ಎಮೋಟಿಕಾನ್ಗಳನ್ನು ಪತ್ರಿಕೆಗಳು ಬಳಸಲಿ
ಕ್ರಿಕೆಟಿಗರಿಗೆ ಆನ್ಲೈನ್ ಉಗಿತ
ಸತತ ಆರು ಟೆಸ್ಟ್ಗಳ ಸೋಲಿನಿಂದ ಕಂಗೆಟ್ಟಿರುವ ಭಾರತದ ಕ್ರಿಕೆಟ್ ಪ್ರೇಮಿಗಳು,ಕ್ರಿಕೆಟಿಗರನ್ನು ಬೈಯುವುದಲ್ಲದೆ ಬೇರೇನು ಮಾಡಲಿಕ್ಕಾಗುತ್ತದೆ?ಅಂತ ಉಗಿತಕ್ಕಾಗಿ ಮಾಧ್ಯಮಗಳ ಬಳಕೆಯಾಗುವುದು ಇದ್ದದ್ದೇ.ಈಗದಕ್ಕೆ ಆನ್ಲೈನಿನ ಟ್ವಿಟರ್,ಪೇಸ್ಬುಕ್,ಗೂಗಲ್ ಪ್ಲಸ್ ಅಂತಹ ತಾಣಗಳು ಹೊಸದಾಗಿ ಸೇರ್ಪಡೆಯಾಗಿವೆ.ಯುವಕರು,ಕಂಪ್ಯೂಟರ್ ಪ್ರವೀಣರು ಕ್ರಿಕೆಟಿಗರನ್ನು ಟೀಕಿಸುವುದರಲ್ಲಿ ಹಿಂದೆ ಬಿದ್ದಿಲ್ಲ.ಕ್ರಿಕೆಟಿಗರೂ ಟ್ವಿಟರ್ ಖಾತೆ ಹೊಂದಿದ್ದರೆ,ಅವರತ್ತ ವಾಗ್ಬಾಣಗಳನ್ನು ನೇರವಾಗಿ ಹರಿಯಬಿಟ್ಟು,ಅಭಿಮಾನಿಗಳು ತೃಪ್ತಿ ಕಾಣುತ್ತಾರೆ.ಕ್ರಿಕೆಟಿಗರು ತಮ್ಮ ಖಾತೆಯತ್ತ ದೃಷ್ಟಿ ಬೀರದೆ ಅವುಗಳಿಂದ ಬಚಾವ್ ಆಗುತ್ತಾರೆ ಎಂದಿರಾ?
----------------------------------------
ಆಧಾರ್:ಮೈಕ್ರೋ ಎಟಿಎಂ
ಸರಕಾರದ ಯೋಜನೆಯಡಿ ಕೆಲಸ ಮಾಡುವ ಜನರ,ಸಂಬಳ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.ಅವರು ಅದನ್ನು ನಗದೀಕರಿಸಲು ಆಧಾರ್ ಯೋಜನೆಯವರು ಮೈಕ್ರೋ ಎಟಿಎಂ ಎನ್ನುವ ಸಣ್ಣ ಯಂತ್ರವನ್ನು ಬಿಡುಗಡೆ ಮಾಡಿದ್ದಾರೆ.ಇದರಲ್ಲಿ ಫಲಾನುಭವಿ,ತನ್ನ ಬೆರಳಚ್ಚು ನೀಡಿ,ಆಧಾರ್ ಸಂಖ್ಯೆಯನ್ನು ಕೀಲಿ ಮಣೆಯಲ್ಲಿ ಒತ್ತಬೇಕು.ಆತನ ಬ್ಯಾಂಕ್ ಖಾತೆಯ ವಿವರಗಳನ್ನು ಮುದ್ರಿಸಿದ ಸ್ಲಿಪ್ ಯಂತ್ರ ನೀಡುತ್ತದೆ.ಹಣವನ್ನು ನೀಡಲು ಬ್ಯಾಂಕ್ ಪ್ರತಿನಿಧಿ ಸ್ಥಳದಲ್ಲಿರುತ್ತಾನೆ.ಮೊಬೈಲ್ ಸಂಕೇತಗಳ ಮೂಲಕ,ಈ ಮೈಕ್ರೋ ಎಟಿಎಂ ಕೆಲಸ ಮಾಡುತ್ತದೆ.ಇದರಲ್ಲಿ ಸಿಮ್ ಇದ್ದು,ಯಂತ್ರವು ಮೊಬೈಲ್ ಜಾಲದ ಮೂಲಕ ಬ್ಯಾಂಕ್ ಜತೆ ಸಂಪರ್ಕ ಹೊಂದುತ್ತದೆ.
----------------------------------------------
ಎಮೋಟಿಕಾನ್ಗಳನ್ನು ಪತ್ರಿಕೆಗಳು ಬಳಸಲಿ
ಅಂತರ್ಜಾಲ ಪುಟಗಳಲ್ಲಿ,ಮಿಂಚಂಚೆ ಸಂದೇಶಗಳಲ್ಲಿ,ವಾಕ್ಯದ ಅಂತ್ಯದಲ್ಲಿ ಎಮೋಟಿಕಾನುಗಳ ಬಳಕೆಯನ್ನು ನೀವು ನೋಡಿರುತ್ತೀರಿ.ವಾಕ್ಯವನ್ನು ಹಾಸ್ಯಕ್ಕಾಗಿ ಬರೆದರೆ,ನಗು ಮುಖವನ್ನೂ,ವಾಕ್ಯ ಬೇಸರ ವ್ಯಕ್ತ ಪಡಿಸಿದ್ದರೆ ಅಳುಮುಖವನ್ನೂ ಹೀಗೆ ವಿವಿಧ ಎಮೋಟಿಕಾನುಗಳ ಬಳಕೆಯಾಗುತ್ತದೆ. ನಮ್ಮ ಪತ್ರಿಕೆಗಳು ಭಾವನೆಗಳನ್ನು ಅಭಿವ್ಯಕ್ತಿಸುವ ಅಂತಹ ಗುರುತನ್ನು ಬಳಸಲು ಆರಂಬಿಸಿದ ಹಾಗಿಲ್ಲ.ಅಂತರ್ಜಾಲದ ಕ್ಲಿಕ್ಕಿಸುವ ಗುರುತು,ಟ್ಯಾಬ್(ಹಾಳೆ) ಇತ್ಯಾದಿ ವೈಶಿಷ್ಟ್ಯಗಳನ್ನು ಪತ್ರಿಕೆಗಳು ಅಳವಡಿಸಿಕೊಳ್ಳುವುದರಲ್ಲಿ ಹಿಂದೆ ಬಿದ್ದಿಲ್ಲ.ಭಾವಾಭಿವ್ಯಕ್ತಿಸುವ ಎಮೋಟಿಕಾನುಗಳನ್ನು ಪತ್ರಿಕೆಗಳು ಅಳವಡಿಸಿಕೊಂಡರೆ ಚೆನ್ನ,ಏನಂತೀರಿ?
--------------------------------------------------
ನಲುವತ್ತೈದು ಸಾವಿರ ಫೇಸ್ಬುಕ್ ಖಾತೆಗಳ್ ಪಾಸ್ವರ್ಡ್ ಸೋರಿದೆ
ಕಂಪ್ಯೂಟರ್ ವರ್ಮ್ ಒಂದು ಫೇಸ್ಬುಕ್ ಖಾತೆಗಳ ಪಾಸ್ವರ್ಡ್ ಕದಿಯುತ್ತಿದ್ದು,ಇಂಗ್ಲೆಂಡ್ ಹಾಗೂ ಫ್ರಾನ್ಸಿನ ಸುಮಾರು ಐವತ್ತು ಸಾವಿರ ಖಾತೆಗಳ ಪಾಸ್ವರ್ಡ್ ಸೋರಿಕೆಯಾಗಿರುವುದು ಪತ್ತೆಯಾಗಿದೆ.ಈ ಪಾಸ್ವರ್ಡ್ಗಳನ್ನು ಬಳಸಿ,ಆ ಖಾತೆಗಳಿಂದ ಇತರ ಬಳಗದವರ ಖಾತೆಗಳಿಗೆ ಸಂದೇಶ ರವಾನಿಸಿ,ಅವರ ಕಂಪ್ಯೂಟರುಗಳಲ್ಲೂ ವರ್ಮ್ ಹಬ್ಬಿಸಿ,ಅವರ ಖಾತೆಗಳ ಪಾಸ್೬ವರ್ಡ್ ಕದಿಯುವ ಪ್ರಯತ್ನ ಮಾಡುವುದು,ಹ್ಯಾಕರುಗಳ ಕಾರ್ಯ ವೈಖರಿಯಾಗಿದೆ.ಜನರು ಹಲವು ತಾಣಗಳಲ್ಲಿ,ಒಂದೇ ಪಾಸ್ವರ್ಡ್ ಬಳಸುವ ಅಭ್ಯಾಸವನ್ನು ಹೊಂದಿರುವುದರಿಂದ,ಒಂದು ಖಾತೆ ಹ್ಯಾಕ್,ಆದರೆ,ಇತರ ಖಾತೆಗಳೂ ಅಪಾಯದಲ್ಲಿರುತ್ತವೆ.ಡಬ್ಬ್ಡ್ ರಾಮ್ನಿಟ್ ಎನ್ನುವುದು ವರ್ಮ್ ಹೆಸರು-ಇದು ಎರಡು ವರ್ಷಗಳ ಹಿಂದಿನಿಂದಲೂ ಅಂತರ್ಜಾಲದಲ್ಲಿ ಕಾಡುತ್ತಿರುವ ವರ್ಮ್ ಆಗಿದೆ.
---------------------------------------------
ಹೊಸ ವರ್ಷದ ನಿರ್ಣಯಗಳು
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಅಂತರ್ಜಾಲಿಗರು,ಮಾಡಬೇಕಾದ ನಿರ್ಣಯಗಳೇನು?ಪ್ರಸಿದ್ಧ ವ್ಯಕ್ತಿಗಳ ಮಾತು ಕೇಳುವಿರಾದರೆ,ಈ ಕೆಲವು ನಿರ್ಣಯಗಳನ್ನು ಮಾಡುವುದು ಸೂಕ್ತವಾಗಿವೆ:ಒಳ್ಳೆಯ ಪ್ರೊಫೈಲ್ ಚಿತ್ರವನ್ನು ಅಂತರ್ಜಾಲ ಸಮಾಜಿಕ ತಾಣಗಳಲ್ಲಿ೯ ಬಳಸುವುದು;ಈ ತಾಣಗಳಲ್ಲಿ ಹದಿನೈದು ನಿಮಿಷಕ್ಕಿಂತ ಹೆಚ್ಚು ಸಮಯ ಕಳೆಯದಿರುವುದು ಮತ್ತು ನಮ್ಮ ಜತೆಗಾರರಿಗೆ ಧ್ವನಿ ಸಂದೇಶಗಳನ್ನು ನೀಡಲು ತುಸುವಾದರೂ ಆದ್ಯತೆ ನೀಡುವುದು ಇವುಗಳಲ್ಲಿ ಸೇರಿವೆ.ಇತರ ನಿರ್ಣಯಗಳಲ್ಲಿ ನಾನು ಉತ್ತಮ ಸ್ನೇಹಿತನಾಗಿರಲು ಪ್ರಯತ್ನಿಸುವೆ,ಪ್ರೀತಿಸಲು ತೊಡಗುವೆ,ಸ್ವಂತಕ್ಕಾಗಿ ಹೆಚ್ಚು ಸಮಯದ ವ್ಯಯ,ಹೊಸ ನೌಕರಿ ಹುಡುಕಲು ತೊಡಗುವೆ,ದೇಹತೂಕ ನಿಯಂತ್ರಣಕ್ಕೆ ಪ್ರಯತ್ನಿಸುವೆ ಎನ್ನುವುದು ಇತರ ಜನಪ್ರಿಯ ನಿರ್ಣಯಗಳು.ಅಂದ ಹಾಗೆ ನಿಮ್ಮ ಹೊಸ ವರ್ಷದ ನಿರ್ಣಯಗಳೇನು?
-------------------------------------
ಟುಸ್ ಆದ ಮೂರು ಆಯಾಮಗಳ ಟಿವಿ
ಮೂರು ಆಯಾಮಗಳಲ್ಲಿ ದೃಶ್ಯವನ್ನು ಕಾಣಿಸುವ ಟಿವಿಗಳೀಗ ಲಭ್ಯ.ಆದರೆ,ಅದರಲ್ಲಿ ನೋಡಲು ಕಾರ್ಯಕ್ರಮಗಳು ಅಷ್ಟಾಗಿ ತಯಾರಾಗುತ್ತಿಲ್ಲ.ಹಾಗಾಗಿ,ಅಂತಹ ಟಿವಿಗಳ ಬಗ್ಗೆ ಜನರಿಗೆ ಹೆಚ್ಚಿನ ಉತ್ಸಾಹವಿಲ್ಲ.ಜತೆಗೆ,ಆ ಟಿವಿಗಳು ದುಬಾರಿ,ಅಲ್ಲದೆ ಅವುಗಳಲ್ಲಿ ಕಾರ್ಯಕ್ರಮ ನೋಡುವುದು ಕಿರಿ ಕಿರಿ ಅನಿಸುವುದು ಮೂರು ಆಯಾಮದ ಟಿವಿಗಳು ಜನಪ್ರಿಯವಾಗದಿರುವುದಕ್ಕೆ ಪ್ರಮುಖ ಕಾರಣಗಳಾಗಿವೆ.ಜಗತ್ತಿನಲ್ಲಿ ಸುಮಾರು ಇಪ್ಪತ್ತಮೂರು ದಶಲಕ್ಷ ಟಿವಿಗಳು ಇಂತಹ ಟಿವಿಗಳಾಗಿದ್ದರೆ,ಅಮೆರಿಕಾದಲ್ಲಿ ಸುಮಾರು ಮೂಋ ದಶಲಕ್ಷ ಮೂರು ಆಯಾಮದ ದೃಶ್ಯ ಮೂಡಿಸುವ ಟಿವಿಗಳಿವೆ.ಅಮೆರಿಕಾದ ಮನೆಗಳಲ್ಲಿರುವ ಟಿವಿಗಳಲ್ಲಿ ಶೇಕಡಾ ಮೂರು ಮಾತ್ರಾ ಇಂತಹ ಟಿವಿಗಳಾಗಿವೆ.ಜಗತ್ತಿನಲ್ಲಿ ಸುಮಾರಿ ಐವತ್ತೈದು ಟಿವಿ ಚಾನೆಲುಗಳು ಇಂತಹ ಮೂರು ಆಯಾಮಗಳ ಟಿವಿಗಳಿಗಾಗಿ ಕಾರ್ಯಕ್ರಮ ಬಿತ್ತರಿಸುತ್ತವೆ.ಅವತಾರ್,ಕ್ಲಾಶ್ ಆಫ್ ಟೈಟಾನ್ಸ್,ಟಿನ್ ಟಿನ್,ಹ್ಯುಗೋ ಮುಂತ್ತದ ಚಲನಚಿತ್ರಗಳೂ ಮೂರು ಆಯಾಮದಲ್ಲಿ ಚಿತ್ರೀಕರಿಸಲಾದ ಚಿತ್ರಗಳು.
--------------------------------------------
ಖಾತೆಯ ಪಾಸ್ವರ್ಡ್ ನೀಡಲು ಒತ್ತಾಯ ಸರಿಯೇ?
