ಅ ಕಪ್ ಓಫ್ ಕಾಫಿ ... ಸಿಪ್ - ೪೪

ಅ ಕಪ್ ಓಫ್ ಕಾಫಿ ... ಸಿಪ್ - ೪೪

 ಸಿಪ್ - ೪೪ 

 

 

ಹಿಂದಿನ ಸಿಪ್ 

 
 
ಭಾನುವಾರ ಎದ್ದು ನಿತ್ಯಕರ್ಮ ಮುಗಿಸಿ ಮೆಟ್ಟಲಿಳಿದು ಕೆಳಗೆ ಬರುವಾಗ ಮೂವರು ಸೋದರರ ದೇವರ ಪೂಜೆ ಮುಗಿದಿತ್ತು ಎನ್ನುವುದನ್ನು ತುಳಸಿಕಟ್ಟೆಯಲ್ಲಿ ನಂದುತ್ತಿರುವ ಆರತಿ ಹೇಳುತಿತ್ತು. ಆದರ್ಶ್ ಕ್ರಿಕೆಟ್ ನ ಹೈ ಲೈಟ್ ನೋಡುತಿದ್ದ. ನನ್ನನ್ನು ನೋಡುತಿದ್ದಂತೆ "ಗುಡ್ ಮಾರ್ನಿಂಗ್!!" ಎಂದ.
ಮನೆಯ ಎಲ್ಲರು ತಮ್ಮ ದೈನಂದಿನ ಕಾರ್ಯ ಕಲಾಪವನ್ನು ಆಗಲೇ ಮುಗಿಸಿ ಆಗಿತ್ತು. ಬೆಳೆದ ವಯಸ್ಸಿನಮೇಲೆ ಅಸಯ್ಯ ವೆನಿಸಿತು. ಯಾರಿಲ್ಲದಾಗ ರೂಂ ನಲ್ಲಿ ಭಾನುವಾರ ಶನಿವಾರ ಹನ್ನೆರಡರ ವರೆಗೆ ಮುಸುಕು ಹೊದ್ದು ಮಲಗಿರುತಿದ್ದ ಜೀವ ಇವತ್ತು ಬೆಳಗ್ಗಿನ ಎಂಟು ಮೊವತ್ತಕ್ಕೆ ಎದ್ದರೂ ಯಾಕೋ ಒಂದು ಬಗೆಯ ಅಸಯ್ಯ ಎನಿಸುತಿತ್ತು. ಅವಳ ಮನೆಯವರು ನನ್ನ ಧೀರ್ಘ ನಿದ್ರೆಯ ಬಗ್ಗೆ ಏನೆಂದು ಕೊಳ್ಳುತ್ತಾರೋ ಎಂಬ ಪ್ರಶ್ನೆ ಮನಸಲ್ಲಿ ಕಾಡುತಿತ್ತು.
ಆದರ್ಶ್ ನ ಹತ್ತಿರದ ಸಿಂಗಲ್ ಸೋಪದಲ್ಲಿ ನಾನು ಕುಳಿತುಕ್ಕೊಂಡೆ. ದೊಡ್ಡಪ್ಪ ತನ್ನ ರೂಂ ನಿಂದ ಹೊರ ಬಂದಾಗ ಅಲ್ಲಿ ನನ್ನನ್ನು ಕಂಡು "ವೈಭು ನಿದ್ದೆ ಚೆನ್ನಾಗಿ ಬಂತೇನೋ ..?"
"ಹೌದು, ಮೊನ್ನೆ ಪೂರ್ತಿ ರಾತ್ರಿ ನಿದ್ದೆ ಬಂದಿರಲಿಲ್ಲ, ನಿನ್ನೆ ಮೇಲೆ ಹೋಗಿ ಬಿದ್ದದಷ್ಟರಲ್ಲಿ ನಿದ್ದೆ ಹತ್ತಿ ಬಿಡ್ತು, ಬೆಳಗ್ಗೆ ಎದ್ದಾಗ ನಾನು ಪುಣೆಯಲ್ಲಿರುವಂತೆ ಆರಾಮ್ ಸೆ ಎದ್ದೆ, ನಿಮ್ಮ ಪೂಜೆ ಮಿಸ್ ಮಾಡ್ಕೊಂಡೆ, ಜೊತೆಗೆ ನಿಮ್ಮ ಆಶೀರ್ವಾದವನ್ನು" ಎನ್ನುತ್ತಾ ಅವರ ಕಾಲಿಗೆ ಎರಗಿ ಆಶೀರ್ವಾದ ಬೇಡಿದೆ.
"ಪರವಾಗಿಲ್ಲಾ.." ಎನ್ನುತ್ತಾ ಅವರು ನನ್ನನು ಮೇಲಕ್ಕೆತ್ತಿದರು.

ಆದರ್ಶ್ ರಿಮೋಟ್  ಅನ್ನು ದೊಡ್ಡಪ್ಪನ ಕೈಗೆ ಕೊಟ್ಟ ಅವರು ತಮಗೆ ಬೇಕಾದ ನ್ಯೂಸ್ ಚಾನಲ್ ಅನ್ನು ಹುಡುಕುತಿದ್ದರು. ನಾನು ನನ್ನ ಡೆಸ್ಟಿನೇಶನ್ ನ ಹುಡುಗಾಟದಲ್ಲಿದ್ದೆ.

"ವೈಭು ಯಾವಾಗ ಚೆನ್ನೈ ನ ಕಂಪೆನಿಗೆ ಜೋಯಿನ್ ಆಗ್ತೀಯ...?"
"ಡ್ರೀಮ್ ಟೆಕ್ ಗೆ ರಿಸೈನ್ ಕೊಟ್ಟದ ಬಳಿಕ, ಎರಡು ತಿಂಗಳ ನೋಟಿಸ್ ಪಿರೇಡ್ ಮುಗಿ ಬೇಕು ಅದಾದ ಬಳಿಕ, ಅಂದ್ರೆ ಕನಿಷ್ಠ ಪಕ್ಷ ಎರಡು ತಿಂಗಳು , ಮೇ ಬಿ ನವೆಂಬರ್ ಲಾಸ್ಟ್ ವೀಕ್" ಅಂದೆ.
"ಗುಡ್, ಮತ್ತೆ ಇಲ್ಲಿ ಇರಲು ..?"
"ಹೊಸ ಗೂಡು ಹುಡುಕಿದರಾಯಿತು. ನಿಮ್ಮ ಸಹಾಯ ಇದ್ದರೆ ಅದ್ಯಾವುದಕ್ಕೂ ತೊಂದರೆ ಯಾಗದು, ಏನಂತೀರ...?"
"ಹಮ್, ಚೆನ್ನಾಗಿ ಮಾತಾಡ್ತೀಯ..."
"ಮನಸ್ಸಿಗೆ ಹತ್ತಿರವಾದವರ ಹತ್ತಿರ ಮನಸ್ಸಿನ ಅಭಿಲಾಷೆಗಳು ಮಾತಾಗಿ ಹೊರ ಬೀಳುತ್ತವೆ!!" ಎಂದು ನಕ್ಕೆ.

ಹುಡುಕುತಿದ್ದ ಆ ಕಣ್ಣುಗಳು ನನ್ನ ಕಣ್ಣೆದುರಿಗೆ ಬಂದು ನಿಂತಿತು. "ಬನ್ನಿ ಕಾಫಿ ಕುಡಿಯಲು" ಎಂದು ಕರೆದಳು.
ಅವಳು ಮೊದಲಿಗೆ ನನ್ನನು ಬಹುವಚನದಲ್ಲಿ ಕರೆದದ್ದು ಮನಸ್ಸಿಗೆ ಏನೋ ಒಂದು ಬಗೆಯ ಖುಷಿ ಕೊಟ್ಟಿತು. ನಂತರ ನನ್ನ ಜೊತೆಗಿದ್ದ ದೊಡ್ಡಪ್ಪ ಮತ್ತು ಆದರ್ಶ್ ನ ಅರಿವು ಹುಟ್ಟಿ ಅವಳು ನಮ್ಮ ಮೂವರನ್ನು ಕರೆಯಲು ಭಾಹುವಚನ ಉಪಯೋಗಿಸಿದ್ದು , ಗಂಡನಿಗೆ ರೆಸ್ಪೆಕ್ಟ್ ಆಗಿ ಅಲ್ಲ ಎಂದು ತಿಳಿದುಕ್ಕೊಂಡೆ.

ಟೇಬಲ್ ನಲ್ಲಿ ನಾವು ಮೂವರು ಕುಳಿತುಕೊಳ್ಳಲು, ಚಿಕ್ಕಪ್ಪ ಮತ್ತು ಆಕೃತಿಯ ತಂದೆ ಜೊತೆಯಾದರು. ನನ್ನ ಎದುರಲ್ಲಿ ಪ್ರಕೃತಿ ಅವಳ ಬದಿಯಲ್ಲಿ ಕೊಯಂಬತ್ತೂರಿನ ಅವಳ ಚಿಕಮ್ಮ ಕುಳಿತು ಕೊಂಡಿದ್ದಳು. ಇನ್ನೊಂದು ಬದಿಯಲ್ಲಿ ಆಕೃತಿ.
ಮನೆಯ ಮೂವರು ಹೆಂಗಸರು ಮನೆಯ ಯಜಮಾನರಿಗೆ , ಮಕ್ಕಳಿಗೆ ಮತ್ತು ಬಂದ ಅತ್ಹಿತಿಗಳಿಗೆ ಸೇವೆ ಮಾಡುವುದರಲ್ಲಿ ನಿರತರಾಗಿದ್ದರು.

"ವೈಭು, ಏನು ಸಡನ್ ಆಗಿ ಚೆನ್ನೈ ಗೆ ಬಂದಿದ್ದು..? ಸುರ್ಪ್ರೈಸ್ ವಿಸಿಟ್ ..?" ಎಂದು ಕೇಳಿದರು ನನ್ನ ಇಂಟರ್ವ್ಯೂ ನ ಪೂರ್ವಾಪರ ತಿಳಿಯದ ಗೋಪಾಲನ್.
ನಾನು "ಹೌದು, ಒಂದು ರೀತಿ ಅದೇ, ಇಲ್ಲಿ ಬಂದ ಮೇಲೆ ನಾನೇ ಖುದ್ದು ಸರ್ಪ್ರೈಸ್ ಆದೆ"
"ಯಾಕಪ್ಪಾ ನೀನು ಸುರ್ಪ್ರೈಸ್ ಆದಿ...?"
"ಮತ್ತೆ ನಿಮ್ಮ ಫ್ಯಾಮಿಲಿ ಫ್ರೆಂಡ್ ಆದ ನನಗೆ ನೀವು ಆಕೃತಿಯ ನೆಂಟಸ್ತಿಕೆಯ ವಿಷಯ ತಿಳಿಸಲೇ ಇಲ್ಲಾ." ಎಂದೆ.
"ಇಲ್ಲ, ಹಾಗಲ್ಲಾ, ಇನ್ನು ಎಲ್ಲ ಮುಗಿದಿಲ್ಲ, ಮನೆಯವರಿಗೆ ಒಪ್ಪಿಗೆ ಇದೆ, ಆದರೆ ನಾಳೆ ಹೊಂದಿಕ್ಕೊಂಡು ಬಾಳಬೇಕಾದವರು ಅವರು, ಅವರು ಒಬ್ಬರನೊಬ್ಬರು ಒಪ್ಪಿ ಆದಮೇಲೆ ಫೈನಲ್ ಆದಂತೆ" ಎಂದರು.
ಅದಕ್ಕೆ ನಾನು "ಏನು ಆಕೃತಿಯ ಒಪ್ಪಿಗೆ ಸಿಕ್ತೆ...?" ಎನ್ನುತ್ತಾ ಇಲ್ಲಿ ಅಮ್ಮ, ದೊಡ್ಡಮ್ಮನ ಆರೈಕೆಯಲ್ಲಿ ಮೂರು ಕೆಜಿ ಬೆಳೆದ ಆಕೃತಿಯ ಕಡೆಗೆ ತಿರುಗಿದೆ.

ಕೈಯಲ್ಲಿದ್ದ ಫಾರ್ಕ್ ನಿಂದ ಪ್ಲೇಟ್ ನಲ್ಲಿದ್ದ ಇಡ್ಲಿಯನ್ನು ಹುಡಿಮಾಡುತಿದ್ದಳು.

ಗೋಪಾಲನ್ "ನಮ್ಮ ಮಗಳು ಆಕೃತಿ, ಅವಳು ಯಾವತ್ತು ನಮ್ಮ ನಿರ್ಧಾರಕ್ಕೆ ಇಲ್ಲ ಅನ್ನಲ್ಲಾ... ಇನ್ನು ಏನಿದ್ರು ಅಮೆರಿಕೆ ಯಿಂದ ಅಪ್ರೋವಲ್ ಬಂದರಾಯಿತು" ಎಂದರು.
ಅವಳ ಬದಿಗೆ ತಿರುಗೆ "ಆಕೃತಿ ... ಏನು ..?" ಎಂದು ಕೇಳಿದೆ.
ಉತ್ತರ ವಿರಲಿಲ್ಲ. ಮೌನ ದಲ್ಲಿದ್ದಳು. 

ತಂದೆ ಮುಂದುವರಿಸಿದರು "ವೈಭು ನೀನು ಬಂದದ್ದು ಒಳ್ಳೆದಾಯ್ತು ನೋಡು, ನಾವು ಈ ಆರು ತಿಂಗಳಲ್ಲಿ ಪ್ರತಿ ಮೂರು ನಿಮಿಷಕ್ಕೆ ಅವಳಲ್ಲಿ ಈ ಬಗ್ಗೆ ವಿಚಾರಿಸಿದ್ದಾಗ ಮೌನದಲ್ಲೇ ಉತ್ತರ ಕೊಡುತ್ತಾಳೆ, ನೀನೆ ಅವಳನ್ನು ವಿಚಾರಿಸು, ಅವಳ ಮನಸ್ಸಲ್ಲಿ ಏನಿದೆ ಎನ್ನುವುದು ನಮಗೆ ಮನದಟ್ಟಾಗಬೇಕು, ಅದು ಬಿಟ್ಟು ಬರಿ ಮೌನದಲ್ಲಿದ್ದರೆ ನಾವು ಏನೆಂದು ಅರ್ಥೈಸಿ ಕೊಳ್ಳುವುದು...?" ಎಂದರು.
ನಾನು "ಮೌನಂ ಸಮ್ಮತಿ ಲಕ್ಷಣಂ !!" ಅಂದೆ. ಕಣ್ಣು ಅವಳನ್ನೇ ನೋಡುತ್ತಿತ್ತು.

ಕೈಯಲ್ಲಿನ ಫೋರ್ಕ್ ಅನ್ನು ಮೇಲೆತ್ತಿ "ವೈಭು... ಐ ವಿಲ್ ಕಿಲ್ ಯು" ಎನ್ನುತ್ತಾ ಮತ್ತೆ ಸುಮ್ಮನಾದಳು.
ಮನೆಯ ಹೆಂಗಸರು "ಮದುವೆಯ ವಿಷಯ ತೆಗೆದಂತೆ ಹೇಗೆ ನಾಚ್ತಾಳೆ ನೋಡಿ" ಎಂದು ಮಾತು ಶುರುಮಾಡಿದರು.

ದೊಡ್ಡಪ್ಪ "ವೈಭು, ಆಕೃತಿ ಜೊತೆಗೆ ಮಾತಾಡು, ಬೇರೆಯವರ ಎದುರು ಮಾತಾಡಲು ಸರಿ ಎನಿಸದಿದ್ದರೆ ಅವಳನ್ನು ಕರಕ್ಕೊಂಡು ಏಕಾಂತದಲ್ಲಿ ಮಾತಾಡು" ಎಂದರು.

ಅವಳ ಮನಸ್ಸಿನ ಭಾವನೆ- ವೇದನೆ ಗಳು ನನಗೆ ತಿಳಿದಿತ್ತು, ಅದನ್ನು ಹೊರ ಹಾಕಲು ಆಗದೆ ಅವಳು ಚಡಪಡಿಸುತಿದ್ದಳು. ಈಗ ಇಬ್ಬರ ಏಕಾಂತಕ್ಕೆ ಮನೆಯವರ ಪ್ರೋತ್ಸಾಹ ಸಿಕ್ಕಂತಾಯಿತು. ನಾನು "ಸರಿ ದೊಡ್ಡಪ್ಪಾ ..." ಎಂದೆ.
ಎದುರಿದ್ದ ಒಂದು ಅಂಗುಲ ವ್ಯಾಸದ ಹಣೆಬೋಟ್ಟಿನ ಕೆಳಗಿನ ಎರಡು ಕಣ್ಣುಗಳು ಇನ್ನು ನನ್ನನ್ನು ದಿಟ್ಟಿಸಿ ನೋಡುತಿದ್ದವು. ಅವರ ಮನಸಲ್ಲಿ ತನ್ನ ಮಗನ ಪಾಲನ್ನು ಕಸಿಯಲು ಬಂದ ಹದ್ದು ನಾನಾಗಿದ್ದೆ.

ತಿಂಡಿ ಮುಗಿಸಿದ ಬಳಿಕ ಚಿಕಪ್ಪ ತನ್ನ ಬೈಕ್ ನ ಚಾವಿ ನನ್ನ ಕೈಯಲ್ಲಿಟ್ಟರು. ಆಕೃತಿಗೆ ತಯಾರಾಗುವಂತೆ ಹೇಳಿ ನಾನು ಮೇಲಿನ ರೂಂ ಗೆ ಹೋಗಿ ಸ್ನಾನ ಮುಗಿಸಿದೆ.


