ಸಂಪದ ಇಲ್ಲದ(ದೆ) 'ಹೊತ್ತು'-----------------ಕಳೆಯುವ್ದುದಾದರೂ ಹೇಗೆ?

ಸಂಪದ ಇಲ್ಲದ(ದೆ) 'ಹೊತ್ತು'-----------------ಕಳೆಯುವ್ದುದಾದರೂ ಹೇಗೆ?

 ಕಳೆದ ವಾರದಲ್ಲಿ ಸಂಪದ  ಕ್ಕೆ ಲಾಗ್ -ಇನ್ ಆಗುವುದು  ಸಾಧ್ಯವಾಗದೆ, - ದಿನಗಳವರೆಗೆ  ಸಂಪದ ನೋಡದೆ-ಓದದೆ ಏನೋ'ಕಳೆದುಕೊಂಡಂತೆ ' ಆಗಿದೆ (ಆಗಿತ್ತು) ಅಲ್ಲವೇ ?

ಈಗೀಗ ಸಂಪದಕ್ಕೆ ದಿನಂಪ್ರತಿ  ಹಲ 'ಹೊಸ' ಒದುಗರೂ ಲೇಖಕರೂ-ಬರಹಗಾರರೂ ಬರುತ್ತಿದ್ದು  , ಹಲ 'ಹೊಸ ' ಬರಹಗಳು ದಿನ ನಿತ್ಯ ಸಂಪದ ಸೇರುತ್ತಿವೆ..

ಹೆಚ್ಚಿದ  ಬರಹಗಳ  'ಲೋಡುಸಂಪದಕ್ಕೆ 'ಹೊರೆ ' ಯಾಗಿ  ಎರಡನೆ ಬಾರಿ (ಹಿಂದೊಮ್ಮೆ ಸಂಪದ ಕೆಲ ದಿನಗಳವರೆಗೆ  ಆಫ್ ಲಾಯಿನ್ ಆಗಿತು) ಸಂಪದ   ಆಫ್ ಲಾಯಿನ್ ಆಯ್ತು..

  - ದಿನ ಸಂಪದ  ನೋಡದೆ -ಓದದೆ  ನಮಗೆಲ್ಲ ಏನೋ 'ಕಳೆದುಕೊಂಡಂತೆ' ಆಗಿದ್ದು ಸುಳ್ಳಲ್ಲ..!!

 

ದಿನಂಪ್ರತಿ ಹಲ ಬಾರಿ, ಆಫೀಸಿನಲ್ಲಿ, ದಾರಿ ಮಧ್ಯೆ ಮೊಬೈಲಿನಲ್ಲಿ , ಕೊನೆಗೆ ರೂಮಿನಲ್ಲೂ ಇರ್ವಗಲೂ ಸಂಪದ  ಸರಿ ಹೊಯ್ತ? ಅಂತ  ನೋಡ್ತಲೇ ಇದ್ದೆ, - ದಿನ  ಒಮ್ಮೆಯೂ ಸಂಪದ ಪ್ರವೇಶಿಸಲು ಆಗಲಿಲ್ಲಮಾಹಿತಿಯಲ್ಲಿ- ಸೋಮವಾರ ಸರಿ ಹೋಗಬಹುದು ಎಂದಿತ್ತು, ಇವತ್ತು (ಸೋಮವಾರ೧೨ ಘಂಟೆ ಸುಮಾರಿಗೆ  ಅದೊಮ್ಮೆ  ಸಂಪದ  ಓಪನ್ ಆಯ್ತು. ಹಲ ಬರಹಗಳನ್ನ  ಓದುವಾಗಲೇ ಮತ್ತೆ ಆಫ್ ಲಾಯಿನ್ ಆಯ್ತು..

ಸಂಪದವನ್ನ  ಮತ್ತೆ  ಆನ್ ಲಾಯಿನ್ ಮಾಡಲು ಹರಿ-ಬಳಗ  ಸತತ ಶ್ರಮ ಪಡುತ್ತಿದೆ, ದಿನಂಪ್ರತಿ  ಸಂಪದ ಸೇರುವ  ಲೇಖನ ಬರಹಗಳಿಗೆ  ಸ್ಥಳ  ಹೊಂದಿಸಿ  ಶೇಖರಿಸಿಡುವುದು  'ಸಾಮಾನ್ಯ ' ಸಂಗತಿಯಲ್ಲ, ಅದೂ ಯಾವುದೇ ಜಾಹೀರಾತಿನ 'ಹಂಗೂ' ಇಲ್ಲದೆ  ಒಂದು ವೆಬ್ ಸೈಟ್  ನಡೆಸುವುದು ಅಂದ್ರೆ...

ಕನ್ನಡ ಸಾಹಿತ್ಯ-ಸಂಸ್ಕೃತಿ , ಬಗೆಗಿನ ಕಾಳಜಿ, ಹೊಸ ಲೇಖಕರನ್ನ-ಬರಹಗರರನ್ನ  ಪ್ರೋತ್ಸಾಹಿಸುವ   ನಿಟ್ಟಿನಲ್ಲಿ , 'ಹರಿ'  ಅವರ  ಕಾರ್ಯ 'ಸ್ತುತ್ಯಾರ್ಹ' ....

ಸಂಪದ ಸೇರಿ,ಹಲ ಹಿರಿಯರ -ಕಿರಿಯರ  ಸಂಗಮದಲ್ಲಿ-

ಒಡನಾಟದಲ್ಲಿ  ನಾ ಕಲೆತದ್ದು  ಬಹು ಹೆಚ್ಚು ...

 

ನಮ್ಮ ದೈನಂದಿನ ಜೀವನ ಶೈಲಿಯಲ್ಲಿ  ಸಂಪದ  ಇಲ್ಲದ ದಿನ 'ಹೇಗಿರುತ್ತೆ' ಅನ್ನುವ  ಅನುಭವವೂ ದಿನಗಳಲ್ಲಿ ಆಯ್ತು:))

 

ಆದಷ್ಟು ಶೀಘ್ರ ಸಂಪದ  ಸರಿ ಹೋಗಲಿ ಎಂಬ ಹಾರೈಕೆ , ಮುಂದೆ ಸಂಪದ ಅಡೆ  -ತಡೆ ಇಲ್ಲದೆ  'ಸದಾ' ಸಿಗಲಿ ಎಂಬ ಆಶಯದೊಡನೆ...

 

ಸಂಪದ ಇಲ್ಲದ ದಿನಗಳಲ್ಲಿ  ನಾವ್ಯಾರು 'ಒಡನಾಟದಲ್ಲಿ' ಇರದೇ  'ಒಂಥರಾ' ಆಗಿತ್ತಲ್ಲವೆ? ಅದ್ಕೆ  ಮುಂದೆ ತರಹದ್ದು ಆದರೆ(ಆಗಬಾರದು ಎಂಬ ಆಶಯ) ಎಂಬ ಮುಂದಾಲೋಚನೆಯಲಿನಾವೆಲ್ಲಾ  ನಮ್ಮ ನಮ್ಮ ಮೇಲು  ಆಯ್- ಡಿ ಮತ್ತು  ಬೇರೆ ಇನ್ನಿತರ ವೆಬ್ ಸೈಟ್ ಗಳಲ್ಲಿ(ವಿಸ್ಮಯನಗರಿ ಇತ್ಯಾದಿನೊಂದಾಯಿಸಿದ್ದರೆ ಅದರದೂ ಇಲ್ಲಿ ಸೇರಿಸಿದರೆ  ಅದನು ನಾವು ಪರಸ್ಪರ 'ಸೇವ್ 'ಮಾಡಿ ,ಮುಂದೊಮ್ಮೆ ಮೇಲು  ಮೂಲಕ  ಸಂಪರ್ಕದಲಿ ಇರಬಹುದು ಅಲ್ಲವೇ?

ಅದಕಾಗಿ   ವಿಧಾನವನ್ನ  'ಇಷ್ಟ' ಪಡುವವರು  ಕೆಳಗೆ  ನಿಮ್ಮ  ಮೇಲು ಆಯ್ ಡಿ -ಬೇರೆ ವೆಬ್ ಸೈಟ್ ಗಳ (ವಿಸ್ಮಯ ನಗರಿ ಇತ್ಯಾದಿ) ಯೂಸರ್ ನೇಮ್  ಹಾಕಬಹುದು..

Rating
No votes yet

Comments