ಅಲೆಗಳಂತೆ ನಾನು
ಭಾವವೆಲ್ಲವನೂ ಒಗ್ಗೂಡಿಸಿ
ಭೋರ್ಗರೆದು ನಿನ್ನತ್ತ ಬಂದರೂ
ಹೆಬ್ಬಂಡೆಯಂತೆ ನೀನು. . .
ಕರಗಲಿಲ್ಲ, ಮನ ಕದಲಲೂ ಇಲ್ಲ,
ಬಂದ ಹಾದಿಯನೇ ನಾ ಮತ್ತೆ ಹಿಡಿದಿರುವೆ
ಮರೆಯದಿರು ನಾ ಮತ್ತೆ ಬರುವೆ
ಸಾಗರ ನಾನು,
ನನ್ನೊಡಲಲಿ ಭಾವದ ಹನಿ ತೀರುವ ವರೆಗೂ
ನೀ ಕರಗುವವರೆಗೂ , ಮನ ಕದಲುವವರೆಗೂ
ಅಲೆಗಳಂತೆ ನಾನು . . . .
Comments
ಉ: ಅಲೆಗಳು