ಅ ಕಪ್ ಓಫ್ ಕಾಫಿ ... ಸಿಪ್ - ೪೭

ಅ ಕಪ್ ಓಫ್ ಕಾಫಿ ... ಸಿಪ್ - ೪೭

 

 

ಹಿಂದಿನ ಸಿಪ್   

 

 

 

ಸಿಪ್ – 47

 

 

ತಿವಾರಿಯ ಕೈಕೆಳಗಿರುವ ಹೆಚ್ಚಿನ ಪ್ರಾಜೆಕ್ಟ್ ಗಳು ಅವನ ಕೈತಪ್ಪಿ ಬೇರೆಯವರ ಪಾಲಾಗಿತ್ತು. ಡ್ರೀಮ್ ಟೆಕ್ ಜೋಯಿನ್ ಆದಾಗ ಅಪ್ಪಟ ಮೇನೇಜ್ಮೆಂಟ್ ಕುಳ ಆಗಿ ಗೋಚರಿಸಿದ್ದ ತಿವಾರಿ ಇಲ್ಲಿಗೆ ಬಂದ ಎರಡು ಮೂರು ತಿಂಗಳಲ್ಲಿ ಇಡಿ ಸೆಂಟರ್ ಅನ್ನು ತನ್ನ ಹಿಡಿತಕ್ಕೆ ತಂದಿದ. ಅವನು ಎಂಪ್ಲೋಯೀ  ಮತ್ತು ಕ್ಲೈಂಟ್ ಗಳ ವಿಶ್ವಾಸ ಗಳಿಸುವುದನ್ನು ಕರಗತ ಮಾಡಿಕೊಂಡಿದ್ದ. ತನ್ನ ಹೈರಾರ್ಕಿಯಲ್ಲಿ ರಿಸೋರ್ಸ್  ಸೇರಿಸುತ್ತಾ ಹೋದ. ಇಬ್ಬರಿಂದ ನಲವತ್ತು ನಲವತ್ತರಿಂದ ಅರವತ್ತು ಮಂದಿ ಅವನ ಕೆಳಗೆ ಇದ್ದರು ಒಂದು ಸಮಯದಲ್ಲಿ. 

ಆದರೆ ಇಂಗ್ಲಿಷ್ ಗಾದೆ "you can't stay on top by just doing bull shit" ಅದು ಇವನಿಗೆ ಸರಿಯಾಗಿ ಅನ್ವಯ ವಾಗುತ್ತದೆ.  ಮೊದಲಿಗೆ ಸರಿಯಾಗಿದ್ದ ಬಿಲ್ಲಿಂಗ್ ತನ್ನ ಕೆಳಗೆ ಪೀರ್ ಜೋಯಿನ್ ಆದಂತೆ ಒಂದೇ ಸಮನೆ ಏರಿಸಲು ಶುರುಮಾಡಿದ , ಕ್ಲೈಂಟ್ ಗಳಿಗೆ ಹೆಚ್ಚಿನ ಕೆಲಸ ಕೊಡುವಂತೆ ಒತ್ತಾಯಿಸಿದ. ಅವರಿಂದ ಮೊದಲಿಗೆ ಒಳ್ಳೆಯ ರೆಸ್ಪೊಂಡ್ ಬಂತು, ನಂತರ ತಾನಾಗಿಯೇ ಹೊಸ ಹೊಸ ಅಪ್ದೆಟ್ಸ್, ಅಪ್ಗ್ರೆಡೆಶನ್ ಮಾಡಿಸುವುದಾಗಿ ಕ್ಲೈಂಟ್ ಗಳನ್ನು ನಂಬಿಸಿದ. ಟೆಕ್ನಿಕಲ್ ನ ಶೂನ್ಯ ಜ್ಞಾನದ ಜನ ತನ್ನ ಸಬೋರ್ಡಿನೆಟ್ಸ್ ಗಳ ಅಬಿಪ್ರಾಯ ಕೇಳದೆ ಅವೆಲ್ಲದಕ್ಕೆ ಸಮ್ಮತಿ ಇಡುತಿದ್ದ.

ಮಾಡಲು ಸಾದ್ಯವೇ ಇಲ್ಲದಂತಹ ಅಪ್ಪ್ಲಿಕೆಶನ್ಸ್, ಅಪ್ಗ್ರೆಡೆಶೇನ್ ಬಗ್ಗೆ ಟೆಕ್ಕಿಗಳು ದಿನ ರಾತ್ರಿ ಹೇಳದೆ ಆಲೋಚಿಸಿ ತಲೆ ಹಾಳು ಮಾಡಿಕೊಂಡರು; ಕೊನೆಗೆ ಡೆಡ್ಲೈನ್ ಸಮೀಪಿಸುವಾಗ ಮೊದಲಿದ್ದ ಸಿಸ್ಟಮ್ ಗಿಂತ ಕೆಟ್ಟದಾದ ನಿರ್ವಹಣೆ ನೀಡುವ ಅಪ್ಲಿಕೇಶನ್ ಗಳನ್ನು ರಿಲೀಸ್ ಮಾಡಬೇಕಾಗಿ ಬಂತು.

ಇಂತಹ ಹಲವು ವಿಚಾರಗಳಿಂದ ಒಂದೊಂದೇ ಮೊಡ್ಯುಲ್ ಅವನ ಸುಪರ್ಧಿಯಿಂದ ಇನ್ನೊಬ್ಬರ ತೆಕ್ಕೆಗೆ ಜಾರಿತು.ಕೆಲವೊಂದು ಮೊಡ್ಯುಲ್ ಗಳು ಕ್ಲೈಂಟ್ ಹಿಂದೆ ತೆಕೊಂಡರು.

ನಮ್ಮ ಪುಣ್ಯಕ್ಕೆ ನಮ್ಮ ಮೊಡ್ಯುಲ್ ನ ಜವಾಬ್ಧಾರಿ ಸಂಪೂರ್ಣವಾಗಿ ನಾವೇ ನೋಡಿಕೊಳ್ಳುತಿದ್ದದ್ದು, ಅದೇ ಲೆವೆಲ್ ನಲ್ಲಿ ಕಂಪೆನಿಗೆ ರೆವೆನ್ಯೂ ಬರುವುದನ್ನು ಮುಂದುವರೆಸಿತ್ತು.

