ಅ ಕಪ್ ಓಫ್ ಕಾಫಿ ... ಸಿಪ್ - ೪೫

ಅ ಕಪ್ ಓಫ್ ಕಾಫಿ ... ಸಿಪ್ - ೪೫

 

 

ಹಿಂದಿನ ಸಿಪ್ 

 

ಸಿಪ್ - ೪೫

 


"ಕಾಫಿ ಎಡ್ತ್ಕೋ... " ಎಂದು ಆಕೃತಿಯ ಅಮ್ಮ ಟ್ರೇ ಯನ್ನು ನನ್ನ ಎದುರು ಸರಿಸಿದರು. ಮದ್ಯಾಹ್ನದ ಊಟ ಇನ್ನು ಗಂಟಲಿನಿಂದ ಇಳಿಯದಿದ್ದರೂ ಅದರ ಮೇಲೆ ಈಗ ಮೂರು ಗಂಟೆಗೆ ಭಾವಿ ಅತ್ತೆ ಕೊಡುವ ಕಾಫಿ ಯನ್ನು ಬೇಡ ಎನ್ನಲು ಮನಸ್ಸಾಗಲಿಲ್ಲ.
"ನಂಡ್ರಿ" ಎಂದೆ. ಸದ್ಯಕ್ಕೆ ವಣಕ್ಕಂ,ನಂಡ್ರಿ ಯಂತಹ ಕೆಲವೇ ಕೆಲವು ಶಬ್ಧಗಳು ನನ್ನ ತಮಿಳ್ ಡಿಕ್ಷನರಿ ಯಲ್ಲಿ ಸೇರಿ ಹೋಗಿದ್ದವು. ನನ್ನ ತಮಿಳ್ ನುಡಿ ಕೇಳಿ ಅವರು ಮುಗುಳ ನಕ್ಕರು. ನನ್ನ ಎದುರಲ್ಲಿ ಕುಳಿತ ಗಂಡನಿಗೆ ಕಾಫಿ ಟ್ರೇ ಅನ್ನು ಮುಂದೆ ಹಿಡಿದರು. ಅವರು ಅದರಿಂದ ಇನ್ನೊಂದು ಕಪ್ ಕಾಫಿ ತೆಗೆದಾದ ಬಳಿಕ ಅಡುಗೆ ಕೋಣೆ ಸೇರಿಕೊಂಡರು.

ಲೀವಿಂಗ್ ರೂಂ ನ ಸೋಪದಲ್ಲಿ ನಾನು, ಗೋಪಾಲನ್ ಮತ್ತು ಗಣಪತಿ ಕುಳಿತುಕ್ಕೊಂಡಿದ್ದೆವು. ಮಗಳ ಮದುವೆಯ ಪ್ಲಾನಿಂಗ್ಸ್ ಅನ್ನು ನನ್ನ ಎದುರು ಅವರು ಬಿಚ್ಚಿ ಇಡುತಿದ್ದರು.
ನಾನು ಅವರಲ್ಲಿ "ಪೆರಿಯಪ್ಪಾ, ಸುನಿಲನಿಗೆ ಒಪ್ಪಿಗೆ ಇದೆಯಾ .."
"ಅವನು ಹುನ್ ಅಂತ ನು ಹೇಳಿಲ್ಲ ಹುನ್ಹು ... ಅನ್ನಲಿಲ್ಲಾ, ಅವನದ್ದು ಆಕೃತಿಯದ್ದೆ ವರಸೇ"
"ಮದುವೆ ಮುಂಚೆ ಇಬ್ಬರ ಅಭಿಪ್ರಾಯ ಪಡೆಕೊಳ್ಳುವುದು ಒಳ್ಳೆದಲ್ಲಾ.."
"ಅವನು ಒಪ್ಪೇ ಒಪ್ತಾನೆ , ನಮ್ಮ ಕಣ್ಣ ಎದುರು ಬೆಳೆದ ಹುಡುಗ, ಬೇಡ ಅನ್ನಲ್ಲಾ, ಬೇಡ ಅನ್ನಲು ಕಾರಣಾನೂ ಇಲ್ಲ, ಆಕೃತಿಗೆ ಯಾವುದರಲ್ಲಿ ಕಮ್ಮಿ ಇದೆ ಹೇಳು, ರೂಪ, ಗುಣ, ಹಣ ,ವಿದ್ಯೆ ಎಲ್ಲ ಇರುವ ಅವಳನ್ನು ಬೇಡ ಎನ್ನಲು ಒಂದು ಕಾರಣ ನೀನು ಹೇಳು " ಎಂದು ಎದುರು ಕುಳಿತ ಅವಳ ಪ್ರಿಯತಮನನ್ನೇ ಕೇಳಿದರು ಪ್ರಿಯೆಯ ಜನ್ಮದಾತ.
"ಹೌದು ಅಂಕಲ್, ಅವಳು ದೇವರು ಕೊಟ್ಟ ಫುಲ್ಲಿ ಫ್ಲೆಚಡ್ ಗಿಫ್ಟ್" ಅಂದೆ. ಎದುರು ಕುಳಿತ ದೊದಪ್ಪನ ತುಟಿ ಅಂಚಲ್ಲಿ ಒಂದು ನಗೆ ಮೂಡಿ ಮಾಯವಾಯಿತು.
ಗೋಪಾಲನ್ ಮುಂದುವರಿಸಿದರು "ಮೇಲಾಗಿ ಸುನಿಲ್ ನಿಗೆ ಎಮೆಸ್ಸ್ ಮಾಡಲು ಹೇಳಿದವರು ನಾವೇ, ಅವನಿಗೆ ಅಲ್ಲಿನ ಸವಲತ್ತು ಒದಗಿಸಿಕೊಟ್ಟ ಅಣ್ಣನ ಸಹಾಯಕ್ಕೆ ಅವನು ಒಪ್ಪಲೇಬೇಕು" ಎಂದು ತನ್ನ ಅಣ್ಣನನ್ನು ನೋಡಿದರು.

