ವಿಮಾನ ಯಾನ

ವಿಮಾನ ಯಾನ

ಕವನ


ಗಗನ ನೌಕೆ ನೆಲದಿ ತೆವಳಿ ತೆವಳಿ

ಮೇಲೆ ಮೇಲೆ ಹಾರು ತಿರಲು

ಎತ್ತ ನೋಡಲತ್ತ ಮೋಡ

ಸುತ್ತ ಮುತ್ತ ಮೋಡವು

 

ಕೆಳಗೆ ಮೋಡ ಮೇಲೆ ಮೋಡ

ಹಿಂದೆ ಮೋಡ ಮುಂದೆ ಮೋಡ

ಬಿಳಿಯ ಮೋಡ ನೀಲ ಮೋಡ

ಕಪ್ಪು ಮೋಡ ಬೂದ ಮೋಡ

ತಿಳಿಯ ಮೋಡ ದಟ್ಟ ಮೋಡ

ಸಂದೇಶಗಳ ಹೊತ್ತ ಮೋಡ

ಸಂದೇಶಗಳ ಸಾರು ತಿರುವ ಮೋಡವು

 

ರಾಶಿ ರಾಶಿ ಹತ್ತಿ ಹಿಂಜಿ ಹಿಂಜಿ ಹರಡಿದಂತ ಮೋಡವು

ತೇಲಿ ತೇಲಿ ಅದರ ನಡುವೆ ಹೋಗುತಿರಲು ನಾವು

ಸ್ವರ್ಗಕೆ ಎರಡೇ ಗೇಣುಯೆಂಬ ಭಾವವು

ಸ್ವರ್ಗಕೆಲ್ಲ ಗಾದಿ ಹೊಲಿಯೆ

ಯಾರು ಅರಳೆ ಹಿಂಜಿ ಹರಡಿಹರೊ

ಯಾರು ಬಲ್ಲರು ?

ಯಾರು ಇಲ್ಲವಲ್ಲಯಿಲ್ಲಿ ಅದನು ಹೇಳಲು

 

ಮೋಡ ಕವಿಯೆ ಮೇಘದಾಟ

ಮೋಡ ಚದುರೆ ನೆಲದ ನೋಟ

ಎಂಥ ಆಟ ಎಂಥ ಮಾಟ

ಮನದಿ ಮುದದ ಭಾವಕೂಟವು

 

ಮೋಡದ ಮೋಡಿಯಲ್ಲಿ

ನಮ್ಮ ನಾವು ಮರೆಯುತ

ತೇಲಿ ತೇಲಿ ಹೋಗುತಿರಲು

ಮರಳಿ ನೌಕೆ ಕೆಳಗೆ ಇಳಿಯೆ

ಮರಳಿ ಮೇಲೆ ಏರುವಾಸೆಯು.

***************

Comments