ಈಗ ಜೀವನ್ ಕೆಲಸ ಬಿಡುತ್ತಾನೆ ಎಂದು ಹೇಳಿದಾಗ ಅವನಿಗೆ ಇದು ನುಂಗಲಾರದ ತುತ್ತಾಗಿತ್ತು. ಅವನನ್ನು ಉಳಿಸಿದರೆ ಮಾತ್ರ ತಾನು ಮೇನೇಜರ್ ಆಗಿ ಮುಂದುವರಿ ಬಹುದಿತ್ತು.ಹಿಂದಿನ ಪೆರ್ಫಾರ್ಮನ್ಸ್ ನಲ್ಲಿನ ಪ್ರಪಾತದಿಂದ  ಆರು ತಿಂಗಳ ನೋಟಿಸ್ ಪಿರಿಯೆಡ್ ಜಾರಿ ಯಾಗಿತ್ತು ಮೇನೇಜ್ಮೆಂಟ್ ಲೆವೆಲ್ ನ ಇವನ ಮೇಲೆ.

 

ಪರಿ ಪರಿಯಾಗಿ ಜೀವನ್ ನನ್ನು ಅಂಗಲಾಚಲು ಶುರುಮಾಡಿದ್ದ, ಆದರೆ ಜೀವನ್ ಜಪ್ಪಯ್ಯಾ ಅನ್ನಲಿಲ್ಲ.

ಈ ಹೆದರಿಕೆಯಲ್ಲಿ ತನಗೆ ಬಂದ ಪ್ರಾಜೆಕ್ಟ್ ಎಗ್ಸಿಟ್ ಅಪ್ಲಿಕೇಶನ್ ಅನ್ನು ಸಹ ಅವನು ಮೇಲಿನ ಹೈರಾರ್ಕಿಗೆ ಕಳಿಸಲಿಲ್ಲ, ಕಂಪೆನಿ ಫಾರ್ಮಾಲಿಟಿ ಗಳಲ್ಲಿ ಯಾವುದಾದರು ಆಶಾಕಿರಣದ ಸಿಗುತ್ತದೋ ಎಂದು ಹುಡುಕುತಿದ್ದ. 

 

ಮಾರನೆ ದಿನ ಜೀವನ್ ಬಂದಾಗ 

"ನಿನ್ನ ಹೆಸರಿನಲ್ಲಿ ವೀಸಾ ಕಂಪೆನಿಯಿಂದ ಅಸೈನ್ ಆಗಿದೆ, ವೀಸಾ ನಿನ್ನ ಹೆಸರಲ್ಲಿ ಇರುವಷ್ಟು ದಿನ ಕಂಪೆನಿ ಬಿಡುವ ಹಾಗೆ ಇಲ್ಲ" ಎನ್ನುತ್ತಾ ಇನ್ನೊಂದು ಬಾಂಬ್ ಸಿಡಿಸಿದ.

ಎಗ್ಸಿಟ್ ಬಟನ್ ಒತ್ತುವ ಮುಂಚೆಯೇ ಜೀವನ್ ಎಲ್ಲ ಫಾರ್ಮಾಲಿಟೀಸ್ ಓದಿ ತಿಳಕೊಂಡಿದ್ದ, ಅವನು ಮೇನೇಜ್ಮೆಂಟ್ ಸ್ಟುಡೆಂಟ್ ಆಗಿದ್ದ ಅವನಿಗೂ ಗೊತ್ತಿತ್ತು ಮೇನೇಜ್ಮೆಂಟ್ ಲೆವೆಲ್ ನವರ ಚಿತ್ರಹಿಂಸೆ ಕೊಡಿಸುವ ಟೆಕ್ನಿಕ್ .

ಅವನು ತೆರೆದ ಬಾಯಿಗೆ "ಕಂಪೆನಿ ಫಾರ್ಮೆಲಿಟೀಸ್    ಪೇಜ್ ನುಂಬರ್ 103 'ವೀಸಾ ಪಾಲಿಸಿ' ಸಬ್ಜೆಕ್ಟ್ ಲೈನ್ ಅದರಲ್ಲಿ ನಾಲ್ಕನೇ ಪಾಯಿಂಟ್ ಓದಿದ್ದೀರ...?"

ಅವನ ಈ ಮಾತು ಸಾಕಿತ್ತು ತಿವಾರಿಯ ಬಾಯಿ ಮುಚ್ಚಿಸಲು.

"ಎಂಪ್ಲೋಯೀ ತನ್ನ ವಿಸಾ ಅವಧಿಯಲ್ಲಿ ಕಂಪೆನಿ ಬಿಟ್ಟರೆ ಅವರು ಅದರ ಕಾಮ್ಪನ್ಸೆಶನ್ ತೆರಬೇಕು"  ಎಂದಾಗಿತ್ತು ಆ ಪಾಯಿಂಟ್.

ಅವನು ಮುಂದುವರಿಸಿದ "ಪೇಜ್ ನಂಬರ್ 154 ಕಾಮ್ಪೆನ್ಸೆಶನ್ ಪಾಲಿಸಿ, ಪಾಯಿಂಟ್ ನಂಬರ್ 9 "

"ವಿಸಾಪೋಲಿಸಿಯಲ್ಲಿ ಎಂಪ್ಲೋಯೀ ಮೇಲೆ ಹೆಚ್ಚೆಂದರೆ 1000 ಡಾಲರ್ ಪೆನಾಲ್ಟಿ ಚಾರ್ಜ್ ಹಾಕುವ ಅದಿಕಾರ ಕಂಪೆನಿಗೆ ಇದೆ"

ತಿವಾರಿ ಮೌನವಾಗಿದ್ದ ಅವನ ಎಲ್ಲ ಅಸ್ತ್ರ ಮುಗಿದಿತ್ತು ;

ಜೀವನ್ "ಎಸ್ ಐವತ್ತು ಸಾವಿರ, ಪರವಾಗಿಲ್ಲ" ಎಂದ.

"ಐವತ್ತು ಸಾವಿರ ಸಣ್ಣ ಅಮ್ಮೌಂಟ್ ಅಲ್ಲ" ಎನ್ನುತ್ತಾ ಇನ್ನೊಂದು ಸೂಜಿ ಚುಚ್ಚುವ ಸಾಹಸಕ್ಕೆ ಹೋದ ತಿವಾರಿ.

ಅದಕ್ಕೆ ಜೀವನ್ "ಸೇರುವ ಕಂಪೆನಿ ಒಂದು ಲಕ್ಷದವರೆಗೆ ರಿಯೇಮ್ಬರ್ಸ್ ಮಾಡುತ್ತದೆ ಎಂದು ಹೇಳಿದೆ, ನನ್ನ ಕೈಯಿಂದ ಹಾಕುವುದಾದರೆ ನಾನು ಆಲೋಚಿಸ ಬೇಕಿತ್ತು,ಇದು ನನ್ನ ಹಣ ಅಲ್ಲ, ಯಾಕಾಗಿ ನಾನು ಚಿಂತಿಸಲಿ" ಎಂದ ಜೀವನ್.