ದೊಡ್ಡಪ್ಪಾ "ತಂಬಿ, ಬಿಡೋ ಅದನ್ನು, ನಾವು ಸಹಾಯ ಮಾಡಿದ್ದೇವೆ ಹೇಳಿ ಅವರಿಂದ ಮರು ಸಹಾಯ ಬಯಸುವುದು ಸರಿಯಲ್ಲ" ಎಂದರು.
ನಾನು ಸುಮ್ಮನಾದೆ. ತಮ್ಮನು ಸುಮ್ಮನಾದ. ಇಲ್ಲಿ ವರೆಗೆ ನಡೆಯುತಿದ್ದ ಟಿವಿ ಒಮ್ಮೆಗೆ ಸುಮ್ಮನಾಯಿತು. ಕೇಬಲ್ ಸಿಗ್ನಲ್ ಇಲ್ಲದೇ ನೀಲಿ ಪರದೆ ಆವರಿಸಿತು. ನಾನು ರಿಮೊರ್ಟ್ ನಿಂದ ಅದನ್ನು ಆರಿಸಿದೆ.

ಗಣಪತಿ "ವೈಭು ನಿನ್ನ ಮದುವೆ...?"
"ದೊಡ್ಡಪ್ಪಾ ನಾನು ಇನ್ನು ಸೆಟಲ್ ಆಗ್ಬೇಕು, ಆ ಬಳಿಕ"
"ಸೆಟಲ್ ಅಂದ್ರೆ...?"
"ನಾನು ಅಂದುಕ್ಕೊಂಡ ರೀತಿಯಲ್ಲಿ, ನನ್ನ ಅಪ್ಪಾ ಅಮ್ಮನನ್ನು ಕರಕ್ಕೊಂಡು ನನ್ನೊಂದಿಗೆ ಇಟ್ಟುಕೊಳ್ಳಬೇಕು, ಬಳಿಕ ಮದುವೆ"
"ಇಪ್ಪತ್ತೈದು ಆಯಿತಲ್ಲಾ, ಇನ್ನು ಏನು ಸೆಟ್ಟಲ್ ಆಗುವುದು..?" ಎಂದು ಗೋಪಾಲ್ ನಡುವಲ್ಲಿ ಹೇಳಿದರು.
"ಆದ್ರೆ, ಎಣಿಸಿದ ಕಾರ್ಯ ಯಾವುದು ಆಗಲಿಲ್ಲ, ಅದು ಆದ ಬಳಿಕ ಮದುವೆ" ಎಂದೆ.
ಗೋಪಾಲನ್ "ನೀನು ಹುಡುಗಿ ಹುಡುಕಿ ಇಟ್ಟಿದ್ದಿಯೇನೋ..?" ಎಂದು ನನ್ನನ್ನು ನೇರವಾಗಿ ಕೇಳಿ ಬಿಟ್ಟರು.
ನನ್ನ ಉತ್ತರದ ಪ್ರತೀಕ್ಷೆಯಲ್ಲಿ ನನ್ನನ್ನೇ ಗಣಪತಿ ನೋಡುತಿದ್ದರು. 'ಹೌದು ನಿಮ್ಮ ಮಗಳೇ' ಎನ್ನುವ ಅಂದುಕ್ಕೊಂಡೆ, ಆದರೆ ಅವರ ಘನತೆ ಅಂತಸ್ತಿಗೆ ನನ್ನ ಮಟ್ಟವನ್ನು ನೆನಪಿಸಿ ಮೌನದಲ್ಲಿ ಕುಳಿತೆ. ನನ್ನನು ನೋಡುತಿದ್ದ ಗಣಪತಿ ತಮ್ಮ ದೃಷ್ಟಿಯನ್ನು ತಮ್ಮನಲ್ಲಿಗೆ ಸರಿಸಿದರು.
ನಾನು "ಸದ್ಯಕ್ಕೆ ಇಲ್ಲ, ಸೆಟಲ್ ಆದ ಮೇಲೆ ಹುಡುಕುವ ಅಂದುಕ್ಕೊಂಡಿದ್ದೇನೆ" ಎಂದು ಸುಮ್ಮನಾದೆ.
ಗೋಪಾಲನ್ "ಮಂಗಳೂರು ಹುಡುಗೀರ ಎದುರಿಗೆ ಮರಾಟಿ ಹುಡುಗೀರು ಯಾವ ಲೆಕ್ಕವು ಅಲ್ಲಾ, ಮಂಗಳೂರಿನ ಹುಡುಗೀಯನ್ನೇ ಮದುವೆ ಆಗು, ನಮ್ಮನ್ನು ನಿನ್ನ ಮದುವೆಗೆ ಕರೀಬೇಕಪ್ಪಾ, ಕಳೆದ ಮಂಗಳೂರು ದಿನವನ್ನು ಮತ್ತೆ ನೆನಪಿಸ ಬೇಕು ನಾವು" ಎಂದು ನಕ್ಕರು.

