ಕೇಳು ಜನಸಾಮಾನ್ಯ....

ಕೇಳು ಜನಸಾಮಾನ್ಯ....

ಕವನ
ಭವ್ಯಭಾರತದಿ ಜನ್ಮಪಡೆದ ಪುಣ್ಯವಂತ ಜನಸಾಮಾನ್ಯನೇ, ನಿಂತ ನೆಲದ ಒಂದಿಡಿ ಮಣ್ಣ,ಮುಷ್ಟಿಯಲ್ಲಿ ಹಿಡಿದು ಕಣ್ಣ ಮುಚ್ಚಿ ಧ್ಯಾನಿಸು, ಕೇಳುತ್ತಿದೆಯೇ ಗತಕಾಲದಿ ಮೆರೆದು ನಾಡಸೇವೆಗೆ ಬದುಕ ಮುಡಿಪಾಗಿಸಿದ ರಾಜಮಹಾರಾಜರ ತ್ಯಾಗಬಲಿದಾನ ಕಥೆ? ಯುದ್ದಕಾಲದ ಕುದುರೆಯ ಖುರಪುಟದ ಸದ್ದು? ಕಣ್ಣು ಕೋರೈಸುವಂತೆ ಖಡ್ಗಜಳಪಿಸಿ ದೇಶದ್ರೋಹಿಗಳ ರುಂಡಚಂಡಾಡಿದ ವಿಜಯೋತ್ಸಾವದ ಜೈಕಾರ? ಪರಕೀಯರ ಬಂದೂಕಿಗೆ ಎದೆಯೊಡ್ಡಿ ನಗುತ್ತಾ ಜೈಹಿಂದ್ ಘೋಷದಿ ಭರತ ಮಾತೆಯ ಪಾದಕಮಲಕ್ಕೆ ಪ್ರಾಣಮುಡಿಪಾಗಿಟ್ಟ ಸ್ವಾತಂತ್ರ ವೀರರ ಜಯಘೋಷದ ಸದ್ದು?. ಸ್ವತಂತ್ರ್ಯಜ್ಯೋತಿಯ ನಗುವ ಹಿಂದಿನ ನೋವುಗಳೆಷ್ಟು? ಸಾವುಗಳೆಷ್ಟು? ತ್ಯಾಗಗಳೆಷ್ಟು? ಅದೋ ನೋಡಲ್ಲಿ ಕೇಳುತ್ತಿಲ್ಲವೇ ಭರತ ಮಾತೆಯ ರೋಧನ? ಭವ್ಯಭಾರತದ ಪರಂಪರೆಯ ಕುಡಿಯೇ, ಒಮ್ಮೆ ಯೋಚಿಸು ಹಿಡಿಮಣ್ಣು ನಿನ್ನಕಥೆಯ ಹೇಳುವುದೆಂದು? (ಗಣರಾಜ್ಯ ದಿನದ ಶುಭಾಶಯಗಳು)

Comments