 

ಮಾತಿನಲ್ಲಿ ನಡೆಯದಾಗ ಸೆಂಟಿಮೆಂಟಲ್ ಆಗಿ ಅವನನ್ನು ಕಾಡಲು ಶುರು ಮಾಡಿದರು."ನೋಡು, ಇದು ನಿನ್ನ ಮೊದಲ ಕಂಪೆನಿ, ಒಳ್ಳೆಯ ಪ್ರಗತಿಯಲ್ಲಿರುವ ಕಂಪೆನಿ, ಇನ್ನು ಎರಡೇ ವರ್ಷಕ್ಕೆ ಇದು ಬಿಲಿಯನ್ ಡಾಲರ್ ಕಂಪೆನಿ ಆಗುತ್ತದೆ ಆಗ ನೀನು ನಿನ್ನನ್ನು ನೋಡಿಕೋ, ಇನ್ನೊಂದು ಲೆವೆಲ್ ಮೆಲಿರ್ತೀಯ, ನಿನ್ನ ಅಂಡರ್ ಸಣ್ಣ ಹೈರರ್ಕಿ ಇರುತ್ತೆ .. ಅದು ಬಿಟ್ಟು ಯಾವುದೋ ಸ್ಟಾರ್ಟ್ ಅಪ್ ಕಂಪೆನಿ ಹೇಳಿ ಹೋಗ್ತಾ ಇದ್ದೀಯಲ್ಲ...

ಇಂತಹ ಹಲವು ಕಂಪೆನಿ ಇವತ್ತು ಶುರು ಆಗ್ತದೆ ನಾಳೆ ಮುಚ್ಚುತ್ತವೆ, ಅವ್ವು ಮುಚ್ಚಿದರೆ ಬಾಳು ಮುಚ್ಚಿದಂತೆ"

ಜೀವನ್ ಏನೂ ಮಾತಾಡಲಿಲ್ಲ.

ಅವರು ಮುಂದುವರಿಸಿದರು "ದೊಡ್ಡ ಕಂಪೆನಿಯಲ್ಲಿ ಪ್ರಾಜೆಕ್ಟ್ ನಿಂತರೆ ಏನು ಎಫೆಕ್ಟ್ ಆಗಲ್ಲ, ಅದೇ ಅಲ್ಲಿ ನಿನ್ನ ಮೇಲೆ ಡಿಪೆಂಡೆನ್ಸಿ ಇರುತ್ತೆ, ನೀನು ಸೋತರೆ ಇಲ್ಲ ಕಂಪೆನಿ ಸೋತರು ಅದು ನಿನ್ನ ಮೇಲೆ ಎಫೆಕ್ಟ್ ಬೀಳಿಸುತ್ತದೆ. ಬೇಡ ವೈಭು ಬಿಡ ಬೇಡ ಈ ಕಂಪೆನಿ, ಒಂದು ಸೋದರನಂತೆ ಹೇಳ್ತಾ ಇದ್ದೇನೆ" ಎಂದು ಅವನನ್ನು ಆತ್ಮೀಯನಾಗಿ ಸೆಳೆಯಲು ಪ್ರಯತ್ನಿಸಿದ.

ಅವನು ಏನೆಂದರೂ ಹಣದ ಆಸೆ ಹೊತ್ತ ಜೀವನ್ ಬಾಗಲಿಲ್ಲ.

ಮೇನೇಜ್ಮೆಂಟ್ ಲೆವೆಲ್ ನ ಎಲ್ಲ ಬುದ್ದಿವಂತಿಕೆ ಅವನಲ್ಲಿತ್ತು, ಅನುಭವ ಅವನ ಮಾತಿನ ಎದುರಿಗೆ ಬೂಧಿಯಾಯಿತು. ತಿವಾರಿಗೆ ಡ್ರೀಮ್ ಟೆಕ್ ನಲ್ಲಿ ತನ್ನ ಕೊನೆಯ ದಿನಗಳ ಭವ್ಯ ಸ್ವಾಗತ ಎದುರು ಕಾಣುತಿತ್ತು.

ಏಳುದಿನಗಳವರೆಗೆ ಜೀವನ್ ನ ಎಗ್ಸಿಟ್ ಅಪ್ಪ್ಲಿಕೆಶನ್ ಗೆ ಯಾವುದೇ ರೀತಿಯ ಉತ್ತರ ನೀಡಲಿಲ್ಲ.

ಮುಂದಿನ ಸೋಮವಾರ ಸಿಸ್ಟಮ್ ಅದಾಗಿಯೇ ಆ ಅಪ್ಲಿಕೇಶನ್ ಅನ್ನು ಮೇಲಿನ ಹೈರರ್ಕಿ ಲೆವೆಲಿಗೆ ಕಳುಹಿಸಿತು.ಈಗ ತಿವಾರಿಯ ಮೇಲಿನ ಬಿಸಿನೆಸ್ಸ್ ಲೆವೆಲ್ ನ ಟಾರ್ಚರ  ಶುರುವಾಯಿತು, ಅವನು ಎಲ್ಲರಿಗೂ ಮೀರಿಸಿ ಗೆಲ್ಲುತಿದ್ದ. ಕೊನೆಗೆ ಅವನಿಗೆ ಎರಡು ತಿಂಗಳ ಪ್ರೋಬೇಶನಲ್ ನಲ್ಲಿ ಇಟ್ಟು ಅವನ ಬ್ರೈನ್ ವಾಶ್ ಮಾಡಲು ಶುರುಮಾಡಿದರು.

ಜೀವನ್ ಹಗಲಿಡಿ ಒಬ್ಬೋರು ಹೇಳಿ ಮೂರು ನಾಲ್ಕು ಮಂದಿಯೊಂದಿಗೆ ಫೋನ್ ನಲ್ಲಿ, ಫೇಸ್ ಟು ಫೇಸ್ ಮೀಟಿಂಗ್ ಹೇಳಿ ಬ್ಯುಸಿ ಆಗಿರುತಿದ್ದ, ಸಂಜೆ ತಲೆಕೆಟ್ಟು ರೂಮಿಗೆ ಮರಳುತಿದ್ದ.ಪ್ರಾಜೆಕ್ಟ್ ನ ಸಂಪೂರ್ಣ ಜವಾಬ್ಧಾರಿ ನನ್ನ ತಲೆ ಮೇಲೆ ಬಿದ್ದಾಗಿತ್ತು. ಪ್ರತಿದಿನ ರಾತ್ರಿ ಮನೆಗೆ ತಲಪುವಾಗ ಎರಡಾದರೂ ಮುಂದೆ ಸಿಗುವ ಸುಖಕ್ಕೆ ಸುಮ್ಮನಾಗಿದ್ದೆ.