ಮನಸ್ಸು ಇಪ್ಪತ್ತು ಮೂರು ವರ್ಷ ಮಂಗಳೂರು ಹುಡುಗೀರನ್ನು ಸವೆದು ಕೊನೆಗೆ ಚೆನ್ನೈ ಚೆಲುವೆಗೆ ಸೋತಿತ್ತು, ಇಲ್ಲಿ ಆ ಚೆಲುವೆಯ ತಂದೆ ಮಂಗಳೂರಿನ ಹುಡುಗೀರ ವರ್ಣನೆಯಲ್ಲಿ ನಿರತತಾಗಿದ್ದರು.
ನಾನು "ಶೂರ್ ಅಂಕಲ್ ಕರೀತೇನೆ" ಎಂದು ಸುಮ್ಮನಾದೆ.
ಪಕ್ಕದಲ್ಲಿ ಕುಳಿತ ಗಣಪತಿ "ನಿನ್ನ ಮದುವೆ ಆದ ಮೇಲೆ ನಮ್ಮದು ಚೆನ್ನೈ ಮಂಗಳೂರು ಮೇಲ್ ಯಾವಾಗಲು ನಡೆಯುತ್ತಾ ಇರುತ್ತೆ ಅನ್ಸುತ್ತೆ" ಎಂದರು.
ಅವರ ತೊಂಟ್ ನನಗೆ ಅರ್ಥವಾಗಿತ್ತು, ತಮ್ಮನಿಗೆ ಅರ್ಥವಾಗಲಿಲ್ಲ.
ನಾನು ನಕ್ಕೆ, ಅವರು ನಕ್ಕರು.

ಮನೆಯ ಹೆಂಗಸರು ತಯಾರಾಗಿ ಬಂದರು. ಗಣಪತಿ ನನ್ನಲ್ಲಿ "ವೈಭು ತಯಾರಾಗು ಕೃಷ್ಣಾ ಮಂದಿರಕ್ಕೆ ಹೋಗೋಣ, ನೀನು ಇನ್ನು ಅದನ್ನು ನೋಡಿಲ್ಲ, ಕಳೆದ ಬಾರಿ ನಿನ್ನನ್ನು ಕರಕ್ಕೊಂದು ಹೋಗ ಬೆಕಂತಿದ್ದೆ , ನೀನು ಮಲಗಿದ್ದೆ, ಇವತ್ತು ತೋರಿಸುತ್ತೇನೆ, ಪ್ರಶಾಂತ ವಾತಾವರಣ"  ಎಂದರು.
"ದೊಡ್ಡಪ್ಪಾ ನಾನು ಆ ಮಂದಿರ ನೋಡಿದ್ದೇನೆ, ಆಕೃತಿ ನನಗೆ ಅದನ್ನು ತೋರಿಸಿದ್ದಾಳೆ" ಎಂದೆ.
ಅವರು ಮತ್ತೆ ಮುಗುಳ್ ನಕ್ಕರು. ಎದ್ದು ನಿಂತ ನನ್ನ ಭುಜ ತಟ್ಟಿ"ಎಲ್ಲಾನು ಮುಗ್ಸಿದ್ದಿರಿ ನೀವಿಬ್ಬರು ಸೇರಿ" ಎಂದರು.

ಮೇಲಿನ ಕೋಣೆಗೆ ಮೆಟ್ಟಲು ಹತ್ತುತ್ತಿದಂತೆ ಇಲ್ಲಿನ ಸಂಸ್ಕೃತಿ ನೆನೆದು "ದೊಡ್ಡಪ್ಪಾ ಮುಂಡು..." ಅಂದೆ.
ಅವರು ತನ್ನ ರೂಮಿನಿಂದ ಮುಂಡು ತಂದು ನನಗೆ ಕೊಡುತ್ತಾ.."ನಿನ್ನಲ್ಲಿ ಮಾತಾಡುವುದಿದೆ, ದೇವಸ್ತಾನದಲ್ಲಿ ಆಕೃತಿಗೆ ಸಮಯ ಕೊಡುವುದರ ಜೊತೆಗೆ ನನಗೆ ಕೆಲವು ನಿಮಿಷ ಕೊಡ್ತಿಯಲ್ಲ" ಅಂದರು.
ನಗುತ್ತ" ಆಯಿತು ದೊಡ್ಡಪ್ಪಾ" ಎಂದು ಮೆಟ್ಟಲು ಹತ್ತಿದೆ.

