ನಾವು ಮಕ್ಕಳು ಭಾರತ ಮಾತೆಯ......

ನಾವು ಮಕ್ಕಳು ಭಾರತ ಮಾತೆಯ......

ಕವನ

 [ಧಾಟಿ-ಪಂಚಮಿ ಹಬ್ಬ ಉಳಿದಾವ ದಿನ ನಾಕ।ಅಣ್ಣ ಬರಲಿಲ್ಲ ಯಾಕ ಕರಿಯಾಕ...]

ದೇಶ ಸೇವೆ..ದೇಶ ಸೇವೆ ಗೈವುದೆ ನಮ್ಮ ಧ್ಯೇಯ

ನಾವು ಮಕ್ಕಳು  ಭಾರತ ಮಾತೇಯ[೨ಸಲ]

ನಮ್ಮ ಭಾರತ ಚೆಲುವಿನ ನಾಡು

ಇಲ್ಲಿ ಜನಿಸಿರುವುದೆ ಪುಣ್ಯ ನೋಡು

ನಮ್ಮ ದೇಶ ಸಂಸ್ಕೃತಿಯ ನೆಲೆವೀಡು

ಸ್ವರ್ಗವಿಲ್ಲಿದೆ,ಸ್ವರ್ಗವಿಲ್ಲಿದೆ,ಸ್ವರ್ಗವಿಲ್ಲಿದೆ ಬೇರೆಲ್ಲೂ ಇಲ್ಲ

ನಾವು ಮಕ್ಕಳು ಭಾರತ ಮಾತೇಯ    [ದೇಶ ಸೇವೆ]

ದೈವಕೃಪೆಯಿರೆ ನಮ್ಮಯ ಮೇಲೆ 

ಎಂತಹ  ಕಾರ್ಯವು  ನಮಗೊಂದು ಲೀಲೆ

ನಮಗೆಲ್ಲಾ ಕಾದಿದೆ ಭವ್ಯ ನಾಳೆ

ಎಂಬ ವಿಶ್ವಾಸ ,ಎಂಬ ವಿಶ್ವಾಸ,ಎಂಬ ವಿಶ್ವಾಸ ಕುಂದುವುದಿಲ್ಲ

ನಾವು ಮಕ್ಕಳು ಭಾರತ ಮಾತೇಯ  [ದೇಶ ಸೇವೆ]

[ಎಲ್ಲಾ ಸಂಪದಿಗರಿಗೂ ಗಣರಾಜ್ಯೋತ್ಸವದ ಶುಭಾಶಯಗಳು]

 

 

Comments