ಎರಡು ವಾರ ಕಳೆಯುತಿದಂತೆ ಒಂದು ಸಂಜೆ ಅವಿನಾಶ್ ಮನೆಗೆ ಹೋಗುವಾಗ ಇನ್ನೊಂದು ಶಾಕ್ ಕೊಟ್ಟ.

"ಬಾಯ್ ಘರ್ ಜಾವೋ ಭಾಯ್, ಇತನ ಕಾಂ ಮತ್ ಕರೋ..."

"ಕ್ಯೂನ್ ಬಾಯ್...?"

"ವೋ ಸಾಲ ಯಹಂಕಾ ಕಾಮ್ ತುಜೆ ದೇಕೆ ವೋ ಸ್ಟಾರ್ಟ್ ಅಪ್ ಕಂಪೆನಿ ಮೇ ಡಾಲರ್ ಗಿನ್ ರಹಾ ಹೇ ..."

 

ಜೀವನ್ ಇಲ್ಲಿ ನನ್ನಲ್ಲಿ ತಲೆ ಕೆಟ್ಟು ಹೋಗಿದೆ ಇವರ ಪೊಲಿಟಿಕ್ಸ್ ನಿಂದ ಹೇಳಿ ಮನೆಗೆ ಹೋಗುತ್ತಾನೆ ಅಂದುಕೊಂಡಿದ್ದೆ, ಆದರೆ ಅವನು ಅಲ್ಲಿ ಸಂಜೆ ಶುರು ಆಗುವ ಶಿಫ್ಟ್ ನಲ್ಲಿ ಕೆಲಸಕ್ಕೆ ಹೋಗುತಿದ್ದ, ಎರಡು ವಾರದ ಮಟ್ಟಿಗೆ ಸಂಜೆ ಶಿಫ್ಟ್ ಗೆ ಒಪ್ಪಿಸಿದ್ದ ಆ ಅರ್ಜೆಂಟ್ ರೆಕ್ವೈರ್ಮೆಂಟ್  ಇರುವ ಸ್ಟಾರ್ಟ್ ಅಪ್ ಕಂಪೆನಿಯವನನ್ನು. ಹದಿನೈದು ದಿನದ ಬಳಿಕ ರಿಲೀಸ್  ತೆಗೆದು ಅಲ್ಲಿ ಡೈರೆಕ್ಟ್ ಎಂಪ್ಲೋಯೀ ಆಗಿ ಸೇರುವ ಒಪ್ಪಂದ ವಾಗಿತ್ತು ಇವನ ಮತ್ತು ಆ ಕಂಪೆನಿಯ ನಡುವಲ್ಲಿ.

ಅವನ ಈ ಡಬಲ್ ಗೇಮ್ ಗೊತ್ತಾಗಿ ಮನಸ್ಸಿಗೆ ಬೇಸರವಾಗುವಷ್ಟರಲ್ಲಿ ಅವನಿಗೆ ಆ ಸ್ಟಾರ್ಟ್ ಅಪ್ ಕಂಪೆನಿಯವರು ಇವನು ಅವರನ್ನು ಪರ್ಮನೆಂಟ್ ಆಗಿ ಜೋಯಿನ್ ಆಗಿಲ್ಲ ಹೇಳಿ ತೆಗೆದು ಹಾಕಿದರು.

ಜೀವನ್ ಈಗ 'ನಾ ಘರ್ ಕ ನಾ ಘಾಟ್ ಕಾ' ಆಗಿ ಹೋಗಿದ್ದ , ಡ್ರೀಮ್ ಟೆಕ್ ನಲ್ಲಿ ತಲೆ ಬಾಗಿಸಿ  ರೆಸಿಗ್ನೇಶನ್ ಹಿಂದೆ ತೆಗೆದು ಕೊಳ್ಳುವ ಹಾಗಿರಲಿಲ್ಲ, ಎರಡುವಾರದ ಮಟ್ಟಿಗೆ ಕೆಲಸ ಮಾಡಿದ ಆ ಸ್ಟಾರ್ಟ್ ಅಪ್ ಕಂಪೆನಿಗೆ ಇನ್ನೊಂದು ತಿಂಗಳು ತನಗಾಗಿ ಕಾಯಿರಿ ಎಂದು ಹೇಳುವ ಹಾಗೆ ಇರಲಿಲ್ಲ.

ಅಲ್ಲಿ ಇಲ್ಲಿ ಕೆಲಸ ಹುಡುಕುವುದನ್ನು ಶುರುಮಾಡಿದ್ದ, ಆದರೆ ನನ್ನಂತೆ ಅವನದ್ದು ಸ್ಪೆಷಲ್ ಸ್ಕಿಲ್ ಅಷ್ಟು ಬೇಗ ಕೆಲಸ ಸಿಕ್ಕುವುದು ಕಷ್ಟ ಸಾಧ್ಯವಿತ್ತು.

ಎರಡು ತಿಂಗಳಲ್ಲಿ ಕಂಪೆನಿ ಬಿಡುವ ದಿನವೂ ಬಂದು ಬಿಟ್ಟಿತು.

ಕೊಲಿಗ್ ಗಳು"ಎಲ್ಲಿ ಜೋಯಿನ್ ಆಗ್ತೀಯ"ಅಂದಾಗ 

"ನೋಯಿಡಾ" ಎನ್ನುತ್ತಾ ನಗೆ ಮೂಡಿಸುತಿದ್ದ.

ನಾವು ಯಾರಿಲ್ಲದಾಗ ಕೇಳಿದರೆ "ಸದ್ಯಕ್ಕೆ ಮುಂಬೈಗೆ ಹೋಗುತ್ತೇನೆ,ಅಕ್ಕನ ಮನೆಯಲ್ಲಿ ಸಲ್ಪ ಸಮಯ ಇದ್ದು ಅಲ್ಲಿನ ನಮ್ಮ ಫ್ಲಾಟ್ ಮಾರುವ ವ್ಯವಸ್ತೆ ಯೊಂದಿಗೆ ಹೊಸ ಕೆಲಸ ಹುಡುಕುತ್ತೇನೆ"ಎನ್ನುತಿದ್ದ.

ಇವನಿಗೆ ಎದುರಾಗುವ ಮುಂದಿನ ಹೋರಾಟದ ದಿನಗಳನ್ನು ಮನ ನೆನೆಸಿ ಅವನು ನನಗೆ ಮಾಡಿದ ಮೋಸವನ್ನು ಮರೆತು ಮರಗುತಿತ್ತು.