************

ಮನೆಯ ಒಂಬತ್ತು ತಲೆಗಳು, ಬಂದ ಇಬ್ಬರು ಅಥಿತಿ ಗಳು ಸೇರಿ ಮೂರನೇ ಬೀದಿಯಲ್ಲಿ ಇದ್ದ ಆ ಕೃಷ್ಣಾ ಮಂದಿರ ತಲುಪಿದೆವು. ಹತ್ತು ಇಪ್ಪತ್ತು ವರ್ಷ ಹಿಂದೆ ಕಟ್ಟಿದ ಅಮೃತ ಶಿಲೆಯ ದೇವಾಲಯ. ಸ್ವಚ್ಚ ವಾತಾವರಣ.ಗರ್ಭ ಗುಡಿ ಪ್ರವೆಶಿಸುತಿದ್ದಂತೆ ಒಂಬತ್ತು ಜನರ ಗುಂಪು ಅಲ್ಲಲ್ಲಿ ಚದುರಿತು. ಮನೆಯ ಗಂಡಸರಿಗೆ ಯಾರೋ ನಡುವಲ್ಲಿ ಕರೆದು ಮಾತು ಶುರು ಮಾಡಿದರು. ನಾನು ಆಕೃತಿ ಪ್ರಕೃತಿ ಯೊಂದಿಗೆ ಗುಡಿ ಪ್ರವೇಶಿಸಿದೆ. ಆದರ್ಶ್ ನನ್ನನ್ನು ಹಿಂಬಾಲಿಸಿದ.
ಮನೆಯ ಹೆಂಗಸರು ಕೊಯಂಬತ್ತೂರಿನ ಅಕ್ಕನ ಜೊತೆಗಿನ ಮಾತಿನಲ್ಲಿ ಮುಳುಗಿದ್ದರು.

ಮೂರು ಸುತ್ತು ಹೊಡೆದು ಗಂಟೆ ಬಾರಿಸಿದೆ. ಆ ಗಂಟೆ ಮೌನಕ್ಕೆ ತೆರಳುವ ಮುಂಚೆ ಆಕೃತಿ ಅದಕ್ಕೆ ಇನ್ನೊಂದು ಗುದ್ದುಕೊಟ್ಟಲು. ತಿರುಗಿದೆ. ದೇವರನ್ನು ನೋಡುವುದನ್ನು ಬಿಟ್ಟು ನನ್ನನ್ನೇ ನೋಡುತಿದ್ದಳು.

ಮನಸ್ಸು ಕೃಷ್ಣನನ್ನು ಮರೆತು ರಾಧೆಯ ಗೀತೆ ಹಾಡುತ್ತಿತ್ತು. 

ಅವಳು ಸಮೀಪಿಸಿದಳು. ಇನ್ನು ದೃಷ್ಟಿ ಅವಳಲ್ಲೇ ಇತ್ತು. ಸೋದರ ಸೋದರಿಯರು ಆಗಲೇ ಪಕ್ಕದ ತೀರ್ಥ ಪ್ರಸಾದದ ಅರ್ಚಕರ ಎದುರು ಸರತಿಯಲ್ಲಿ ನಿಂತಿದ್ದರು.
ಹತ್ತಿರ ಬಂದ ಅವಳು "ದೇವರು ಅಲ್ಲಿದ್ದಾರೆ" ಎಂದಳು.
ಅವಳ ಮಾತು ತಲೆಗೆ ಹೋಗಲಿಲ್ಲ.
ಕಣ್ಣುಗಳು ಮಿಟುಕದೆ ರಾಧೆಯನ್ನು ಆಸ್ವಾದಿಸುತಿತ್ತು. ಅವಳು ತನ್ನ ಎರಡೂ ಕೈಗಳಿಂದ ನನ್ನ ಎರಡೂ ಕಣ್ಣು ಗಳ ಎದುರು ಸಾರಿಸಿದಳು. ನಿಜದ ಅರಿವು ಮೂಡಿತು, ಕತ್ತು, ದೇಹ ತಿರುಗಿತು. ಕೃಷ್ಣನಿಗೆ ರಾಧೆಯನ್ನು ನನಗಾಗಿ ಕೊಟ್ಟದಕ್ಕಾಗಿ ಧನ್ಯವಾದ ಸಲ್ಲಿಸಿದೆ. ಅವಳೂ ತನಗಾದ ಕೃಷ್ಣಾನುಗ್ರಹ ಕ್ಕೆ ಧನ್ಯವಾದ ಒಪ್ಪಿಸಿ ನಮಸ್ಕರಿಸಿದಳು.
ಆದರ್ಶ್ ನ ಹಿಂದೆ ಆಗಲೇ ಮೂರು ಜನ ತೀರ್ಥ ಪ್ರಸಾದಕ್ಕೆ ನಿಂತಾಗಿತ್ತು, ಅವರ ಹಿಂದೆ ನಾನು ಆಕೃತಿ ನಿಂತೆವು.

ಪ್ರಸಾದ ಪಡಕ್ಕೊಂಡ ಬಳಿಕ ನನ್ನ ಹಣೆಗೆ ತಿಲಕ ಇಟ್ಟೆ. ಅಭ್ಯಾಸ ಬಲದಂತೆ ಉಳಿದ ಗಂಧವನ್ನು ಬಾಯಿಗೆ ಹಾಕಿಕೊಂಡೆ.
ಅವಳು ನನ್ನನ್ನು ಹಿಂಬಾಲಿಸಿದಳು. ಹೊರ ಆವರಣಕ್ಕೆ ಬರಲು "ಗಂಧ ..?"
ಬಾಯಿ ತೆರೆದು ನಾಲಗೆಯ ಮೇಲೆ ಕರಗುತಿದ್ದ ಗಂಧವನ್ನು ತೋರಿಸಿದೆ. ಅವಳು ನನ್ನ ಪಾಲಿನ ಗಂಧವನ್ನು ಅವಳ ಹಣೆಗೆ ಹಚ್ಚಲು ಬಯಸಿದ್ದಳು. ಆದಕ್ಕೆ ಮೊದಲೇ ನಾನು ಆ ಪಾಲನ್ನು ಅವಳಿಗೆ ಕೊಡದೇ ಆಸ್ವಾದಿಸುತಿದ್ದೆ.
ತುಸು ಕೊಪಿಸಿದಳು.
ಹಣೆಗೆ ಹಚ್ಚಿದ್ದ ಗಂಧ ತೆಗೆದೆ. ಅವಳ ತೆರೆದ ಅಂಗೈ ಮೇಲೆ ಅದನ್ನು ಇಟ್ಟೆ.
"ನನ್ನ ಹಣೆಗೆ ಹಚ್ಚೋ.." ಅಂದಳು.
"ನೀನೆ ಹಚ್ಕೊ, ಎರಡೂ ತಿಂಗಳಾದ ಬಳಿಕ ಎಲ್ಲರೆದುರು ನಾನು ಹಚ್ಚುತ್ತೇನೆ" ಅಂದೆ.
ಅವಳ ಮನಸ್ಸು ಕುಣಿಯಿತು. ಮತ್ತೆ ಅವಳು ಆ ಮೂರು ಶಬ್ದಗಳನ್ನು ಉಸುರಿದಳು.

