗೆ ಜಾರಿದ್ದಳು. ಅವಳು ತೋರುತಿದ್ದ ಪ್ರೀತಿ ಬೇರೆ ಯಾರೊಬ್ಬರಿಂದ ತೋರಲಾಗದ ಅರಿವಾಯಿತು. ಪೋಸ್ಸಿವ್ ಎನಿಸಿದರೂ ನನಗಾಗಿ ಪೋಸ್ಸಿವೆನೆಸ್ಸ್ ತೋರಿಸುವುದನ್ನು ಇಷ್ಟ ಪಟ್ಟೆ.

'ಹೌದು ಆಕೃತಿಗೆ ಮೋಸ ಮಾಡುತಿದ್ದೇನೆ' ಎಂದು ಮನ ಮತ್ತೆ ಕೊರೆಯಲು ಶುರು ಮಾಡಿತು.
'ಇಲ್ಲ ಯಾರಿಗೂ ಮಾಸ ಮಾಡಲ್ಲ, ಆಕೃತಿಗೂ, ವಿವೇಕ್ ಗೂ, ಆ ಪ್ರೀತಿಗೂ. ಎಲ್ಲರಲ್ಲೂ ನೀಯತ್ತಿನಲ್ಲಿರುತ್ತೇನೆ. ಪ್ರಾಯಶ್ಚಿತ್ತ ವಾಗಿ ಬೇರೆಯಾದ ಆ ಜೋಡಿಯನ್ನು ಒಟ್ಟು ಮಾಡಿದರೆ ಆ ಇಬ್ಬರಿಗೆ ನಾನು ದೇವರಾಗುತ್ತೇನೆ, ಪೋಸ್ಸಿಸ್ಸಿವ್ ಪಾರ್ಟಿ ಆಕೃತಿಗೆ ಇನ್ನೂ ಹತ್ತಿರ ವಾಗುತ್ತೇನೆ' ಎಂದು ಮನಸ್ಸಿನ ಇನ್ನೊಂದು ಮೂಲೆಯಲ್ಲಿ ಆಶಾಕಿರಣ ಮೂಡಲಾರಂಬಿಸಿತು.

'ಆದ್ರೆ ಯಾವ ರೀತಿ ಅವರನ್ನು ಸೇರಿಸುವುದು..? ಇಬ್ಬರೂ ಎಳ್ಳು ನೀರು ಬಿಟ್ಟಂತೆ ಮಾತನಾಡುತಿದ್ದಾರೆ..?'
'ಹೇಳಿ ನೋಡೋಣ, ಮಾತಿಗೆ ಕಲ್ಲನ್ನು ಕರಗಿಸುವ ಶಕ್ತಿ ಇದೆ.ಇವರೇಕೆ ಕರಗರು' ಎಂದು ಸಮಾಧಾನ ಪಟ್ಟೆ.

ಮನಸ್ಸಿನ ಎಲ್ಲ ಗೊಂದಲ ದೂರ ವಾಯಿತು. ನಿದ್ದೆ ಹತ್ತಿತು.

*********



ಸೋಮವಾರ, ಬೆಳಗ್ಗೆ ೯ ಕ್ಕೆ ಆಕೃತಿಯ ಟ್ರೈನ್ ಪುಣೆ ಗೆ ಎತ್ತುವುದಿತ್ತು, ಅವಳನ್ನು ಸ್ಟೇಶನ್ ನಿಂದ ಕರಕ್ಕೊಂಡು ಬರುವ ಮನಸ್ಸಿದ್ದರೂ ಚೀನೀ ಕ್ಲೈಂಟ್ ಬೆಳಂಬೆಳಗ್ಗೆ ಮೀಟಿಂಗ್ ಅರೆಂಜ್ ಮಾಡಿದ್ದ, ಅವನನ್ನು ಶಪಿಸುತ್ತ ಮೀಟಿಂಗ್ ನಲ್ಲಿ ಕೂತಿದ್ದೆ. ಜೀವನ್ ಯಾವುದರ ಪರಿವಿಲ್ಲದೆ ಮುಂಬೈ ನಲ್ಲಿ ಆರಾಮಾಗಿ ಇದ್ದ, ಬೆಳಗ್ಗೆ ೮ ಕ್ಕೆ ಮೀಟಿಂಗ್ ಗೆ ಹೋದಾಗ ಆಫೀಸ್ ನಲ್ಲಿ ಸೆಕ್ಯುರಿಟಿ ಗಾರ್ಡ್ ಲುಕ್ಕಿ ಬಿಟ್ಟರೆ ಬೇರೆ ಯಾರು ಇರಲಿಲ್ಲ.

