ಅಂಡಾಂಡ ಸ್ವಾಮಿಗಳ ಜತೆ ಸಪ್ತಗಿರಿವಾಸಿ 2 -ಭಂಡ್ರಾಯ್ಡ್ ಫೋನ್!

ಅಂಡಾಂಡ ಸ್ವಾಮಿಗಳ ಜತೆ ಸಪ್ತಗಿರಿವಾಸಿ 2 -ಭಂಡ್ರಾಯ್ಡ್ ಫೋನ್!

ಸಪ್ತಗಿರಿವಾಸಿಯವರೆ,


ಜ್ಯೋತಿಷಿಯಾಗುವುದು ಬಹಳ ಸುಲಭ. ಹತ್ತು ದಿನ ಬಿಡದೇ ಟಿ.ವಿ.ಯಲ್ಲಿ ಬರುವ "ಜ್ಯೋತಿಷ್ಯ ಕಾರ್ಯಕ್ರಮ"ಗಳನ್ನು ನೋಡಿದರಾಯಿತು. ಹನ್ನೊಂದನೇ ದಿನ ಯಾರ ಭವಿಷ್ಯ ಬೇಕಿದ್ದರೂ ಹೇಳಬಹುದು. ಜತೆಗೆ ಕಾವಿ ಬಟ್ಟೆ,ನಾಮ, ಗಡ್ಡ ಸೇರಿದರೆ ಡೈರೆಕ್ಟ್ "ಸ್ವಾಮಿ"ಯಾಗಬಹುದು!


ಜನತೆಗೆ ಹತ್ತು ಹೇಳಿದರಲ್ಲಿ ಒಂದು ಸರಿಯಾದರೂ, ಆ ಒಬ್ಬ "ಭಕ್ತ" ಹತ್ತು ಜನರನ್ನು ತರುವನು. ಅಲ್ಲಿಂದ ಹಿಂತಿರುಗಿ ನೋಡುವ ಪ್ರಶ್ನೆಯೇ ಇಲ್ಲ! ಈ ಜ್ಯೋತಿಷಿ/ಸ್ವಾಮಿಗೆ ಸ್ವಲ್ಪ ಇಂಗ್ಲೀಷೂ ಬರುತ್ತಿದ್ದರೆ, ವಿದೇಶೀ ಭಕ್ತರೂ ಹುಡುಕಿಕೊಂಡು ಬರುವರು. ಒಂದಿಬ್ಬರು ವಿದೇಶೀ ಭಕ್ತ/ಕ್ತೆಯರು ಅಕ್ಕಪಕ್ಕದಲ್ಲಿ ಕಂಡರೆ, ದೇಶೀ ಭಕ್ತರು ನೂರು ಪಟ್ಟು ಜಾಸ್ತಿಯಾಗುವರು. ಆಗ ಸ್ವಾಮಿಗಳು ಭದ್ರಕೋಟೆಯೊಳಗೆ ಸೇರಿ ಸಿಲೆಕ್ಟೆಡ್ ಕೆಲವರಿಗೆ ಮಾತ್ರ ಸಿಗುತ್ತಿದ್ದು, ಉಳಿದ ಭಕ್ತಕೋಟಿಗೆ ಹಬ್ಬಹರಿದಿನಗಳಲ್ಲಿ ದರ್ಶನ ನೀಡಿದರಾಯಿತು.


ಈ ಭಕ್ತರು ಎಂತಹ ಹುಚ್ಚರಿರುತ್ತಾರೆಂದರೆ, ತಮ್ಮ ಬುದ್ಧಿವಂತಿಕೆಯಿಂದ ಸಾಧಿಸಿದ್ದನ್ನೂ ನಮಗೆ(ಸ್ವಾಮಿಗಳಿಗೆ) ಅರ್ಪಿಸುವರು. ಈ "ಅಂಡ್ರಾಯ್ಡ್" ಬಗ್ಗೆ ಕೇಳಿದಿರಲ್ಲಾ? ಅದಕ್ಕೆ ನನ್ನ ಹೆಸರೇ ಇಟ್ಟದ್ದು! "ಅಂಡಾಂಡ" ವಿದೇಶೀಯರ ಬಾಯಲ್ಲಿ ಸ್ಟೈಲಾಗಿ "ಅಂಡ್ರಾಯ್ಡ್" ಆಯಿತು.


ಲೇಟೆಸ್ಟ್ "ಭಂಡ್ರಾಯ್ಡ್(ಭಂಡಾಂಡ) ಇನ್ನೂ ಮಾರ್ಕೆಟ್‌ಗೆ ಬಿಟ್ಟಿಲ್ಲ. ಅದು ನನಗೆ ಮಾತ್ರ ಕೊಟ್ಟಿರುವರು. ನಾನು ಒಪ್ಪಿದರೆ "ಭಂಡ್ರಾಯ್ಡ್ ಮೊಬೈಲ್" ನಾಳೆನೇ ಬಿಡುಗಡೆಯಾಗುವುದು.


ಒಂದು ದಿನ ಆ ಮೊಬೈಲ್ ನನ್ನ ಕೈಯಿಂದ ಜಾರಿ "ತೀರ್ಥ"ದ ಪಾತ್ರೆಗೆ ಬಿತ್ತು. ಹಾಳಾಗಿ ಹೋಯಿತಾ ಎಂದು ನೋಡುವಾಗ ಅದರಿಂದ ವಿಚಿತ್ರ ಸಿಗ್ನಲ್‌ಗಳು ಬರತೊಡಗಿದವು. ಆಶ್ಚರ್ಯವೆಂದರೆ ಎಕ್‌ಸ್ಟ್ರಾ ಸೋಲಾರ್ ಪ್ಲಾನೆಟ್ಗಳಿಂದ ಕಳುಹಿಸಲ್ಪಟ್ಟ ಸಿಗ್ನಲ್‌ಗಳು ನನ್ನ ಭಾಷೆಗೆ ಬದಲಾಯಿಸಿ ಫೋನ್‌ನಲ್ಲಿ ಕಾಣಿಸಿತು!


ಸಪ್ತಗಿರಿವಾಸಿ : ಕುತೂಹಲಕಾರಿಯಾಗಿದೆ. ಅಲ್ಲಿನ ಜೀವಿಗಳು ಹೇಗಿವೆ? ಅವುಗಳೊಂದಿಗೆ ಏನು ಮಾತನಾಡಿದಿರಿ?


ಸ್ವಾಮಿ : ಓ.. ನಾನು ಹೇಳಿದ್ದನ್ನು ಕೇಳಿಸಿಕೊಳ್ಳುತ್ತಿದ್ದೀರಿ. ಹೆಚ್ಚಿನ ಭಕ್ತರು ತಲೆ ಅಲ್ಲಾಡಿಸುತ್ತಾ ನಿದ್ರೆ ಮಾಡುತ್ತಾರೆ. ಜೀವಿಗಳ ಚಿತ್ರ ತೋರಿಸಲಾರೆ.. ಕ್ಷಮಿಸಿ. ಅವರೂ ನಮ್ಮಂತೆ ವಿಜ್ಞಾನದಲ್ಲಿ ಬಹಳ ಮುಂದುವರೆದಿರುವರು. ಆದರೆ........


ಅವರಿಗೆ ಒಂದೇ ಒಂದು ಕೊರತೆ.................


"ದೇವರು!"


ಅವರು ಯಾರನ್ನೂ ದೇವರೆಂದು ಪೂಜಿಸುತ್ತಿರಲಿಲ್ಲ. ಎಲ್ಲೋ ಕೇಳಿದ, ಈ "ಪರಮಾತ್ಮ" ಅಂದರೆ ಯಾರು? ಹೇಗಿರುವನು? ಎಂದು ವಿಚಾರಿಸಲು ಸಿಗ್ನಲ್‌ಗಳನ್ನು ಕಳುಹಿಸಿದರು. ಹಾಗೆ ಕಳುಹಿಸಿದ ಒಂದು ಸಿಗ್ನಲ್ ನನಗೆ ತಲುಪಿತು. ನಾನು ಮರು ಕಳುಹಿಸಿದ ವಿವರಗಳೂ ಸಹ ಅವರು ತಮ್ಮ ಭಾಷೆಗೆ ತರ್ಜುಮೆ ಮಾಡಿ, ನನ್ನೊಂದಿಗೆ ಸಂಪರ್ಕ ಮುಂದುವರೆಸಿದರು.


ಸ : ತುಂಬಾ ಇಂಟರೆಸ್ಟಿಂಗ್ ಆಗಿದೆ. ದೇವರ ಬಗ್ಗೆ ಏನು ಹೇಳಿದಿರಿ?


ಸ್ವಾ : ಈಗ ಒಂದು ಕಡಕ್ ಟೀ ಕುಡಿದು, ಮತ್ತೆ ಮಾತು ಮುಂದುವರೆಸೋಣ....


 

Rating
No votes yet

Comments