ನಾವು ಭಾರತೀಯರು

ನಾವು ಭಾರತೀಯರು



ಅಜ್ಜಿಯ ಮುದ್ದು ಅಮ್ಮನ ಗುದ್ದು

ಅಜ್ಜನ ಪ್ರೀತಿ ಅಪ್ಪನ ಭೀತಿಲಿ

ನಲಿವ ನಾವು ಭಾರತೀಯರು

 

ಲೇಸು, ಕುರ್ ಕುರೆ ಬಿಟ್ಟು

ಚಕ್ಕುಲಿ ಗೋಡು ಬಳೆ ಮೆದ್ದು

ಲಾಲಿ ಪಪ್ಪು ಉಂಡೆ ತಿನ್ನುತ

ನಲಿವ ನಾವು ಭಾರತೀಯರು

 

ಫಿಸ್ಜಾ ಬಗ್ರರ್ ಬಿಟ್ಟು

ರೊಟ್ಟಿ ದೋಸೆ ಚಪಾತಿ

ಇಡ್ಲಿ ಚಟ್ನಿ ಬೆಣ್ಣೆ ತಿಂದು

ನಲಿವ ನಾವು ಭಾರತೀಯರು

 

ತಂಸಪ್, ಫಾಂಟ, ಕೋಕೋಲಬಿಟ್ಟು

ಎಳನೀರು, ಪಾಯಸ, ಪಾನಕ, ಕುಡಿದು

ನಲಿವ ನಾವು ಭಾರತೀಯರು

 

ಕ್ಯಾಟ್ಬರಿಸ್ ಕಿಟ್ಕ್ಯಾಟ್ ಬಿಟ್ಟು

ಕಜ್ಜಾಯ, ಕಡುಬು, ತಂಬಿಟ್ಟು ಹುರಿಟ್ಟು ಸವಿದು

ನಲಿವ ನಾವು ಭಾರತೀಯರು

 

ಪೇಟ, ಗಾಂಧಿ ಟೋಪಿ, ಧರಿಸಿ

ಪೈಜಾಮ, ಜುಬ್ಬ, ತೊಟ್ಟು

ನಲಿವ ನಾವು ಭಾರತೀಯರು

 

ಅಜ್ಜಿ ತಿಂಡಿ, ಖಾದಿ ಉಳಿಸಿ

ಗ್ರಾಮೀಣ ಸೊಗಡ ಬೆಳಸಿ

ದೇಸಿಯತೆ ಮೆರೆಸುತ

ನಲಿವ ನಾವು ಭಾರತೀಯರು.

 

*****************

Rating
No votes yet

Comments