ಸ್ಪೀಕರ್ ಹುದ್ದೆಯ ಗೌರವ

ಸ್ಪೀಕರ್ ಹುದ್ದೆಯ ಗೌರವ

Comments

ಬರಹ

 ಅಂದೊಮ್ಮೆ ಕಾಫಿ, ಚಿನ್ನ, ಶ್ರೀಗಂಧಗಳಿಗೆ ಜಗತ್ಪ್ರಸಿದ್ಧಿ ಪಡೆದಿದ್ದ ನಮ್ಮ ಹೆಮ್ಮೆಯ ಕರ್ನಾಟಕ ಇಂದು ಸಹ ಏನೂ ಕಡಿಮೆಯಿಲ್ಲ; ಪದೇ ಪದೇ ಸಂವಿಧಾನವನ್ನೇ ಮೆಟ್ಟಿನಿಂತು ನ್ಯಾಯಾಂಗದಿಂದ ಛೀ ಹಾಕಿಸಿಕೊಳ್ಳುವ ಕುಖ್ಯಾತಿ ಉಳಿಸಿಕೊಂಡಿದೆ.
 ಅಂದು, ಬೊಮ್ಮಾಯಿ ಪ್ರಕರಣದಲ್ಲಿ ರಾಜ್ಯಪಾಲರ ಅಧಿಕಪ್ರಂಗಿತನವಾದರೆ, ಇಂದು ಹಾಲಿ ಸ್ಪೀಕರ್ ಪಾಳೇಗಾರಿಕೆ. ಅದಾದರೋ ಮುಗಿದುಹೋದ ಅಕಡೆಮಿಕ್ ಅಧ್ಯಾಯ; ಇದು ಪ್ರಚಲಿತ ಜೀವಂತ ಅನ್ಯಾಯ. ಆಗಲೇ ಕೃತಕ ಆಪರೇಷನ್ ಬಲದಿಂದ ನಿಂತಿದ್ದ ತಮ್ಮ ಪಕ್ಷದ ಸರಕಾರವನ್ನು ಅಧಿಕಾರದಲ್ಲಿ ಉಳಿಸಿಕೊಳ್ಳಲು ಸ್ಪೀಕರ್ ಹುದ್ದೆಯ ದುಂಡಾವರ್ತಿತನ, ಇದು. ಇದನ್ನು ಸುಪ್ರೀಂ ಕೊರ್ಟ್ ಖಂಡಿಸಿದೆ; ಶಂಖದಿಂದ ಬಂದ ತೀರ್ಥ! ಆದರೂ ಅದು ಪ್ರೋಕ್ಷಣೆಗೆ ಮಾತ್ರಾ. ನ್ಯಾಯಾಲಯಗಳು, ಶಾಸಕಾಂಗದ ಕೆಲವೊಂದು ಪ್ರಕ್ರಿಯೆಗಳ ಸಂವಿಧಾನಿಕ ಅಥವಾ ಕಾಯ್ದೆ ಬಗೆಗಿನ ಸಿಂಧುತ್ವನ್ನು ವ್ಯಾಖ್ಯಾನಿಸುತ್ತದೆಯೇ ಹೊರತು, ಸಂಬಂಧಿತ ವ್ಯಕ್ತಿವಿಶೇಷಗಳ ಸಂಸ್ಕಾರ,ಆತ್ಮಸಾಕ್ಷಿ ಮತ್ತು ಸಮಾಜ ಪ್ರಜ್ಞೆಗಳ ಬಗ್ಗೆ ಅದೇನೂ ಹೇಳುವಂತಿಲ್ಲ. ’ಅಳಿಯನಲ್ಲದ, ಮಗಳ ಗಂಡ’ನ ರೂಪದಲ್ಲಿ ಅದೇ ಸರಕಾರ ಮುಂದುವರೆದಿದೆ; ಅವರೇ ವ್ಯಕ್ತಿ, ಸ್ಪೀಕರ್ ಹುದ್ದೆ ಅಲಂಕರಿಸಿದ್ದಾರೆ; ಉಭಯ ಸದನಗಳಲ್ಲಿ, ಸರಕಾರದ ಸಾಧನೆಗಳನ್ನು ರಾಜ್ಯಪಾಲರ ಬಾಯಿಂದ ಹಾಡಿಹೊಗಳಿಸಲಾಗಿದೆ. ಪ್ರಜಾಸತ್ತೆಯೆನ್ನುವುದು ಹೆಣಗಳ ತಲೆಯೆಣಿಕೆ ತಳಹದಿಯಮೇಲೆ ನಿಂತಿದೆಯೇ ಹೊರತು, ಜೀವಂತ ಆತ್ಮವಂತ ಜನಗಳ ಸಂಖ್ಯೆಯನ್ನವಲಂಬಿಸಿಲ್ಲ!ತ್ವಂತ ದೆಯ ನಸಾಮಾನ್ಯ ಚಿಂತಕರ Commonsense ಸಹ ಇದನ್ನು ಹೇಳಿದ್ದೀತು. ಆದರೂ ಸರಕಾರ ಉಳಿದುಕೊಂಡಿದೆ! ಚುನಾಯಿತ ಸರಕಾರವನ್ನು ರದ್ದುಪಡಿಸುವುದು ನ್ಯಾಯಾಂಗದ ಜವಾಬ್ದರಿ ಅಲ್ಲವಲ್ಲಾ, ಅಷ್ಟು ಮಾತ್ರದಿಮದಲೇ
’ಅಳಿಯನಲ್ಲದ ಮಗಳ ಗಂಡನ ಸರಕಾರ’ ಮುಂದುವರೆದಿರುವುದು. ಹೀಗಾಗಿ ಈ ಪಾಪಿಷ್ಠ ಅಸ್ತಿತ್ವ, ಸಾಂವಿಧಾನಿಕ ದುರಂತ. ಅದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆದರೂ ಯಾರೂ ಏನೂ ಮಾಡುವಂತಿಲ್ಲ.  ನೀತಿ-ಆತ್ಮಸಾಕ್ಷಿ, ನೈತಿಕ ಹೊಣೆಗಾರಿಕೆಯ ರಾಜೀನಾಮೆ ಇತ್ಯಾದಿಗಳು ಸಭ್ಯ ಸಮಾಜದ ಮಾತಾಯಿತು. ಹೋಗಲಿ, ಮುಂದಾದರೂ ಜನತೆಯ ಹಂಗಿಗೆ ಹೆದರುವ ಇಲ್ಲಿ ರಾಜಕೀಯ ರಣತಂತ್ರದ ಗಂಧವೂ ಇಲ್ಲಿ ಕಂಡುಬರುವುದಿಲ್ಲ. ಮತ್ತೊಮ್ಮೆ ಚುನಾವಣೆಗೆ ನಿಲ್ಲುವ, ಗೆಲ್ಲುವ ಇಚ್ಛೆ-ಭೆರವಸೆಗಳೂ ಈ ’ಜನಪತಿ’ಗಳಿಗೆ ಇದ್ದಂತಿಲ್ಲ! ಇದ್ದಷ್ಟು ಕಾಲ, ಇರುವಷ್ಟನ್ನೂ ಹಿರಿದುಕೊಂಡು ಹೋಗುವ ಬೆತ್ತಲುತನದ ಪ್ರದರ್ಶನವೇ ಇಲ್ಲಿ ಪ್ರಧಾನವಾಗಿ ಕಂಡುಬರುತ್ತಿದೆ; ಇನ್ನಿಲ್ಲಿದ ಸಂಖ್ಯೆಯ ಆರೋಪ, ಅಪವಾದ, ತನಿಖೆ, ವಿಚಾರಣೆಗಳೂ ಅದನ್ನೇ ಬೆರಳು ಮಾಡಿ ತೊರಿಸುತ್ತಿರುವಂತಿದೆ.
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet