ಭಗವದ್ಗೀತೆ ಏಕೆ?

ಭಗವದ್ಗೀತೆ ಏಕೆ?

Comments

ಬರಹ

 ಶಾಲಾಪಠ್ಯಕ್ರಮದಲ್ಲಿ ಭಗವದ್ಗೀತೆ ಅಳವಡಿಸುವ ಬಗ್ಗೆ ಚಿಂತನೆ ನಡೆಸುವುದಾಗಿ ಮುಖ್ಯಮಂತ್ರಿಗಳು ಅಪ್ಪಣೆ ಕೊಡಿಸಿದ್ದಾರೆಂದು ಸುದ್ದಿ
 ಏಕೆ? ಭಾರತದ ಸಾರ್ವಜನಿಕ ಜೀವನಕ್ಕೆ ಸಂಹಿತೆಯಾದ ಸಂವಿಧಾನದ ಭಾವ-ಜೀವಂತಿಕೆಗಳು ಸತ್ತುಹೋಗಿದೆಯೇ?
 ಧ್ಯಾನ, ಧಾರಣ, ಆಸನ, ಪ್ರಾಣಾಯಾಮ, ಪ್ರತ್ಯಾಹಾರಾದಿ ಅಷ್ಟಾಂಗ ಯೋಗಸಿದ್ಧ ವೈದಿಕ ಯತಿವರೇಣ್ಯರುಗಳು ಈ ಕೆಲಸ ಬಿಟ್ಟು, ’ರಾಜಕೀಯ ಸಮಾಧಿಸ್ಥ’ರಾಗಿದ್ದಾರೆಂದು, ಸರಕಾರ ಆಧ್ಯಾತ್ಮ ತತ್ವಬೋಧನೆಯಲ್ಲಿ ತೊಡಗಬೇಕಾದ ಅಗತ್ಯ ಉಂಟಾಗಿಯಿತೇನೋ, ಪಾಪ!
 ಭಗವದ್ಗೀತೆಯಲ್ಲಿ ಸತ್ಯದರ್ಶನವಿಲ್ಲವೆಂದಲ್ಲ, ಆದರದು ಭಗವದ್ಗೀತೆಯಲ್ಲಿ ಮಾತ್ರಾ ಇದೆ ಎಂದು ವಾದಿಸುವುದು ಸತ್ಯಭ್ರಷ್ಟರ ಬೊಗಳೆತನ. ಇಂದಿನ ಭಗವದ್ಗೀತೆ ಎಂಬ ಗ್ರಂಥದಲ್ಲಿ ಪ್ರಕ್ಷೇಪ-ಪಾಠಾಂತರಗಳೂ ಸೇರ‍್ಡೆಯಾಗಿಲ್ಲವೆನ್ನುವಂತಿಲ್ಲ. ಅದರಲ್ಲಿನ ವಿರೋಧಾಭಾಸಗಳೇ ಇದಕ್ಕೆ ಸಾಕ್ಷಿಯಾಗುತ್ತದೆ. ಐಹಿಕ ಸಾಮಾಜಿಕ ಜೀವನದ ಬಗ್ಗೆ ಈ ಗ್ರಂಥದಲ್ಲಿ ಸಮಗ್ರ ದೃಷ್ಟಿಯೊಂದಿದೆ ಎಂದು ಒಪ್ಪಿಕೊಂಡರೂ, ಅದು ’ಮರ್ತ್ಯವೆಂಬುದು ಕರ‍್ತಾರನ ಕಮ್ಮಠವಯ್ಯ’ ಎಂದ ಕನ್ನಡದ ವಚನಕ್ರಾಂತಿಯಲ್ಲೂ ಇನ್ನೂ ವಿಶಿಷ್ಟವಾಗಿ, ಸ್ಪಷ್ಟವಾಗಿ ಇದೆ. ವೈದಿಕ ಸಾಹಿತ್ಯ-ಧರ್ಮಗಳು, ಅದನ್ನು ಯಶಸ್ವಿಯಾಗಿ ಹತ್ತಿತು ಎಂದು ಇತಿಹಾಸವೇ ಅನುಮಾನಿಸುತ್ತದೆ. ಎಷ್ಟೇ ’ಸೆಕ್ಯುಲಾರ್’ ಎಂದು ಕೊಚ್ಚಿಕೊಂಡರೂ, ಭಗವದ್ಗೀತೆ ಸಹ ಅದೇ ಸಾಹಿತ್ಯದ ಒಂದು ಭಾಗವೇ!
 ದಲಿತರು, ಅಲ್ಪಸಂಖ್ಯಾತರು ಇತ್ಯಾದಿ ಓಟಿನ ಓಲೈಕೆ ರಾಜಕೀಯದ ಅನೀತಿಯ ವಿರುದ್ಧ, ಭಗವದ್ಗೀತೆಯಂಥಾ ’ಬ್ರಹ್ಮಾಸ್ತ್ರ’ ಪ್ರಯೋಗಗ ಸರಿಯಾಗುವುದಿಲ್ಲ.ಅದಕ್ಕಿಂತಾ, ಜೀವಂತ ಸಂವಿಧಾನದ ಅರ್ಥದಲ್ಲಿ ಬಹುಮತ ಸೃಷ್ಟಿಸಿಕೊಳ್ಳುವ ಪ್ರಯತ್ನ ಹೆಚ್ಚು ಪ್ರಜಾಸತ್ತಾತ್ಮಕವಾದೀತು.
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet