ಚೀನಿಯರ ಹೊಸ ವರುಷ ಬಗ್ಗೆ ಅರಿಯೋಣ ಬನ್ನಿ- ’ಗಾಂಗ್ ಸೀ ಫಾ ಚಾಯ್"-
ಇಂದು ೨೦೧೨, ೨೩ ಽ ೨೪ ವಿಶ್ವದಾದ್ಯಂತ ಚೀನಿಯರಿಗೆ ಹೊಸ ವರುಷ. ಹೊಸ ಹರುಷ. ಈ ವರುಷದ ಪ್ರಾಣಿಯ ಸಂಕೇತ ಡ್ರಾಗನ್.
ಚೀನಿಯರು ಕೂಡ ಚಾಂದ್ರಮಾನ ಪರಿಪಾಲಕರು. ನಮ್ಮಲ್ಲಿ ಹನ್ನೆರಡು ರಾಶಿಗಳು ಇರುವಂತೆ ಚೀನಿಯರಲ್ಲಿ ಹನ್ನೆರಡು ಪ್ರಾಣಿಗಳು ವರುಷದ ಸಂಕೇತ. ಮೊದಲಿಗೆ ಇಲಿ, ಎತ್ತು, ಹುಲಿ, ಮೊಲ, ಡ್ರಾಗನ್, ಹಾವು, ಕುದುರೆ, ಮೇಕೆ, ಕೋತಿ, ಕೋಳಿ, ನಾಯಿ ಮತ್ತು ಹಂದಿ ಹೀಗೆ ಪ್ರತಿ ವರುಷ ಈ ಪ್ರಾಣಿಗಳ ಸಂಕೇತಗಳು. ಆಯಾ ಪ್ರಾಣಿಗಳ ಮನೋಭಾವದಂತೆ ಆ ವರುಷಗಳಲ್ಲಿ ಶುಭಾ-ಶುಭಗಳು ನಡೆಯುತ್ತದೆ ಎಂದು ಚೀನಿಯರ ಬಲವಾದ ನಂಬಿಕೆ. ಅವರಲ್ಲಿ ಸರಿ ಸಂಖ್ಯೆ ಯಿನ್-ಸ್ತ್ರೀ ಹಾಗೂ ಬೆಸ ಸಂಖ್ಯೆ ಯಾಂಗ್-ಪುರುಷ. ಇಲಿ ಮೊದಲನೆಯ ಪ್ರಾಣಿ ಬೆಸ ಸಂಖ್ಯೆ ಪುರುಷ ಗುಂಪಿಗೆ ಸೇರಿದೆ.
ಚೀನಿಯರು ಹೊಸ ವರುಷವನ್ನು ಬಹಳ ಮುತುವರ್ಜಿಯಿಂದ ಕೊಂಡಾಡುತ್ತಾರೆ.’ಗಾಂಗ್ ಸೀ ಫಾ ಚಾಯ್"- ಹೊಸವರುಷದ ಶುಭಾಶಯಗಳು ಎಂದರ್ಥ. ಮನೆಯ ಹಿರಿಯ ಕಿರಿಯರೆಲ್ಲರೂ ಕೂಡಿ "ಫ್ಯಾಮಿಲಿ ರಿ ಯೂನಿಯನ್" ಎಂದು ಹಬ್ಬದ ಹಿಂದಿನ ರಾತ್ರಿ ದೊಡ್ಡ ಔತಣ ಮಾಡಿ ಎಲ್ಲರು ಒಂದೆಡೆ ಸೇರುತ್ತಾರೆ. ಊಟವಾದ ಮೇಲೆ ಚಿಕ್ಕವರು ಹಿರಿಯರು ನೀಡುವ ಕೆಂಪು ಬಣ್ಣದ ’ಹಾಂಗ್-ಬಾವ್ ಪೊಟ್ಟಣಗಳಿಗಾಗಿ ಕಾಯುತ್ತಾರೆ. ಈ ಪೊಟ್ಟಣಗಳು ಮದುವೆ ಆಗದಿರುವ ಯುವಕ ಯುವತಿಯರಿಗಾಗಿ ಮತ್ತು ಚಿಕ್ಕ ಮಕ್ಕಳಿಗಾಗಿ ಮೀಸಲು. ಹಾಂಗ್‍ಬಾವ್ ’ಕೆಂಪು ಪೊಟ್ಟಣಗಳು ಗರಿ ಗರಿಯಾದ ನೋಟುಗಳು" ಪರಸ್ಪರರಿಗೆ ಉಡುಗೊರೆಯಾಗಿ ನೀಡುತ್ತಾರೆ. ಈ ಪೊಟ್ಟಣಗಳಲ್ಲಿ ಸಮ ಸಂಖ್ಯೆಗಳಲ್ಲಿ ಹಣ ಇಟ್ಟಿರುತ್ತಾರೆ. ಕಿತ್ತಳೆ, ಪಾಲಕ್, ಕಡಲೆಕಾಯಿ, ಗೋಡಂಬಿ, ಚಿಕ್ಕಿ, ಮೀನುಗಳು ಈ ಹಬ್ಬದ ಸಂದರ್ಭದಲಿ ಉಪಯೋಗಿಪ ಶುಭ ಪದಾರ್ಥಗಳು.
ಏನಿದು ಡ್ರಾಗನ್?
ಡ್ರಾಗನ್ ಎಂಬುದು ಜಿಂಕೆಯ ಕೊಂಬು, ಒಂಟೆಯ ತಲೆ, ಮೊಲದ ಕಣ್ಣು, ಎತ್ತಿನ ಕಿವಿ, ಹಲ್ಲಿಯ ಕತ್ತು, ಆಮೆಯ ಹೊಟ್ಟೆ, ಮೀನಿನ ಚಿಪ್ಪು, ಹುಲಿಯ ಪಂಜು, ಹದ್ದಿನ ಉಗುರುಗಳಿಂದ ಸೃಷ್ಟಿಸಿದ ದಂತಕಥೆಯ ಒಂದು ಪ್ರಾಣಿ. ಚೀನಿಯರ ವಿವಿಧ ಜನಾಂಗಗಳ ಜನಪದ ಕಥೆಗಳನ್ನು ಒಂದುಗೂಡಿಸುವ ಒಂದು ಚಿನ್ಹೆ. ಸತ್ತವರನ್ನು ಸ್ವರ್ಗಕ್ಕೆ ಕೊಂಡೊಯ್ಯುವ ಪ್ರಾಣಿ ಡ್ರಾಗನ್ ಎಂಬುದು ಒಂದು ನಂಬಿಕೆ. ಬಹಳ ಹಿಂದೆ ಡ್ರಾಗನ್ ಚಿನ್ಹೆ ಚೀನಾದ ಚಕ್ರವರ್ತಿಗಳಿಗೆ ಮಾತ್ರ ಮೀಸಲಾಗಿತ್ತು.
ಡ್ರಾಗನ್ ಪ್ರಾಣಿ ಮರ, ನೀರು, ಗಾಳಿ, ಬೆಂಕಿ, ಭೂಮಿ, ಲೋಹ ಹೀಗೆ ನಾನಾ ಪ್ರಕಾರಗಳನ್ನು ಹೊಂದಿದೆ. ಮರದ ಡ್ರಾಗನ್ ಚತುರತೆ, ಕುಶಲತೆ, ಬೆಂಕಿ ಉಗುಳುವ ಡ್ರಾಗನ್ ಚಂಚಲತೆ, ಆಕ್ರಮಣ ಭಾವ ತುಂಬಿದರೆ, ನೀರು ಡ್ರಾಗನ್ ಶಾಂತತೆ, ಬುದ್ಧಿಮತೆಯಿಂದ ಕೂಡಿದ್ದು, ಲೋಹದ ಡ್ರಾಗನ್ ನಿಶ್ಚಲತೆ, ನಿಖರತೆ ಮತ್ತು ಭೂಮಿಯ ಡ್ರಾಗನ್ ತೂಕದಿಂದ ಕೂಡಿದ್ದು, ವಿಚಾರಪೂರಿತ, ವಿನಯಗಳ ಸಂಕೇತ ಎಂದು ಹೇಳುತ್ತಾರೆ.
ಫೆಂಗ್‍ಶೂಯಿ ಮತ್ತು ಡ್ರಾಗನ್!
ಫೆಂಗ್‍ಶೂಯಿ ಶುಭಕಾರಕ ಪ್ರಾಣಿಗಳ ಲಾಂಛನದಲಿ ಡ್ರಾಗನ್‍ಗೆ ಬಹುಮುಖ್ಯ ಪಾತ್ರ. ಫೆಂಗ್‍ಶೂಯಿ ವಾಸ್ತುಶಾಸ್ತ್ರ ಇದೀಗ ಚೀನಿಯರೇ ಅಲ್ಲದೆ ವಿಶ್ವದಾದ್ಯಂತ ಬಹುತೇಕರು ನಂಬಿ ಬಳಸುವ ಬಹಳ ಜನಪ್ರಿಯ ವಾಸ್ತು ಶಾಸ್ರವಾಗಿದೆ. ಮನೆ-ಕಚೇರಿ ಮುಂತಾದ ಆವಾಸ ಕಟ್ಟಡಗಳಲ್ಲಿ ಶುಭ ಲಾಂಚನಗಳನ್ನು ಅಳವಡಿಸಿ, ವಾತಾವರಣದಲ್ಲಿರುವ ಶುಭ ಶಕ್ತಿಗಳನ್ನು ಆಹ್ವಾನಿಸಿ, ಅಶುಭಕಾರಕಗಳನ್ನು ಹೊರಗಟ್ಟುವುದು ಈ ಆಚರಣೆಯ ಮುಖ್ಯ ಅಂಶ.
ಸಮೃದ್ಧಿ- ಅಭಿವೃದ್ದಿಯ ಸಂಕೇತವಾಗಿರುವ ಡ್ರಾಗನ್ ಹಸಿರು ಬಣ್ಣದಿಂದ ಕೂಡಿದ್ದು, ಎಡಭೂಭಾಗವನ್ನು ಹೊಂದಿರುತ್ತದೆ. ಇದನ್ನು ಕಟ್ಟಡದ ಎಡಭಾಗದಲ್ಲಿರಿಸಿ, ಇತರ ಪ್ರತೀಕಗಳಿಗಿಂತ ಎತ್ತರದಲ್ಲಿರಬೇಕು ಎಂಬುದು ಫೆಂಗ್‍ಶೂಯಿ ಶಾಸ್ತ್ರಜ್ಞರ ಹೇಳಿಕೆ.
ಈ ವರುಷದ ಭವಿಷ್ಯದ ಪ್ರಕಾರ ಬಹುತೇಕ ಮನೆ, ದೇಶ, ರಾಷ್ಟ್ರಗಳಿಗೆ ಅಭಿವೃದ್ದಿ ಉಂಟು. ಹಾಗೆಯೇ ಜಗಳ, ಗದ್ದಲ, ಗಲಭೆಗಳು ರಾಷ್ಟ್ರ, ದೇಶ, ಮನೆಗಳಲಿ ನಡೆಯಬಹುದು. ಈ ವರುಷ ಧನಾತ್ಮಕ, ಇತ್ಯಾಥ್ಮಕ ಬಲ ದುರ್ಬಲವಾಗಿದೆ. ಇದು ಏಷಿಯಾ-ಫೆಸಿಫಿಕ್ ಹಾಗೂ ದಕ್ಷಿಣ ಅಮೇರಿಕ ಜನರು ಹೆಚ್ಚು ಜಾಗೃತರಾಗಿ-ಶಾಂತಿಯನು ಕಾಪಾಡಿಕೊಂಡು, ಒಗ್ಗಟ್ಟಿನಿಂದ ಬಾಳಬೇಕು ಎಂಬುದು ಜ್ಯೋತಿಷಿಗಳ ಹೇಳಿಕೆ.
ಇನ್ನಷ್ಟು ಡ್ರಾಗನ್ ಬಗ್ಗೆ...