 

**********

 

 

ತುಂಬು ಉತ್ಸಾಹದಲ್ಲಿ ಬೀಗುತಿದ್ದೆ ಜೀವನ್ ಕೆಲಸ ಬಿಟ್ಟ ನಂತರದ ಮೊದಲ ಸೋಮವಾರದಂದು, ಅವತ್ತಿನಿಂದ ನಾನೇ ಈ ಮೊಡ್ಯುಲ್ ಗೆ ವಾರಸುದಾರನಾಗಿದ್ದೆ.ಆದರೆ ನನಗೆ ಅಂದು ಒಂದು ಆಘಾತ ಕಾದಿತ್ತು. ಮೇಲ್ ಬಾಕ್ಸ್ ಓಪನ್ ಮಾಡಿದಾಗ ಬೆಂಗಳೂರಿನ ನಮ್ಮ ಕ್ಲೈಂಟ್   'Gen-Next Solutions '  ಡ್ರೀಮ್ ಟೆಕ್ ಗೆ "ಥ್ಯಾಂಕ್ಸ್ ಗಿವಿಂಗ್" ಮೇಲ್ ಕಳುಹಿಸಿದ್ದರು. ಬೇರೆ ಹಲವು ಮೊಡ್ಯುಲ್ ಗಳು ಶುರುವಾಗಿ ಕೈದಾಗಿದ್ದರೂ ಮೂರು ವರ್ಷದಿಂದ ನಡೆದು ಬಂದ ನಮ್ಮ ಮೊಡ್ಯುಲ್ ಅನ್ನು ಅಚಾನಕ್ಕಾಗಿ ನಿಲ್ಲಿಸಿದ್ದರು.

ತಿವಾರಿಯ ಕೊನೆ ದಿನಗಳು ಇನ್ನು ಹತ್ತಿರವಾದವು ಇದನ್ನು ಓದಲು. ಮೊದಲಿಗೆ ಬೇಸರ ಎನಿಸಿದರೂಮರುಕ್ಷಣ  ಬಹುವರ್ಷದ ನಿರೀಕ್ಷೆ ಬೆಂಚ್ ಸಿಕ್ಕಿತಲ್ಲ, ಇನ್ನು ಇಂಟರ್ವ್ಯುಗೆ ಒಳ್ಳೆ ರೀತಿಯಲ್ಲಿ ತಯಾರಿ ಮಾಡಲು ಸಮಯ ಸಿಕ್ಕಿತು ಎಂದು ಮರು ಕ್ಷಣವೇ ಪುಟಿದೆದ್ದಿತು.

ಮುಂದಿನ ದಿನಗಳಿಗೆ ನನ್ನ ಪ್ರಯತ್ನ ಶುರು ಮಾಡಿಕ್ಕೊಂಡೆ, ಎರಡು ತಿಂಗಳಿಂದ ಅಪ್ಡೇಟ್  ಮಾಡದೆ ಬಿದ್ದಿದ್ದ ನೌಕರಿ ಅಕೌಂಟ್ ಅನ್ನು ಅಪ್ಡೆಟ್ ಮಾಡಿಕ್ಕೊಂಡೆ. ಪುಣೆಯಲ್ಲಿ ಇನ್ನು ಒಂದು ತಿಂಗಳಲ್ಲಿ ನಡೆಯುವ ಇದ್ದ ಬದ್ದ ಟ್ರೇನಿಂಗ ಗಳಿಗೆ ಎನ್ರೋಲ್ ಮಾಡಿಸಿಕ್ಕೊಂಡೆ. 

ಬೆಂಚಲ್ಲಿ ಇದ್ದರೂ ನನ್ನನ್ನು ನಾನು ಬ್ಯುಸಿ ಇರಲು ಪ್ರಯತ್ನಿಸಿದೆ, ಅಪ್ರೈಸಲ್ ದಿನ ತೆಕೊಂಡ ನಿರ್ಧಾರದಂತೆ ಸೆಂಟರ್ ನ ಇತರ ಯಾವುದೇ ವಿಷಯಗಳಿಗೆ ನಾನು ಫ್ರೀ ಇದ್ದರೂ ತೊಡಗಿಸಿ ಕೊಳ್ಳುವುದನ್ನು ನಿಲ್ಲಿಸಿದೆ. ಪ್ರಾಜೆಕ್ಟ್ ನಲ್ಲಿದ್ದಾಗ, ಪೀಕ್ ಕೆಲಸದಲ್ಲಿದಾಗಲೂ ದಿನಕ್ಕೆ ಎರಡು ಗಂಟೆ ಆಡುವ ಟಿಟಿ ಈಗ ಫ್ರೀ ಇದ್ದರೂ ಆಡಲು ಹೋಗುತ್ತಿರಲಿಲ್ಲ. ನನ್ನ ನಿರ್ಧಾರದ ಪರಿವಿದ್ದ ಅವಿನಾಶ್ ಈ ಕುರಿತು ನನ್ನಲ್ಲಿ ಏನು ಮಾತಾಡುತ್ತಿರಲಿಲ್ಲ.

ನಡನಡುವೆ ಯಾರಾದರು ಸಿಕ್ಕಾಗ "ವೈಭು ಎಲ್ಲಿ ಇದ್ದಿಯೋ ಕಾಣ್ತಾನೆ ಇಲ್ಲ... ಬೇರೆ ಬ್ರಾಂಚ್ ಗೆ ಹೋಗಿದ್ದಿಯ ...?" ಎಂದಳು ಕೇಳಲು ಶುರು ಮಾಡಿದರು.

"ನಾನು ಅಪ್ಗ್ರೆಡೆಶನ್ ನಲ್ಲಿ ಬ್ಯುಸಿ ಇದ್ದೆ" 

"ಎಂತಹ ಅಪ್ಗ್ರೆಡೆಶನ್...? ಬೆಂಚಲ್ಲಿ ಇದ್ದವನಿಗೆ ...?"

"ಸೆಲ್ಪ್ ಅಪ್ಗ್ರೆಡೆಶನ್... ಕಂಪೆನಿಯನ್ನು ಮತ್ತು ಇತರರನ್ನು ಮೇಲೆತ್ತಿ ಆಯಿತು ಈಗ ಖುದ್ದು ನನ್ನನ್ನು ಮೇಲೆತ್ಲಿಕ್ಕೆ ಪ್ರಯತ್ನಿಸ್ತಿದ್ದೇನೆ..." ಅನ್ನುತಿದ್ದದ್ದು ಅವರಿಗೆ ನನ್ನಲ್ಲಿ ಮನೆಮಾಡಿದ ವೆಧಾಂತಿಯ ಅರಿವು ಮೂಡಿಸುತ್ತಿತ್ತು.