***********


"ಡಂಬು... ಎಷ್ಟು ಚೆನ್ನಾಗಿ ನಾಟಕ ಆಡ್ತೀಯಾ.. ನಿನಗೆ ಗೊತ್ತಿಲ್ವೇನೋ, ನನ್ನ ಸುನಿಲನ ನೆಂಟಸ್ತಿಕೆಯ ವಿಚಾರ...?" ಎಂದು ಕೇಳಿದಳು ಮರೀನಾ ಬೀಚ್ ನ ಬದಿಯಲ್ಲಿನ ಸಿಮೆಂಟ್ ಖುರ್ಚಿಯ ಮೇಲೆ ನನ್ನ ಮಡಿಲಲ್ಲಿ ಮಲಗಿರುವ ಆಕೃತಿ.
"ಗೊತ್ತು, ನನಗೆ ನಿನ್ನ ಎಲ್ಲ ವಿಚಾರ ಗೊತ್ತಿದೆ ಎಂದು ನಿನ್ನ ಮನೆಯವರಿಗೆ ಹೇಳ್ ಬೇಕಿತ್ತಾ.."
"ಹೌದು ಮತ್ತೆ ... ಇವತ್ತು ಹೇಳದೆ ಇನ್ನು ಯಾವಾಗ ಹೇಳ್ತೀಯಾ..?"
"ಸಮಯ ಬರಲಿ, ಹೇಳ್ತೇನೆ.."
"ನಿನ್ನ ಆ ಸಮಯ ನನ್ನ ಈ ಜೀವಿತಾವಧಿಯಲ್ಲಿ ಬರುದಿಲ್ಲ." ಎಂದು ನನ್ನ ಹೊಟ್ಟೆಗೆ ಒಂದು ಗುದ್ದು ಕೊಟ್ಟಳು.
"ರಾಜಾ.. ಬರುತ್ತೆ.. ಅಲ್ರೆಡಿ ಬಂದಿದೆ.." ಅಂದೆ.
ಬಿಕ್ಕಳಿಕೆ ಅತಿಯಾಯಿತು. ಕಣ್ಣಿಂದ ಎರಡು ಹನಿಗಳು ಜಾರಿದವು.
"ರಾಜಾ, ನಿನಗೊಂದು ಸುರ್ಪ್ರೈಸ್ ಇದೆ ..." ಎಂದು ಮಾತನ್ನು ಅರ್ದಕ್ಕೆ ನಿಲ್ಲಿಸಿದೆ.
ಒಮ್ಮೆಗೆ ಬಿಕ್ಕಳಿಕೆ ನಿಲ್ಲಿಸಿ "ನೀನು ಸಾಕು ನಿನ್ನ ಆ ಸುರ್ಪ್ರೈಸ್ ವ್ಯವಹಾರವೂ ಸಾಕು.."
"ಹಾಗಾದ್ರೆ ಆ ಸುರ್ಪ್ರೈಸ್ ಬೇಡ್ವಾ ..." ಎಂದು ಆ ಕುದಿಯುವ ಕೋಪವನ್ನು ಇನ್ನೂ ಕೆಣಕಿದೆ.
"ಹೇಳು.. ಆ ಸುರ್ಪ್ರೈಸ್ ಏನು ಹೇಳಿ..."
"ಹೇಳ್ತೇನೆ.. ನಾನು ಹೇಳಿದ್ರೆ ನೀನು ಏನು ಕೊಡ್ತೀಯ...?"
"ನನ್ನ ಬಳಿ ನಿನಗೆ ಕೊಡದೆ ಇರುವ ವಿಷಯ ಏನೂ ಉಳಿದಿಲ್ಲ.. ಏನು  ಕೊಡಲಿ ಹೊಸದಾಗಿ...?" ಅಂದಳು.
"ನಿಂಗೆ ಆ ಸುರ್ಪ್ರೈಸ್ ಹೇಳಿದ ಮೇಲೆ ಏನು ಕೊಡ್ಬೇಕು ಅನ್ಸುತ್ತೆ ಅದನ್ನು ಕೊಡು.." ಎಂದು ಮಡಿಲಲ್ಲಿ ಮಲಗಿ ಕಣ್ಣಲ್ಲಿ ಕಣ್ಣಿಟ್ಟು ನೋಡುತಿದ್ದ ಅವಳ ಮುಖದಲ್ಲಿ ಅರಳುತ್ತಿರುವ ನಗೆಗೆ ಟಿಪ್ಪಣಿ ಬರೆಯುತ್ತಿರುವ ಆ ನವಿರಾದ ತುಟಿಗಳನ್ನು ಸವರಿದೆ.
"ಪೀಟಿಕೆ ಸಾಕು ಹೇಳು ಆ ಸುರ್ಪ್ರೈಸ್ ಏನು ಹೇಳಿ"
"ನಾನು ಚೆನ್ನೈ ನ ಅಳಿಯ ಆಗ್ತಾ ಇದ್ದೇನೆ"
"ಇದು ಹಳೆ ವಿಚಾರ ಇದರಲ್ಲಿ ಸರ್ಪ್ರೈಸ್ ಏನು ಬಂತು ...?"
"ಇದೆ.. ನಾನು ಇನ್ನು ಸಲ್ಪ ದಿನದಲ್ಲಿ ಚೆನ್ನೈ ನಲ್ಲಿ ಇರುತ್ತೇನೆ..."
"ಟ್ರಾನ್ಸ್ಫರ್ ತೆಕೊಳ್ತಾ ಇದ್ದಿಯೇನೋ.. ಐ ಲವ್ ಯು ಕಣೋ" ಎಂದು  ಕೆನ್ನೆಯ ಮೇಲಿದ್ದ ಕೈ ತೆಗೆದು ತುಟಿಗಿಟ್ಟು ಚುಂಬಿಸಿದಳು. ಅವಳಿಗೆ ಇಲ್ಲಿನ ಎಂಏನ್ಸಿ ಯಲ್ಲಿನ ಇಂಟರ್ವ್ಯೂ ನ ಪರಿವಿರಲಿಲ್ಲ.
"ಅಲ್ಲಾ, ಸ್ವಿಚ್ ಹೊಡೆಯುವ ಹೇಳಿ..." ಅಂದೆ ಕೈಯನ್ನು ಕೈಯಲ್ಲಿ ಬಂಧಿಸುತ್ತಾ.
"ನಿನ್ನ ಮಾವನ ಕಂಪೆನಿ ಇದೆ ನೋಡು ನಿನ್ನನ್ನು ಕರದು ಇಲ್ಲಿ ಕೆಲಸ ಕೊಡಲು" ಎಂದು ಮತ್ತೆ ಗುದ್ದಿದಳು.
"ಮಾವ ಎಂಏನ್ಸಿ ನಡೆಸುತಿದ್ರೆ ಶುವರ್ಲಿ ಕೊಡ್ತಿದ್ರು.. ಏನ್ ಮಾಡ್ಲಿ ಅವರು ಟೆಕ್ಸ್ಟೈಲ್ ಮಾಡ್ತಾ ಇದ್ದಾರೆ" ಎಂದೇ ತುಸು ನಕ್ಕು.
"ಇದಕ್ಕೇನು ಕಮ್ಮಿ ಇಲ್ಲ... ಮತ್ತೆ ಹೇಗೆ ..?"
"ರಾಜಾ ನಂಗೆ ಅಲ್ರೆಡಿ ಚೆನ್ನೈ ನ ಒಂದು ಕಂಪೆನಿಯಲ್ಲಿ ಸೆಲೆಕ್ಷನ್ ಆಗೋಗಿದೆ."
"ಕಾಂಗ್ರಟ್ಸ್ ಕಣೋ... ಆದ್ರೆ ನೀನು ಬೆಂಗಳೂರು ಬಿಟ್ಟು ಬೇರೆ ಕಡೆಗೆ ಟ್ರೈ ಮಾಡ್ತಾ ಇಲ್ಲ ಅಂತ ಹೇಳ್ತಿದ್ದಿ ... ಈಗ ಏನು ಒನ್ಸ್ ಅ ಸುಡ್ದನ್ ಚೆನ್ನೈಗೆ ಹಾರುವ ಇರಾದೆ ಮೂಡಿದ್ದು..?"
"ನಿಜ ಹೇಳಲಾ.. ಸುಳ್ಳು ಹೇಳಲಾ ..?"
"ನಿಜಾನೆ ಹೇಳು .."
"ಅದು ನನ್ನ ಸ್ಕಿಲ್ ನ ಒಪೆನಿಂಗ್ಸ್.. ಎರಡು ವರ್ಷ ದ ಅನುಭವ ಕೆಲಸಕ್ಕೆ ಬರುತ್ತೆ ಅಂತ ರೆಸುಂ ಫಾರ್ವರ್ಡ್ ಮಾಡಿದೆ"
"ಅಂದ್ರೆ ನನಗೋಸ್ಕರ ಅಲ್ಲಾ ನೀನು ಚೆನ್ನೈ ಗೆ ಬರುವುದು.. ಹೋಗೋ...." ಎಂದು ಮತ್ತೆ ಕೊಪಿಸಿದಳು.

ಸಲ್ಪ ತಡೆದು "ಆಯಿತು ಸುಳ್ಳು ...?"
"ನಿನಗೋಸ್ಕರ..."
"ಇದು ನಿಜದ ಕಾರಣ ಹೇಳಿ ನಂಗೆ ಗೊತ್ತು ಕಣೋ, ನಿಂಗು ನನ್ನನ್ನು ಬಿಟ್ಟು ಇರಲಿಕ್ಕೆ ಅಗ್ತಾ ಇಲ್ಲ ಅಲ್ಲಾ.. ಅದಕ್ಕೆ ಈಗ ಚೆನ್ನೈಗೆ ಹಾರಿ ಬಂದಿ ಅಲ್ಲಾ.."
"ಹೌದು.. ಐ ನೀಡ್ ಯು"
"ಐ ಟೂ" ಎಂದು ಸುಮ್ಮನಾದಳು.

"ಮನೆಯವರಿಗೆ ನೀನು ಈ ವಿಚಾರ ಹೇಳ್ ಲಿಲ್ವಾ..?" ಎಂದಳು ತುಸು ತಡೆದು.
"ದೊಡ್ಡಪ್ಪನಿಗೆ ಗೊತ್ತು, ನಾನಾಗಿ ನನ್ನ ಅಸ್ತಿತ್ವ ಇನ್ನು ಚೆನ್ನೈ ನಲ್ಲಿ ಝಾಂಡಾ ಹೂಡುತ್ತದೆ ಎಂದು ಪ್ರಚಾರ ಕೊಡುವುದು ಬೇಡ ಹೇಳಿ ನಿನ್ನ ಮನೆಯವರ ಎದುರಿಗೆ ಹೇಳಲಿಲ್ಲ ಅಷ್ಟೇ"
"ಆದ್ರೂ ದೊಡ್ಡಪ್ಪ ಈ ವಿಚಾರ ಏಕೆ ಹೇಳಲಿಲ್ಲ ನನ್ನಲ್ಲಿ...?"
"ನಿಂಗೆ ಸುರ್ಪ್ರೈಸ್ ಕೊಡಲು !!"
ಮತ್ತೆ ಅವಳ ಕಣ್ಣು ನಗಲು ಶುರುವಾಯಿತು.