ಲಕ್ಕಿ ರಾತ್ರಿ ಪಾಳಿಯಲ್ಲಿರುತಿದ್ದ ಸೆಕ್ಯುರಿಟಿ ಗಾರ್ಡ್, ಪುಣೆಗೆ ಬಂದ ಮೊದಲ ದಿನದಿಂದ ಅವನಲ್ಲಿ ಗೆಳೆತನ, ಮೊದಲಿಗೆ ರೆಗುಲರ್ ಶಿಫ್ಟ್ ಗೆ ಬರುತಿದ್ದ ಅವನು ಮದುವೆ ಆದ ಬಳಿಕ ನೈಟ್ ಶಿಫ್ಟ್ ಮಾಡಲು ಶುರುಮಾಡಿದ್ದಾನೆ. ಒಂದು ತಡ ರಾತ್ರಿ ಹಿಂತಿರುಗುವಾಗ ಅವನ್ನಲ್ಲಿ ಈ ಬಗ್ಗೆ ಕೇಳಿದಕ್ಕೆ ಅವನು 'ರಾತ್ ಕಾ ಕಾಮ್ ಹಮ್ ಸುಭೆ ಕರ್ಲೆಂಗೆ ಸಾಬ್ ! ರಾತ್ ಮೇ ರುಖ್ನೆ ಸೆ ದಿನಕ ೨೦೦ ರುಪಯೇ ಜ್ಯಾದ ಮಿಲತಾ ಹೇ, ವೈಸೇ ಭಿ ಕ್ಯಾ ಕರ್ನಾ ಹೇ ಸೋನ ಹಿ ಹೇ ನಾ, ಆಪ್ ಸಬ್ ಜಾನೆ ಕೆ ಬಾದ್ ಹುಂ ಸೊ ಲೆಥೆ ಹೇ..' ಎಂದು ಹಲ್ಲು ಕಿಸಿದಿದ್ದ.

ಹಣ ಸಂಪಾದಿಸುವ ದಾರಿ ಮನುಷ್ಯನಿಗೆ ಸಂದರ್ಭ ತೋರಿಸಿಕೊಡುತ್ತದೆ. ಇವನಿಗೆ ಮದುವೆ ತೋರಿಸಿ ಕೊಟ್ಟಿತ್ತು.
 

ಸೋಮವಾರದ ದಿನ ಇಷ್ಟು ಬೇಗ ಆಫೀಸ್ ನಲ್ಲಿ ನೋಡಿ "ಸಾಬ್ ಸುಭೆ ಸುಭೆ..?"
"ಭೈಯ್ಯಾ, ಕಾಮ್ ಥಾ , ಬುಲಾ ಲಿಯ ಆಯೇ...ಲಕ್ಷ್ಮಿ ಸರ್ ಆಯೇ ಹೆಂ ಕ್ಯಾ ...?"
"ವೊ ಕಹಾನ್ ಆತೆ ಸರ್, ಉನ್ನ್ಹೆ ದೇಖ್ ಕೆ ಸಾಲ್ ಹೋನೆ ಆಯಾ" ಅಂದ ಲಕ್ಕಿ.
 
