ನಾವು ಪೌರ್ವಾತ್ಯರು

ನಾವು ಪೌರ್ವಾತ್ಯರು

ಉಡುಪಿಯ ಅಷ್ಟಮಠದ ಸ್ವಾಮೀಜಿಯೊಬ್ಬರು ಅಮೆರಿಕದ ಮಧ್ವಸಂಘದವರ ಆಹ್ವಾನದ ಮೇರೆಗೆ ಅಲ್ಲಿಗೆ ಹೋದಾಗ ಅವರು ಕಂಡ ಹಿಂದೂಅಮೆರಿಕ ಹೇಗಿತ್ತೆಂಬುದನ್ನು “ತರಂಗ” ವಾರಪತ್ರಿಕೆಯ ಸಂದರ್ಶನವೊಂದರಲ್ಲಿ ಸಾದ್ಯಾಂತ ವಿವರಿಸಿದ್ದಾರೆ. 14 ಜೂನ್,1998 ರ ಈ ಹಳೆಯ ಸಂಚಿಕೆ ಅದ್ಹೇಗೋ ನನ್ನ ಮನೆಯಲ್ಲಿ ಇತ್ತೀಚೆಗೆ ನನ್ನ ಗಮನ ಸೆಳೆಯಿತು.. ಆ ವಿಶೇಷ ಲೇಖನದ ತುಣುಕುಗಳನ್ನಿಲ್ಲಿ ಕೊಡತ್ತಿದ್ದೇನೆ [http://youthtimes.blogspot.com|ಹಿಂದೂಅಮೆರಿಕಾ]
ಪೌರ್ವಾತ್ಯರದ್ದು ಧರ್ಮಪ್ರಧಾನವಾದ ಬದುಕು. ಪಾಶ್ಚಾತ್ಯರದ್ದು ಅರ್ಥಪ್ರಧಾನ ಬದುಕು. ಆದರೆ ಇತ್ತೀಚೆಗಿನ ದಿನಗಳಲ್ಲಿ ಅನೇಕ ಪಾಶ್ಚತ್ಯರಿಗೆ ಧರ್ಮಪ್ರಧಾನ ಬದುಕಿನ ಬೆಲೆ ಗೊತ್ತಾಗುತ್ತಿದೆ. ಪೌರ್ವಾತ್ಯರು ಅರ್ಥಪ್ರಧಾನ ಬದುಕಿನತ್ತ ಆಕರ್ಷಿತರಾಗುತ್ತಿದ್ದಾರೆ.

‘ಪೂರ್ವಜರಲ್ಲಿ ಪೂರ್ವಾಗ್ರಹ ಸ್ವಲ್ಪ ಜಾಸ್ತಿ. ಅದು ಎಷ್ಟೇ ಕೆಟ್ಟದಾಗಿರಲಿ ಒಮ್ಮೆ ಹಿಡಿದರೆಂದರೆ ಪೌರ್ವಾತ್ಯರು ಅದನ್ನು ಬಿಡಲೊಲ್ಲರು. ಪಾಶ್ಚಾತ್ಯರಲ್ಲಿ ಪಶ್ಚಿಮಾಗ್ರಹ(ಅಪರಾಗ್ರಹ) ಜಾಸ್ತಿ. ಒಂದು ವಸ್ತು ಎಷ್ಟೇ ಒಳ್ಳೆಯದಿರಬಹುದು, ಹೆಚ್ಚು ಕಾಲ ಅದನ್ನು ಹಿಡಿದಿಡಲಾರರು. ಆದ್ದರಿಂದಲೇ ಅಲ್ಲಿ ‘ಡೈವೋರ್ಸ್’ ಜಾಸ್ತಿ ಅಂತ ಕಾಣುತ್ತದೆ.
“ಪೂರ್ವಕ್ಕೆ ಪೂರ್ವ ಎಂಬ ಹೆಸರು ಸಾರ್ಥಕ. ಪಶ್ಚಿಮಕ್ಕೆ ಪಶ್ಚಿಮ ಎಂಬ ಹೆಸರು ಸಮರ್ಪಕ.”

ಆದ್ದರಿಂದ, ನನಗನಿಸುತ್ತದೆ: ನಾವು ಯಾವಾಗಲೂ  ಒಳ್ಳೆಯ ಹವ್ಯಾಸಗಳನ್ನ, ನಡವಳಿಕೆಗಳನ್ನ ಮತ್ತು  ಉತ್ತಮ ಆಯ್ಕೆಗಳನ್ನೇ ಮಾಡಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡರೆ ನಮ್ಮ ಬದುಕು ಸಾರ್ಥಕವಾಗುತ್ತದೆ. ಯಾಕೆಂದರೆ, ನಾವು ಶ್ರೀ ಸ್ವಾಮೀಜಿಯವರು ಹೇಳಿದಂತೆ ನಾವು  ಪೌರ್ವಾತ್ಯರು ನಮ್ಮಲ್ಲಿ ಪೂರ್ವಾಗ್ರಹ ಸ್ವಲ್ಪವೇನು ಬಹಳ ಜಾಸ್ತಿಯೆ. ನಾವು ಕೆಟ್ಟದ್ದಕ್ಕಿಂತ ಒಮ್ಮೆ ಒಳ್ಳೆಯದನ್ನೇ ನಮ್ಮ ಆಯ್ಕೆಯನ್ನಾಗಿಸಿ ಅಭ್ಯಾಸ ಮಾಡಿಕೊಂಡರೆ ಸಾಕು.  ಅದನ್ನೆಂದಿಗೂ ಕಡೆ ಉಸಿರಿನವರೆಗೂ ಬಿಡಲಾರೆವು.
-ರೈಟರ್ ಶಿವರಾಂ

ನಾವು ಏನು ಮಾಡಬೇಕೆಂದು ಬಯಸಿದ್ದೆವೋ ಅದನ್ನು ಮಾಡಲಿಲ್ಲ;
ಆದರೂ ನಾವು ಏನಾಗಿದ್ದೇವೋ ಅದಕ್ಕೆ ನಾವೇ ಹೊಣೆಯಾಗಿದ್ದೇವೆ.
ಅದೇ ವಾಸ್ತವ ಸಂಗತಿಯಾಗಿದೆ.
-ಜೀನ್ ಪಾಲ್ ಸಾರ್ತ್ರೆ

Rating
No votes yet