"ದೊಡ್ಡಪ್ಪನಿಗೆ ನಿನ್ನ- ನನ್ನ ವಿಚಾರ ಗೊತ್ತಿದೆ ವೈಭು...  ಸರಿಯಾಗಿ ಗೊತ್ತಿದೆಯೋ ಇಲ್ಲ ಹೇಳಿ ಗೊತ್ತಿಲ್ಲ, ಆದರೆ ಸಂಶಯ ಒಂದು ಇದ್ದೆ ಇದೆ. ನಾನು ಏನು ಮಾತಾಡಬೇಕದರು ಅದರಲ್ಲಿ ಅಡಗಿರುವ ನಿನ್ನ ಪ್ರಸ್ತಾವನೆಯನ್ನು ಅವರು ಹಲವು ಬಾರಿ ಗುರುತಿಸಿದ್ದಾರೆ."
"ಅಂದ್ರೆ..?"
"ಏನಾದ್ರೂ ಮಾತನಾಡುವಾಗ ನಿನ್ನ ಬಗ್ಗೆ ನಾನು ವಿಶ್ಲೇಷಣೆ ಮಾಡಿದರೆ, ಅವರು ನನಗೆ ತೋಂಟ್ ಕೊಡುತ್ತಾರೆ. ಪುಣೆಯಿಂದ ಚೆನ್ನೈಗೆ ಬಾ ಎಂದು ಗೇಲಿ ಮಾಡ್ತಾರೆ"
"ಅವರಿಗೆ ಗೊತ್ತಾದ್ರೆ ಒಳ್ಳೇದೆ ಆಯಿತು ಬಿಡು,ನಿನ್ನ ಮನೆಯಲ್ಲಿ ನನ್ನನ್ನು ಅವರಷ್ಟು ಅರ್ಥ ಮಾಡಿಕೊಂಡವರು ಯಾರು ಇಲ್ಲ"
"ಅಂದ್ರೆ ನಾನು ನಿನ್ನ ಅರ್ಥ ಮಾಡಿಕ್ಕೊಂಡಿಲ್ಲ ಎಂದು ಹೇಳ್ತಾ ಇದ್ದೀಯ..?"
"ಇಲ್ಲ ರಾಜಾ ಹಾಗಲ್ಲ, ನೀನು ಅರ್ಥೈಸಿ ಕೊಂಡ ಮಾನದಂಡಗಳೇ ಬೇರೆ , ಅವರು ನನ್ನನ್ನು ಅರ್ಥೈಸಿಕೊಂಡ ದೃಷ್ಟಿಕೋನವೇ ಬೇರೆ, ನೀನು ಒಬ್ಬ ಪ್ರೇಮಿಯಾಗಿ ಅರ್ಥೈಸಿಕೊಂಡಿದ್ದಿಯಾ, ಅವರು ನನ್ನನ್ನು ಒಬ್ಬ ಮಗ, ಗೆಳೆಯ, ಸಲಹೆಗಾರನಾಗಿ ಅರ್ಥೈಸಿಕೊಂಡಿದ್ದಾರೆ"

ನನ್ನ ಈ ಮಾತುಗಳನ್ನು ಕೇಳುತ್ತಲೇ ಅವಳು ಇನ್ನು ಒಂದು ಇಂಚು ತುಟಿ ಅಗಲಿಸಿದಳು. ಕಣ್ಣಿನ ಕಾಂತಿಯನ್ನು ಇನ್ನು ಒಂದು ವೋಲ್ಟ್ ಹೆಚ್ಚಿಸಿದಳು.