ಈ ಮೆನೆಜೆರ್ಗಳೇ  ಹಾಗೆ ವರ್ಕ್ ಫ್ರೊಂ ಹೋಂ ವಿಪಿಯೇನ್ ಎಲ್ಲ ಹೇಳಿ ಮನೆಯಲ್ಲೇ ಕೊಳಿತಿರ್ತಾರೆ, ಇಲ್ಲಿ ಬಂದು ಅವರು ಮಾಡುವುದಾದರೂ ಏನು...? ಇದರಕ್ಕಿಂತ ತನ್ನ ನಂಬಿ ಬಂದ ಹೆಂಡ್ತಿ ಮಕ್ಕಳ ಸೇವೆ ಮಾಡಿ ಪುಣ್ಯ ಕಟ್ಕೊಳ್ತಾ ಇರ್ತಾರೆ !!

ನೈಟ್ ಶಿಫ್ಟ್ ನಲ್ಲಿರುವ ಲುಕ್ಕಿಯ ಮಾತಿನಲ್ಲಿ ನಂಗೆ ಯಾವುದೇ ದೋಷ ಕಾಣಲಿಲ್ಲ; ಹೈ ಲೆವೆಲ್ ನವರು ದಿನಕ್ಕೆ ಬರಿ ಹಾಜರಿ ಹಾಕಲು ಬರುವುದು ವಾಡಿಕೆ ಆಗಿತ್ತು.

"ಕೋಯಿ ಬಾತ್ ನಹಿ .. ದೆಖ್ಲೆಂಗೆ, ಆಪ್ ಘರ್ ಜಾವೋ ಭಾಯಿ, ಅಭಿ ಅಭಿ ಶಾದಿ ಹುಯಿ ಹೇ !!" ನನ್ನ ಮಾತು ಕೇಳಿ ಅವನು ನಕ್ಕ, ಚೂರು ನಾಚಿದ.

ಶುಕ್ರವಾರ ಬುಕ್ ಮಾಡಿದ್ದ ನಾಲ್ಕು ಜನರು ಕುಳ್ಳುವಂತ ಕೊಂಫಾರೆನ್ಸ್ ರೂಮ್ನಲ್ಲಿ ಬಂದು, ಗೋ ಟು ಮೀಟಿಂಗ್ ನಲ್ಲಿ ಚೀನಾ ದಲ್ಲಿ ಕೂತಿರುವ ಟು -ಲ್ಯಾಂ ನೊಂದಿಗೆ ಸಂಪರ್ಕ ಸಾಧಿಸಿದೆ. ಅವಳು ಅಲ್ಲಿನ ಡೆವೆಲೋಪರ್ ನೊಡನೆ ಚೈನೀಸ್ ನಲ್ಲಿ ಮಾತಾಡಿ ಅವರ ಉಪ್ದೆಟ್ ನನಗೆ ಕೊಡುತಿದ್ದರು, ನಾನು ಇಲ್ಲಿನ ಕೆಲಸದ ಬಗ್ಗೆ ಅವರಲ್ಲಿ ಹಂಚಿ ಕೊಳ್ಳುತಿದ್ದೆ. ಒಂಬತ್ತು ಸಮೀಪಿಸುತಿದ್ದಂತೆ ಫ್ರೆಶರ್ ಪಾರ್ಟಿ ದಿನ  ಪ್ರೀತಿಯನ್ನು ಬಾರ್ಬಿಡಾಲ್ ಎಂದು ಕರೆದ ನಡುವಯಸ್ಸಿನ ತಿವಾರಿ ಕಾನ್ಫೆರೆನ್ಸ್ ರೂಂ ಪ್ರವೇಶಿಸಿದರು.

