ಎಕ್ಕುಟ್ಟುವ ಮುನ್ನ ಎಚ್ಚರಬಾರದೇ?!

ಎಕ್ಕುಟ್ಟುವ ಮುನ್ನ ಎಚ್ಚರಬಾರದೇ?!

ಬರಹ

 ರಾಜಕೀಯದ ನೀತಿ, ತತ್ವ-ಸಿದ್ಧಾಂತಗಳ ಬಗ್ಗೆ ಶಾಸನ ಸಭೆಯ ಗಟ್ಟಿ ನೆಲದಲ್ಲಿ - Floorನಲ್ಲಿ - ಗಟ್ಟಿಯಾಗಿ ಕೂಗಿ ಕಿರುಚುತ್ತಿದ್ದ ಓರ್ವ ಗಟ್ಟಿ ವ್ಯಕ್ತಿ, ಪಕ್ಷದ ಹೈ ಕಮಾಂಡ್ ಎಂಬ ’ನಾಮ್ಕೇವಾಸ್ತೆ’ ಉನ್ನತಾಧಿಕಾರದ ಜುಟ್ಟು ಹಿಡಿದು ಪಟ್ಟು ಹಾಕುವುದು, ಆ ಉನ್ನತ ವ್ಯವಸ್ಥೆ, ಗತ್ಯಂತರವಿಲ್ಲದೆ, ಕ್ರಮಹೀನ ಧನಬಲದೆದುರು ಶರಣಾಗುವ ನಿಸ್ಸಹಾಯಕತೆಯ ವಿದ್ಯಮಾನಗಳು, ನಮ್ಮಲ್ಲಿ ಯಾವುದೇ ಸಂವೇದನೆ ಮೂಡಿಸದೇ?! ಇವುಗಳಿಗೂ ಸೈದ್ಧಾಂತಿಕ ವ್ಯಾಖ್ಯೆ ನೀಡುವುದಕ್ಕೆ ನಮ್ಮಲ್ಲಿ  ಶಬ್ದಸಂಪತ್ತಿನ ಕೊರತೆ ಇಲ್ಲದಿರಬಹುದು; ಆದರೆ ಸುಜನಸ್ತೋಮಕ್ಕೇ ’ಆತ್ಮಸಾಕ್ಷಿ’ ಎನ್ನುವುದೊಂದು ಬೇಡವೇ? ನಿಜ, ’ರಾಜಕೀಯ’ ಎನ್ನುವುದೇ ’ಅವಕಾಶಗಳ ಸೃಷ್ಟಿ’. ಆದರೆ ಆ ಅವಕಾಶ, ಸಾಂಸ್ಕೃತಿಕವಾಗಿ ಕಾಂಜಿ-ಪೀಂಜಿ ಎನ್ನಬಹುದಾದ ರೌಡಿ-ಗೂಂಡಾ ರಾಜಕಾರಣದಿಂದ ಬಂದರೂ, ಅದು ಘನವಂತ ’ಪಕ್ಷಾಂತರ ನಿಷೇಧ’ ಕಾಯ್ದೆ-ಕಾನೂನಿನಡಿಯಲ್ಲೇ ದೊರಕೊಳ್ಳುವಂತಾದರೂ ನಮಗೆ ನಾಚಿಕೆ-ಹೇಸಿಕೆಯೆನ್ನುವುದಿರುವುದಿಲ್ಲವೇ; ಚಿಂತನಶೀಲತೆಗೆ ಮುಳ್ಳು ಚುಚ್ಚುವುದಿಲ್ಲವೇ?!
 ದುಂಡಾವರ್ತಿ ರಾಜಕಾರಣಿಗಳು ನಮ್ಮ ಸಂವಿಧಾನವನ್ನೇ ಎಕ್ಕ ಹುಟ್ಟಿಸುವ ಮೊದಲು, ಸಂಸತ್ತು-ಶಾಸಕಾಂಗಗಳು ನೈಜ ಪ್ರಾತಿನಿಧಿಕ ಸಂಸ್ಥೆಗಳಾಗುವಂತೆ ಪ್ರಜಾಪ್ರತಿನಿಧಿ ಕಾಯ್ದೆ ಪುನಾರಚನೆ ತುರ್ತು ನಮ್ಮ ಬೌದ್ದಿಕ ವಲಯಕ್ಕೆ ಏಕೆ ಗೋಚರವಾಗದಿರುವುದು ಸೋಜಿಗ ತರುತ್ತದೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet