ಬಾಲ್ಯದ ಮೆಲುಕು

ಬಾಲ್ಯದ ಮೆಲುಕು

ಬಾಲ್ಯದ ಮೆಲುಕು


೧. ಸೀನನ ಗುಟ್ಟು


ಈ  ದಿನಕ್ಕೆ ಒಂದು ವರ್ಷದಿಂದ ಕಾಯುತ್ತಿದ್ದೆ. ಓದಾಟ ಒದ್ದಾಟ, ಪರೀಕ್ಷೆಗಳ ಒತ್ತೊತ್ತಡದ ಸಮಯ ಮುಗಿದು ನಾವೆಲ್ಲಾ ಸ್ವಚ್ಚಂದವಾಗಿ ಹಕ್ಕಿಗಳ ಹಾಗೆ ವಿಹರಿಸುವ ಕಾಲಕ್ಕೆ. ಅದೋ ನಮ್ಮ ಹಳ್ಳಿಯ ಜೀವನದ ಹೊಸ ಹೊಸ ಅನ್ವೇಷಣೆಯ ಕಾಲವಾದ ದೊಡ್ಡ ರಜೆ ಅರ್ಥಾತ್ ವರ್ಷಾಂತ್ಯದ ಪರೀಕ್ಷೆಯ ನಂತರದ ವೆಕೇಶನ್. ನನ್ನ ತಂದೆಯವರು ಶಾಲಾ ಮಾಸ್ತರಾದುದರಿಂದ ರಜೆಯಲ್ಲಿ ಇಂತವಕ್ಕೆಲ್ಲಾ ಹೇರಾಳ ಅವಕಾಶವಿರುತ್ತಿತ್ತು. ಹೊಸದೇನಾದರೂ ಅನುಭವ ಕಲಿಕೆ ಸಿಗಲೆಂಬ ತುಡಿದಾಟದಲ್ಲಿರುವಾಗಲೇ ಸೀನ ಭೆಟ್ಟಿಯಾಗಿದ್ದ. ಆ ಶನಿವಾರ ಸಂಜೆ ಒಂದು ವಿಚಿತ್ರ ಸೀಟಿಯ ಸದ್ದು ಕೇಳಿಸಿ ಮನೆಯ ಹೊರ ಬಂದೆ ಇಂತಹಾ ಸದ್ದು ಸೀನನ ಬಾಯಲ್ಲಿ ಮಾತ್ರ ಕೇಳಬಹುದು, "ಏಯ್ ನಾಳೆ ಬರ್ತಿಯಾ ಎಲ್ಲೋ ಒಂದ್ಕಡೆ ಹೋಗಲಿಕ್ಕಿದೆ" ಅಂದ. "ಎಲ್ಲಿಗೆ?"  ಅಂತ ಕೇಳಿದ್ದಕ್ಕೆ, "ಅದೆಲ್ಲಾ ಕೇಳಬೇಡ ಅದೇ ಸರ್ಪ್ರೈಸ್"  ಅಂದ. "ಬೆಳಿಗ್ಗೆ ತಿಂಡಿ ತಿಂದ ಮೇಲೆಯಾ ..?"  ಅಂತ ಕೇಳಿದರೆ "ನನಗೆ..?"  ಅಂತ ಮರು ಪ್ರಶ್ನೆ ಮಾಡಿ, ಪರಿಹಾರವನ್ನೂ ಅವನೇ ಕೊಟ್ಟ ನಮ್ಮ ಮನೆಯ ಅಡುಗೆ ಮನೆಯ ಗೋಡೆಯಲ್ಲಿ ಒಂದು ಗವಾಕ್ಷವಿದೆ ಅದು ಸೀದಾ ಕೊಟ್ಟಿಗೆಗೆ ತೆರೆಯುತ್ತೆ , ಬೆಳಿಗ್ಗೆ ಕೊಟ್ಟಿಗೆಯಿಂದ ಹಾಲು ಕರೆದು ತರುವಾಗ ಬೇರೆಯರು ಯಾರು ನೋಡದಿರಲಿ ( ದೃಷ್ಟಿ ತಾಗದೆ ಇರಲು )ಅಂತ ಈ ಏರ್ಪಾಡನ್ನು ಅಮ್ಮ ಸ್ವತಹ ನಿಂತು ಮಾಡಿಸಿದ್ದಳು , "ತಾನು ಕೊಟ್ಟಿಗೆಯಲ್ಲಿರ್ತೇನೆ ನೀನು ಒಳಗಿಂದ ನನಗೆ ತಿಂಡಿ ಆ ಗವಾಕ್ಷದಲ್ಲೇ ಕೊಟ್ಟುಬಿಡು" ಎಂದ. ನಮಗೆಲ್ಲ ಇವನೇ ಔಟ್ ಆಫ್ ಬಾಂಡ್ ಹಾಗಿರುವಾಗ ಇವನಿಗೆ ತಿಂಡಿ ಕೊಟ್ಟದ್ದು ಕೇಳಿದರೆ ನಾನೇ ಔಟ್ ಆಫ್ ಬಾಂಡ್ ಆದೇನು ಅನ್ನಿಸಿತು  ಆ ಕ್ಷಣ.