ಅವರನ್ನು ಜೋಯಿನ್ ಆದ ದಿನ ನೋಡಿದ್ದೆ, ಮತ್ತೆ ಇಲ್ಲಿ ಅವರು ಸುಳಿದಿರಲಿಲ್ಲ, ಹೆಸರು ಮರೆತು ಹೋಗಿತ್ತು , ಸರ್ನೇಮ್ ತಿವಾರಿ ಎಂದು ನೆನಪಿತ್ತು. ಮುಗುಳ ನಗುತ್ತ ಅವರನ್ನು ಬರ ಮಾಡಿಕ್ಕೊಂಡೆ. ಅವರು ಪಕ್ಕದ ಸೀಟ್ ನಲ್ಲಿ ಕುಳಿತುಕ್ಕೊಂಡರು. ಇಬ್ಬರೂ ಸೇರಿ ಮೀಟಿಂಗ್ ಮುಂದುವರಿಸಿದೆವು, ಮೇನೇಜ್ಮೆಂಟ್ ಲೆವೆಲ್ ನ ತಿವಾರಿ ಎಲ್ಲ ತನಗೆ ಗೊತ್ತಿರುವಂತೆ ವರ್ತಿಸುತಿದ್ದ, ಆದರೆ ತಲೆಯಲ್ಲಿ ಶೂನ್ಯ ಸಂಪಾದನೆ ಎಂದು ಇಲ್ಲಿ ತಿಳಿಯುತ್ತಿತ್ತು, ಆಚೆಯ ಚೀನಿಯರಿಗೆ ಇವನ್ಯಾರೋ ಘನ ಟೆಕ್ಕಿ ಎಂಬ ಇಂಪ್ರೆಷನ್ ಮೂಡಿಸಿದ್ದ ಮೊದಲ ಮೀಟಿಂಗ್ ನಲ್ಲೇ.

ಮೀಟಿಂಗ್ ಮುಗಿಸಿ ಹೊರ ಬರಲು "ವೈಭವ್ ರೈಟ್" ಅಂದ.
"ಎಸ್ ಸರ್, ನಿಮ್ಮ ಹೆಸರು ಮರ್ತು ಹೋಗಿದೆ,ಸೋಮ್ಥಿಂಗ್ ತಿವಾರಿ..?"
"ಬಿಶ್ವಾಸ್ ಮನೋಹರ್ ತಿವಾರಿ, ಇವತ್ತಿಂದ ನಿನ್ನ ಪ್ರಾಜೆಕ್ಟ್ ಮೆನೆಜೆರ್"
ಎನೆಂದ 'ಬಿಮಾರಿ... ಒಳ್ಳೆ ತಮಾಷೆ ಯಾಗಿದೆ !!'
"ಓಕೆ ಸರ್ ಸೀ ಯೌ ಲೆಟರ್" ಎನ್ನುತ್ತಾ ನಾನು ನನ್ನ ಡೆಸ್ಕ್ ಗೆ ನಡೆದೆ.

ಸಿಸ್ಟಂ ಲಾಗಿನ್ ಆಗಿ ಮೇಲ್ ತೆರೆಯಲು ಆಕೃತಿಯ  ಸ್ವೀಟ್ ಅಟ್ ಮೈ ಡೆಸ್ಕ್ ಮೇಲ್ ಕಾಣಿಸಿತು, ಮತ್ತೆ ಲೋಕ್ ಮಾಡಿ ಅವಳ ಡೆಸ್ಕ್ ಕಡೆಗೆ ಹೋದೆ. 'ಅಥಿರಸಂ' ಎಂಬ ಮೆಸ್ಸೇಜ್ ಸಬ್ಜೆಕ್ಟ್ ಹಾಕಿದ್ದಳು.

ನಾನು ಡೆಸ್ಕ್ ಗೆ ತಲುಪುವಾಗ ಲಕ್ಷ್ಮಿ ಸರ್ ಅಥಿರಸಂ ಮೇಯುತ್ತಾ ಆಕೃತಿಯಲ್ಲಿ ತಮಿಳಿನಲ್ಲಿ ಮಾತಾಡುತಿದ್ದರು. ಇಬ್ಬರು ತಮಿಳಿಯರ ನಡುವೆ ನನ್ನ ಹಾಯ್ ಮೌನವಾಯಿತು. ಲಕ್ಷ್ಮಿ ಸರ್ ಇನ್ನೊಂದು ಅಥಿರಸಂ ಕೈಗೆತ್ತಿ "ವೈಭು ಟುಡೇ ಆನ್ವರ್ಡ್ಸ್ ತಿವಾರಿ ವಿಲ್ ಟೆಕ್ ಕೇರ್ ಆಫ್ ಯುವರ್ ಪ್ರಾಜೆಕ್ಟ್"
"ಯಾ ಐ ಹೇವ್ ಮೆಟ್ ಹಿಂ ಜಸ್ಟ್ ನೌ, ಹಿ ವಾಸ್ ವಿಥ್ ಮಿ ಇನ್ ದಿ ಮೀಟಿಂಗ್"
"ಹಿ ಇಸ್ ಅ ಗುಡ್ ಮೆನೆಜೆರ್ " ಎನ್ನುತ್ತಾ ಅವರು ಅಥಿರಸಂ ನ ಇನ್ನೊಂದು ತುಂಡನ್ನು  ಆಸ್ವಾದಿಸುತ್ತಾ ಆಕೃತಿಯ ಕ್ಯುಬಿಕಲ್ ಬಿಟ್ಟರು.

