2012ಕ್ಕೆ ಹಾರೈಕೆ

2012ಕ್ಕೆ ಹಾರೈಕೆ



ಹೊಸ ವರುಷ ಹೊಸ ದಿವಸ ಹೊಸತಾಗಿ ಬರಲಿ |
ಹೊಸ ಹರುಷ ನಸುನಗುತ ವರುಷವಿಡೀ ಇರಲಿ ||ಪ||

ಬೆಳಗುತ ನೇಸರ ಕಾಣಿಸುವಾಗಲೆ
ಚೈತನ್ಯವು ಪುಟಿದೆದ್ದಿರಲಿ |
ದೇಹಾಲಸ್ಯದ ಜಾಡ್ಯವ ಕಿತ್ತು
ಜೀವವು ವೈಭವ ಪಡುತಿರಲಿ  |
ಜನತೆಯಲಿ ಘನತೆಯಲಿ
ಹೊಸ ಹುಮ್ಮಸ್ಸನು ಕೊಡುತಿರಲಿ  ||೧||

ಕಳೆಯಲಿ ಕೊಳೆ ತೊಳೆಯುತ್ತಲೇ ಇರಲಿ
ಕಾಮ ವಿಕಾರದ ನಂಜುಗಳು |
ಅಡಗಲಿ ಹಂಕಾರದ ಜಂಬಗಳು
ಮೂಡಲಿ ಸಾತ್ವಿಕ ಚಿಗುರುಗಳು |
ದೇಹದಲೂ ದೇಶದಲೂ  
ಆರೋಗ್ಯವು ನೆಲೆಗೊಳಲಿನ್ನು  ||೨||

ಭಯ ಬೇಸರ ಆತಂಕಗಳಿಲ್ಲದ
ಸಂತಸ ತುಂಬಿದ ಹೊಸ ವರುಷ  |
ಪಡೆಯಲಿ ನೆಮ್ಮದಿ ದುಡಿಯುವ ಮಂದಿ
ಗೆಲ್ಲಲಿ ಕಾಯಕ ಅನವರತ |
ಅನುದಿನವು ಹೃದಯದೊಳು
ಶಾಂತಿಯು ಇರಲೆನ್ನೊಡನೆ ಸದಾ  ||3 ||
 
 


 ಎಲ್ಲರಿಗೂ 2012ರ ಹೊಸ ವರ್ಷದ ಶುಭಾಷಯಗಳು
                                                                             - ಸದಾನಂದ


 

Rating
No votes yet

Comments