11 ಕೋಮಲೆ ಧರೆಗೊರಗಿದಳತಿ ಬವಳಿ

11 ಕೋಮಲೆ ಧರೆಗೊರಗಿದಳತಿ ಬವಳಿ

ಕವನ

 ಅಳುಕಿದ ಮನದಿಂ ವ್ಯಾಕುಲದಿಂದಳುಕುತಳುಕುತ ಮೆಲ್ಲನೆ ಕಣ್ಣೆವೆಯಂ ಜಾರಿಸೀಕ್ಷಿಸಲ್

ಪುಳಕದಿಂ ಪಿರಿದಾದುದೆದೆಯಿಂ ತನ್ನಂ ತಾನೆ  ಮರೆದಳಂಗನೆಯಚ್ಚರಿಯಲತಿಯಾನಂದದಿಂ

ಬಳುಕುವ ಬಳ್ಳಿ ಸುಳಿಗಾಳಿಂಗೊಯ್ಯನೆ ನೆಲಕೊರುಗುವಂದದಿ ಕೋಮಲೆ ಧರೆಗೊರಗಿ

ದಳತಿ ಬವಳಿ  ಕವಿವರಂ ಧಾವಿಸಿ ಕರ ಪಿಡಿದೆತ್ತಲ್ ಮಾತ ಮರೆದಳ್ ಬೆಮರ್ದಳಂಗನೆ 

ಬಳಲಿ ಪಸೆಯಾರಿಬಾಯ್ ತೊದಲಿದವಧರಂಗಳ್ ಅರಿವಳಿದುದತಿ ಸುಖವಾವರಿಸಿ ನಿಲ್ಲದಾ

ದಳುಡುಗುವ ಭಯದಿಂ ನಡುಗುತೆ ಪತಿಯಂ ಕಂಡುಮ್ಮಳಿಸಿ ಬಿಡದೆಯವಡುಗಚ್ಚುತ ತಡೆ

ದಳತಿ ದುಖಃವನು ತರಳೆಯಾನಂದ ಬಾಷ್ಪಂಗಳಂ ಬೆರಳಲರೆವಡೆದು ತೊಡೆಯುತನುರಾಗ

ದೊಳ್ ಪತಿಯ ಮೊಗವಂ ಮೊಗೆಮೊಗೆದೀಕ್ಷಿಸುತ ಬಾಹುಬಂಧನದಿ ನಸು ನಾಚಿನೀರೊಡೆ

ದಳ್ ನೀರೆ ಕಾಣದಾದಳ್ ಪತಿಯ ಭಾವದಲಿ ಸತಿಯ ಸಮಾಗಮದ ಕುರುಹನರಿಯದಾ

ದಳ್ ಸತಿಯ ಸಲುಗೆಯಾದರವಿರದ ನಡವಳಿಗೆಯ ತಿಳಿಯದಾದಳ್ ಪತಿಯಪ್ಪುಗೆಯಸ

ದಳದ ಸವಿಯ ಸಹಿಸದಾದಳ್ ಸತಿ ವಿರಹದುರಿಯಿರದ ಪತಿಯ ಮೋಹದ ಸನಿಹ ಸೈರಿಸದಾ

ದಳ್ ಕವಿಯ ಮೋಹಾಂಧಬಂಧನಂ ಕುಂದಿದಿಂದುವದನೆಯ ವದನಂ ಕಂದಿದುಮನಂ ಚಡಪಡಿಸಿ
 
ದಳ್ ಬಂದಂಬಟ್ಟು ಬಂಧನದಿಂ ಬಿಡುಂಗೊಳುತ ನಿಡುಸುಯ್ದು ಕಡುನೊಂದು ಕನಲಿದಳ್ ಚಿಂತಿಸುತ