ಆ ತಿಳಿ ಕಣ್ಣಲ್ಲಿ ವಿರಹ ರಸ ಕಾರಂಜಿಯಂತೆ ಹೊರ ಹೊಮ್ಮುತಿತ್ತು, ಜೊತೆಗೆ ನಾನು ಅವಳನ್ನು ಸ್ಟೇಷನ್ನಲ್ಲಿ ಭೇಟಿ ಆಗಲಿಲ್ಲ ಎಂಬ ಕೋಪದ ಜ್ವಾಲಾಗ್ನಿಯೂ, ಕಾರನಿಯನ್ನು ಒರಸುವ ಮನಸ್ಸಾಗಿತ್ತು ಆದರೆ ಒರಸಲಾಗದ ಅಸಾಹಯಕತೆ, ಜ್ಯಾಲಾಗ್ನಿಯನ್ನು ಆರಿಸುವ ತವಕ ಆದರೆ ಸಾದ್ಯವಿಲ್ಲ, ಅವಳೇ ಜಾರುತ್ತಿರುವ ಕಂಬನಿ ಒರಸಿಕ್ಕೊಂಡು ಸಿಹಿ ಸ್ವೀಕರಿಸಲು ಬರುತಿದ್ದವರಿಗೆ ನಗು ಮುಖದಿಂದಲೇ ವಿತರಿಸುತಿದ್ದಳು.

ಮಾತಾಡಲು ಬಹಳಷ್ಟೂ ವಿಷಯಗಳಿದ್ದರೂ  ಮಾತನಾಡಲಾಗದ ವಿಷಮಸ್ಥಿತಿ. ಅವಳಿಗೆ ಬಾಯ್ ಹೇಳುತ್ತಾ ನನ್ನ ಕ್ಯುಬಿಕಲ್ ಗೆ ಬಂದು ಚೀನಿಯರು ಹೇಳಿದ ಉಪ್ಗ್ರೆಡೆಶೇನ್ ಮಾಡಲು ಕುಳಿತೆ.
ಒಂದು ಬದಿಯಲ್ಲಿ ಕ್ರಿಸ್ ನ ಪ್ರಾಜೆಕ್ಟ್,ಈಗ ಟು ನ ಉಪ್ಗ್ರೆಡೆಶನ್ ಸೇರಿ ಒಂದು ನಿಮಿಷವೂ ಸಿಕ್ಕಲಿಲ್ಲ, ಹನ್ನೊಂದಕ್ಕೆ ಆಕೃತಿ ಕಾಫಿ ಗೆ  ಕರೆದಾಗ ಕೆಲಸದಲ್ಲಿ ಮುಳುಗಿರುವ ಬಗ್ಗೆ ತ್ಹೊಡಿಕ್ಕೊಂಡೆ.