ಒಂದು ಬದಿಯಲ್ಲಿ ಅವಿನಾಶ್ ತನ್ನ ಕೇಟ್ ಗೆ ಪ್ರೆಪರೆಶನ್ ಶುರು ಮಾಡಿದ, ಬೆಂಚ್ ಸಿಕ್ಕಿದ್ದು ಅವನಿಗೆ ಗಜ ಬಲ ಸಿಕ್ಕಂತಾಗಿತ್ತು.

 

 

**********

 

 

 

ಜೀವನ್ ನ ಸ್ಟೇಟಸ್ ಜಿ- ಟಾಕ್ ನಲ್ಲಿ ಹಸಿರಾಗಿತ್ತು ತುಂಬಾ ದಿನದಲ್ಲಿ.

ಅವನನ್ನು "ಎಲ್ಲಿದ್ದಿಯ ...?"

ಎಂದು ಕೇಳಿದೆ "ಅವನು ಬೆಂಗಳೂರು... ಚೂರು ಬ್ಯುಸಿ ಇದ್ದೇನೆ ..." ಎನ್ನುವ ರಿಪ್ಲೈ ಬಂತು. ಅವನ ಬ್ಯುಸಿ ನನಗೆ ಅರ್ಥವಾಯಿತು.

"ಆಯಿತು ನೀನು ಮುಂದುವರಿಸಪ್ಪ" ಎಂದು ರಿಪ್ಲೈ ಕಳುಹಿಸಿದೆ.

ನಂತರದ ಕೆಲವು ದಿನಗಳಲ್ಲಿ ಅವನಾಗಿಯೇ ನಾವು ಹಿಂದೆ ಮಾಡಿದ್ದ ಕೋಡ್ ಬಗ್ಗೆ ಕೇಳಲು ಶುರು ಮಾಡಿದ್ದ, 

ಅವನಲ್ಲಿ ಕೇಳಲು 'ನನಗೆ ನನ್ನ ಎಕ್ಸ್ಪಿರಿಯೇನ್ಸ್ ಗೆ ತಕ್ಕ ಕೆಲಸ ಸಿಕ್ತು ವೈಭು' ಅಂದ.

ಅವನ ಈ ಮಾತು ಕೇಳಿ ಮನಸ್ಸು ಸಂತಸ ಪಟ್ಟಿತ್ತು. 

 ನಮ್ಮ ಈಗಿನ ದಿನಚರಿ ಕೇಳಲು" ಅದೇ ಬೆಂಚ್ ನ ಗೋಳು, ಇವತ್ತು ಈ ಇನಿಶಿಯೇಟಿವ್, ನಾಳೆ ಆರೆಂಡಿ .. ನಾಡಿದ್ದು ಟ್ರೈನಿಂಗ್... ಹೀಗೆ ನಡೀತಿದೆ ಜೀವನ " ಎಂದೇ.

"ಅವನು ನೀನು ಶುರು ಮಾಡು ಕೆಲಸ ಹುಡುಕಲು" ಅಂದ.

"ಶುರು ಮಾಡಿದ್ದೇನೆ ಯಾವಾಗ ಸಿಕ್ಕುತ್ತೋ ಆ ದೇವನಿಗೆ ಗೊತ್ತು" ಎಂದೇ ತುಸು ಹತಾಶೆಯಲ್ಲಿ.

"ನನಗೆ ತುಂಬಾ ಕೆಲಸ ಇದೆ, ಆ ಕೋಡ್ ಬೇಕಿತ್ತು ಅದಕ್ಕೆ ನಿನ್ನಲ್ಲಿ ಕೇಳಿದರೆ ಸೊಲ್ಯುಶನ್ ಸಿಕ್ಕುತ್ತೆ ಅಂತ ಗೊತ್ತಿತ್ತು ಅದಕ್ಕೆ ಕೇಳ್ದೆ, ಬಾಯ್ ಕಣೋ ... ಸಂಜೆ ಮಾತಾಡುವ ಹೇಳಿ" ಒಫ್ಲೈನ್ ಹೋದ.

ಇದೆ ರೀತಿಯಲ್ಲಿ ಅವನು ಹಲವುಬಾರಿ ನನ್ನಲ್ಲಿ ಕೋಡ್ ಕೇಳಲು ಪಿಂಗ್ ಮಾಡ್ತಿದ್ದ. ಹೀಗಿರಲು ಒಂದು ದಿನ ಇದ್ದಕ್ಕಿದ್ದಂತೆ ಹಿಂದೆ ಮಾಡಿದ ಪ್ರಾಜೆಕ್ಟ್ ನ ಹಿಡಿ ಡಾಕ್ಯುಮೆಂಟ್ ಅನ್ನು ಜಿಪ್ ಮಾಡಿ ಮೇಲ್ ಮಾಡಲು ಹೇಳಿದ. 

ಯಾಕಪ್ಪ ಇವನು ಪ್ರಾಜೆಕ್ಟ್ ನೇ ಕೇಳ್ತಿದ್ದಾನೆ ಎಂದು ಮೇಲಾನೆ ಸಂಶಯದ ಸುಳಿ ಶುರುವಾಯಿತು.

ಮೇಲ್ ಕಳುಹಿಸಿದೆ.

ಅವನಿಂದ ಉತ್ತರವಿರಲಿಲ್ಲ. 

 

ಸಂಜೆ ಆರಕ್ಕೆ ಹೋರಾಡಬೇಕು ಎನ್ನುವಷ್ಟರಲ್ಲಿ ಅಡಿಗರ 'ಯಾವ ಮೋಹನ ಮುರಳಿ ಕರೆಯಿತೋ ...' ಕೇಳಲು ಶುರುವಾಯಿತು ಮೊಬೈಲ್ ನಲ್ಲಿ.

ಮುಂಬೆ ವಾ' ದಿಂದ ಈಗ 'ಯಾವ ಮೋಹನಕ್ಕೆ' ತಿರುಗಿತ್ತು ನನ್ನ ಮೊಬೈಲ್ ಅಪ್ಪ್ರಿಸಲ್ ನ ರಿಸಲ್ಟ್ ಬಂದಾಗಿಂದ, ಪ್ರಸಬದ್ದ ಪದಗಳು ಅದರಲ್ಲಿನ ಅರ್ಥ ವೈಶಾಲ್ಯತೆ ನನಗಾಗಿಗೆ ಅಡಿಗರು ಇದನ್ನು ಬರೆದಂತೆ ಭಾಸವಾಗುತಿತ್ತು ಕೇಳಲು, ಅದಕ್ಕೆ ‘ಮುಂಬೆ ವಾ’ ಅನ್ನು ಬರೀ 'ಆಕೃತಿ' ಗೆ ಅಸ್ಸೈನ್ ಮಾಡಿ ಜನರಲ್ ಪ್ರೊಫೈಲ್ ಗೆ 'ಯಾವ ಮೋಹನ' ಇಟ್ಟಿದ್ದೆ.