ಮೂಡಬಿದಿರೆಯ ಸಾವಿರ ಕಂಬದ ಬಸದಿಯ ಕಲ್ಲುಗಳ ಮೇಲೆ ಕೆತ್ತಿರುವ ಜಿರಾಫೆ ಮತ್ತು ಡ್ರಾಗನ್ ಚಿತ್ರಗಳು ಇಲ್ಲಿನ ಅರಸರಿಗೂ, ಆಫ್ರಿಕಾ ಮತ್ತು ಚೀನಾ ದೇಶದ ರಾಜರಿಗೂ ವ್ಯಾಪಾರ ಸ೦ಬ೦ಧಗಳಿದ್ದುದನ್ನು ಇದ್ದಿತೆಂದು ಸಾರುತ್ತದೆ. ನಾಗಪುರದಲ್ಲಿರುವ ಬೌದ್ಧರ ಡ್ರಾಗನ್ ಪ್ಲೇಸ್ ಕೂಡ ಪ್ರಸಿದ್ಧಿ ಪಡೆದಿದೆ. ಡ್ರಾಗನ್ ನಾಮಾಂಕಿತ ಬಹುತೇಕ ಚಿತ್ರಗಳು ಬಂದಿವೆ. ಡ್ರಾಗನ್ ದೋಣಿ ಸ್ಪರ್ಧೆ, ಒಂದು ಜನಪ್ರಿಯ ಸಾಂಪ್ರದಾಯಿಕ ಚೀನಾದ ಕ್ರೀಡೆ. ದಕ್ಷಿಣ ಏಷಿಯಾದ ನಾಡುಗಳಲ್ಲಿ ಮದುವೆ, ಗೃಹಪ್ರವೇಶ, ಶುಭ ತರುವ ಡ್ರಾಗನ್ ಡ್ಯಾನ್ಸ್ ಮತ್ತು ಲಯನ್ ಡ್ಯಾನ್ಸ್ ಬಹಳ ಪ್ರಸಿದ್ಧಿ.
Comments
ಉ: ಚೀನಿಯರ ಹೊಸ ವರುಷ ಬಗ್ಗೆ ಅರಿಯೋಣ ಬನ್ನಿ- ’ಗಾಂಗ್ ಸೀ ಫಾ ಚಾಯ್"-
In reply to ಉ: ಚೀನಿಯರ ಹೊಸ ವರುಷ ಬಗ್ಗೆ ಅರಿಯೋಣ ಬನ್ನಿ- ’ಗಾಂಗ್ ಸೀ ಫಾ ಚಾಯ್"- by makara
ಉ: ಚೀನಿಯರ ಹೊಸ ವರುಷ ಬಗ್ಗೆ ಅರಿಯೋಣ ಬನ್ನಿ- ’ಗಾಂಗ್ ಸೀ ಫಾ ಚಾಯ್"-
ಉ: ಚೀನಿಯರ ಹೊಸ ವರುಷ ಬಗ್ಗೆ ಅರಿಯೋಣ ಬನ್ನಿ- ’ಗಾಂಗ್ ಸೀ ಫಾ ಚಾಯ್"-
In reply to ಉ: ಚೀನಿಯರ ಹೊಸ ವರುಷ ಬಗ್ಗೆ ಅರಿಯೋಣ ಬನ್ನಿ- ’ಗಾಂಗ್ ಸೀ ಫಾ ಚಾಯ್"- by karthi
ಉ: ಚೀನಿಯರ ಹೊಸ ವರುಷ ಬಗ್ಗೆ ಅರಿಯೋಣ ಬನ್ನಿ- ’ಗಾಂಗ್ ಸೀ ಫಾ ಚಾಯ್"-
ಉ: ಚೀನಿಯರ ಹೊಸ ವರುಷ ಬಗ್ಗೆ ಅರಿಯೋಣ ಬನ್ನಿ- ’ಗಾಂಗ್ ಸೀ ಫಾ ಚಾಯ್"-
In reply to ಉ: ಚೀನಿಯರ ಹೊಸ ವರುಷ ಬಗ್ಗೆ ಅರಿಯೋಣ ಬನ್ನಿ- ’ಗಾಂಗ್ ಸೀ ಫಾ ಚಾಯ್"- by hamsanandi
ಉ: ಚೀನಿಯರ ಹೊಸ ವರುಷ ಬಗ್ಗೆ ಅರಿಯೋಣ ಬನ್ನಿ- ’ಗಾಂಗ್ ಸೀ ಫಾ ಚಾಯ್"-