ಮುದ್ದಿಸಲು ಮನಸ್ಸಾಗುತ್ತಿತ್ತು.ಕಲಿಯುಗದ ಕಣ್ಣುಗಳಿಗೆ ದ್ವಾಪರದ ಕೃಷ್ಣಾ ರಾಧೆಯ ಪ್ರೇಮ ಬೀಳುವ ಮುಂಚೆ ಆದರ್ಶ್ ಬಂದು "ಅಣ್ಣಾ , ಎಲ್ಲಿದ್ರಿ.. ನಿಮ್ಮನ್ನು ಎಲ್ಲಿ ಎಲ್ಲ ಹುಡುಕುವುದು..?" ಎಂದು ನನ್ನ ಕೈ ಎಳೆದ.
"ನಿಲ್ಲೋ, ಒಂದು ನಿಮಿಷ" ಅಂದೆ.
ಅಕ್ಕ ಅಲ್ಲಿ ನಾಚಿ ನೀರಾಗುತಿದ್ದಳು. ತಮ್ಮ ನನ್ನನ್ನು ಎಳೆದು ದೇವಸ್ತಾನದ ಹೊರ ಆವರಣಕ್ಕೆ ಕರಕ್ಕೊಂಡು ಹೋದ.
"ಏನೋ, ನಿನ್ನದು ..?"
"ಲೇಟ್ ಆಯಿತು.. ಹೋದಳು ಅವಳು ...." ಎಂದನು ಹತಾಶೆಯಲ್ಲಿ.
"ಯಾರೋ ...?"
"ಯಾರಿಲ್ಲಾ.. ಬಿಡು ಇನ್ನೊಮ್ಮೆ ಹೇಳ್ತೇನೆ" ಅಂದ ಹನ್ನೊಂದರಲ್ಲಿ ಓದುತಿದ್ದ ಆದರ್ಶ್.
"ರಾಧೇ ...?" ಎಂದು ಅವನನ್ನು ಛೇಡಿಸಿದೆ.
ಹುಡುಗ ನಾಚಿಗೆಯಿಂದ ಕೆಳಗೆ ನೋಡಲು ಶುರುಮಾಡಿದ.
"ಶೃತಿ ನಮ್ಮ ಸ್ಕೂಲ್ ನವಳು, ನನ್ನ ಜೂನಿಯರ್ ಈಗ ಟೆಂತ್ " ಎಂದ.
"ಹುಡುಗ ಜೋರಿದ್ದಾನೆ" ಎಂದು ನಾನು ನಕ್ಕೆ.
"ಯಾರಿಗೂ ಹೇಳ್ ಬೇಡ ಅಣ್ಣಾ, ಪ್ಲೀಸ್ .." ಎಂದ.
"ಏನೋ, ಇಷ್ಟು ಬೇಗ ಸೆಟ್ ಮಾಡಿ ಕೊಂಡಿದ್ದಿಯಾ..? ಏನು ಸಮಾಚಾರ..?"
"ನಂಗೆ ಅವಳು ಇಷ್ಟ, ಅವಳಿಗೂ.."
"ಮತ್ತೆ ..?"
"ಈಗ ಅವಳು ಬೇರೆ ಶಾಲೆ ನಾನು ಬೇರೆ. ಪ್ರತಿ ಭಾನುವಾರ ಮಾತ್ರ ಇಬ್ಬರು ಒಬ್ಬರನೊಬ್ಬರು ನೋಡ್ತೇವೆ, ಅಷ್ಟೇ "
"ಅಬಬ್ಬಾ... " ಎಂದು ನಕ್ಕೆ.
ಅವನು "ಅವಳಿಗೆ ಉಳಿದ ದಿನ ನೋಡುವಂತೆ ಇಲ್ಲ, ಮಾತಾಡುವಂತೆ ಇಲ್ಲ, ಇಮಾಮ್ ಶಾಲೆಯಿಂದ ಬರುವಾಗ ಕಾವಲಿರ್ತಾನೆ,ಮನೆಯಲ್ಲಿ ಎಲ್ಲರೂ"
"ಈಗ ಇಂಟರ್ನೆಟ್, ಆರ್ಕುಟ್, ಜಿ ಟಾಕ್, ಮೊಬೈಲ್ ಎಸ್ಸ್ಮೆಸ್ಸ್ ಎಲ್ಲ ಇದೆ ಯಲ್ಲ" ಅಂದೆ ನಾನು.
"ಎಲ್ಲ ಇದೆ ಲೋಕದ ಜನರ ಹತ್ತಿರ ಆದ್ರೆ ನನ್ನ ಬಳಿ ಏನು ಇಲ್ಲ, ನನಗೆ ಆ ಕಂಪ್ಯೂಟರ್ ರೂಮಿಗೆ ಹೋಗುವ ಹಾಗೆ ಇಲ್ಲ, ಮತ್ತು ಮೊಬೈಲ್ ದೂರದ ಮಾತು" ಎಂದು ನಿರಾಸೆಯ ನಿಟ್ಟುಸಿರು ಬಿಟ್ಟ. ಮನೆಯ ಹಿರಿಯರ ಕಾವಲಲ್ಲಿ ಇರುವ ಹುಡುಗ .
ನಾನು ನಗುತ್ತಾ "ಇನ್ನೂ ನೀನು ಸಣ್ಣವ, ಇದು ಬರಿ ಇನ್ಫಾಚುಯೇಶನ್" ಅಂದೆ ನನ್ನ ಪಿಯು ಪ್ರೀತಿಯನ್ನು ನೆನಪಿಸುತ್ತಾ.
ಅವನು ನಕ್ಕ. "ಅಣ್ಣ ನನ್ನ ವಿಷಯ ನೀನು ಮನೆಯವರ ಹತ್ತಿರ ಹೇಳಿದರೆ ನಿನ್ನ ವಿಷಯ ಅವರ ಹತ್ತಿರ ಹೇಳ್ತೇನೆ" ಎನ್ನುತ್ತಾ ಅಲ್ಲಿಂದ ಮರೆಯಾದ.

ಕೃಪಾಳ ಸುಳಿಯಲ್ಲಿ ಮನಸ್ಸು ತೇಲುತಿದ್ದಾಗ. ದೊಡ್ಡಪ್ಪ ನನ್ನಲ್ಲಿ ಬಂದು "ವೈಭು ಎಲ್ಲಿ ನಿನ್ನ ಹುಡುಕುವುದು.."
"ನೀವೇ ಬ್ಯುಸಿ ಇದ್ರಿ, ಅದಕ್ಕೆ ನಾನು ದರ್ಶನ ಪಡೆದೆ" ಅಂದೆ.
"ಮತ್ತೆ, ಏನಂತೆ ಆಕೃತಿ" ಎಂದು ಸೀಧಾ ಪಾಯಿಂಟ್ ಗೆ ಬಂದರು ದೊಡ್ಡಪ್ಪ.
"ಏನೂ ಇಲ್ಲ"

ಹೆಗಲ ಮೇಲೆ ಕೈಹಾಕುತ್ತ ನನ್ನನ್ನು ದೇವಸ್ತಾನದ ಹೊರ ಆವರಣಕ್ಕೆ ಕರಕ್ಕೊಂಡು ಬಂದರು, ನನ್ನಲ್ಲಿ "ಮದುವೆ ಬಗ್ಗೆ ಏನಿದೆ ಅವಳ ಅಭಿಪ್ರಾಯ..?"
ಮೌನದಲ್ಲಿದ್ದೆ, ನಂತರ "ಸುನಿಲನಿಗೆ ಒಪ್ಪಿಗೆ ಇದೆಯಾ..?" ಎಂದು ಅವರನ್ನು ಮತ್ತೆ ನಾನು ಕೇಳಿದೆ.
"ಸುನಿಲ್ ನ ಮದುವೆ ಬಗ್ಗೆ ನಾನು ಕೆಳಿದಲ್ಲಾ, ಆಕೃತಿಯ ಮದುವೆ  ಬಗ್ಗೆ"
"ಸುನಿಲ್, ಅವಳು ಒಂದೇ ಅಲ್ಲಾ"
"ನೀನು" ಎಂದು ಕಣ್ಣಲ್ಲಿ ಕಣ್ಣಿಟ್ಟು ನೋಡುತಿದ್ದರು.

ದೇವಸ್ತಾನದ ಆವರಣ , ಮೇಲಾಗಿ ಹೃದಯಕ್ಕೆ, ಮನಸ್ಸಿಗೆ ಹತ್ತಿರವಾದ ಜನ ಅವರಲ್ಲಿ ಸುಳ್ಳು ಹೇಳಲು ಮನಸ್ಸಾಗಲಿಲ್ಲ.
"ನಾನು ..ನಾನು ಪರವಾಗಿಲ್ಲ.. ಮಂಗಳೂರು ಹುಡುಗೀನ ಹುಡುಕುತ್ತೇನೆ.. ನಿಮ್ಮ ತಮ್ಮನ ಮನಸ್ಸು ನೋಯಿಸಲು ಮನಸ್ಸಿಲ್ಲ"
"ತಮ್ಮನ ಮನಸ್ಸು ನೋಯಿಸ ಬಾರದು ಹೇಳಿ, ನಿನ್ನನ್ನು ಪ್ರೀತಿಸುವ ಮನಸ್ಸಿಗೆ ನೋಯಿಸ್ತಾ ಇದ್ದೀಯ ...?"
"ದೊಡ್ಡಪ್ಪಾ.. ಹಾಗಲ್ಲಾ, ಅವಳು ನನ್ನ ಮೇಲೆ ಪ್ರಾಣ ಇಟ್ಕೊಂಡಿದ್ದಾಳೆ, ಆದ್ರೆ ಅವಳ ಮೇಲೆ ಅವರು ಜೀವಾನೇ ಇಟ್ಕೊಂಡಿದ್ದಾರೆ... ಅವರ ಮನಸ್ಸಿಗೆ ನೋಯಿಸಲು ನಾನು ಬಯಸಲ್ಲ,ಹೆತ್ತವರ ಮನ ನೋಯಿಸಿ ಅವಳನ್ನು ಸ್ವಾಧಿಸಲು ಮನಸ್ಸಿಲ್ಲ, ಬೇಡ ಬಿಡಿ" ಅನ್ನುವಾಗ ಕಣ್ಣಲ್ಲಿ ನೀರಿತ್ತು.

ದೊಡ್ಡಪ್ಪ ನನ್ನಲ್ಲಿ "ಕಣೀರು ಮನಸ್ಸಿನ ಮಾತು ಅಂತಾರೆ, ಅವಳ ಬಗೆಗಿನ ಭಾವವನ್ನು ಯಾಕಾಗಿ ಕಣ್ಣೀರಾಗಿ ಹೊರಗೆ ಹಾಕ್ತಿ. ಆ ಭಾವಗಳನ್ನು ನಿನ್ನೊಂದಿಗೆ ಇಟ್ಟಿರು... ಅದೇನೋ ನೀನು ಲೈಫ್ ನಲ್ಲಿ ಸೆಟಲ್ ಆಗ್ಬೇಕು ಅಂದಿಯಲ್ಲ, ಮೊದಲು ನೀನು ಸೆಟಲ್ ಆಗು, ಬಳಿಕ ಆ ಭಾವಗಳನ್ನು ಅವಳಿಗೆ ಕೊಡು, ಅದರ ಮೊದಲು ಅದನ್ನು ಭೂಮಿಗೆ ಜಾರಿಸಿ ಅವುಗಳನ್ನು ಅಳಿಸಿ ಹಾಕಬೇಡ.ಆ ಭಾವಗಳಿಗೆ ಅವಳೇ ಅಧಿಪತಿ, ಅವಳಿಗೆ ಮೀಸಲಿರಲಿ ಆ ಭಾವಗಳು" ಎನ್ನುತ್ತಾ ತಲೆ ಸವರಿದರು.

ಅವರ ಕಣ್ಣಲ್ಲಿ ನೋಡಿದೆ ಅವರು ನನ್ನನ್ನು ಮನೆ ಅಳಿಯನಾಗಿ ಸ್ವೀಕರಿಸಿದ್ದರು.