 

"ಹೇಳೋ ಜೀವನ್ ...ಹೇಗಾಗ್ತದೆ ನಿನ್ನ ಬೆಂಗಳೂರು ಲೈಫ್ ...?"

"ಅದು ನಡೀತಿದೆ, ಥ್ಯಾಂಕ್ಸ್ ಕಣಪ್ಪಾ, ನಿನ್ನಿಂದ ಇವತ್ತು ಪುನಃ ನನಗೆ ರೆಕಾಗ್ನಿಶನ್ ಸಿಕ್ಕಿತು" ಅಂದ.

ಇಲ್ಲಿ ವರೆಗೆ ಕೃತಜ್ಯ ನಾಗಿಲ್ಲದ ಇವನು ಈ ರೀತಿ ಡೈಲಾಗ್ ಬಿಟ್ಟಾಗ ಮನಸ್ಸು ಚೂರು ಭಾವುಕ ವಾಯಿತು.

"ಅದೆಲ್ಲ ಬಿಡೋ, ಹೇಗಿದ್ದಾಳೆ ಪ್ರೀತಿ ... ಮತ್ತೆ ಏನಾಯ್ತು ನಿಮ್ಮ ಲೀವಿಂಗ್ ಟುಗೆದರ್  ಪ್ಲಾನ್ಸ್ ...?"

"ಸದ್ಯಕ್ಕೆ, ಹಾಸ್ಟೆಲ್ ಅನ್ನೇ ಮನೆ ಮಾಡಿಕೊಂಡಿದ್ದೇವೆ, ಒಳ್ಳೆ ಫ್ಲಾಟ್ ಸಿಕ್ಕ ಮೇಲೆ ಇಬ್ಬರು ಶಿಫ್ಟ್ ಅಗ್ತೀವೆ.ನೀನು ಹೇಗಿದ್ದೀಯ...? ಆ ತಮಿಳ್ ಹುಡುಗಿ ಹೇಗಿದ್ದಾಳೆ...?"

"ಅವಳೊಂದು ತೀರ ನಾನು ಒಂದು ತೀರ..."

"ಅದು ಬಿಡು ಎಲ್ಲಿ ವರೆಗೆ ಬಂತು ನಿನ್ನ ಬೆಂಗಳೂರು ಬರುವ ಪ್ಲಾನ್...?"

"ಏನ್ ಹೇಳಲಿ ನಂ ಕಥೆ ...? ಏನೋ ಸಾಧ್ಹಿಸ ಬೇಕು ಅನ್ಕೊಂಡಿದ್ದೆ, ಯಾವುದು ಸಾದ್ಯ ವಾಗಲಿಲ್ಲ"

"ಸ್ಕೈಪ್ ನಲ್ಲಿ ನಿನ್ನ ಕ್ರಿಸ್ ನೊಂದಿಗೆ ಮಾತಾಡಿ ನೋಡೋ ... ಹೇಳು ಬೆಂಗಳೂರಿನ ಆಫೀಸ್ ನಲ್ಲಿ ಕೆಲಸ ಕೊಡಿಸಲು"

"ಹೇಳ ಬಹುದಿತ್ತು, ಆದರೆ ಯಾವಾಗ ಪ್ರಾಜೆಕ್ಟ್ ನಿಂತಿತೋ ಆವಾಗ ಸೈಪು ನಿಂತಿತು, ವೈಫು ನಿಂತಿತು"

"ಸೋಮೆಥಿಂಗ್ ವ್ರೊಂಗ್ ಇನ್ ಯುವರ್ ಲವ್ ಸ್ಟೋರಿ ...?" ಎಂದ ನನ್ನ ಪ್ರಾಸದಲ್ಲಿರುವ 'ವೈಫು 'ಕೇಳಿ ಗಾಬರಿಗೊಂಡು.

"ಇಲ್ಲ ಮಗಾ, ಪ್ರಾಸಕ್ಕೆ ಬಳಸಿದೆ ಅಸ್ಟೆ... ನಿಂತರಹ ಬೆಂಗಳೂರಿನ  'Gen-Next Solutions ' ನವರೊಂದಿಗೆ ಕಾಂಟಾಕ್ಟ್ ಇದ್ದರೆ ಏನಾದ್ರೂ ನನ್ನ ಬೇಳೆ ಬೇಯಿಸ ಬಹುದಿತ್ತು , ಆದರೆ  ನನಗೆ ದೂರದಲ್ಲಿ ಹೆಡ್ ಆಫೀಸ ನಲ್ಲಿ ಕೂತ ಕ್ರಿಸ್ ಮಾತ್ರ ಗೊತ್ತಿರುವುದು, ಏನು ಮಾಡ್ಲಿ " ಅಂದೇ ತುಸು ದುಖದಲ್ಲಿ.

ಅವನು "ನಾನು ಮಾತಾಡ್ಲ 'Gen-Next Solutions ' ನ ಶ್ರೀನಿ ಹತ್ತಿರ ನಿನ್ ಬಗ್ಗೆ ...?" 

"ಡ್ರೀಮ್ ಟೆಕ್ ಬಿಟ್ರೂ ನೀನು ಇನ್ನು ಅವರ ಜೊತೆ ಕಾಂಟಾಕ್ಟ್ ನಲ್ಲಿ ಇದ್ದಿಯಾ, ಒಳ್ಳೆ ಮೇನೇಜರ್ ಆಗ್ತೀಯ ನೋಡು ನೀನು" ಎಂದು ಉತ್ತರ ಇಟ್ಟೆ.

"ಮಾತಾಡ್ಲಾ ಹೇಳು... "

"ಹೇಳಪ್ಪಾ, ಅಲ್ಲಿ ಕೆಲಸ ಸಿಕ್ಕುತ್ತ ನೋಡೋಣಾ; ಆದ್ರೆ ಹೇಗೆ ...?" 