 

 

 


ಈ ಸೀನನೂ ನಾನು ಓರಗೆಯವರು. ಆದರೆ ಆತ ಓದೋದು ಬಿಟ್ಟು ಉಳಿದೆಲ್ಲಾ ರೀತಿಯಿಂದ ಪ್ರಕಾಂಡ ಪಂಡಿತ. ಪ್ರತಿ ತರಗತಿಯಿಂದಲೂ ೪-೫ ಬಾರಿ ಓಡಿ ಹೋದ ಬಲು ಬುದ್ದಿ(?)ವಂತ. ಅದಕ್ಕೇ ಏನೋ ಅವನು ನಮಗೆಲ್ಲಾ ನಮ್ಮ ಮನೆಯವರ ಕಡೆಯಿಂದ ಔಟ್ ಆಫ್ ಬಾಂಡ್.  ಆದರೆ ಆ ವಿಷಯಕ್ಕಾಗಿಯೇ ಆತನು ನಮಗೆಲ್ಲಾ ಗುರು, ಅಥವಾ ನಾಯಕ.  ಬರೇ ಮೋಟು ಪಂಜೆ ಹಳೆ ಶರ್ಟ್ ನ ಆತ ಶಾಲೆಯಲ್ಲಿ ಜಾಸ್ತಿ ಓದಿದವನಲ್ಲ , ಆದರೆ ಬರೇ ಜಾನುವಾರು ಮೆಯಿಸಿಕೊಂಡೇ ಆತ ನಮ್ಮೊಡನೆಯೇ ಬೆಳೆದರೂ ಸಾಮಾನ್ಯ ಓದುವುದನ್ನು ಮಾತ್ರ ನಮ್ಮಿಂದ ಕಲಿತದ್ದು ಬಿಟ್ಟರೆ ಅವನಿಂದ ನಾವು ಕಲಿತದ್ದು ತುಂಬಾನೇ ಇದೆ  ಇವನ ಯೋಜನೆಯಲ್ಲಿ ಏನಾದರೊಂದು ವಿಶಿಷ್ಯತೆ ಇರುತ್ತದೆ. ಅದರಲ್ಲೂ ಪ್ರತಿ ಸಾರಿ ಹೊಸದೊಂದು ಯೋಜನೆ , ಸರ್ಪ್ರೈಸ್!!, ಅದೆಷ್ಟು ಗುಟ್ಟೆಂದರೆ ನಾವೆಲ್ಲಾ ತಿಪ್ಪರ ಲಾಗ ಹಾಕಿದರೂ ಅವನಿಂದ ಅವನೇ ಹೇಳದೆ ಕಂಡು ಹಿಡಿಯಲು ಸಾಧ್ಯವೇ ಇಲ್ಲ.. ಆದರೆ ಅವನ ಈ ಸರ್ಪ್ರೈಸ್ ಕಂಡು ಹಿಡಿಯಲು ಈ ಸಾರಿಯಾದರೂ ಪ್ರಯತ್ನಿಸಲೇ ಬೇಕು ಅನ್ನಿಸಿತು. ನಮ್ಮಈ ಗುಂಪಿನಲ್ಲಿ ನಾನು, ಗಣಪ, ಮುತ್ತ, (ಸೀನನ ತಮ್ಮ) , ರಾಮ, ಹೆರಿಯ ಮತ್ತು ಸೀನನ ಜತೆಗಾರ ಅವನ ಕೂರ, ಕಟ್ಟಾ ಸೀನನ ಭಕ್ತನಾದ ಅದು ಅವನು ಹೇಳಿದ ಹಾಗೆ ಕೇಳುತ್ತಿತ್ತು ಬೇಟೆಯಲ್ಲಿ ಓಡುವುದರಲ್ಲಿ ನಂಬರ್ ಒನ್ ಅವಶ್ಯಕತೆ ಇದ್ದಾರೆ ಮಾತ್ರ ಬಗುಳುವ ಪಕ್ಕಾ ಜಾತಿ ನಾಯಿಯ ತರದ ಪಕ್ಕಾ ನಾಯಿಜಾತಿ. ನಾವು ಈ ಸಾರಿ ಊರಿಗೆ ಹೋಗುತ್ತಿದ್ದೇವೆ ಅಂತ ಸಂಜೆ ರಾಮ ನನ್ನ ಬಳಿ ತಿಳಿಸಿದ, ಹೇಗೋ ಮುತ್ತನಿಂದ ವಿಷಯ ತಿಳಿದುಕೊಂಡಿದ್ದನಾತ, . ನನಗೆ ಸೀನನ ಯೋಜನೆಯ ಪಾಲುದಾರನಾಗುವ ಉಪಾಯವೊಂದು ಹೊಳೆಯಿತು .
 

Rating
No votes yet