ಕಣ್ಣೀರನ್ನು ಅವರಿಗಾಗಿ ನಿಲ್ಲಿಸಿದೆ.ಅವರು ಮುಂದುವರಿಸಿದರು "ಸುನಿಲ ನಲ್ಲಿ ನಾನು ಮಾತಾಡುತ್ತೇನೆ, ಗೋಪಾಲ್ ಗೆ ನಾನು ಹೇಳ್ತೇನೆ, ಅಷ್ಟರಲ್ಲಿ ನೀನು ನಿನ್ನ ಲೈಫ್ ನಲ್ಲಿ ನೀನಂದಂತೆ ಸೆಟಲ್ ಆಗು" ಎನ್ನುತ್ತಾ ನಕ್ಕರು.
"ಆಯಿತು ದೊಡ್ಡಪ್ಪಾ, ಇನ್ನೊಂದು ವರುಷ" ಎಂದೆ.
"ಹಾಗೆಯೇ ಆಗ್ಲಿ" ಎಂದರು ದೊಡ್ಡಪ್ಪ.
ನಾನು "ದೊಡ್ಡಪ್ಪಾ ನಾನು ಸೆಟಲ್ ಆದ ಮೇಲೆ ನಿಮ್ಮಆಕೃತಿಯನ್ನು ಅಧಿಕೃತವಾಗಿ ಕರಕ್ಕೊಂಡು ಹೋಗುತ್ತೇನೆ ಅಲ್ಲಿ ವರೆಗೆ ಈ ವಿಚಾರ ನಮ್ಮ ಮೂವರ ನಡುವೆ ಇರಲಿ" ಎಂದು ಅವರ ಕೈ ಗೆ ನನ್ನ ಕೈ ಜೋಡಿಸಿದೆ.
ಅವರು "ಆಯಿತು, ನೀನೆ ಮಾತಾಡುವಿಯಂತೆ ಸಂಧರ್ಭ ಬಂದಾಗ, ಅಲ್ಲಿ ವರೆಗೆ ನಾನು ಮೂಕ ಪ್ರೆಕ್ಷಕ ನಾಗಿರುತ್ತೇನೆ " ಎಂದು ಮಾತು ಕೊಟ್ಟರು.
ಬಯಸಿದ ಪ್ರೀತಿ ನೇರವೇರಿದಕ್ಕೆ ಮನಸ್ಸು ತಿಳಿಯಾಯಿತು .

ಅವರು " ನಿನ್ನ ಮನಸ್ಸಿನ ಮಾತು ನನಗೆ ಕೇಳ ಬೇಕಿತ್ತು, ಬಾ ಇನ್ನು ಸಲ್ಪ ಹೊತ್ತು ನೀನು ಭೈರವಿಯಲ್ಲಿ ಮುಳುಗುವಿಯಂತೆ" ನನ್ನನ್ನು ಪಕ್ಕದ ಆಡಿಟೋರಿಯಂ ಗೆ ಕರಕ್ಕೊಂಡು ಹೋದರು.

ನಮ್ಮಿಬ್ಬರಿಗೆ ಸೀಟು ಮೀಸಲಿಟ್ಟು ಮೂರನೇ ಸಾಲಿನಲ್ಲಿ ಮನೆಯವರೆಲ್ಲ ಕುಳಿತಿದ್ದರು. ಬದಿಯಲ್ಲಿ ಆಕೃತಿ ಕುಳಿತಿದ್ದಳು. ಸಭೆ ಸಮಾರಂಭದಲ್ಲಿ ಆಕೃತಿ ದೊಡ್ಡಪ್ಪನ ಬಳಿಯಲ್ಲಿ ಕುಳಿತುಕೊಳ್ಳುವುದು ವಾಡಿಕೆ ಆಗಿತ್ತು. ಅವಳು "ಪೆರಿಯಪ್ಪಾ" ಎಂದು ನನ್ನ ಎದುರಿರುವ ಅವರ ಕೈ ಹಿಡಿದು ಎಳೆದಳು. ಅವರು ಅಲ್ಲಿ ಕುಳ್ಳದೆ ಪಕ್ಕದ ಸೀಟ್  ಸೇರಿಕ್ಕೊಂಡರು. ನಾನು ಇಬ್ಬರ ನಡುವಲ್ಲಿ ಕುಳಿತೆ.

ಅವಳು "ಎಲ್ಲಿದ್ದಿ...? ನಾನು ಕಾಯ್ತೇನೆ ಹೇಳಿ ನಿನಗೆ ಗೊತಿಲ್ವೆ..?" ಎಂದು  ಭೂಪ ರಾಗದಲ್ಲಿರುವ ಹಾರ್ಮೋನಿಯಂ ದನಿಗೆ ಅನುಗುಣವಾಗಿ ಉಸುರಿದಳು.
"ಆಯಿತು ಕಾಯುವ ದಿನಗಳು ದೂರ ಆಯಿತು, ದೊಡ್ಡಪ್ಪ ಗ್ರೀನ್ ಸಿಗ್ನಲ್ ಕೊಟ್ರು" ಅಂದೆ.
ಆ ಕಣ್ಣುಗಳು ನಕ್ಕವು. ಪಕ್ಕದ ಸೀಟ್ ನಿಂದ ದೊಡ್ಡಪ್ಪ ನನ್ನ ಎಡ ಕೈ ಗೆ ಮುಷ್ಠಿ ಕಟ್ಟಿದರು. ಬಲ ಕೈ ಆಕೃತಿಯ ಕೈಯೊಂದಿಗೆ ಮುಷ್ಠಿ ಕಟ್ಟಿತು..


ಮುಂದಿನ ಸಿಪ್

 

 

 

Rating
No votes yet