"ಓ ಪೆದ್ದು, ನಾನು ಡ್ರೀಮ್ -ಟೆಕ್ ಬಿಟ್ಟು ಮಾರನೇ ದಿನಾ ನೇ  'Gen-Next Solutions 'ಸೇರಿದ್ದು ಕಣೋ ಈಗ ಶ್ರೀನಿ ಜೊತೆಗೆ ಊಟ ವ್ಯವಹಾರ ಎಲ್ಲ"

 

ಸಿಡಿಲು ಬಡಿದಂತಾಯಿತು ಅವನ ಮಾತು; ನಾನು ಸಾಧಿಸಬೇಕು ಎಂದು ಆಸೆ ಪಟ್ಟದಕ್ಕೆ ಇವನೇ ನೀರೆರದ, ಅವನಿಗೆ ಗೊತ್ತಿತ್ತು ಅವನ ಗಮ್ಯ ಯಾವುದು ಎಂದು, ನಾನು ಅವನ ಭವಿಷ್ಯದ ಬಗ್ಗೆ ವ್ಯಥೆ ಪಟ್ಟಿದ್ದೇ ಬಂತು, ಇವ ನೋಡಿದರೆ ಮಾತಲ್ಲೇ ಮೋಸಮಾಡಿದ, ಕನಿಷ್ಠ ಪಕ್ಷ ನಮ್ಮಲ್ಲಿ ಹೇಳ ಬಹುದಿತ್ತು , ತಾನು  'Gen-Next Solutions ' ಜೋಯಿನ್ ಆಗುತ್ತೇನೆ ಹೇಳಿ, ನಾನು ಯಾರಲ್ಲಿ ಹೇಳುತ್ತಿರಲಿಲ್ಲ, ಅದು ಬಿಟ್ಟು ಬೊಂಬೆ ಗೆ ಹೋಗಿ ಮನೆ ಮಾರಿ ಕೆಲಸ ಹುಡುಕುತ್ತೇನೆ ಎಂದು ಸೆಂಟಿ ಡೈಲಾಗ್ ಹೊಡೆದು ಮನಗೆಲ್ಲುವ ಅವಶ್ಯಕತೆ ಇರಲಿಲ್ಲ.

 

ಅವನಲ್ಲಿ  ಮಾತಾಡಲು ಇಷ್ಟವಿರಲಿಲ್ಲ,"ಹೊರಗಿದ್ದೇನೆ, ಇನ್ಯಾವಾಗ್ಲಾದ್ರು ಮಾತಾಡೋಣ .."ಅಂದೆ.

ಅವನು  "ಶ್ರೀನಿಯ ಹತ್ರ ಮಾತಾಡ್ಲಾ...?"

"ಬೇಡ, ಒಮ್ಮೆ ಬಿಕ್ಷೆ ತಿಂದದ್ದು ಸಾಕು... ಬಾರಿ ಬಾರಿ ಭಿಕ್ಷೆ ತಿನಲ್ಲು ನಾನೇನು ಭಿಕ್ಶುಕನಲ್ಲ" ಎಂದು ಕರೆ ಕತ್ತರಿಸಿದೆ.

 

ಅವಿನಾಶ್ಗೆ  ಕರೆ ಮಾಡಿದೆ "ಜೀವನ್ ಎಲ್ಲಿದ್ದಾನೋ ....? ಏನಾದ್ರೂ ಅವನ ವಿಷಯ ಗೊತ್ತಾ ...?" ಅಂದೆ.

ಅವನು "ಮುಂಬೈ ಮೇ ಕಾಮ್ ಡೂನ್ಡ್  ರಹಾ ಹೋಗಾ ಸಾಲಾ, ಅಪನೇ ಬುರಾಯೀಕಾ ಸಜ್ಹಾ ಭುಗತ್ ರಹಾ ಹೇ ..." ಅಂದ. ಅವಿನಾಶ್ ಗೆ ಇದ್ಯಾವುದರ ಮಾಹಿತಿ ಇರಲಿಲ್ಲ ಎಂಬುದು ಸ್ಪಷ್ಟ ವಾಯಿತು.

ಮನ ತುಂಬಿ ಬಂತು "ಬಾಯ್ ಆಪ್ನೆ ಸಹಿ ಬೋಲಾ ತ ಉಸ್ ದಿನ್ ಸಬ್ಸೆ ಬಡಾ ಹರಾಮಿ ವಹೀ ಹೇ ಕರ್ಕೆ..." ಅಂದೆ ನಾನು. ನನ್ನ ಮಾತಿನ ತೀಕ್ಷ್ಣತೆ ಅರಿಯದೆ ಅವನು.

"ವೈಭು ಕ್ಯಾ ಹುವಾ ಬಾಯ್ ..?" ಅಂದ.

"ಕುಚ್ ನಹಿನ್ ಉಸ್ ಹರಾಮಿ ಕಾ ಯಾದ ಆಯಾ... ಮನೆಯವರಿಗೆ ಅವನ ವಿಚಾರ ಗೊತ್ತ ಅಂತ ತಿಳಿಲಿಕ್ಕೆ ಕರೆ ಮಾಡಿದ್ದು" ಅಂದೆ.

"ಉಸ್ಸೆ ಘರ್ ಸೆ ಜಿಸ್ ದಿನ್ ಬಾಹರ್ ಡಾಲ ಉಸ್ಸೆ ಉಸೀ ದಿನ್ ದಿಮಾಗ್ ಸೆ ಬಾಹರ್ ಡಾಲ..."

"ಕೋಶಿಶ್ ಕರತಾ ಹುನ್ ಬಾಯ್ ... ಉಸೆ ಬಾಹರ್ ಡಾಲ್ನೇ ಕೋ " ಎಂದು ಕರೆ ಕಟ್ ಮಾಡಿದೆ.

 

ಬೈಕ್  ಹತ್ತಿ ಮತ್ತೆ ಆ ಏಕಾಂತದ ಬಂಡೆ ಸೇರಿದೆ. ಕಿವಿಯಲ್ಲಿ ಮನದಲ್ಲಿ ಅಡಿಗರ "ಹೂವು  ಹಾಸಿಗೆ  ಚಂದ್ರ ಚಂದನ  ಬಾಹು ಬಂಧನ ಚುಂಬನ ...ಬಯಕೆ ತೋಟದ ಬೇಲಿಯೊಳಗೆ ಕರಣ ಗಣದಿರಿಂಗಣ" ಸಾಲುಗಳು ಸುತ್ತುತಿದ್ದವು. ಮೋಡ ತಾರೆಗಳಿಲ್ಲದ ಆಕಾಶದಲ್ಲಿ ಒಂಟಿ ಚಂದಿರ ನನ್ನನ್ನೇ ನೋಡುತಿದ್ದ, ಅವನಂತೆ ನಾನು ಖಾಲಿ ಜೀವನದಲ್ಲಿ ಒಂಟಿ ಯಾಗಿದ್ದೆ.

 

*************

 

ಮುಂದಿನ ಸಿಪ್

 

 

Rating
No votes yet