ನನ್ನಲ್ಲಿ "ಹಾಗಾದ್ರೆ ಇವತ್ತೇ ಹೇಳಿ ಬಿಡು, ನನ್ನನ್ನು ನೀನು ಇಷ್ಟ ಪಡ್ತಿ ಹೇಳಿ.."
"ಅದರ ಅವಶ್ಯಕತೆ ಇಲ್ಲ, ಅವರಿಗೆ ಇದರ ಅರಿವಿದೆ. ನನಗೆ ಮೊದಮೊದಲು ತಿಂಗಳಿಗೊಮ್ಮೆ ಕರೆ ಮಾಡುತಿದ್ದ ಅವರು ಈಗ ವಾರಕೊಮ್ಮೆ ಕರೆ ಮಾಡಿ ಬರೇ ನಿನ್ನ ವಿಚಾರಗಳನ್ನೇ ಹೇಳುತ್ತಾರೆ"
"ಪೆರಿಯಪ್ಪಾ!!! " ಎಂದು ತನ್ನ ದೊಡ್ಡಪ್ಪನನ್ನು ನೆನಪಿಸಿಕೊಂಡಳು.
"ರಾಜಾ, ಸಲ್ಪ ತಡಿ ಇವತ್ತು ಬೇಡ ನಾನು ಇಲ್ಲಿ ಬಂದು ಸೆಟ್ಟಲ್ ಆದ ಮೇಲೆ ನನ್ನ ಮನೆಯವರ ಎದುರಲ್ಲಿ ನನ್ನ ಪ್ರಸ್ತಾವನೆ ಇಡುತ್ತೇನೆ, ಅವರ ಒಪ್ಪಿಗೆ ಸಿಕ್ಕಿದ ಮೇಲೆ ನಿನ್ನ ಮನೆಯವರ ಒಪ್ಪಿಗೆ ಪಡೆಯುವುದು ದೊಡ್ಡ ವಿಷಯ ಅಲ್ಲ, ದೊಡ್ಡಪ್ಪ ಹೇಳಿದಂತೆ ನಡೆಯುವ ಮನೆಯಲ್ಲಿ ಅವರು ನಮ್ಮೊಂದಿಗೆ ಇರುವಾಗ ಮನೆಯ ಉಳಿದವರು ನಮ್ಮ ಜೊತೆ ಆಗುವರು, ಸರಿನಾ ..?"
"ಸರಿ ಆದರೆ.. ಆ ಕೊಯಮತ್ತೂರು ಚಿಕಮ್ಮಾ..?"
"ಅದಕ್ಕೆ ಇನ್ನು ಸಮಯ ಇದೆ ಅಲ್ಲ, ಸುನಿಲ್ ನೊಂದಿಗೆ ನಾನು ಮಾತಾಡ್ತೇನೆ, ಕಲ್ತ ಹುಡುಗ, ಪ್ರೀತಿಯನ್ನು ಒಪ್ಪ ಬಹುದು, ಅವನು ಬೇಡ ಎಂದು ನಿರಾಕರಿಸಿದ ಮೇಲೆ ಆ ಕೊಯಂಬತ್ತೂರು ಚಿಕ್ಕಮ್ಮ ಏನು ಮಾಡಿಯಾರು...?" 
"ಲವ್ ಯು ವೈಭು.. ಈಗ ಸಮಾಧಾನ ಆಯಿತು. ಎಲ್ಲಿ ಮನೆಯವರು ನನಗೆ ಅಮೇರಿಕ ಗೆ ಅಟ್ಟುತ್ತಾರೋ ಎಂದು  ಚಿಂತೆ ಆಗಿತ್ತು."
"ನಿಜ ಪ್ರೀತಿ ಯಾವತ್ತು ಸಾಯಲ್ಲ ಕಣೇ, ಐ ಲವ್ ಯು.."
"ಐ ಟೂ"

ಅವಳ ಕಣ್ಣು ಮೇಲೆರುತಿದ್ದ ಸೂರ್ಯನನ್ನು ನೋಡುತ್ತಿತ್ತು, ಇಡಿ ಚೆನ್ನೈ ಬೆಸಿಲಿನ ಬೇಗೆಯಲ್ಲಿ ಬಳಲಿದ್ದರೂ, ಮನಸ್ಸು ತಂಪಾಗಿ ಜೀನ್ ಗುಡುತ್ತಿತ್ತು.

ಕನಸಿನಲ್ಲಿ ತೆಲುತಿದ್ದ ಮನಸ್ಸು ಒಂದು ಗಂಟೆಯ ಬಳಿಕ ಮತ್ತೆ ಆ ಬೆಂಚಿನ ಮೇಲೆ ಬಂದು ಸೇರಿತು. ಅವಳು ಇನ್ನು ಯಾವುದೋ ಆಲೋಚನೆಯಲ್ಲಿ ಮುಳುಗಿದ್ದಳು.
"ರಾಜಾ .. ಹೋಗೋಣ್ವಾ .. ಊಟದ ಹೊತ್ತಾಯಿತು"
"ಓಕೆ .. "
ಬೈಕ್ ಶುರು ಮಾಡಿದೆ.

ತಬ್ಬಿಕೊಂಡಳು. "ಅ ಕಪ್ ಆಫ್ ಕಾಫಿ ..?" ಎಂದು ಕಿವಿಯಲ್ಲಿ ಪಿಸುಗುಟ್ಟಿದಳು.

ಎಂಟು ತಿಂಗಳಿಂದ ಸಿಪ್ ಇಳಿಸದೆ ಒಣಗಿ ಹೋಗಿದ್ದ ಗಂಟಲಿನ ಕೊಳವೆ ಅದನ್ನು ಬೇಡುತಿತ್ತು. "ಅ ಕಪ್ ಆಫ್ ಕಾಫಿ ಅಟ್ ಸಿ.ಸಿ.ಡಿ" ಎಂದು ಬೈಕ್ ಅನ್ನು ಮೇನ್ ರೋಡಿಗೆ ಹಾಯಿಸಿದೆ.

 


ಮುಂದಿನ ಸಿಪ್

 

Rating
No votes yet

Comments