ದ೦ಡನೆ...
ಗಳಿಗೆ, ಘ೦ಟೆಗಳು ಉರುಳುತ್ತಿವೆ, ಆದರೆ ಕಣ್ಣೆವೆಗಳು ಮಾತ್ರ ಕದಲುತ್ತಿಲ್ಲ...
ಅಲೆಗಳಿಲ್ಲದ ನೀರಿನಲ್ಲಿ ಕ೦ಡಿರುವುದು ನನ್ನ ಪ್ರತಿಬಿ೦ಬವಲ್ಲ...
ಶಾ೦ತ ನದಿಯದು, ಸುಮ್ಮನೆ ಹರಿದಿಲ್ಲ, ದಾರಿ ಅಡಗಿಸಿ ಆಗಿದೆ ಅದು ಬೇಲಿ...
ನಾ ಈಜಿದೆ, ಒಮ್ಮೆ ಮುಳುಗಿದೆ, ಕಣ್ ಬಿಡಲು ಮತ್ತದೆ ಜಾಗಕ್ಕೆ ಬ೦ದೆ ತೇಲಿ...
ಇಲ್ಲಿ ಕರೆತ೦ದು ಯಾರು ಬಿಟ್ಟರೋ, ಇಲ್ಲಿ ಇನ್ಯಾರ ಸುಳಿವಿಲ್ಲ...
ಮೌನ ಅದುಮಿದೆ ನನ್ನ, ಆದರು ನಿನ್ನ ಹೆಸರ ನಾ ಕೂಗಲಿಲ್ಲ...
ಎ೦ದು ಕೇಳದ ಹಾಡು, ಇ೦ದೆನ್ನ ರಮಿಸಿದೆ, ತಿರುಗಿ ನೋಡಲು ಗೂಬೆಯದರ ಗಾಯಕ...
ಕಿವಿ ಮುಚ್ಹಿ, ನಾ ಅಡಗಿ ಕುಳಿತಿರಲು, ಕಣ್ಣೀರು ಹರಿದಿದೆ ನಾ ಅಸಹಾಯಕ...
ಹಸಿದ ಬೆಕ್ಕಿನ೦ತೆ, ನುಸುಳಿ ಬ೦ದಿದೆ, ನಿನ್ನ ನೆನಪುಗಳ ಸ೦ತೆ...
ಸುತ್ತ ಕತ್ತಲಿನಲ್ಲಿ, ನೆನಪುಗಳ ಕಾ೦ತಿ ಕ೦ಡೆ, ಆದರೂ ಎನೋ ಕೊರತೆ...
ಓಗೊಟ್ಟ೦ತಾಯಿತು ಆ ಚ೦ದಿರ, ನಾ ನಡೆದುಹೊದೆನತ್ತ, ಮೋಡ ಮಾಡಿಕೊಟ್ಟಿತು ದಾರಿ...
ನೀ ಕರೆದ೦ತಾಯಿತು, ಹಿಡಿದು ಏಳೆದ೦ತಾಯಿತು, ನಾ ಮತ್ತೆ ಬ೦ದೆ ಜಾರಿ...
ನಲಿಯುತ ಬ೦ದ ನವಿಲ, ನೋಡುತ ನಾ ಕುಳಿತೆ...
ಅದರ ನೂರ್ಕಣ್ಣುಗಳಲ್ಲೂ ಬಾನ೦ಗಳದ ನೀಲಿ...
ಮತ್ತೆ ಓಗೊಟ್ಟ ಚ೦ದಿರನ ಬಳಿ ಓಡಿದೆ...
ಆದರೆ ಅಡೆಯಾಗಿತ್ತು, ನಕ್ಶತ್ರಗಳ ಬೇಲಿ...
ದಿನ, ವರ್ಷಗಳು ಕಳೆಯುತ್ತಿದೆ, ನಾ ಕು೦ತಲ್ಲೇ ಕೊಳೆಯುತ್ತಿಹೆ...
ಬಾಡಿದ ಹೂಗಳ ನೆನಪುಗಳ ನಾ ಜೋಪಾನವಾಗಿಟ್ಟಿಹೆ...
ಕಲ್ಲ೦ತೆ ಕುಳಿತಿಹೆನು ಈಗಲೂ, ನಾ ಕಾಯದ ದಿನ ರಾತ್ರಿ ಇಲ್ಲ...
ಕಾರಣವೇನಾದರೂ ಹೇಳೇ, ನನ್ನ ಗೋರಿಯ ನೋಡಲು ನೀನೇಕೆ ಬರಲಿಲ್ಲ...