ಮದ್ಯಾಹ್ನ ತಿವಾರಿ ಯೊಂದಿಗೆ ಇಡಿ ಪ್ರಾಜೆಕ್ಟ್ ನ ೨೦ ಮಂದಿಗೆ ಮೀಟಿಂಗ್ ಅನ್ನು ಕರೆದಿದ್ದರು ಲಕ್ಸ್ಮಿ ಸರ್, ಆ ಮೀಟಿಂಗ್ ಮುಗಿಸಿ ಅವಳ ಡೆಸ್ಕ್ ಗೆ ಹೋಗಿ 'ಕಪ್ ಕಾಫಿ'ಯ ಆಮಂತ್ರಣ ಕೊಟ್ಟಾಗ ಅವಳು ಬರಲಿಲ್ಲ. ನನ್ನ ಮೇಲಿನ ಕೋಪ ಇನ್ನೂ ತಣಿದಿರಲಿಲ್ಲ.

ಮತ್ತೆ ಕೆಲಸದಲ್ಲಿ ಮುಳುಗಿದೆ, ಸಂಜೆ ೬ ಕ್ಕೆ ಮತ್ತೆ ಕ್ರಿಸ್ ನೊಂದಿಗೆ ಮೀಟಿಂಗ್, ಮೀಟಿಂಗ್ ನ ನಡುವಲ್ಲಿದ್ದಾಗ ಅವಳು ಕ್ಯುಬಿಕಲ್ ಗೆ ಬಂದಳು, ಯಾವಾಗಲು ನಾನು ಮೀಟಿಂಗ್ ನಲ್ಲಿದ್ದಾಗ ಪಕ್ಕಕ್ಕೆ ಬಂದು ಕುಳಿತು ಕೊಳ್ಳುತಿದ್ದ ಅವಳು ಇವತ್ತು ನಿಂತಲ್ಲೇ "ವೈಭು, ಯು ಆರ್ ಗೊಇಂಗ್ ಅವೇ ಫ್ರೊಂ ಮಿ ... ಯು ಆರ್ ಇಗ್ನೋರಿಂಗ್ ಮಿ ಎನ್ನುತ್ತಾ ಮತ್ತೆ ಕಾರಂಜಿಯನ್ನು ಚಿಮ್ಮಿಸಿದಳು."

ಆ ಬದಿಯಲ್ಲಿ ಕ್ರಿಸ್ ನನ್ನ ಜವಾಬಿಗೆ ಕಾಯುತಿದ್ದ "ವಾಯ್ಬಾವ್.. ಯು ದೇರ್..?" ಎನ್ನುತ್ತಾ ಮೂರೂ ಬಾರಿ ಪ್ರಶ್ನಿಸಿದ.
ಆಕೃತಿಗೆ ಉತ್ತರಿಸದೆ ನಾನು ಅವನಲ್ಲಿ "ಎಸ್ ಕ್ರಿಸ್ ಐ ಅಂ ಲಿಸ್ತೆನಿಂಗ್" ಅಂದೆ.

ನನ್ನ ಅಸಡ್ಡೆ ಮನಗಂಡ ಅವಳು ಕ್ಯುಬಿಕಲ್ ಬಿಟ್ಟು ಹೋದಳು. ಕಾಲ್ ಆದ ಬಳಿಕ ಏಕಾಂತದಲ್ಲಿ ಅವಳ ಜೊತೆ ಮಾತಾಡುವ ಅಂದುಕ್ಕೊಂಡು ಕ್ರಿಸ್ ನೊಡನೆ ಸಂಬಾಷಣೆ ಮುಂದುವರೆಸಿದೆ.

ಏಳಕ್ಕೆ ಕಾಲ್ ಮುಗಿದಾಕ್ಷಣ ಅವಳ ಕ್ಯುಬಿಕಲ್ ಗೆ  ಹೋದಾಗ ಅಲ್ಲಿ ಅವಳಿರಲಿಲ್ಲ, ಕ್ಯುಬಿಕಲ್ ಬಿಟ್ಟರೆ ಕಾಫಿ ಮಷಿನ್ ಎನ್ನುತ್ತಾ ಅಲ್ಲಿ ಹೋದೆ, ಅಲ್ಲೂ ಇರಲಿಲ್ಲ, ಕೆಫೆಟೆರಿಯ ಅಲ್ಲೂ ಇಲ್ಲಾ. ಕಾಫೀ ಹಿಡಿದು  ಡೆಸ್ಕ್ಗೆ ಬಂದೆ.

ಆಫೀಸ್ ಕಮ್ಯುನಿಕೇಟಾರ್ ನಲ್ಲಿ ಅವಳು ಆಫ್ಲೈನ್ ಆಗಿ ಆಗಲೇ ೨೦ ನಿಮಿಷ ಆಗಿದೆ ಎಂದು ತೋರಿಸುತಿತ್ತು. ಮೂರೂ ತಿಂಗಳಲ್ಲಿ ಮೊದಲ ಬಾರಿಗೆ ಅವಳು ನನ್ನ ಮೇಲೆ ಕೊಪಿಸಿದ್ದಳು, ರಾತ್ರಿ ಒಂದಾದರು ಆಫೀಸ್ ನಲ್ಲಿ ನನಗೆ ಸಾಥ್ ನೀಡಿ ಮನೆಗೆ ಹೋಗುತಿದ್ದವಳು ಇವತ್ತು ಒಂದು ಬಾಯ್ ಹೇಳದೆ ಆಫೀಸ್ ಬಿಟ್ಟಿದ್ದಳು.

ಮೊಬೈಲ್ ಕೈಗೆತ್ತಿ ಅವಳಿಗೆ ಕರೆ ಮಾಡಿದೆ 'ನಾಟ್ ರೀಚೆಬಲ್...' ಮತ್ತೆ ಪ್ರಯತ್ನಿಸಿದೆ, ಆಗಲೂ ಮೌನ. ಕೊನೆಗೆ ಸುಮ್ಮನಾದೆ.


ಪ್ರೀತಿ ಕ್ಯುಬಿಕಲ್ ಗೆ ಬಂದಾಗ ಸಂಪೂರ್ಣ ಆಲೋಚನೆಯಲ್ಲಿ ಮುಳುಗಿದ್ದೆ, ಒಳ ಬಂದವಳೇ ಸೀದಾ "ವೈಭವ್ ಐ ವಾಸ್ ನಾಟ್ ಎಕ್ಸ್ಪೆಕ್ಟೆಡ್ ದಿಸ್ ಫ್ರೊಂ ಯು" ಎನ್ನುತ್ತಾ ಕೈಯಲ್ಲಿದ್ದ ಕೊರಿಯರ್ ಚೀಲವನ್ನು ಡೆಸ್ಕ್ ಮೇಲೆ ಇಕ್ಕಿದಳು.

ಕೊರಿಯರ್ ಬೇಕೆಂದಾಗ ಬೇಗ ತಲುಪುವುದಿಲ್ಲ , ಇವತ್ತು ಬರೇ ಒಂದೇದಿನದಲ್ಲಿ ವಿವೇಕ್ ನ ನೆನಪುಗಳು ಬೆಂಗಳೂರಿನಿಂದ ಪುಣೆ ತಲುಪಿದ್ದವು. ವಿವೇಕನಿಗೆ ನಾನೇ ಇಲ್ಲಿನ ವಿಳಾಸ ಕೊಟ್ಟಿದ್ದು ಎಂದು ಪ್ರೀತಿ ನನ್ನ ಮೇಲೆ ಕೊಪಿಸಿದ್ದಳು.ಇಷ್ಟು ದಿನ ಮಾತಾಡಲು ಕಾಯುತಿದ್ದ ಪ್ರೀತಿ ಇವತ್ತು ನನ್ನ ಮೌನದ ಕಾರಣವು ಕೇಳದೆ ಅಳುತ್ತ ಕ್ಯುಬಿಕಲ್ ನಿಂದ ಹೊರ ಹೋದಳು.