ವಿಚಾರಣೆಗೆ ಆರೋಪಿಯೋರ್ವನ ಲ್ಯಾಪ್ಟಾಪನ್ನು ವಶ ಪಡಿಸಿಕೊಂಡಿರುವ ಪೊಲೀಸರು,ಆತನ ಲ್ಯಾಪ್ಟಾಪಿನಲ್ಲಿರುವ ಮಾಹಿತಿಯನ್ನು ಪಡೆಯಲು,ಆತನ ಲ್ಯಾಪ್ಟಾಪಿನ ಪಾಸ್ವರ್ಡ್ಗಾಗಿ ಕೇಳುವುದು ಸರಿಯೇ?ಅದು ಆತನ ಖಾಸಗಿತನದ ಉಲ್ಲಂಘನೆಯಾಗದೇ?ಬ್ಯಾಂಕನ್ನು ಮೋಸಗೊಳಿಸಲು ಯತ್ನಿಸಿದ ಓರ್ವ ಹೆಂಗಸು,ಈ ಬಗ್ಗೆ ಕೋರ್ಟಿನ ಮೆಟ್ಟಲು ಹತ್ತಿದ್ದಾಳೆ.ತನ್ನ ನಾಲ್ಕು ಲ್ಯಾಪ್ಟಾಪುಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ.ಈಗವರು ಲ್ಯಾಪ್ಟಾಪನ್ನು ಜಾಲಾಡಲು ಪಾಸ್ವರ್ಡ್ ಕೇಳುತ್ತಿದ್ದಾರೆ-ಇದು ತನ್ನ ಖಾಸಗಿತನದ ಉಲ್ಲಂಘನೆಯಾಗಿದೆ ಎಂದು ಆಕೆಯ ವಕೀಲರು ಕೋರ್ಟು ಕಟಕಟೆ ಹತ್ತಿದ್ದಾರೆ.ಪಾಸ್ವರ್ಡ್ ಎನ್ನುವುದು ಕೋಣೆಯ ಕೀಲಿಯಿದ್ದಂತೆ.ಅದನ್ನು ಪೋಲೀಸರು ವಶ ಪಡಿಸ್ಕೊಳ್ಳಲು ಸಾಧ್ಯವಿರುವಾಗ ಪಾಸ್ವರ್ಡ್ಗೂ ಅದೇ ನಿಯಮ ಅನ್ವಯಿಸುತ್ತದೆ-ಮಾತ್ರವಲ್ಲ,ತಮಗೆ ಬೇಕಾದ್ದು ಪಾಸ್ವರ್ಡ್ ಅಲ್ಲ-ಲ್ಯಾಪ್ಟಾಪಿನಲ್ಲಿರುವ ಮಾಹಿತಿ.ಒಂದುವೇಳೆ ಈಕೆಯ ಪರವಾಗಿ ತೀರ್ಪು ಬಂದರೆ,ಎಲ್ಲಾ ಆರೋಪಿಗಳೂ ಇದರನ್ವಯ ಪಾಸ್ವರ್ಡ್ ನೀಡಲು ನಿರಾಕರಿಸಿ,ವಿಚಾರಣೆಗಳು ಹಳ್ಳಹತ್ತಲಿವೆ ಎಂದು ಪೋಲೀಸರ ವಾದ.ಆದರೆ ಆರೋಪಿ ಹೆಂಗಸು,ಪಾಸ್ವರ್ಡ್ ಎನ್ನುವುದು ಕೀಲಿಯಂತಲ್ಲ-ಅದು ತನ್ನ ಮನಸ್ಸಿನಲ್ಲಿರುವ,ತಾನು ಮಾತ್ರಾ ಬಲ್ಲ ರಹಸ್ಯ ಎಂದಿದ್ದಾಳೆ.ಕೋರ್ಟು ಆಕೆಯ ಪರವಾಗಿ ತೀರ್ಪು ನೀಡುತ್ತಾ,ಆಕೆ ಪಾಸ್ವರ್ಡ್ ನೀಡುವುದು ಬೇಡ,ಲ್ಯಾಪ್ಟಾಪ್ಗೆ ಲಾಗಿನ್ ಆಗಿ,ಅದನ್ನು ಪೋಲೀಸರಿಗೆ ನೀಡಿದರೆ ಸಾಕು ಎಂದು ನಿರ್ಣಯ ಕೈಗೊಂಡರೆ ಹವೂ ಸಯದು,ಕೋಲೂ ಮುರಿಯದು!
Udayavani