ಮುಂದಿನ ಮೂವತ್ತು ನಿಮಿಷ ಆಫೀಸ್ ನಲ್ಲಿದ್ದರೂ ಒಂದು ಲೈನ್ ಕೋಡ್ ಸರಿಯಾಗಿ ಟೈಪ್ ಮಾಡಲಾಗಲಿಲ್ಲ. ಮನೆಗೆ ಹೋಗುವುದೇ ಸರಿ ಎಂದು ಬ್ಯಾಗ್ ಏರಿಸಿ  ಹೊರನಡೆದೆ. ಲುಕ್ಕಿ ಇವತ್ತಿನ ಡ್ಯುಟಿಗೆ ಆಗಲೇ ಬಂದಾಗಿತ್ತು.

ನನ್ನಲ್ಲಿ "ಕ್ಯಾ ಹೋಗಯ ಸರ್.. ಬಹುತ್ ಉದಾಸ್ ಹೋ ...?"
"ಕುಚ್ ನಹಿನ್ ಭಾಯಿ ..ಆಜ್ ಮೇರ ಬುರಾ ದಿನ ಥಾ, ಲಗ ರಹಾ ಹೇ ಮೇರೆ ಬುರಾಯಿ ಕಾ ದಿನ ಶುರು ಹೋಗಯ..." ಎಂದಾಗ ಗೊತ್ತಾಗ ದಂತೆ ಕಣ್ಣು ಮಂಜಾದವು.
"ಜೋ ಭಿ ಹುವಾ ಹೇ ಉಸ್ಕೆಲಿಯ ಆಪ್ ಏಕ ಬಾರ್ ಮಾಫಿ ಮಂಗೋ.. ದೂಸರೇ ಆದ್ಮಿ ಕೋ ತಬ್ ಉಸ್ಕಿ ಗಲ್ತಿ ಕಾ ಎಹಸಾಸ್ ಹೋಗ.." ಅಂದ.

ನನಗು ಅವನ ಮಾತಲ್ಲಿ ಸತ್ಯ ಇದೆ ಎಂದನಿಸಿತು, ತಪ್ಪು ನನ್ನಿಂದಾಗಲಿಲ್ಲ, ಸಂಧರ್ಭವೆ ಹಾಗಿತ್ತು. ಮೊಬೈಲ್ ನಲ್ಲಿ "ಸಾರೀ, ಇನ್ಯಾವತ್ತು ನಿನ್ನನ್ನು ಈ ರೀತಿ ನೋಯಿಸುವುದಿಲ್ಲ, ಐ ನೀಡ್ ಯು, ಐ ಲವ್ ಯು ಡಿಯರ್" ಎಂಬ ಮೆಸ್ಸೇಜ್ ಟೈಪಿಸಿದೆ.ಇಬ್ಬರಲ್ಲೂ ನನಗೆ ಕ್ಷಮೆ ಕೇಳಬೇಕಿತ್ತು. ಮೆಸ್ಸೇಜ್ ಅನ್ನು ಇಬ್ಬರಿಗೂ ಕಳುಹಿಸಿದೆ.

ರಿಪ್ಲೈ ಗೆ ಕಾಯುತ್ತ ಅಲ್ಲೇ ಇಟ್ಟ ಸೋಪಾದ ಮೇಲೆ ಕುಳಿತೆ. ಒಂಬತ್ತಾಗುತಿದ್ದಂತೆ ಲಕ್ಕಿ "ಸಾಬ್ ನೌ ಬಜ್ ಗಯಾ, ಘರ್ ಜಾಕೆ ಆರಾಮ್ ಕರೋ , ಕುಚ್ ಬುರಾ ನಹಿ ಹೋಗ.." ಎನ್ನುತ್ತಾ ಚಿಂತೆಯಲ್ಲಿ ಕಳೆದು ಹೋದ ನನ್ನನ್ನು ಎಬ್ಬಿಸಿದ.

ಅವನಿಗೆ ಬಾಯ್ ಎನ್ನುತ್ತಾ ಲಿಫ್ಟ್ ನ 'ಜಿ' ಬಟನ್ ಒತ್ತಿದೆ. ಕಿವಿಯಲ್ಲಿ ರಫಿ 'ಅಭಿ ನ ಜಾವೋ ಚೋಡ್ ಕೆ' ಹಾಡುತಿದ್ದ.


 
 
 
 
 
Rating
No votes yet